ಬಾಲಿವುಡ್‌ ನಟರ ಪಾಲಿಗೆ ಶಾಪಗ್ರಸ್ತ ಬಂಗಲೆಯಿದು, ಮೂವರು ಸೂಪರ್‌ಸ್ಟಾರ್‌ಗಳ ಕೆರಿಯರ್ ಹಾಳಾಯ್ತು!

By Vinutha Perla  |  First Published Feb 23, 2024, 1:43 PM IST

ಮುಂಬೈನಲ್ಲಿ ಹಲವು ಹೆಸರಾಂತ ಐಷಾರಾಮಿ ಬಂಗಲೆಗಳಿವೆ.ಸೆಲೆಬ್ರಿಟಿಗಳು ಇಂಥಾ ಬೆಲೆಬಾಳುವ ಬಂಗಲೆಯಲ್ಲಿ ವಾಸಿಸುತ್ತಾರೆ. ಆದ್ರೆ ಮುಂಬೈನ ಹೆಸರಾಂತ ಬಂಗಲೆಯೊಂದು ಮೂರು ಬಾಲಿವುಡ್ ಸೂಪರ್‌ಸ್ಟಾರ್‌ಗಳ ಸೋಲಿಗೆ ಕಾರಣವಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.


ವಾಸ್ತುವಿನ ಬಗ್ಗೆ ನಂಬಿಕೆಯುಳ್ಳವರು ಹೇಳುವ ಪ್ರಕಾರ ಮನೆಯನ್ನು ಕಟ್ಟುವ ರೀತಿ ಒಬ್ಬರ ಭವಿಷ್ಯವನ್ನು ನಿರ್ಧರಿಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ತರ್ಕಬದ್ಧ ಚಿಂತನೆ ಮಾಡುವವರು ಇಂಥಾ ಕಲ್ಪನೆಗಳನ್ನು ಮೂಢನಂಬಿಕೆಗಳೆಂದು ತಳ್ಳಿ ಹಾಕುತ್ತಾರೆ. ಅದು ನಿಜ ಎಂಬುದು ಬಾಲಿವುಡ್‌ನಲ್ಲಿ ಸಾಬೀತಾಗಿದೆ. ಮುಂಬೈನ ಈ ಹೆಸರಾಂತ ಬಂಗಲೆ ಮೂರು ಬಾಲಿವುಡ್ ಸೂಪರ್‌ಸ್ಟಾರ್‌ಗಳ ಸೋಲಿಗೆ ಕಾರಣವಾಗಿದೆ. ಮುಂಬೈನ ಬೆಲೆಬಾಳುವ ಕಾರ್ಟರ್ ರಸ್ತೆಯಲ್ಲಿ 50ರ ದಶಕದಿಂದಲೂ ಬಾಲಿವುಡ್ ರಾಜಮನೆತನದಲ್ಲಿರುವ ಶಾಪಗ್ರಸ್ಥ ಬಂಗಲೆಯಿದು.

ಬಂಗಲೆಯು ಮೂಲತಃ ಆಂಗ್ಲೋ-ಇಂಡಿಯನ್ ಕುಟುಂಬದ ಒಡೆತನದಲ್ಲಿದೆ. ಅದರ ಮೂಲ ಹೆಸರು ಏನೆಂದು ಯಾರಿಗೂ ತಿಳಿದಿಲ್ಲ. 1950ರ ದಶಕದ ಆರಂಭದಲ್ಲಿ, ಬಾಕ್ಸ್ ಆಫೀಸ್ ಕಿಂಗ್ ಭರತ್ ಭೂಷಣ್ ಈ ಮನೆಯನ್ನು ಖರೀದಿಸಿದರು. ಬೈಜು ಬಾವ್ರಾ, ಮಿರ್ಜಾ ಗಾಲಿಬ್, ಗೇಟ್‌ವೇ ಆಫ್ ಇಂಡಿಯಾ ಮತ್ತು ಬರ್ಸಾತ್ ಕಿ ರಾತ್‌ನಂತಹ ಹಿಟ್‌ಗಳೊಂದಿಗೆ ಅವರು ಬಾಂಬೆ ಚಲನಚಿತ್ರೋದ್ಯಮವನ್ನು ಆಳಿದರು.

Latest Videos

undefined

.ಗಂಗೂಲಿ ಜೊತೆಯೂ ಸೇರಿ ಮೂರು ವಿವಾಹಿತರ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದ ಸ್ಟಾರ್‌ ನಟಿಯ ವಿವಾದತ್ಮಕ ಜೀವನ! 

ಸೂಪರ್‌ಸ್ಟಾರ್‌ಗಳ ಹೀನಾಯ ಸೋಲು, ಕೋಟಿ ಕೋಟಿ ಸಾಲಕ್ಕೆ ಕಾರಣವಾದ ಬಂಗಲೆ
ಆದರೆ 60ರ ದಶಕದ ಹೊತ್ತಿಗೆ, ಭರತ್ ಭೂಷಣ್ ಫೇಮಸ್ ಕಡಿಮೆಯಾಗಲು ಪ್ರಾರಂಭವಾಯಿತು. ಅವರ ಚಲನಚಿತ್ರಗಳು ವಿಫಲವಾದವು ಮತ್ತು ಸೂಪರ್‌ಸ್ಟಾರ್ ದೊಡ್ಡ ಸಾಲವನ್ನು ಮಾಡಬೇಕಾಯಿತು. ಅದರ ನಂತರ ಅವರು ಮನೆಯನ್ನು ಮಾರಾಟ ಮಾಡಬೇಕಾಯಿತು. ಮೊದಲ ಬಾರಿಗೆ ಬಂಗಲೆಯ ಬಗ್ಗೆ ಕಟ್ಟುಕಥೆಗಳು ಹುಟ್ಟಿಕೊಂಡವು, ಬಂಗಲೆಯೊಳಗೆ ವಾಸಿಸುವವರು ಸಂಪೂರ್ಣ ಸೋಲನ್ನು ಅನುಭವಿಸುತ್ತಾರೆ ಎಂದು ಜನರು ಮಾತನಾಡಿಕೊಂಡರು. ಆ ನಂತರ ಈ ಬಂಗಲೆಯನ್ನು ಖರೀದಿಸಿದ ಸೂಪರ್ ಸ್ಟಾರ್ ನಟರಾದ ರಾಜೇಂದ್ರ ಕುಮಾರ್ ಮತ್ತು ರಾಜೇಶ್ ಖನ್ನಾ ಇದೇ ರೀತಿಯ ಸೋಲನ್ನು ಅನುಭವಿಸಿದರು.

60ರ ದಶಕದ ಆರಂಭದಲ್ಲಿ ಬಂಗಲೆಯ ಶಿಥಿಲಾವಸ್ಥೆಯನ್ನು ಗಮನಿಸಿ, ಉದಯೋನ್ಮುಖ ತಾರೆ ರಾಜೇಂದ್ರ ಕುಮಾರ್ ಅದನ್ನು ಕೇವಲ 60,000 ರೂಗಳಿಗೆ ಖರೀದಿಸಲು ಸಾಧ್ಯವಾಯಿತು. ಬಂಗಲೆಗೆ ತಮ್ಮ ಮಗಳ ಹೆಸರು ಡಿಂಪಲ್ ಎಂದು ಹೆಸರಿಸಿದರು. ಡಿಂಪಲ್‌ನಲ್ಲಿ ವಾಸಿಸುತ್ತಿದ್ದ ರಾಜೇಂದ್ರ ಕುಮಾರ್‌ಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದರು. ಜುಬಿಲಿ ಕುಮಾರ್ ಎಂದು ಕರೆಯಲ್ಪಟ್ಟರು.

ಕಂಗನಾ ರಣಾವತ್​ರ 10 ಕೋಟಿಯ ಆಸ್ತಿಯ ಒಡತಿಯಾದ ನಟಿ ಮೃಣಾಲ್​ ಠಾಕೂರ್​! ಏನಿದು ವಿಷ್ಯ?

ಹಲವು ಸೂಪರ್‌ಸ್ಟಾರ್‌ಗಳಿಂದ ಬಂಗಲೆ ಮಾರಾಟ
ಆದರೆ 1968ರ ಸುಮಾರಿಗೆ, ಅದೃಷ್ಟವು ಕೈ ಕೊಟ್ಟಿತು. ಎಲ್ಲಾ ಚಲನಚಿತ್ರಗಳು ವಿಫಲವಾದವು. ತುಂಬಾ ಆರ್ಥಿಕ ಸಂಕಷ್ಟವನ್ನು ಅನುಭವಿಸಿದರು. ನಷ್ಟವನ್ನು ಮರುಪಡೆಯಲು ಬಂಗಲೆಯನ್ನು ಮಾರಾಟ ಮಾಡಬೇಕಾಯಿತು. ನಂತರ ಮನೆ ಹೊಸ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಪಾಲಾಯಿತು. 30ಕ್ಕೂ ಮೊದಲು ನಟ, ನಂಬರ್‌ ಒನ್ ನಟ ಎಂದು ಗುರುತಿಸಿದರು.  ಬಂಗಲೆಯನ್ನು ಆಶೀರ್ವಾದ್ ಎಂದು ಮರುನಾಮಕರಣ ಮಾಡಿದರು. 

ಆದರೆ 1974 ರ ಹೊತ್ತಿಗೆ, ರಾಜೇಶ್ ಖನ್ನಾ ಅವರ ಚಲನಚಿತ್ರಗಳು ವಿಫಲಗೊಳ್ಳಲು ಪ್ರಾರಂಭಿಸಿದವು. ಅವರು ತಮ್ಮ ಸೂಪರ್‌ಸ್ಟಾರ್ ಟ್ಯಾಗ್ ಅನ್ನು ಕಳೆದುಕೊಂಡರು. ವಿವಾಹ ಮುರಿದುಬಿತ್ತು. ವೃತ್ತಿಜೀವನದ ಕೊನೆಯಲ್ಲಿ, ರಾಜೇಶ್ ಖನ್ನಾ ಬಂಗಲೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ. 2014ರಲ್ಲಿ ಈ ಬಂಗಲೆಯನ್ನು ಕೈಗಾರಿಕೋದ್ಯಮಿಯೊಬ್ಬರಿಗೆ 90 ಕೋಟಿ ರೂ.ಗೆ ಮಾರಾಟ ಮಾಡಲಾಗಿತ್ತು. ಫೆಬ್ರವರಿ 2016 ರಲ್ಲಿ, ಹೊಸ ಮಾಲೀಕರು ಐಕಾನಿಕ್ ಬಂಗಲೆಯನ್ನು ಅದರ ಸ್ಥಳದಲ್ಲಿ ಹೊಸ ಆಸ್ತಿಯನ್ನು ನಿರ್ಮಿಸಲು ಕೆಡವಿದರು. ಇದರೊಂದಿಗೆ ಮೂವರು ಬಾಲಿವುಡ್ ತಾರೆಯರ ಮನೆಯಾಗಿದ್ದ ಮನೆ ತನ್ನ ಪಯಣವನ್ನು ಅಂತ್ಯಗೊಳಿಸಿತು.

click me!