ಯಶ್-ಅಜಿತ್ ಜೋಡಿ ಫೋಟೋ ವೈರಲ್, ಇದ್ಯಾವುದು ಹೊಸ ಸಿನಿಮಾ? ತಲೆ ಕೆಡಿಸಿಕೊಂಡ ಫ್ಯಾನ್ಸ್!

By Shriram Bhat  |  First Published Jul 25, 2024, 12:15 PM IST

 ನಟ ಯಶ್ ಹಾಗು ಅಜಿತ್ ಜೊತೆಯಾಗಿ ಸಿನಿಮಾ ಮಾಡಿದರೆ ಅದೊಂದು ಖಂಡಿತವಾಗಿ ಬಿಗ್ ಬಜೆಟ್ ಚಿತ್ರವಾಗಲಿದ್ದು, ದೊಡ್ಡ ನ್ಯೂಸ್ ಆಗಲಿದೆ. ಏಕೆಂದರೆ, ನಟ ತಲಾ ಅಜಿತ್ ಅವರು ತಮಿಳಿನ ಸ್ಟಾರ್ ನಟರಲ್ಲೊಬ್ಬರು. ಮೇಲಾಗಿ ಅವರಿಗೆ ಭಾರತ ಸೇರಿದಂತೆ, ಜಗತ್ತಿನ ತುಂಬೆಲ್ಲಾ ಅಭಿಮಾನಿ ಬಳಗವಿದೆ, ಅವರೊಂದಿಗೆ ಯಶ್..


ಕನ್ನಡದ ನಟ, ಕೆಜಿಎಫ್ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ (Yash) ಹಾಗು ತಮಿಳು ನಟ ಅಜಿತ್ ಕುಮಾರ್ (Ajith Kumar) ಅವರಿಬ್ಬರ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಆದರೆ, ಎಲ್ಲರಿಗೂ ಇರುವ ಕುತೂಹಲ ಎಂದರೆ, ಈ ಇಬ್ಬರೂ ಯಾವ ಸಿನಿಮಾದಲ್ಲಿ ಒಟ್ಟಿಗೇ ನಟಿಸಲಿದ್ದಾರೆ ಅಂತ! ಏಕೆಂದರೆ, ಯಶ್ ಈಗಾಗಲೇ ಎರಡು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಒಂದು ಗೀತೂ ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್, ಇನ್ನೊಂದು ಬಾಲಿವುಡ್‌ನ ರಾಮಾಯಣ!

ಆದರೆ, ಸಿಕ್ಕ ಮಾಹಿತಿ ಪ್ರಕಾರ, ರಾಕಿಂಗ್ ಸ್ಟಾರ್ ಯಶ್ ಹಾಗು ಅಜಿತ್ ಈ ಎರಡೂ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸುತ್ತಿಲ್ಲ. ಬದಲಿಗೆ ಇವರಿಬ್ಬರ ಕಾಂಬಿನೇಷನ್ ಬಹುಶಃ 'ಕೆಜಿಎಫ್ 3' ಚಿತ್ರದಲ್ಲಿ ಇರಬಹುದು. ಈಗಾಗಲೇ ಟ್ವಿಟರ್‌ನಲ್ಲಿ 'ಕೆ ಜಿಎಫ್3 ನಲ್ಲಿ ಯಶ್ ಜೊತೆ ಮತ್ತೊಬ್ಬ ಸೂಪಸರ್‌ ಸ್ಟಾರ್, ಅಂತ ತುಂಬಾ ಟ್ರೆಂಡ್ ಆಗಿದೆ. ಕೆಲವರು 'ಬಿಳಿ ಗಡ್ಡದ ಜೊತೆ ಕಪ್ಪು ಗಡ್ಡ', ರಾಕಿಂಗ್ ಸ್ಟಾರ್.. ತಲಾ ಅಜಿತ್, ಹೀರೋ ಯಾರು? ವಿಲನ್ ಯಾರು..?' ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. 

Tap to resize

Latest Videos

ದುಡ್ಡೇನು ನಿಮ್ಮಪ್ಪ ಕೊಡ್ತಾನಾ ಅಂತ ಕಾಮೆಂಟ್ ಹಾಕಿದ್ದ; ಅದನ್ನು ನೋಡೋಕೆ ಅವ್ರಪ್ಪ ಕೊಡ್ತಾನಾ?

ಅಜಿತ್ ತಮಿಳಿನ ಸೂಪರ್ ಸ್ಟಾರ್. ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕೂ ಡಗುರುತಿಸಿಕೊಂಡಿದ್ದಾರೆ. ಕಾರಣ, ತಮಿಳಿನ ಆಲ್‌ಮೋಸ್ಟ್‌ ಆಲ್ ಮತ್ತು ನಟ ಅಜಿತ್ ಅವರ ಎಲ್ಲ ಸಿನಿಮಾಗಳೂ ಕೂಡ ಬಾಲಿವುಡ್‌ಗೆ ಡಬ್ ಆಗುತ್ತವೆ. ಹೀಗಾಗಿ ನಾರ್ತ್‌ ಹಗು ಸೌತ್ ಎರಡೂ ಚಿತ್ರರಂಗಗಳಲ್ಲಿ ನಟ ಅಜಿತ್ ಫೇಮಸ್. ಇನ್ನು ಯಶ್ ಅವರಂತೂ ಕೆಜಿಎಫ್ ಬಳಿಕ ಜಗತ್ಪ್ರಿಸಿದ್ಧ ನಟರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ!

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಅಜಿತ್ ಹಾಗು ಯಶ್ ಅವರಿಬ್ಬರು ಜೊತೆಯಲ್ಲಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ. ಅವರಿಬ್ಬರೂ ನಟಿಸಲಿರುವ ಚಿತ್ರವು ಖಂಡಿತವಾಗಿಯೂ 'ಕೆಜಿಎಫ್ 3' ಆಗಿರಲಿದೆ ಎಂದೇ ಬಹಳಷ್ಟು ಜನರು ಭಾವಿಸಿದ್ದಾರೆ. ಏಕೆಂದರೆ, ಹೆಚ್ಚು ಕಾಮೆಂಟ್ ಅದನ್ನೇ ಹೇಳುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಪ್ರೊಡಕ್ಷನ್ ಹೌಸ್ ಆಗಲೀ ಅಥವಾ ನಟರಾದ ಯಶ್, ಅಜಿತ್ ಅವರಾಗಲೀ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೆ, ಸಿನಿಪ್ರಿಯರ ಊಹೆ ಮಾತ್ರ ಅದು ಖಂಡಿತ 'ಕೆಜಿಎಫ್ 3' ಎಂದೇ ಆಗಿದೆ. 

ಸಾಯುವ ಮುನ್ನ ನಟಿ ಶ್ರೀದೇವಿಯ ಕೊನೆಯ ಆಸೆ ಕೈಗೂಡಲೇ ಇಲ್ಲ; ಹಣೆಬರಹ ಅಂದ್ರೆ ಅದೇನಾ?

ಒಟ್ಟಿನಲ್ಲಿ, ನಟ ಯಶ್ ಹಾಗು ಅಜಿತ್ ಜೊತೆಯಾಗಿ ಸಿನಿಮಾ ಮಾಡಿದರೆ ಅದೊಂದು ಖಂಡಿತವಾಗಿ ಬಿಗ್ ಬಜೆಟ್ ಚಿತ್ರವಾಗಲಿದ್ದು, ದೊಡ್ಡ ನ್ಯೂಸ್ ಆಗಲಿದೆ. ಏಕೆಂದರೆ, ನಟ ತಲಾ ಅಜಿತ್ ಅವರು ತಮಿಳಿನ ಸ್ಟಾರ್ ನಟರಲ್ಲೊಬ್ಬರು. ಮೇಲಾಗಿ ಅವರಿಗೆ ಭಾರತ ಸೇರಿದಂತೆ, ಜಗತ್ತಿನ ತುಂಬೆಲ್ಲಾ ಅಭಿಮಾನಿ ಬಳಗವಿದೆ, ಅವರೊಂದಿಗೆ ಯಶ್ ಅಭಿಮಾನಿ ವರ್ಗ ಕೂಡ ಸೇರಿದರೆ, ಒಂದು ಸೂಪರ್ ಹಿಟ್ ಸಿನಿಮಾ ಕೊಡಲು ಅವರಿಬ್ಬರ ಅಭಿಮಾನಿ ಬಳಗವೇ ಸಾಕು ಎನ್ನಬಹುದು. 

click me!