ತಮಿಳಿನ ಖ್ಯಾತ ನಟ ವಿಶಾಲ್ ಅವರಿಗೆ ಮದ್ವೆ ಯಾವಾಗ ಎಂದು ಕೇಳಿದಾಗ ಶಾಕಿಂಗ್ ಹೇಳಿಕೆ ಕೊಡೋ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಅವರು ಹೇಳಿದ್ದೇನು?
ತಮ್ಮ ಅದ್ಭುತವಾದ ನಟನೆಯಿಂದ ಪ್ರಸಿದ್ಧಿ ಪಡೆದಿರುವ ತಮಿಳಿನ ನಟ ವಿಶಾಲ್ ಅವರ ಮದುವೆ ವಿಷಯ ಹಲವು ವರ್ಷಗಳಿಂದ ಚರ್ಚೆ ಆಗುತ್ತಲೇ ಇರುತ್ತದೆ. ಸಮಾಜ ಸೇವೆಯಿಂದಲೂ ಫೇಮಸ್ ಆಗಿರೋ ನಟನಿಗೆ ಹೋದಲ್ಲಿ ಬಂದಲ್ಲಿ ಮದುವೆಯದ್ದೇ ಪ್ರಶ್ನೆ. ಇದಕ್ಕೆ ಕಾರಣ, ಇವರಿಗೆ ಈಗ 46 ವರ್ಷ ವಯಸ್ಸು. ಅವರಿನ್ನೂ ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ. ಅವರು ಮದುವೆ ಆಗೋ ಹುಡುಗಿ ಹೇಗಿರುತ್ತಾಳೆ ಎಂಬಿತ್ಯಾದಿ ವಿಚಾರಗಳು ಚರ್ಚೆ ಆಗುತ್ತಲೇ ಇರುತ್ತವೆ. ಆದರೆ ಈ ಪ್ರಶ್ನೆ ಕೇಳಿದಾಗಲೆಲ್ಲ, ಚಾಣಾಕ್ಷತನದಿಂದ ನುಣುಚಿಕೊಳ್ತಾರೆ ವಿಶಾಲ್.
ಆದರೆ ಅಭಿಮಾನಿಗಳು ಬಿಡಬೇಕಲ್ಲ? ಈಗ ಮತ್ತೊಮ್ಮೆ ಇದೇ ಪ್ರಶ್ನೆಯನ್ನು ನಟನ ಎದುರಿಗೆ ಇಟ್ಟಿದ್ದಾರೆ. ವಿಶಾಲ್ ಈಗ ಶಾಕಿಂಗ್ ಉತ್ತರ ನೀಡಿದ್ದು, ಇದು ನಿಜನೇ ಆಗಿದ್ರೆ ಈ ಜನ್ಮದಲ್ಲಿ ನೀವು ಮದ್ವೆಯಾಗಲ್ಲ ಬಿಡಿ ಅಂತಿದ್ದಾರೆ ಅಭಿಮಾನಿಗಳು. ಅಷ್ಟಕ್ಕೂ ನಟ ಹೇಳಿದ್ದೇನು ಗೊತ್ತಾ? ನಟರಾದ ‘ಸಲ್ಮಾನ್ ಖಾನ್, ಸಿಂಬು ಹಾಗೂ ಪ್ರಭಾಸ್ ಮದುವೆ ಆದ ಬಳಿಕವೇ ನಾನು ಮದುವೆ ಆಗುತ್ತೇನೆ’ ಎಂದಿದ್ದಾರೆ! ಬಾಲಿವುಡ್‌ನ ಮೋಸ್ಟ್ ಎಲಿಬಿಜಲ್ ಬ್ಯಾಚುಲರ್ ಎಂದೇ ಎನ್ನಿಸಿಕೊಂಡಿರುವ ಸಲ್ಲುಭಾಯಿಗೆ ಇದಾಗಲೇ 58 ವರ್ಷ ಮೀರಿದೆ. ಸಿಂಬು ಅವರಿಗೆ 41 ವರ್ಷ ಹಾಗೂ ಪ್ರಭಾಸ್ ಅವರಿಗೆ 44 ವರ್ಷ.
ಶಾರುಖ್ ಖಾನ್ ಆರೋಗ್ಯ ಸ್ಥಿತಿ ಹೇಗಿದೆ? ಆಸ್ಪತ್ರೆಯಿಂದಲೇ ಅಪ್ಡೇಟ್ ಕೊಟ್ಟ ನಟಿ ಜೂಹಿ ಚಾವ್ಲಾ
ಒಂದು ವೇಳೆ ಸಿಂಬು ಮತ್ತು ಪ್ರಭಾಸ್ ಅವರಿಗೆ ಮದುವೆ ಆದರೂ ಆಗಬಹುದು. ಆದರೆ ಸಲ್ಮಾನ್ ಖಾನ್ ಅಂತೂ ಈಗ ಮದ್ವೆಯಾಗುವ ಯಾವುದೇ ಲಕ್ಷಣಗಳು ಇಲ್ಲ. ಇದಾಗಲೇ ನಟನ ಬಾಳಲ್ಲಿ ಹಲವು ನಟಿಯರು ಬಂದು ಹೋಗಿದ್ದಾರೆ. ಹಲವರ ಜೊತೆ ಸಂಬಂಧವೂ ಸಲ್ಮಾನ್ ಖಾನ್ಗೆ ಇದೆ. ಆದರೆ ಮದುವೆ ಮಾತ್ರ ಆಗುವ ಛಾನ್ಸ್ ಇಲ್ಲವೇ ಇಲ್ಲ. ಇದೇ ಕಾರಣಕ್ಕೆ ವಿಶಾಲ್ ಅವರ ಮಾತಿಗೆ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ. ಈ ಜನ್ಮದಲ್ಲಿ ನಿಮ್ಮ ಮದ್ವೆ ಆಗಲ್ಲ ಎನ್ನುತ್ತಿದ್ದಾರೆ. ‘ವಿಶಾಲ್ ಅವರ ಜೀವನದಲ್ಲಿ ಮದುವೆ ಚಾಪ್ಟರ್ ಇರುವುದೇ ಇಲ್ಲ’ ಎಂದು ಕಮೆಂಟ್ ಮಾಡಿದ್ದಾರೆ.
ಇದಾಗಲೇ ತಮಗೆ ಹೊಂದಿಕೆ ಆಗೋ ಹುಡುಗಿಯ ಹುಡುಕಾಟದಲ್ಲಿ ಇರುವುದಾಗಿ ಹಿಂದೊಮ್ಮೆ ಹೇಳಿದ್ದರು. ಅದೇ ರೀತಿ, ಇಂಡಿಯಾಗ್ಲಿಟ್ಸ್ ತಮಿಳು ಪ್ರಕಾರ, ವಿಶಾಲ್ ಅವರು ತಮ್ಮ ಕೆಲ ಕಮಿಟ್‌ಮೆಂಟ್‌ಗಳನ್ನು ಪೂರ್ಣಗೊಳಿಸಿದ ನಂತರ ಮದುವೆಯಾಗುವುದಾಗಿ ಹೇಳಿದ್ದಾರೆ. ಇದೇನೋ ಸರಿ, ಆದರೆ ಇದರ ಜೊತೆಗೇನೇ ಈ ಮೂವರು ನಟರ ಮದುವೆಯಾದ ಮೇಲೆ ತಾವು ಆಗುವುದಾಗಿ ಹೇಳುವ ಮೂಲಕ ಶಾಕ್ ನೀಡಿದ್ದಾರೆ. ವಿಶಾಲ್ ಅವರ ಮದುವೆ ವಿಚಾರ ಈಗಾಗಲೇ ಸಾಕಷ್ಟು ಬಾರಿ ಸುದ್ದಿಯಾಗಿತ್ತು. ತಮಿಳು ನಟಿ ಲಕ್ಷ್ಮಿ ಮೆನನ್ ಅವರನ್ನು ವಿಶಾಲ್ ಮದುವೆ ಆಗುತ್ತಾರೆ ಎಂದು ವದಂತಿಗಳು ಹರಿದಾಡಿತ್ತು. ಈ ಬಗ್ಗೆ ವಿಶಾಲ್ ಅವರೇ ಟ್ವಿಟರ್ ಪೇಜ್ ನಲ್ಲಿ ಅಂತಹದ್ದು ಏನೂ ಇಲ್ಲ, ಇದೆಲ್ಲಾ ಗಾಳಿ ಸುದ್ದಿ ಎಂದು ಸ್ಪಷ್ಟನೆ ನೀಡಿದ್ದರು. ಇನ್ನು ಪ್ರಭಾಸ್ ಅವರ ಹೆಸರು ಅನುಷ್ಕಾ ಶೆಟ್ಟಿ ಜೊತೆ ಥಳುಕುಹಾಕಿಕೊಂಡಿತ್ತು. ಕಾಲಿವುಡ್ ನಟ ಸಿಂಬು ಕೂಡ ಈ ಮೊದಲು ಕೆಲವರ ಜೊತೆ ಡೇಟ್ ಮಾಡಿದ್ದರು. ಆದರೆ, ಮದುವೆ ಆಗುವ ಆಲೋಚನೆಯನ್ನು ಅವರು ಮಾಡಿಲ್ಲ. ಒಟ್ಟಿನಲ್ಲಿ ವಿಶಾಲ್ ಅವರು ಸದ್ಯ ಈ ಹೇಳಿಕೆ ನೀಡುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ವಿಶಾಲ್ ಅವರ ನಟನೆಯ ‘ರತ್ನಂ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಇದನ್ನು ಹರಿ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಲು ವಿಫಲವಾಗಿದೆ. ಅವರು ಅಣ್ಣಾಮಲೈ ಬಯೋಪಿಕ್ನ ಭಾಗವಾಗಲಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿರೋ ನಟಿ ರಾಖಿ ಸಾವಂತ್ಗೆ ಜೀವ ಬೆದರಿಕೆ: ವಕೀಲರಿಂದ ಶಾಕಿಂಗ್ ಹೇಳಿಕೆ