ಹೈದರಾಬಾದ್: ತೆಲುಗು ಯುವ ನಟ ಸುಧೀರ್ ವರ್ಮಾ ಹಠಾತ್ ಸಾವಿಗೀಡಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ವಿಶಾಖಪಟ್ಟಣಂನಲ್ಲಿರುವ ಅವರ ನಿವಾಸದಲ್ಲಿ ನಟ ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಕುಂದನಪು ಬೊಮ್ಮ ಸಿನಿಮಾದಲ್ಲಿ ಸುಧೀರ್ ಜೊತೆ ಸಹನಟನಾಗಿ ನಟಿಸಿದ್ದ ಸುಧಾಕರ್ ಕೊಮಕುಲ ಅವರು ಸುಧೀರ್ ಸಾವನ್ನು ಖಚಿತಪಡಿಸಿದ್ದಾರೆ.
ವೈಯಕ್ತಿಕ ಕಾರಣಕ್ಕೆ ಅವರು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. 2016ರಲ್ಲಿ ತೆರೆಕಂಡ ಕುಂದನಪು ಬೊಮ್ಮ (Kundanapu Bomma) ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಸುಧೀರ್ ವರ್ಮಾ ನಟಿಸಿದ್ದರು. 2013ರಲ್ಲಿ ತೆರೆಕಂಡ ಸ್ವಾಮಿ ರಾ ರಾ ಎಂಬ ತೆಲುಗು ಸಿನಿಮಾದ ಮೂಲಕ ಇವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಸುಧೀರ್ ಎಂಥಹಾ ಪ್ರೀತಿಯ ಹುಡುಗ, ನಿನ್ನ ಜೊತೆ ಕೆಲಸ ಮಾಡಿದ್ದು, ಹಾಗೂ ನಿನ್ನ ಪರಿಚಯವಾಗಿದ್ದು, ತುಂಬಾ ಚೆನ್ನಾಗಿತ್ತು. ಆದರೆ ನೀನು ಬದುಕಿಲ್ಲ ಎಂಬ ಈ ವಿಚಾರವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಓಂ ಶಾಂತಿ ಎಂದು ಅವರು ಬರೆದುಕೊಂಡಿದ್ದಾರೆ.
ಕೊನೆವರೆಗೂ ನಿನ್ನೇ ಪ್ರೀತಿಸುವೆ.. ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾದ ನಟಿ
ಕನ್ನಡ ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ, ಡೆತ್‌ನೋಟ್ ಪತ್ತೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.