ಕೆಟ್ಟ ಪದಳಿಂದ KGF ಚಿತ್ರ ನಿಂದನೆ; ಬಹಿರಂಗ ಕ್ಷಮೆ ಕೇಳಿದ ತೆಲುಗು ನಿರ್ದಶಕ ವೆಂಕಟೇಶ್ ಮಹಾ

Published : Mar 07, 2023, 10:49 AM ISTUpdated : Mar 08, 2023, 04:27 PM IST
ಕೆಟ್ಟ ಪದಳಿಂದ KGF ಚಿತ್ರ ನಿಂದನೆ; ಬಹಿರಂಗ ಕ್ಷಮೆ ಕೇಳಿದ ತೆಲುಗು ನಿರ್ದಶಕ ವೆಂಕಟೇಶ್ ಮಹಾ

ಸಾರಾಂಶ

ಮಹಾ ಕೆಜಿಎಫ್ 2 ಸಿನಿಮಾದ ಬಗ್ಗೆ ಕೆಟ್ಟ ಪದಗಳಿಂದ ನಿಂದಿಸಿದ್ದ ತೆಲುಗು ನಿರ್ದೇಶಕ ವೆಕಂಟೇಶ್ ಮಹಾ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. 

ತೆಲುಗು ನಿರ್ದೇಶಕ ವೆಂಕಟೇಶ್ ಮಹಾ ಇತ್ತೀಚೆಗೆ ಸಂದರ್ಶನದಲ್ಲಿ ಕೆಜಿಎಫ್ 2 ಸಿನಿಮಾ ಮತ್ತು ರಾಕಿ ಪಾತ್ರದ ಬಗ್ಗೆ ಕೆಟ್ಟ ಪದಳಿಂದ ನಿಂದಿಸಿದ್ದರು. ವೆಂಕಟೇಶ್ ಮಹಾ ಕೆಜಿಎಫ್ ಸಿನಿಮಾದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋ ನೋಡಿದ ಅಭಿಮಾನಿಗಳು ವೆಂಕಟೇಶ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಬಹಿರಂಗ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದ್ದರು. ರಾಕಿಂಗ್ ಸ್ಟಾರ್ ಅಭಿಮಾನಿಗಳ ಒತ್ತಾಯದ ಬಳಿಕ ವೆಂಕಟೇಶ್ ಕ್ಷಮೆ ಕೇಳಿದ್ದಾರೆ. ಆದರೆ ತನ್ನ ಅಭಿಪ್ರಾಯ ಬದಲಾಗಿಲ್ಲ ಎಂದು ಹೇಳಿದ್ದಾರೆ. ತಾನು ಬಳಸಿದ ಪದ ಸರಿಯಿರಲಿಲ್ಲ ಹಾಗಾಗಿ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ. 

ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿರುವ ವೆಂಕಟೇಶ್, ತಾನು ಕಾಮೆಂಟ್ ಮಾಡಿದ್ದು ಸಿವನಿಮಾ ಪಾತ್ರಗಳ ಬಗ್ಗೆ ಯಾವುದೇ ವ್ಯಕ್ತಿಗಳ ಬಗ್ಗೆ ಅಲ್ಲ ಎಂದು ಹೇಳಿದ್ದಾರೆ. ತನ್ನ ಹಾಗೆಯೇ ಅನೇಕರು ಇದೇ ರೀತಿ ಅಭಿಪ್ರಾಯ ಹೊರಹಾಕಿದ್ದಾರೆ. ತನ್ನ ಹೇಳಿಕೆಯನ್ನು ಬೆಂಬಲಿಸಿ ಅನೇಕ ಸಂದೇಶಗಳು ಬಂದಿವೆ. ಆದರೆ ತಾನು ಹೇಳುವಾಗ ಪದಗಳ ಆಯ್ಕೆ ಮತ್ತು ಅದನ್ನು ವ್ಯಕ್ತಪಡಿಸಿದ  ರೀತಿಗೆ ವಿಷಾದಿಸುತ್ತೇನೆ. ಜನರು ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ ಎಂದು ವೆಂಕಟೇಶ್ ಹೇಳಿದ್ದಾರೆ. 



ಕೆಟ್ಟ ಪದಗಳಿಂದ KGF ರಾಕಿ ಪಾತ್ರ ಹೀಯಾಳಿಸಿದ ತೆಲುಗು ನಿರ್ದೇಶಕ; ಕ್ಷಮೆ ಕೇಳುವಂತೆ ಅಭಿಮಾನಿಗಳ ಆಗ್ರಹ

'ನಾನು ಸಿನಿಮಾ ಪಾತ್ರದ ಬಗ್ಗೆ ಕಾಮೆಂಟ್ ಮಾಡಿದ್ದು ಆದರೆ ಅನೇಕರು ನನ್ನನ್ನು ನಿಜ ಜೀವನದ ವ್ಯಕ್ತಿ ಬಗ್ಗೆ ಕಾಮೆಂಟ್ ಮಾಡಿದ್ದು ಎಂದು ನನ್ನನ್ನು ಟಾರ್ಗೆಟ್ ಮಾಡಿದ್ದಾರೆ, ಕೆಟ್ಟದಾಗಿ ಟ್ರೋಲ್ ಮಾಡಲಾಗುತ್ತಿದೆ.  ಈ ಹಿಂದೆಯೂ ನಾನು ಇದನ್ನು ಎದುರಿಸಿದ್ದೆ' ಎಂದು ನಿರ್ದೇಶಕ ವೆಂಕಟೇಶ್ ಮಹಾ ಹೇಳಿದ್ದಾರೆ. ಜೊತೆಗೆ ಇಷ್ಟ ಪಡದ ಹಲವರ ಪರವಾಗಿ ತಾನು ಧ್ವನಿಯೆತ್ತಿದ್ದೇನೆ ಎಂದು ಹೇಳಿದ್ದಾರೆ. 

Yash: ತಮಿಳು ಡೈರೆಕ್ಟರ್ ಜೊತೆ ರಾಕಿಂಗ್ ಸ್ಟಾರ್?: ಯಶ್ ಫ್ಯಾನ್ಸ್ ಅನೌನ್ಸ್

ವೆಂಕಟೇಶ್ ಮಹಾ ಹೇಳಿದ್ದೇನು?

ಸಂದರ್ಶನವೊಂದರಲ್ಲಿ ವೆಂಕಟೇಶ್​ ಮಹಾ, ಕೆಜಿಎಫ್-2 ಸಿನಿಮಾದ ಕ್ಲೈಮ್ಯಾಕ್ಸ್ ಬಗ್ಗೆ ಆಡಿಕೊಂಡಿದ್ದರು. ಕೆಜಿಎಫ್‍‌ನ ತಾಯಿ ಪಾತ್ರ ಮತ್ತು ರಾಕಿ ಬಾಯ್ ಪಾತ್ರದ ಬಗ್ಗೆ ಕೆಟ್ಟ ಪದಗಳಿಂದ ನಿಂದಿಸಿದ್ದರು. ತಾಯಿ ಆಸೆಯಂತೆ ಚಿನ್ನವನ್ನೆಲ್ಲಾ ಪಡೆಯಬೇಕೆಂದು ಕೆಜಿಎಫ್ ಜನರಿಗೆ ಏನನ್ನೂ ಕೊಡದೆ ಶ್ರೀವಮಂತನಾಗುವುದು ಅಸಂಬದ್ದವಾಗಿದೆ ಎಂದು ಹೇಳಿದ್ದರು. ಅಷ್ಟೆಯಲ್ಲದೇ ಒಂದಿಷ್ಟು ಕೆಟ್ಟ ಪದಗಳಿಂದ ಹೀಯಾಳಿಸಿದ್ದರು. ಜೋರಾಗಿ ನಗುತ್ತಾ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಯಶ್ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಕನ್ನಡದ ಹೆಮ್ಮೆಯ ಸಿನಿಮಾದ ಬಗ್ಗೆ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ,  ಅವಹೇಳನ ಮಾಡಿದ್ದಾರೆ ಬಹಿರಂಗ ಕ್ಷಮೆ ಕೇಳಬೇಕೆಂದು ಅಗ್ರಹಿಸಿದ್ದರು. ಇದೀಗ ಕ್ಷಮೆ 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!