ತುಂಬಿದ ವೇದಿಕೆಯಲ್ಲಿ ನಗುತ್ತಲೇ ಶಾರುಖ್ ಮರ್ಯಾದೆ ತೆಗೆದಿದ್ದ ವಿದ್ಯಾ ಬಾಲನ್!

By Mahmad Rafik  |  First Published Jul 25, 2024, 2:33 PM IST

ಇಷ್ಟು ಹೇಳುತ್ತಿದ್ದಂತೆ ವಿದ್ಯಾ ಬಾಲನ್ ಬಾಯಿ ಮುಚ್ಚಲು ಶಾರೂಖ್ ಖಾನ್ ಮುಂದಾಗೋದನ್ನು ವಿಡಿಯೋದಲ್ಲಿ ಗಮನಿಸಬಹುದು. ಇತ್ತ ವಿದ್ಯಾ ಮಾತು ಕೇಳುತ್ತಿದ್ದಂತೆ ಅಲ್ಲಿದ್ದ ನಟಿಯರು ಕಣ್ಣರಳಿಸಿ ನೋಡುತ್ತಾರೆ.


ಮುಂಬೈ: ಬಾಲಿವುಡ್ (Bollywood) ಅಂದ್ರೆ ಅದು ತಳಕು-ಬಳುಕಿನ ಬಣ್ಣದ ಲೋಕ. ಬಾಲಿವುಡ್ ತೆರೆಯ ಹಿಂದಿನ ಹಲವು ವಿಷಯಗಳು ಕುತೂಹಲಕ್ಕೆ ಕಾರಣವಾಗುತ್ತವೆ. ಬಾಲಿವುಡ್ ಅಂಗಳದಲ್ಲಿ ಸ್ವಜನಪಾತ (nepotism) ಮಾಡಲಾಗುತ್ತೆ ಎಂಬ ಆರೋಪ ಮೊದಲಿನಿಂದಲೂ ಇದೆ. ಇದು ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ (Sushant Singh Rajput) ಬಳಿಕ ಸ್ವಜನಪಾತದ ಚರ್ಚೆ ಮುನ್ನೆಲೆಗೆ ಬಂದಿತ್ತು. ಬಾಲಿವುಡ್ ದಿಗ್ಗಜರು ಅನ್ನಿಸಿಕೊಂಡವರು ತಮ್ಮ ಆಪ್ತರಿಗೆ ಅವಕಾಶ ಕೊಡಿಸುವ ಮೂಲಕ ನಿಜವಾದ ಪ್ರತಿಭೆಗಳನ್ನು ತುಳಿಯುವ ಕೆಲಸ ಮಾಡ್ತಾರೆ ಎಂದು ನಟಿ ಕಂಗನಾ ರಣಾವತ್ (Actress Kangana Ranaut) ಗಂಭೀರ ಆರೋಪಗಳನ್ನು ಮಾಡಿದ್ದರು. ನಾನು ಸಹ ಸ್ವಜನಪಕ್ಷಪಾತಕ್ಕೆ ಗುರಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದರು. ಪ್ರಶಸ್ತಿ ಸಮಾರಂಭಗಳಲ್ಲಿಯೂ ಸ್ವಜನಪಕ್ಷಪಾತ ಇರುತ್ತೆ. ಹಾಗಾಗಿ ಅಂತಹ ಕಾರ್ಯಕ್ರಮಗಳಲ್ಲಿ ನಾನು ಭಾಗಿಯಾಗಲ್ಲ ಎಂದು ನಟ ಅಕ್ಷಯ್ ಕುಮಾರ್ (Akshay Kumar) ಪರೋಕ್ಷವಾಗಿ ಹೇಳಿಕೆ ನೀಡಿದ್ದರು. ಈ ಮಾತು ಸಹ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. 

ಸೋಶಿಯಲ್ ಮೀಡಿಯಾದಲ್ಲಿ ಪ್ರಶಸ್ತಿ ವಿಚಾರವಾಗಿ ನಟಿ ವಿದ್ಯಾ ಬಾಲನ್ (Actress Vidya Balan) ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಬಾದ್‌ಶಾ ಶಾರೂಖ್ ಖಾನ್ (Sharukh Khan) ಅವರ ಕಾಲೆಳೆದಿದ್ದಾರೆ. ನಗುತ್ತಲೇ ವಿದ್ಯಾ ಬಾಲನ್ ಆಡಿದ ಮಾತುಗಳನ್ನ ಕೇಳಿದ ಕಾರ್ಯಕ್ರಮದಲ್ಲಿದ್ದ ಎಲ್ಲಾ ಕಲಾವಿದರು ಒಂದು ಕ್ಷಣ ಶಾಕ್ ಆಗಿದ್ದರು. ಈ ವಿಡಿಯೋ ನೋಡಿದ ನೆಟ್ಟಿಗರು, ವಿದ್ಯಾ ಬಾಲನ್ ಮಾತಿನಲ್ಲಿ ಸತ್ಯ ಇದೆ ಅಲ್ಲಾ? ಪದೇ ಪದೇ ಅವರಿಗೆ ಮಾತ್ರ ಎಲ್ಲಾ ಪ್ರಶಸ್ತಿ ಸಿಗುತ್ತೆ ಎಂಬ ಹಲವರ ಪ್ರಶ್ನೆಗೆ ವಿದ್ಯಾ ಬಾಲನ್ ಉತ್ತರ ನೀಡಿದ್ದಾರೆ. ಇದು ಹೊಸ ಕಲಾವಿದರ ನೋವು ಎಂಬ ಕಮೆಂಟ್‌ಗಳು ಸಹ ಬಂದಿವೆ. 2013ರ ಐಫಾ ಅವಾರ್ಡ್ ಕಾರ್ಯಕ್ರಮದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

Tap to resize

Latest Videos

ಎಲ್ಲಾ ಓಕೆ ಆದರೆ ಪಾಕಿಸ್ತಾನ ಸುಂದರಿ ಜೊತೆ ಪ್ರಭಾಸ್ ರೊಮ್ಯಾನ್ಸ್ ಫಿಕ್ಸ್?

ವೈರಲ್ ವಿಡಿಯೋದಲ್ಲಿ ಏನಿದೆ? 

2013ರ ಐಫಾ ಪ್ರಶಸ್ತಿ ವಿತರಣಾ ಕಾರ್ಯಕ್ರಮದ ನಿರೂಪಣೆಯನ್ನು ಶಾರುಖ್ ಖಾನ್ ಮತ್ತು ಶಾಹಿದ್ ಕಪೂರ್ ಜೊತೆಯಾಗಿ ನಿರ್ವಹಿಸುತ್ತಿದ್ದರು. ಈ ವೇಳೆ ಕಾರ್ಯಕ್ರಮ ವೀಕ್ಷಣೆ ಮಾಡುತ್ತಿದ್ದ ಕಲಾವಿದರ ಬಳಿ ಬಂದು ಅವರ ಜೊತೆ ಮಾತನಾಡುತ್ತಿದ್ದರು. ಹಾಗೆ ವಿದ್ಯಾ ಬಾಲನ್ ಬಳಿ ಬಂದ ಶಾರೂಖ್ ಖಾನ್ ತಮಗೆ ಬಂದಿರುವ ಪ್ರಶಸ್ತಿಗಳ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಇದಕ್ಕೆ ನಗುತ್ತಲೇ ವಿದ್ಯಾ ಬಾಲನ್ ಟಾಂಗ್ ಕೊಟ್ಟಿದ್ದರು. 

ಶಾರೂಖ್ ಖಾನ್ ಮತ್ತು ವಿದ್ಯಾ ಬಾಲನ್ ನಡುವಿನ ಸಂಭಾಷಣೆ ಹೀಗಿತ್ತು!

ವಿದ್ಯಾ ಬಾಲನ್: ಏನೇ ಹೇಳುವೆ, ಸತ್ಯವನ್ನೇ ಹೇಳುತ್ತೇನೆ.
ಶಾರುಖ್ ಖಾನ್: ನಿಮ್ಮ ಬಳಿ ಎಷ್ಟು ಅವಾರ್ಡ್‌ಗಳಿವೆ? 
ವಿದ್ಯಾ ಬಾಲನ್: ಸದ್ಯ ನನ್ನ ಬಳಿ 47 ಪ್ರಶಸ್ತಿಗಳಿವೆ. ನಿಮ್ಮ ಬಳಿ ಎಷ್ಟು ಪ್ರಶಸ್ತಿ ಇವೆ?
ಶಾರುಖ್ ಖಾನ್: ಹಾ... 47 ಇದೆಯಾ… ನನ್ನ ಬಳಿ 155 ಪ್ರಶಸ್ತಿಗಳಿವೆ. 
ವಿದ್ಯಾ ಬಾಲನ್: ಈ 155ರಲ್ಲಿ ನೀವು ಖರೀದಿ ಮಾಡಿದೆಷ್ಟು? ನೀವು ವರ್ಷಕ್ಕೆ ಒಂದು ಫಿಲಂ ಮಾಡ್ತೀರಿ. ವರ್ಷದಲ್ಲಿ 35 ಅವಾರ್ಡ್‌ ಶೋಗಳಲ್ಲಿ ಡ್ಯಾನ್ಸ್ ಮಾಡ್ತೀರಿ. 

ಶ್ರೀದೇವಿ ಮೂರನೇ ಮಗಳ ಬಗ್ಗೆ ನಿಮಗೆ ಗೊತ್ತಿದೆಯಾ? ಈ ಸೀಕ್ರೆಟ್ ರಿವೀಲ್ ಆಗಿದ್ದೇಗೆ?

No hate for SRK but This short video is the reality checked by Vidya Balan of SRK 😅😅😆 pic.twitter.com/4Vxdp83rxt

— The Winter Guy❄️ (@The_WinterGuy)

ಇಷ್ಟು ಹೇಳುತ್ತಿದ್ದಂತೆ ವಿದ್ಯಾ ಬಾಲನ್ ಬಾಯಿ ಮುಚ್ಚಲು ಶಾರೂಖ್ ಖಾನ್ ಮುಂದಾಗೋದನ್ನು ವಿಡಿಯೋದಲ್ಲಿ ಗಮನಿಸಬಹುದು. ಇತ್ತ ವಿದ್ಯಾ ಮಾತು ಕೇಳುತ್ತಿದ್ದಂತೆ ಅಲ್ಲಿದ್ದ ನಟಿಯರು ಕಣ್ಣರಳಿಸಿ ನೋಡುತ್ತಾರೆ.

click me!