ಆಲಿಯಾ ಭಟ್​ ಮತ್ತೊಮ್ಮೆ ಗರ್ಭಿಣಿನಾ? ಫೋಟೋ ಶೇರ್​ ಮಾಡಿ ತಬ್ಬಿಬ್ಬುಗೊಳಿಸಿದ ನಟಿ

Published : Jan 23, 2023, 07:45 PM IST
 ಆಲಿಯಾ ಭಟ್​ ಮತ್ತೊಮ್ಮೆ ಗರ್ಭಿಣಿನಾ?  ಫೋಟೋ ಶೇರ್​ ಮಾಡಿ  ತಬ್ಬಿಬ್ಬುಗೊಳಿಸಿದ ನಟಿ

ಸಾರಾಂಶ

ಎರಡು ತಿಂಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದ ನಟಿ ಆಲಿಯಾ ಭಟ್​ ಈಗ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರ ಅಸಲಿಯತ್ತೇನು?   

ಕಳೆದ ಏಪ್ರಿಲ್ ತಿಂಗಳಿನಲ್ಲಿ ಮದುವೆಯಾಗಿ ನವೆಂಬರ್​ ತಿಂಗಳಿನಲ್ಲಿ ಮುದ್ದು ಮಗಳ ತಾಯಿಯಾದ ನಟಿ ಆಲಿಯಾ ಭಟ್ (Alia Bhatt) ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಗರ್ಭ ಧರಿಸಿದ ಮೇಲೆ ನಟ ರಣಬೀರ್ ಕಪೂರ್ ಅವರನ್ನು ಮದುವೆಯಾಗಿದ್ದ ಆಲಿಯಾ ಭಟ್​ ಈಗ ಮತ್ತೊಮ್ಮೆ ಗರ್ಭಿಣಿ (Pregnant) ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆಲಿಯಾ ಫೋಟೋ ಸೆಷನ್​ (Photo  Session) ಒಂದರಲ್ಲಿ ಹಾಕಿಕೊಂಡಿರುವ ಡ್ರೆಸ್​ನಿಂದಾಗಿ ಇಷ್ಟೆಲ್ಲಾ ಮಾತುಗಳು ಕೇಳಿಬರುತ್ತಿವೆ. ಮಗು ಹುಟ್ಟಿದ ಎರಡೇ ತಿಂಗಳಿಗೆ ಆಲಿಯಾ ಮತ್ತೊಮ್ಮೆ ಗರ್ಭ ಧರಿಸಿದ್ದಾರೆ ಎಂಬ ಸುದ್ದಿ ಇದಾಗಿದೆ.

ಮಗಳು ರಾಹಾ ಹುಟ್ಟಿದ ಮೇಲೆ ತಾಯ್ತನದ ಆನಂದವನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ತೆರೆದಿಟ್ಟಿದ್ದರು. ಸದ್ಯ ಚಿತ್ರರಂಗದಲ್ಲಿ ದೂರವಾಗಿರುವ ನಟಿ,  ತಾಯ್ತನದ (motherhood) ಪ್ರತಿ ಕ್ಷಣವನ್ನು ಅನುಭವಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಈಕೆ ಮಗುವಿಗೆ ಹಾಲು ಉಣಿಸುತ್ತಿರುವ ಚಿತ್ರವನ್ನೂ ಶೇರ್​ ಮಾಡಿಕೊಂಡಿದ್ದರು. ತಾಯ್ತನವು ಮಹಿಳೆಯನ್ನು ದೈಹಿಕವಾಗಿ ಮಾತ್ರವಲ್ಲದೆ ಭಾವನಾತ್ಮಕವಾಗಿಯೂ ಹೇಗೆಲ್ಲಾ ಬದಲಾಯಿಸುತ್ತದೆ ಎಂದು ಅವರು ಹೇಳಿದ್ದರು. ಈ ಆನಂದದಲ್ಲಿ ಇರುವಾಗಲೇ ಆಲಿಯಾ- ರಣಬೀರ್​ ದಂಪತಿ ಮತ್ತೆ ಅಪ್ಪ-ಅಮ್ಮ ಆಗುತ್ತಿದ್ದಾರೆ ಎನ್ನುವ ಸುದ್ದಿ ಭಾರಿ ವೈರಲ್​ ಆಗಿದೆ.  ಮನರಂಜನಾ ವೆಬ್‌ಸೈಟ್ ಇತ್ತೀಚೆಗೆ ಈ ಸುದ್ದಿಯನ್ನು ಬಿತ್ತರಿಸುವ ಮೂಲಕ ಜೋಡಿಯ ಅಭಿಮಾನಿಗಳಿಗೆ ಶಾಕ್​ ನೀಡಿತ್ತು. ಅಂದಿನಿಂದ ಈ ಸುದ್ದಿ ವಿಧವಿಧ ರೀತಿಯಲ್ಲಿ ಪ್ರಸಾರವಾಗುತ್ತಿದೆ. 

Shah Rukh Khan: ಮಧ್ಯರಾತ್ರಿ 2 ಗಂಟೆಗೆ ಸಿಎಂಗೆ ಕರೆ ಮಾಡಿ ರಕ್ಷಣೆ ಕೋರಿದ ಕಿಂಗ್‌​ ಖಾನ್​!

ಅಷ್ಟಕ್ಕೂ ಈ ವಿಷಯ ಎಷ್ಟು ಸರಿ? ಈ ಸುದ್ದಿ ಹರಡಿದ್ದು ಹೇಗೆ ಎಂಬ ಬಗ್ಗೆ ಇಲ್ಲಿ ಹೇಳುತ್ತೇವೆ ಕೇಳಿ. ಅಸಲಿಗೆ ಆಲಿಯಾ ಮತ್ತೊಮ್ಮೆ ಗರ್ಭಿಣಿ ಎನ್ನುವ ಸುದ್ದಿ ಶುರುವಾಗಿದ್ದು, ಫೋಟೋ ಸೆಷನ್ (Photo session)​ ಒಂದರಲ್ಲಿ ಈಕೆ ಲೂಸ್​ ಬಟ್ಟೆ ಧರಿಸಿದ್ದರಿಂದ. ಅಸಲಿಗೆ ಆಲಿಯಾ  ಉಡುಪು ಕಂಪೆನಿಗಾಗಿ ರೂಪದರ್ಶಿಯಾಗಿ ಕೆಲಸ ನಿರ್ವಹಿಸುತ್ತಿರುವುದರಿಂದ ಈ ಸಡಿಲ ಬಟ್ಟೆಯನ್ನು ಧರಿಸಿದ್ದರು. ಗರ್ಭಿಣಿಯರು ಮತ್ತು ಬಾಣಂತನದ ನಂತರ ಮಹಿಳೆಯರು ಸಾಮಾನ್ಯವಾಗಿ ತೂಕ ಹೆಚ್ಚಿಸಿಕೊಳ್ಳುವ ಹಿನ್ನೆಲೆಯಲ್ಲಿ ಉಡುಪು ಕಂಪೆನಿಯು ಅಂಥವರಿಗಾಗಿ ಇರುವ ಡ್ರೆಸ್​ ಬಗ್ಗೆ ಜಾಹೀರಾತು (Advertise)ನೀಡುತ್ತಿರುವಾಗ ಅದರ ರೂಪದರ್ಶಿಯಾಗಿ ಆಲಿಯಾ ಫೋಟೋ ಪೋಸ್​ (Photo pose) ನೀಡಿದ್ದಾರೆ.

ಇದನ್ನು ಅವರು  ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದೇ ಇಷ್ಟೆಲ್ಲಾ ಆವಾಂತರಕ್ಕೆ ಕಾರಣವಾಗಿದೆ. ಅಸಲಿಗೆ ಗರ್ಭಿಣಿಯರು ಅಥವಾ ಪ್ರಸೂತಿಯ ನಂತರ ಮಹಿಳೆಯರು ಇಂಥ ಉಡುಪು ಧರಿಸಿ ಆರಾಮದಾಯಕವಾಗಿ ಇರಬಹುದು.  ಸಡಿಲವಾದ ಮತ್ತು ಆರಾಮದಾಯಕವಾದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು ಎನ್ನುವ ಸಂದೇಶ ಈ ಜಾಹೀರಾತಿನದ್ದು. ಇಷ್ಟು ಲೂಸ್​ ಆಗಿರುವ ಬಟ್ಟೆ ಧರಿಸಿ ಅವರು ಪೋಸ್ಟ್​ ಮಾಡಿದ್ದರಿಂದ ಜನರು ಆಲಿಯಾ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದಾರೆ ಎಂದು ಊಹಿಸಿದ್ದಾರೆ ಅಷ್ಟೇ. ಇನ್ನೇನೂ ಅಲ್ಲ. 

ಸರೋಗಸಿ ಮೂಲಕ ಮಗು ಪಡೆದಿದ್ಯಾಕೆ? ಕೊನೆಗೂ ಮೌನ ಮುರಿದ ಪ್ರಿಯಾಂಕಾ

ಗಮನಾರ್ಹವಾಗಿ, ಆಲಿಯಾ ಭಟ್ ಏಪ್ರಿಲ್ 2022 ರಲ್ಲಿ ರಣಬೀರ್ ಕಪೂರ್ ಅವರನ್ನು ವಿವಾಹವಾದರು ಮತ್ತು ಅದೇ ವರ್ಷ ಜೂನ್‌ನಲ್ಲಿ ತನ್ನ ಗರ್ಭಧಾರಣೆಯನ್ನು ಘೋಷಿಸಿದರು. ನವೆಂಬರ್ 2022 ರಲ್ಲಿ, ಅವರ ಮಗಳು ಜನಿಸಿದಳು, ಕಪೂರ್ ಕುಟುಂಬದಿಂದ ರಾಹಾ ಎಂದು ಹೆಸರಿಸಲಾಗಿದೆ. ಕೊನೆಯದಾಗಿ 'ಬ್ರಹ್ಮಾಸ್ತ್ರ ಪಾರ್ಟ್ ಒನ್ ಶಿವ' ಚಿತ್ರದಲ್ಲಿ  ಕಾಣಿಸಿಕೊಂಡಿರುವ ಆಲಿಯಾ ಭಟ್, ಮುಂದೆ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' (Raki Aur Rani ki Prem Kahani) ಮತ್ತು ಹಾಲಿವುಡ್ ಚಲನಚಿತ್ರ 'ಹಾರ್ಟ್ ಆಫ್ ಸ್ಟೋನ್' ನಲ್ಲಿ (Heart of Stone) ಕಾಣಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ, ರಣಬೀರ್ ಕಪೂರ್ ಕೊನೆಯದಾಗಿ 'ಬ್ರಹ್ಮಾಸ್ತ್ರ' (Brahmastra) ಚಿತ್ರದಲ್ಲಿ ಕಾಣಿಸಿಕೊಂಡರು. ಅವರ ಮುಂಬರುವ ಚಿತ್ರಗಳು 'ತು ಜೂಥಿ ಮೈನ್ ಮಕ್ಕರ್' ಮತ್ತು 'ಅನಿಮಲ್' (Animal).

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?