ಮಹಿಳೆಯರೇನಾದರೂ ಹೊರಗೆ ಹೋಗಿ ದುಡಿದು ಉನ್ನತ ಹುದ್ದೆ ಹೊಂದಿದರೆ ಪುರುಷರು ತಮ್ಮಿಂದ ಏನೋ ಕಿತ್ತುಕೊಂಡ ಭಾವನೆ ಅನುಭವಿಸುವುದು ಸಾಮಾನ್ಯ ಎನಿಸಿಬಿಟ್ಟಿದೆ. ಆದರೆ, ಅದು ಹಾಗಾಗಬಾರದು. ಯಾರು ಯಾವುದನ್ನು ಮಾಡಿದರೂ ಅದು ಮೆಚ್ಚುಗೆ ಗಳಿಸುವಂತಾಗಬೇಕು.
ಸದ್ಯ ಹಾಲಿವುಡ್‌ನಲ್ಲಿ ಮಿಂಚುತ್ತಿರುವ ದಶಕಗಳ ಹಿಂದೆ ಬಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗಿ ಮೆರೆದಿದ್ದ ಪ್ರಿಯಾಂಕಾ ಚೋಪ್ರಾ ಪರುಷರಿಗೆ ಪಾಠ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ನಟಿ ಪ್ರಿಯಾಂಕಾ ಚೋಪ್ರಾ 'ಕೆಲವು ಗಂಡಸರು ಅಸುರಕ್ಷತೆ (Insecurity)ಫೀಲ್ ಅನುಭವಿಸುತ್ತಾರೆ. ನನ್ನ ಲೈಫ್‌ನಲ್ಲಿ ನಾನು ಎರಡೂ ರೀತಿಯ ಗಂಡಸರನ್ನು ನೋಡಿದ್ದೇನೆ. ಕೆಲವರು ನನ್ನ ಯಶಸ್ಸಿನಿಂದ ಇನ್‌ಸೆಕ್ಯುರಿಟಿ ಫೀಲ್ ಅನುಭವಿಸಿದ್ದಾರೆ, ಕೆಲವರು ನನ್ನ ಸಕ್ಸಸ್ ನೋಡಿ ಹೆಮ್ಮೆ ಪಟ್ಟಿದ್ದಾರೆ' ಎಂದಿದ್ದಾರೆ.
ನಟಿ ಪ್ರಿಯಾಂಕಾ ಚೋಪ್ರಾ ಈ ಬಗ್ಗೆ ಡಿಟೇಲ್ ಆಗಿಯೇ ಮಾತನಾಡಿದ್ದಾರೆ. ಮಹಿಳೆಯರು ಯಶಸ್ವಿಯಾದಾಗ ಪುರುಷರು ಯಾಕೆ ಅಸುರಕ್ಷತೆ ಭಾವನೆ ಹೊಂದಬೇಕು? ಅದು ಸರಿಯಲ್ಲ. ಏಕೆಂದರೆ, ಸಮಾಜದಲ್ಲಿ ಪುರುಷರು ಯಾವತ್ತೂ ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆ. ಆದರೆ, ಕೆಲವು ಮಹಿಳೆಯರು ಮಾತ್ರವೇ ಅಂತಹ ಸ್ವಾತಂತ್ರ್ಯವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಪುರುಷರು ಹೊರಗೆ ಹೋಗಿ ದುಡಿದು ಸಮಾಜದಲ್ಲಿ ಯಶಸ್ಸಿನ ಮಾನದಂಡವಾದ ಹಣವನ್ನು ಗಳಿಸಿ ಸಕ್ಸಸ್‌ಫುಲ್ ಜೀವನ ನಡೆಸುತ್ತಾರೆ. ಆದರೆ, ಮಹಿಳೆಯರು ಮನೆಯಲ್ಲೇ ಇದ್ದು ಸಂಸಾರ ನಿಭಾಯಿಸುತ್ತಾರೆ.
ಅಕ್ಷಯ್ -ಟೈಗರ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ; ಬಡೇ ಮಿಯಾನ್ ಚೋಟೆ ಮಿಯಾನ್' ಟೈಟಲ್ ಟ್ರ್ಯಾಕ್ ನೋಡಿದ್ರಾ?
ಮಹಿಳೆಯರೇನಾದರೂ ಹೊರಗೆ ಹೋಗಿ ದುಡಿದು ಉನ್ನತ ಹುದ್ದೆ ಹೊಂದಿದರೆ ಪುರುಷರು ತಮ್ಮಿಂದ ಏನೋ ಕಿತ್ತುಕೊಂಡ ಭಾವನೆ ಅನುಭವಿಸುವುದು ಸಾಮಾನ್ಯ ಎನಿಸಿಬಿಟ್ಟಿದೆ. ಆದರೆ, ಅದು ಹಾಗಾಗಬಾರದು. ಯಾರು ಯಾವುದನ್ನು ಮಾಡಿದರೂ ಅದು ಮೆಚ್ಚುಗೆ ಗಳಿಸುವಂತಾಗಬೇಕು. ಪುರುಷರು ಮಹಿಳೆಯರಂತೆ ಅಳಬಾರದು, ಮನಸ್ಸಿನಲ್ಲಿರುವುದನ್ನು ಹೇಳಿಕೊಳ್ಳಬಾರದು ಎಂದೆಲ್ಲ ಯಾಕೆ ಅಂದುಕೊಳ್ಳಬೇಕು? ಅಳುವುದು, ನಗುವುದು, ಮಾನವೀಯತೆ, ಕರುಣೆ, ಅನುಕಂಪಗಳೆಲ್ಲವೂ ಕೇವಲ ಹೆಂಗಸರ ಸ್ವತ್ತೇನೂ ಅಲ್ಲ. ಗಂಡಸರೂ ಅಳಬಹುದು, ನಗಬಹುದು. ಅವರಿಗೂ ಆ ಸ್ವಾತಂತ್ರ್ಯ ಇರಲೇಬೇಕು.
ಕರಿಮಣಿ ಮಾಲೀಕ ನೀನಲ್ಲ ಸಾಂಗ್ ಸಂಯೋಜಕ ಗುರುಕಿರಣ್ ಏನ್ ಹೇಳ್ತಿದಾರೆ ನೋಡ್ರೀ!
ಮನೆಯಲ್ಲಿ ಹೆಂಗಸರು ಹೊರಗೆ ಹೋಗಿ ದುಡಿದರೆ, ಗಂಡಸರು ಮನೆಯನ್ನು ನಿಭಾಯಿಸಿದರೆ ತಪ್ಪೇನೂ ಇಲ್ಲ. ಈ ಬಗ್ಗೆ ಗಂಡು ಮಕ್ಕಳಿಗೆ ಅವರು ಚಿಕ್ಕವರಿದ್ದಾಗಲೇ ಹೇಳಿಕೊಡಬೇಕು. ಖುಷಿಯಾದರೆ ನಗುವುದು ದುಃಖವಾದರೆ ನಗುವುದು ಸಹಜ ಸ್ವಭಾವ, ಅದರಲ್ಲೇನೂ ತಪ್ಪಿಲ್ಲ ಎಂಬುದನ್ನುಕಲಿಸಬೇಕು. ಈ ನಿಟ್ಟಿನಲ್ಲಿ ಸದ್ಯದ ಸಮಾಜದ ರೀತಿ-ನೀತಿಗಳು ಬದಲಾಗಬೇಕು. ಮನೆಯಲ್ಲಿರುವ ಮಹಿಳೆಯರು ಜತೆ ತಮ್ಮ ಸಮಸ್ಯೆಗಳನ್ನು, ಖುಷಿಯ ಕ್ಷಣಗಳನ್ನು ಪುರುಷರು ಹಂಚಿಕೊಳ್ಳುವಂತಾಗಬೇಕು' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.
ಮಲಯಾಂಳ ನಿರ್ದೇಶಕಿ ಅಂಜಲಿ ಮೆನನ್ ಜೊತೆ ಕೈ ಜೋಡಿಸಿದ ಕೆಆರ್‌ಜಿ ಸ್ಟುಡಿಯೋಸ್