ಕಾರ್‌ನಿಂದ ಇಳಿಯಲು ತಿಣುಕಾಡಿದ ಸನ್ನಿ ಲಿಯೋನ್… ಇದು ಪ್ರತಿ ಮಹಿಳೆಯ ನಿಜವಾದ ಹೋರಾಟವಂತೆ!

Published : Jul 25, 2024, 12:36 PM IST
ಕಾರ್‌ನಿಂದ ಇಳಿಯಲು ತಿಣುಕಾಡಿದ ಸನ್ನಿ ಲಿಯೋನ್… ಇದು ಪ್ರತಿ ಮಹಿಳೆಯ ನಿಜವಾದ ಹೋರಾಟವಂತೆ!

ಸಾರಾಂಶ

ವಿಡಿಯೋ ವೈರಲ್ ಆಗುತ್ತಿದ್ದು, ಅಭಿಮಾನಿಯೊಬ್ಬರು ಇದು ಪ್ರತಿ ಮಹಿಳೆಯ ನಿಜವಾದ ಹೋರಾಟ ಅಂತ ಹೇಳಿದ್ದಾರೆ. ಟೈಟ್ ಲಾಂಗ್ ಗೌನ್ ಧರಿಸಿ, ಅದಕ್ಕೆ ಹೈ ಹೀಲ್‌ ಶೂ ಧರಿಸಿರುವ ಕಾರಣ, ಟೊಯಟೋ ಎಸ್‌ಯುವಿ ಹತ್ತಲು ಮತ್ತು ಇಳಿಯಲು ಸನ್ನಿ ಶ್ರಮ ಹಾಕಿದ್ದಾರೆ.

ಮುಂಬೈ: ಬಾಲಿವುಡ್ ಚೆಲುವೆ ಸನ್ನಿ ಲಿಯೋನ್ ಕಾರ್‌ನಿಂದ ಇಳಿಯಲು ಕಷ್ಟಪಟ್ಟಿದ್ದಾರೆ. ಕಾರ್ ನಿಂದ ಹೊರಗೆ ಬರಲು ಕಷ್ಟಪಟ್ಟ ವಿಡಿಯೋವನ್ನು ಸ್ವತಃ ಸನ್ನಿ ಲಿಯೋನ್ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಮುಗಳ್ನಕ್ಕಿದ್ದಾರೆ. ಇದರ ಜೊತೆಗೆ ಕಾರ್ ಒಳಗೆ ಹೇಗೆ ಬಂದೆ ಅನ್ನೋದನ್ನು ನನ್ನ ಸ್ಟೇಟಸ್ ವಿಡಿಯೋದಲ್ಲಿ ನೋಡಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಅಭಿಮಾನಿಯೊಬ್ಬರು ಇದು ಪ್ರತಿ ಮಹಿಳೆಯ ನಿಜವಾದ ಹೋರಾಟ ಅಂತ ಹೇಳಿದ್ದಾರೆ. ಟೈಟ್ ಲಾಂಗ್ ಗೌನ್ ಧರಿಸಿ, ಅದಕ್ಕೆ ಹೈ ಹೀಲ್‌ ಶೂ ಧರಿಸಿರುವ ಕಾರಣ, ಟೊಯಟೋ ಎಸ್‌ಯುವಿ ಹತ್ತಲು ಮತ್ತು ಇಳಿಯಲು ಸನ್ನಿ ಶ್ರಮ ಹಾಕಿದ್ದಾರೆ.

ಬುಧವಾರ ಸಂಜೆ ಫ್ಯಾಶನ್ ಕಾರ್ಯಕ್ರಮದಲ್ಲಿ ಸನ್ನಿ ಲಿಯೋನ್ ಭಾಗಿಯಾಗಿದ್ದರು. ಕಾರ್ಯಕ್ರಮಕ್ಕೆ ತಕ್ಕಂತೆ ಟೈಟ್ ಲಾಂಗ್ ಗೌನ್‌ ಮೇಲೊಂದು ಜಾಕೆಟ್ ಹಾಗೂ ಬ್ಲಾಕ್ ಹೈ ಹೀಲ್‌ ಶೂ ಧರಿಸಿದ್ದಾರೆ. ಗೌನ್ ಕೆಳಭಾಗದಲ್ಲಿ ಲೆಹಂಗಾದ ರೀತಿ ಡಿಸೈನ್ ಮಾಡಿದ್ದರಿಂದ ಹೆಜ್ಜೆ ಇರಿಸಲು ಸಹ ಸನ್ನಿ ಲಿಯೋನ್ ಕಷ್ಟಪಟ್ಟಿದ್ದಾರೆ. ಕಾರ್‌ ನಿಂದ ಹೊರ ಬಂದ ಬಳಿಕ, ಈಗ ನಾನು ಓಕೆ ಎಂದು ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಡಾರ್ಕ್ ರೆಡ್ ಗೌನ್‌ನಲ್ಲಿ ಸನ್ನಿ ಲಿಯೋನ್ ಸುಂದರವಾಗಿ ಕಾಣಿಸುತ್ತಿದ್ದರು. 

ಮೂರು ಮಕ್ಕಳ ತಾಯಿಯಾಗಿರುವ ಸನ್ನಿ ಲಿಯೋನ್ ಸಿನಿಮಾ ಜೊತೆ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಜಿಸ್ಮ್ 2 ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ಬಂದ ಸನ್ನಿ ಲಿಯೋನ್ ಭಾರತದಲ್ಲಿಯೇ ಸೆಟಲ್ ಆಗಿದ್ದಾರೆ. ಯುವಜನತೆ ಮೋಸ್ಟ್ ಫೆವರೇಟ್ ನಟಿಯಾಗಿರುವ ಸನ್ನಿ ಲಿಯೋನ್ ಹಿಂದಿ, ತೆಲಗು, ತಮಿಳು, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಎಲ್ಲಾ ರಾಜ್ಯಗಳಲ್ಲಿಯೂ ತಮ್ಮದೇ ಆದ ಅಪಾರ ಅಭಿಮಾನ ಬಳಗವನ್ನು ಸನ್ನಿ ಲಿಯೋನ್ ಹೊಂದಿದ್ದಾರೆ. ಕರ್ನಾಟಕದ ಯುವಕರು ಸನ್ನಿ ಲಿಯೋನ್ ಹೆಸರಿನಲ್ಲಿ ಸಂಘಗಳನ್ನು ರಚಿಸಿಕೊಂಡಿದ್ದಾರೆ.

ದರ್ಶನ್ ಬಂಧನದ ಬಗ್ಗೆ ತನ್ನದೇ ಶೈಲಿಯಲ್ಲಿ ಉತ್ತರ ಕೊಟ್ಟ ಸನ್ನಿ ಲಿಯೋನ್

ಚಾಂಪಿಯನ್ ಸಿನಿಮಾ ಪ್ರಚಾರದ ವೇಳೆ ಸನ್ನಿ ಲಿಯೋನ್ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿದ್ದರು. ನಿರೂಪಕಿ ಅನುಶ್ರೀ ಸಂದರ್ಶನ ವೇಳೆ ಯಶ್ ಫೋಟೋ ಹಿಡಿದು ಯಾರಿವರು ಅಂತ ಕೇಳಿದ್ದರು. ಇದಕ್ಕೆ ರಾಕಿ ಭಾಯ್,  ಆದ್ರೆ ನನ್ನ ಅಣ್ಣ ಅಲ್ಲ ಎಂದು ಸನ್ನಿ ಲಿಯೋನ್ ನಗೆ ಚಟಾಕಿ ಹಾರಿಸಿದ್ದರು. ಸಂದರ್ಶನಕ್ಕೆ ಆಹ್ವಾನಿಸಿದ್ದಕ್ಕೆ ಅನುಶ್ರೀಗೆ ಧನ್ಯವಾದಗಳನ್ನು ಸನ್ನಿ ತಿಳಿಸಿದ್ದರು. ಈ ಸಂದರ್ಶನದ ವಿಡಿಯೋ ತುಣುಕಗಳು ಇಂದಿಗೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.

ಮಂಡ್ಯದಲ್ಲಿ ಸನ್ನಿ ಲಿಯೋನ್ ಹೆಸರಿನ ಚಾರಿಟಿ 

ಮಂಡ್ಯ ಜಿಲ್ಲೆಯ ಕೊಮ್ಮೆರಹಳ್ಳಿಯ ಯುವಕರು ಸನ್ನಿ ಲಿಯೋನ್ ಹೆಸರಿನಲ್ಲಿ ಸಂಘವೊಂದನ್ನು ಕಟ್ಟಿಕೊಂಡು ಚಾರಿಟಿ ಸಹ ಆರಂಭಿಸಿದ್ದಾರೆ. ಸನ್ನಿ ಲಿಯೋನ್ ಅನಾಥ ಮಕ್ಕಳಿಗೆ ನೆರವು ಆಗ್ತಾರೆ. ಇದರಿಂದ ಪ್ರೇರಿತರಾಗಿರುವ ನಾವುಗಳು ಅವರ ಹೆಸರಿನಲ್ಲಿ ಚಾರಿಟಿ ಆರಂಭಿಸಿದ್ದೇವೆ. ನಮ್ಮ ಕೈಯಲ್ಲಾದ ಸಮಾಜ ಸೇವೆ ಮಾಡುತ್ತಿದ್ದೇನೆ ಎಂದು ಕೊಮ್ಮೆರಹಳ್ಳಿಯ ಯುವಕರು ಹೇಳಿಕೊಂಡಿದ್ದರು. 

ತೋಟದಲ್ಲಿ ಟೊಮೆಟೊ ಬೆಳೆದ ರೈತ; ದೃಷ್ಠಿಬೊಂಬೆ ಬದಲು ರಚಿತಾ ರಾಮ್, ಸನ್ನಿ ಲಿಯೋನ್ ಫೋಟೋ ಹಾಕಿದ!

ಸನ್ನಿ ಲಿಯೋನ್ ಹುಟ್ಟುಹಬ್ಬದಂದು ಕೊಮ್ಮೆರಹಳ್ಳಿಯ ಯುವಕರು ರಕ್ತದಾನ ಶಿಬಿರ ಆಯೋಜನೆ ಮಾಡಿ, 39 ಯುನಿಟ್ ರಕ್ತ ಸಂಗ್ರಹ ಮಾಡಿದ್ದರು. ಇದೇ ರೀತಿ ಕೊಪ್ಪಳ, ರಾಯಚೂರು ಭಾಗದಲ್ಲಿಯೋ ಜನರು ಸನ್ನಿ ಲಿಯೋನ್ ಹೆಸರಿನಲ್ಲಿ ಸಂಘಗಳನ್ನು ಕಟ್ಟಿಕೊಂಡಿದ್ದಾರೆ. ಗ್ರಾಮದ ಜಾತ್ರೆಯ ಸಂದರ್ಭದಲ್ಲಿ ಸನ್ನಿ ಲಯೋನ್ ಸಂಘದ ಸದಸ್ಯರು ಸ್ವಾಗತಕೋರುವ ಬ್ಯಾನರ್‌ಗಳು ತಲೆ ಎತ್ತುತ್ತಿರುತ್ತವೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ