Bengaluru Rave Party: ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದ ನಟಿ ಆಶಿ ರಾಯ್‌ಗೆ ಸಿಸಿಬಿ ನೊಟೀಸ್

By Sathish Kumar KH  |  First Published May 23, 2024, 12:54 PM IST

ಬೆಂಗಳೂರು ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದು ನನ್ನನ್ನು ರಕ್ಷಿಸಿ ಎಂದು ಅಭಿಮಾನಿಗಳಿಗೆ ಕೈ ಮುಗಿದು ಬೇಡಿಕೊಂಡಿದ್ದ ತೆಲುಗು ಮತ್ತೊಬ್ಬ ನಟಿ ಆಶಿ ರಾಯ್ ರಕ್ತದಲ್ಲಿಯೂ ಡ್ರಗ್ಸ್ ಸೇವನೆ ಮಾಡಿರುವ ಅಂಶವು ಪತ್ತೆಯಾಗಿದೆ.


ಬೆಂಗಳೂರು (ಮೇ 23): ಬೆಂಗಳೂರಿನ ಹೊರ ವಲಯ ಎಲೆಕ್ಟ್ರಾನಿಕ್ ಸಿಟಿಯ ಫಾರ್ಮ್‌ ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ನಟಿ ಆಶಿ ರಾಯ್ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೇ ನನ್ನನ್ನು ರಕ್ಷಿಸಿ ಎಂದು ಕೈ ಮುಗಿದು ಬೇಡಿಕೊಂಡಿದ್ದಳು. ಆದರೆ, ಈಗ ಆಶಿ ರಾಯ್ ಕೂಡ ಡ್ರಗ್ಸ್ ಸೇವನೆ ಮಾಡಿರುವುದು ಖಚಿತವಾಗಿದೆ.'

ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ಆಶಿ ರಾಯ್, ನಾನು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ್ದೆನು. ನಾನು ಅಣ್ಣ ಎಂದು ಕರೆಯುತ್ತಿದ್ದ ವ್ಯಕ್ತಿಯ ಬರ್ತಡೇ ಪಾರ್ಟಿ ಅದಾಗಿತ್ತು. ಬೆಂಗಳೂರು ಪಾರ್ಟಿಯ ಒಳಗೆ ಏನೇನು ನಡೆದಿದೆ ಎಂಬುದೇ ಗೊತ್ತಿಲ್ಲ. ಆದರೆ, ಅಲ್ಲಿನ ಪೊಲೀಸರು ನಮ್ಮನ್ನು ಕೂಡಿ ಹಾಕಿ ನನ್ನ ಬ್ಲಡ್ ಸ್ಯಾಂಪಲ್ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ನನಗೆ ಭಯವಾಗಿದೆ.

Tap to resize

Latest Videos

ಬಯಲಾಯ್ತು ನಟಿ ಹೇಮಾ ರಂಗಿನಾಟ; ಬೆಂಗಳೂರು ರೇವ್ ಪಾರ್ಟಿಗೆ ಬಂದಿಲ್ಲ ಎಂದವಳ ರಕ್ತದಲ್ಲಿ ಡ್ರಗ್ಸ್ ಪತ್ತೆ

ತೆಲುಗು ಸಿನಿಮಾ ಕ್ಷೇತ್ರದಲ್ಲಿ ನಾನಿನ್ನೂ ಚಿಕ್ಕ ಹುಡುಗಿ. ನಾನು ಕಷ್ಟ ಪಟ್ಟು ಈಗತಾನೇ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಬೆಳೆಯುತ್ತಿದ್ದೇನೆ. ಈ ಡ್ರಗ್ಸ್ ಪ್ರಕರಣದಲ್ಲಿ ನೀವೆಲ್ಲರೂ ನನ್ನ ಸಹಾಯಕ್ಕೆ ಬರಬೇಕು ಎಂದು ನಟಿ ಆಶಿ ರಾಯ್ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದರು. ಇನ್ನು ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದು ಬ್ಲಡ್ ಸ್ಯಾಂಪಲ್ ಕೊಟ್ಟು ಬಂದಿದ್ದ ನಟಿ ಆಶಿ ರಾಯ್‌ಗೆ ರಕ್ತದ ಮಾದರಿಯಲ್ಲಿ ಈಗ ಡ್ರಗ್ಸ್ ಪಾಸಿಟಿವ್ ಬಂದಿದೆ. ಅಂದರೆ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಿರುವುದು ಪೊಲೀಸರಿಗೆ ಖಚಿತವಾಗಿದೆ.

ಇನ್ನು ಬೆಂಗಳೂರಿನ ರೇವ್ ಪಾರ್ಟಿ ಭಾಗಿಯಾಗಿದ್ದ  103 ಮಂದಿಯ ಪೈಕಿ 86 ಮಂದಿ ಡ್ರಗ್ ಸೇವನೆ ಮಾಡಿರುವುದು ಖಚಿತವಾಗಿದೆ. ಈ ಪೈಕಿ 73 ಮಂದಿ ಪುರುಷರಲ್ಲಿ 59 ಮಂದಿ ಬ್ಲಡ್ ರಿಪೋರ್ಟ್ ಡ್ರಗ್ಸ್  ಪಾಸಿಟಿವ್ ಬಂದಿದೆ. ಜೊತೆಗೆ, 30 ಮಂದಿ ಯುವತಿಯರ ಪೈಕಿ 27 ಮಂದಿಯ ಬ್ಲಡ್ ರಿಪೋರ್ಟ್ ಡ್ರಗ್ಸ್ ಪಾಸಿಟಿವ್ ಬಂದಿದೆ. ಇದರಲ್ಲಿ  ತೆಲುಗು ಯುವ ನಟಿ ಆಶಿ ರಾಯ್ ಅವರ ಡ್ರಗ್ಸ್ ರಿಪೋರ್ಟ್ ಕೂಡ ಪಾಸಿಟಿವ್ ಬಂದಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

click me!