Latest Videos

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿರೋ ನಟಿ ರಾಖಿ ಸಾವಂತ್​ಗೆ ಜೀವ ಬೆದರಿಕೆ: ವಕೀಲರಿಂದ ಶಾಕಿಂಗ್​ ಹೇಳಿಕೆ

By Suchethana DFirst Published May 23, 2024, 12:53 PM IST
Highlights

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿರೋ ನಟಿ ರಾಖಿ ಸಾವಂತ್​ಗೆ ಜೀವ ಬೆದರಿಕೆ ಎಂದು ನಟಿಯ ವಕೀಲರು ಹೇಳಿಕೆ ನೀಡಿದ್ದಾರೆ. ಅವರು ಹೇಳಿದ್ದೇನು?
 

ಗರ್ಭಕೋಶದಲ್ಲಿ ಗಡ್ಡೆ ಆಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಬಾಲಿವುಡ್​ ನಟಿ ರಾಖಿ ಸಾವಂತ್​ ಅವರಿಗೆ ಎರಡು ದಿನಗಳ ಹಿಂದೆ ಶಸ್ತ್ರಚಿಕಿತ್ಸೆ ಮೂಲಕ ಗಡ್ಡೆಯನ್ನು ಹೊರಕ್ಕೆ ತೆಗೆಯಲಾಗಿದೆ. 10 ಸೆಂಟಿ ಮೀಟರ್​ ಉದ್ದದ ಗಡ್ಡೆ ಇದಾಗಿತ್ತು. ನಟಿ ಇನ್ನೂ ಆಸ್ಪತ್ರೆಯಲ್ಲಿಯೇ ಇದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ಅವರ ಮಾಜಿ ಪತಿ ಮೊದಲ ಮಾಜಿ ಪತಿ ರಿತೇಶ್ ರಾಜ್ ಸಿಂಗ್ ಹೇಳಿದ್ದಾರೆ. ಮೊನ್ನೆ ಮೊನ್ನೆಯವರೆಗೂ ಚಿತ್ರ-ವಿಚಿತ್ರ ಡ್ರೆಸ್​ ತೊಟ್ಟು ಡ್ರಾಮಾ ಮಾಡುತ್ತಿದ್ದ ನಟಿ ಏಕಾಏಕಿ ಆಸ್ಪತ್ರೆಗೆ ಅಡ್ಮಿಟ್​ ಆಗಿದ್ದರಿಂದ ಇದು ಕೂಡ ಡ್ರಾಮಾ ಎಂದೇ ಮಾತನಾಡಿಕೊಳ್ಳಲಾಗಿತ್ತು. ಸುಪ್ರೀಂಕೋರ್ಟ್​ ತೀರ್ಪಿನ ಹಿನ್ನೆಲೆಯಲ್ಲಿ, ನಟಿ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇರುವ ಕಾರಣ, ಈಕೆ ನಾಟಕ ಮಾಡುತ್ತಿದ್ದಾರೆ ಎಂದು ಎರಡನೆಯ ಮಾಜಿ ಪತಿ ಆದಿಲ್​ ಖಾನ್​ ದುರ್ರಾನಿ ಕೂಡ ಸೋಷಿಯಲ್​ ಮೀಡಿಯಾದಲ್ಲಿ ತಿಳಿಸಿದ್ದರು. ಮಾತ್ರವಲ್ಲದೇ ಹಲವಾರು ಮಂದಿ ಇದನ್ನೇ ಹೇಳಿದ್ದರು. ಅವರ  ಬಾಯಿ ಮುಚ್ಚಿಸಿದ್ದ ರಿತೇಶ್ ರಾಜ್ ಸಿಂಗ್ ರಾಖಿ ಅವರಿಗೆ ಹೊರಕ್ಕೆ ತೆಗೆದಿದ್ದ ಗಡ್ಡೆಯನ್ನು ತೋರಿಸಿದ್ದರು. 

ಇದೀಗ ರಿತೇಶ್​ ಸಿಂಗ್​ ಮಾತ್ರವಲ್ಲದೇ ರಾಖಿ ಅವರ ಲಾಯರ್​ ಕೂಡ ಶಾಕಿಂಗ್​ ಹೇಳಿಕೆ ನೀಡಿದ್ದಾರೆ. ಅದೇನೆಂದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಖಿ ಅವರಿಗೆ ಕೆಲವರು ಜೀವ ಬೆದರಿಕೆ ಹಾಕುತ್ತಿದ್ದಾರೆ ಎನ್ನುವುದು. ಎರಡನೆಯ ಮಾಜಿ ಪತಿ ಆದಿಲ್​ ಖಾನ್​ ದುರ್ರಾನಿ ಅವರ ವಿರುದ್ಧ ಇದಾಗಲೇ ಮೊದಲ ಮಾಜಿ ಪತಿ ರಿತೇಶ್​ ಸಿಂಗ್​ ಆಪಾದನೆ ಮಾಡಿದ್ದರು. ಇದೀಗ ಅವರ ಹೆಸರನ್ನು ಉಲ್ಲೇಖ ಮಾಡಲು ಹಿಂದೇಟು ಹಾಕಿರುವ ರಿತೇಶ್​ ಅವರು, ಕೆಲವರು ರಾಖಿಗೆ ಜೀವ ಬೆದರಿಕೆ ಒಡ್ಡುತ್ತಿದ್ದಾರೆ. ರಾಖಿ ಆಸ್ಪತ್ರೆಯಿಂದ ಹೊರಕ್ಕೆ ಬಂದ ಕೂಡಲೇ ಅವರ ವಿರುದ್ಧ ದೂರು ದಾಖಲಿಸುತ್ತಾಳೆ ಎಂದಿದ್ದಾರೆ. 

ರಾಖಿ ಆಪರೇಷನ್​ ಸಕ್ಸಸ್​: 10 ಸೆಂ.ಮೀ. ಉದ್ದದ ಗಡ್ಡೆ ತೋರಿಸಿ ಟ್ರೋಲಿಗರ ಬಾಯಿ ಮುಚ್ಚಿಸಿದ ಮಾಜಿ ಪತಿ

ನಾನು ಎಲ್ಲವನ್ನೂ ಹೇಳುತ್ತೇನೆ. ಯಾರಿಗೂ ಹೆದರುವುದಿಲ್ಲ. ಮೊದಲು ಸೂಕ್ತ ಸಾಕ್ಷ್ಯಾಧಾರಗಳು ಬೇಕು. ಅದನ್ನು ಕಲೆಕ್ಟ್​ ಮಾಡುತ್ತಿದ್ದೇನೆ. ನಮ್ಮ ಹಿತೈಷಿಗಳು ಎಂದು ಹೇಳಿಕೊಂಡು ಬಂದವರೇ ಈ ಕೊಲೆ ಬೆದರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ರಿತೇಶ್​ ಹೇಳಿದ್ದಾರೆ. ಇದೀಗ ಈ ಮಾತನ್ನು ರಾಖಿ ಪರ ವಕೀಲರಾದ ವಕೀಲ ಫಲ್ಗುಣಿ ಬ್ರಹ್ಮಭಟ್ ಅವರು ನಟಿಗೆ ಜೀವ ಬೆದರಿಕೆ ಬರುತ್ತಿರುವುದನ್ನು ಖಚಿತಪಡಿಸಿದ್ದಾರೆ.  ರಾಖಿಗೆ ಬೆದರಿಕೆ ಕರೆಗಳು ಬಂದಿವೆ ಮತ್ತು ಶೀಘ್ರದಲ್ಲೇ ಪೊಲೀಸ್ ದೂರು ನೀಡುವುದಾಗಿ ಫಲ್ಗುಣಿ ಬಹಿರಂಗಪಡಿಸಿದ್ದಾರೆ.  ಸದ್ಯ ರಾಖಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ಡಿಸ್ಚಾರ್ಜ್ ಆದ ಕ್ಷಣವೇ ಪೊಲೀಸರಿಗೆ ದೂರು ನೀಡುವುದಾಗಿ ಅವರು ಹೇಳಿದ್ದಾರೆ. 

ಅಂದಹಾಗೆ, ರಾಖಿ   ಸುಪ್ರೀಂಕೋರ್ಟ್​ ಆದೇಶದ ಮೇರೆಗೆ ಬಂಧನದ ಭೀತಿಯನ್ನೂ ಎದುರಿಸುತ್ತಿದ್ದಾರೆ. ಮಾಜಿ ಪತಿ ಆದಿಲ್​ ಖಾನ್​ರ  ಖಾಸಗಿ ವಿಡಿಯೋಗಳನ್ನು ಲೀಕ್​ ಮಾಡಿದ ಆರೋಪ ಇವರ ಮೇಲಿದೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನಿಂದ ಬಂಧನದ ಭೀತಿ ಇವರಿಗಿದೆ.  ಈ ಪ್ರಕರಣದಲ್ಲಿ ತನ್ನದೇನೂ ತಪ್ಪಿಲ್ಲ ಎಂದುಕೊಂಡು  ಬುರ್ಖಾದಲ್ಲಿ ಕಾಣಿಸಿಕೊಂಡಿದ್ದ ರಾಖಿ ಈಚೆಗೆ, ಮೊದಲ ಪತಿ ರೀತೇಶ್​ ಬಳಿ ಓಡಿ ಹೋಗಿದ್ದರು.  ತಮ್ಮ ವಿರುದ್ಧ ಆದಿಲ್​ ಖಾನ್​ ದೂರು ದಾಖಲು ಮಾಡುತ್ತಿದ್ದಂತೆಯೇ ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದುಕೊಂಡಿದ್ದ ರಾಖಿ, ತಮ್ಮನ್ನು ಬಂಧಿಸದಂತೆ ಕೋರಿ ನಿರೀಕ್ಷಣಾ ಜಾಮೀನು ಕೋರಿದ್ದರು. ಆದರೆ ಇವರ ಅರ್ಜಿ ತಿರಸ್ಕರಿಸಿರುವ ಸುಪ್ರೀಂಕೋರ್ಟ್​ ನಾಲ್ಕು ವಾರಗಳಲ್ಲಿ ಸರೆಂಡರ್​ ಆಗುವಂತೆ ಆದೇಶಿಸಿತ್ತು. ಇದರ ಬೆನ್ನಲ್ಲೇ ನಟಿ ಆಸ್ಪತ್ರೆಗೆ ಸೇರಿದ್ದರಿಂದ ಡ್ರಾಮಾ ಎಂದೇ ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಇನ್ನೋರ್ವ ಮಾಜಿ ಪತಿ ಆದಿಲ್​ ಖಾನ್​ ದುರ್ರಾನಿ ಕೂಡ ಜೈಲಿನಿಂದ ತಪ್ಪಿಸಿಕೊಳ್ಳಲು ಈಕೆ ಡ್ರಾಮಾ ಮಾಡುತ್ತಿದ್ದಾಳೆ ಎಂದು ಪ್ರತಿಕ್ರಿಯೆ ನೀಡಿದ್ದರು. 

ಶಾರುಖ್​ ಖಾನ್​ ಆರೋಗ್ಯ ಸ್ಥಿತಿ ಹೇಗಿದೆ? ಆಸ್ಪತ್ರೆಯಿಂದಲೇ ಅಪ್​ಡೇಟ್​ ಕೊಟ್ಟ ನಟಿ ಜೂಹಿ ಚಾವ್ಲಾ
 

click me!