ಶಾರುಖ್​ಗೆ ಕರಣ್​ ಜೋಹರ್​, ಪ್ರಿಯಾಂಕಾ ಜೊತೆ ಸಂಬಂಧವಿತ್ತಾ? ನಿರ್ಮಾಪಕ ವಿವೇಕ್ ವಾಸ್ವಾನಿ ಹೇಳಿದ್ದೇನು?

By Suvarna News  |  First Published Feb 23, 2024, 3:33 PM IST

ಶಾರುಖ್​ ಖಾನ್​ ಅವರಿಗೆ ನಿರ್ಮಾಪಕ ಕರಣ್​ ಜೋಹರ್​ ಮತ್ತು ಪ್ರಿಯಾಂಕಾ ಜೊತೆ ಸಂಬಂಧವಿತ್ತಾ? ನಿರ್ಮಾಪಕ ವಿವೇಕ್ ವಾಸ್ವಾನಿ ಹೇಳಿದ್ದೇನು?
 


ಬಾಲಿವುಡ್​ನ ಖ್ಯಾತ ನಿರ್ಮಾಪಕರಲ್ಲಿ ಒಬ್ಬರು ಎನಿಸಿರುವ ಕರಣ್ ಜೋಹರ್ (Karan Johar),  ಸ್ಟಾರ್ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುವುದರಲ್ಲಿ ಎತ್ತಿದ ಕೈ.  ಚಿತ್ರರಂಗದ ಖ್ಯಾತ ನಾಮರಿಗೆ ಮಾತ್ರ ಅವರು ಸದಾ ಅಪೀರ್ಟ್​ ಮಾಡುತ್ತಾರೆ ಎನ್ನುವ ಆರೋಪ ಇರುವ ಮಧ್ಯೆಯೇ, ಇವರ ಮತ್ತು ಶಾರುಖ್​ ಖಾನ್​ ಜೊತೆಗಿನ ಸಂಬಂಧದ ಬಗ್ಗೆ ಸದಾ ಚರ್ಚೆಯಾಗುತ್ತಲೇ ಇರುತ್ತದೆ.  ಈ ಹಿಂದೆ ಕರಣ್ ಜೋಹರ್ ಅವರು ಈ ಕುರಿತು ತಮ್ಮ ಆಟೋಬಯೋಗ್ರಫಿಯಲ್ಲಿ ಕೂಡ ಉಲ್ಲೇಖಿಸಿದ್ದರು. ತಮ್ಮ ಮತ್ತು ಶಾರುಖ್​ ಖಾನ್​ ಅವರ ಸಂಬಂಧದ ಕುರಿತು ಹೇಳಿದ್ದ ಅವರು, ‘ಇಂದು ಪ್ರಪಂಚದಲ್ಲಿರುವ ಎಲ್ಲ ಲೈಂಗಿಕತೆಯನ್ನು ಹೊಂದಲು ನನ್ನ ಬಳಿ ಮಾರ್ಗಗಳಿವೆ ಎಂದು ಜನರು ಭಾವಿಸುತ್ತಾರೆ. ಆದರೆ ಹಾಗಲ್ಲ. ನನಗೆ ಸೆಕ್ಸ್ ಎಂಬುದು ತುಂಬಾ ವೈಯಕ್ತಿಕ ಭಾವನೆ. ಇದು ಕ್ಯಾಶ್ಯುವಲ್ ಆಗಿ ಮಾಡುವ ವಿಷಯವಲ್ಲ. ನನ್ನ ಬಗ್ಗೆ ಕೇಳಿ ಬಂದ ವದಂತಿಗಳನ್ನು ನಾನು ಯಾವಾಗಲೂ ನಿಭಾಯಿಸಿದ್ದೇನೆ’ ಎನ್ನುವ ಮೂಲಕ ಪರೋಕ್ಷವಾಗಿ ಎಲ್ಲದಕ್ಕೂ ಅವರು ತೆರೆ ಎಳೆದಿದ್ದರು.

ಇದೀಗ ನಟ-ನಿರ್ಮಾಪಕ ವಿವೇಕ್ ವಾಸ್ವಾನಿ ಶಾರುಖ್​  ಮತ್ತು ಕರಣ್​ ಜೋಹರ್​ ಕುರಿತ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಇಷ್ಟೇ ಅಲ್ಲದೇ, ಪ್ರಿಯಾಂಕಾ ಚೋಪ್ರಾ ಜೊತೆಗೆ ಶಾರುಖ್​ ಅವರ ಸಂಬಂಧವಿತ್ತೇ ಎನ್ನುವ ಬಗ್ಗೂ ಅವರು ಹೇಳಿದ್ದಾರೆ.  ಇತ್ತೀಚಿನ ಸಂದರ್ಶನವೊಂದರಲ್ಲಿ, ನಟ-ನಿರ್ಮಾಪಕ ವಿವೇಕ್ ವಾಸ್ವಾನಿ ಅವರು ತಮ್ಮ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಶಾರುಖ್​ ಅವರೊಂದಿಗೆ  ನಿಕಟವಾಗಿ ಕೆಲಸ ಮಾಡಿದ್ದಾರೆ. ಈ ಕುರಿತುಮಾತನಾಡಿರುವ ಅವರು, ಶಾರುಖ್​ ಖಾನ್​ ಅವರಿಗೆ ಪ್ರಿಯಾಂಕಾ ಚೋಪ್ರಾ ಆಗಲೀ, ಕರಣ್​ ಜೋಹರ್​ ಜೊತೆಗಾಗಲೀ ಸಂಬಂಧವಿರಲಿಲ್ಲ.  ಈ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ, ಏಕೆಂದರೆ ಶಾರುಖ್ "ಒಬ್ಬ ಮಹಿಳೆಗೆ ಮಾತ್ರ ಗಂಡನಾಗಿದ್ದು, ಅದಕ್ಕೆ ಅವರು ಬದ್ಧರಾಗಿದ್ದಾರೆ. ಆ ಮಹಿಳೆ ಅವರ ಪತ್ನಿ ಗೌರಿ ಖಾನ್ ಎಂದಿದ್ದಾರೆ. 

Tap to resize

Latest Videos

ಪ್ರತಿ ನಿಮಿಷದ ದೃಶ್ಯಕ್ಕೆ ನಾಲ್ಕೂವರೆ ಕೋಟಿ ರೂ. ಪಡೆದ ಬಾಲಿವುಡ್​ ಸ್ಟಾರ್​ ಯಾರು ಗೊತ್ತಾ?

ಯೂಟ್ಯೂಬರ್ ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಇತ್ತೀಚಿನ ಚಾಟ್‌ನಲ್ಲಿ ಈ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ. ಕರಣ್​ ಮಾತ್ರವಲ್ಲದೇ ಖುದ್ದು ವಿವೇಕ್ ಅವರ ಜೊತೆಯೂ ಶಾರುಖ್​ ಖಾನ್​ ಅವರಿಗೆ ಸಂಬಂಧವಿತ್ತು ಎನ್ನಲಾಗಿತ್ತು. ಈ ಬಗ್ಗೆ ಅವರಿಗೆ ಪ್ರಶ್ನೆ ಕೇಳಲಾಯಿತು.  "ಶಾರುಖ್ ಅವರೊಂದಿಗೆ ನೀವು ಎಂದಾದರೂ ಸಂಬಂಧ ಹೊಂದಿದ್ದೀರಾ?" ಎಂದು ಪ್ರಶ್ನೆ ಕೇಳಲಾಯಿತು. ಅದಕ್ಕೆ ವಿವೇಕ್ ತಕ್ಷಣವೇ, “ನೀವು ಲೈಂಗಿಕ ಸಂಬಂಧದ ಕುರಿತು  ಹೇಳುತ್ತಿರುವಿರಾ? ಇದು ಸಾಧ್ಯವೇ ಇಲ್ಲ. ಶಾರುಖ್​ ಆ ರೀತಿಯವನಲ್ಲ. ವದಂತಿಗಳು ಎಲ್ಲಿಂದ ಬಂದವು ಎಂದು ನನಗೂ ತಿಳಿದಿಲ್ಲ. ನಾವು ಒಂದೇ ಮನೆಯಲ್ಲಿ ವಾಸಿಸುತ್ತಿದ್ದೆವು, ನನ್ನ ಹೆತ್ತವರು ಇದ್ದರು, ವೃತ್ತಿಯ ಬಗ್ಗೆ ಟೆನ್ಷನ್ ಇತ್ತು, ಶಾರುಖ್​ಗೆ ಗೌರಿ ಜೊತೆ ಮದುವೆ ಮಾಡಬೇಕಾದ ಸ್ಥಿತಿ ಇತ್ತು. ಇದರ ಮಧ್ಯೆ ನಮ್ಮ ಮಧ್ಯೆ ಹೇಗೆ ಸಂಬಂಧ ಬೆಳೆಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.  

 "ಲೈಂಗಿಕ ಸಂಬಂಧದ ಕುರಿತು ಯೋಚಿಸಲೂ ಸಾಧ್ಯವಿಲ್ಲ. ಆದರೆ ದುರದೃಷ್ಟವಶಾತ್, ಶಾರುಖ್‌ಗೆ ನನ್ನ ಮತ್ತು ಕರಣ್​ ಜೋಹರ್​ ಜೊತೆಗೆ ಸಂಬಂಧದ ಬಗ್ಗೆ ಹೇಳಲಾಗುತ್ತಿತ್ತು. ಆದರೆ ಇದರಲ್ಲಿ ಎಳ್ಳಷ್ಟೂ ಸತ್ಯ ಇಲ್ಲ. ಶಾರುಖ್ ತನ್ನ ಜೀವನದುದ್ದಕ್ಕೂ ಒಬ್ಬ ಮಹಿಳೆಗೆ ಮಾತ್ರ ಸೀಮಿತ ಎಂದು ವಿವೇಕ್ ಹೇಳಿದ್ದಾರೆ.  ಅಂದಹಾಗೆ, ಶಾರುಖ್ ಖಾನ್ ಮತ್ತು ಗೌರಿ ಖಾನ್ 1991 ರಿಂದ ವಿವಾಹವಾದರು. ಅವರಿಗೆ ಮೂವರು ಮಕ್ಕಳಿದ್ದಾರೆ - ಪುತ್ರರಾದ ಆರ್ಯನ್ ಮತ್ತು ಅಬ್ರಾಮ್ ಮತ್ತು ಮಗಳು ಸುಹಾನಾ.

25 ಲಕ್ಷಕ್ಕೆ ಶಾಸಕನ ಜೊತೆ ರೆಸಾರ್ಟ್​ನಲ್ಲಿ! ರಾಜಕಾರಣಿ ವಿರುದ್ಧ ನಟಿ ತ್ರಿಷಾ ಕೇಸ್​- ನೆಟ್ಟಿಗರಿಗೂ ಎಚ್ಚರಿಕೆ

click me!