LOVE JIHAD: ನಟಿ ತುನಿಷಾ ಆತ್ಮಹತ್ಯೆ- ಜೈಲಿನಿಂದ ಬರ್ತಿದ್ದಂತೆಯೇ ಬಾಯ್‌ಫ್ರೆಂಡ್‌ ಖಾನ್‌ ಹೇಳಿದ್ದೇನು?

By Suvarna NewsFirst Published Mar 7, 2023, 10:26 AM IST
Highlights

ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಕೇಸ್‌ನಲ್ಲಿ ಜೈಲಿನಲ್ಲಿ ಇರುವ ಆಕೆಯ ಸ್ನೇಹಿತ ಶೀಜಾನ್‌ ಖಾನ್‌ಗೆ ಜಾಮೀನು ಮಂಜೂರು ಆಗಿದ್ದು, ಜೈಲಿನಿಂದ ಹೊರಬಂದಿದ್ದಾರೆ. ಜೈಲಿನಿಂದ ಬರುತ್ತಿದ್ದಂತೆಯೇ ಅವರು ಹೇಳಿದ್ದೇನು? 
 

ಲವ್‌ ಜಿಹಾದ್‌ ಎಂದೇ ಕುಖ್ಯಾತಿ ಪಡೆದಿರುವ ನಟಿ ತುನಿಷಾ ಶರ್ಮಾ (Tunisha Sharma)  ಆತ್ಮಹತ್ಯೆ ಪ್ರಕರಣದಲ್ಲಿ ಕೊನೆಗೂ ಆಕೆಯ ಬಾಯ್‌ಫ್ರೆಂಡ್‌, ಆರೋಪಿ ಶೀಜಾನ್ ಮೊಹಮ್ಮದ್ ಖಾನ್‌ಗೆ​ (Sheejan mohammed Khan) ಜಾಮೀನು ಮಂಜೂರಾಗಿದ್ದು, ಜೈಲಿನಿಂದ ಹೊರಬಂದಿದ್ದಾರೆ. ಚಿತ್ರರಂಗದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ್ದ  ಆತ್ಮಹತ್ಯೆ ಪ್ರಕರಣ ಇದಾಗಿದೆ.   ಈ ಹಿಂದೆ ಮುಂಬೈ ಕೋರ್ಟ್​ ಜಾಮೀನು ನಿರಾಕರಿಸಿತ್ತು. ಇದೇ ಕೇಸ್​ಗೆ ಸಂಬಂಧಿಸಿದಂತೆ ನಂತರ  ಪೊಲೀಸರು ಸುಮಾರು 524 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ನಡುವೆಯೇ, ತುನಿಷಾ ಕುಟುಂಬ ಗೃಹ ಸಚಿವಾಲಯದ ಕಾರ್ಯದರ್ಶಿಯನ್ನು ಭೇಟಿ ಮಾಡಿ, ಈ ಆತ್ಮಹತ್ಯೆ ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ನಡೆಸುವಂತೆ ಮನವಿಯನ್ನೂ ಮಾಡಿದೆ.

ಲವ್​ ಜಿಹಾದ್​ ಕೇಸ್​ ಎಂದೇ ಭಾರಿ ಸುದ್ದಿಯಾದ ಘಟನೆಯಾಗಿದೆ. 'ಅಲಿ ಬಾಬಾ' ಎಂಬ ಹಿಟ್ ಷೋನಲ್ಲಿ ರಾಜಕುಮಾರಿ ಮೇರಿಯಮ್ ಪಾತ್ರದಲ್ಲಿ ಸಕತ್​ ಫೇಮಸ್​  (famous) ಆಗಿದ್ದ 20 ವರ್ಷದ ತುನಿಷಾ ಶೂಟಿಂಗ್​ ಸ್ಪಾಟ್​ನಲ್ಲಿಯೇ ಆಕೆಯ ವ್ಯಾನಿಟಿ ವಾಹನದಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಕಂಡುಬಂದಿದ್ದರು. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಶೀಜಾನ್ ಖಾನ್‌ ಹಾಗೂ ತುನಿಷಾ ಶರ್ಮಾ (Tunisha Sharma) ಪರಸ್ಪರ ಪ್ರೇಮಿಸುತ್ತಿದ್ದು, ತುನಿಷಾ ಆತ್ಮಹತ್ಯೆ (suicide )ಮಾಡಿಕೊಳ್ಳುವ 15 ದಿನಗಳ ಹಿಂದಷ್ಟೇ ಇವರಿಬ್ಬರ ಮಧ್ಯೆ ಬ್ರೇಕಪ್ ಆಗಿತ್ತು. ಇದೇ ಕಾರಣದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ಡಿಸೆಂಬರ್ 24​ರಂದು ಸಿಸಿಟಿವಿ (CCTV) ದೃಶ್ಯ ನೋಡಿದಾಗ ಅದರಲ್ಲಿ ತುನಿಷಾ ಶರ್ಮಾ ಅವರನ್ನು ಶೀಜಾನ್ ಖಾನ್ ಮತ್ತು ಮತ್ತೊಬ್ಬ ಮಹಿಳೆ  ಆಸ್ಪತ್ರೆಗೆ ಹೋಗುತ್ತಿರುವುದು ಕಂಡುಬಂದಿದೆ. ಆದರೆ ಅದಾಗಲೇ ಅವರು ಮೃತಪಟ್ಟಿದ್ದರು. ಘಟನೆಗೂ ಮುನ್ನ ಕೂಡ ತುನಿಷಾ ಮತ್ತು ಶೀಜಾನ್​ ಒಟ್ಟಿಗೆ ಇರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡಿರುವ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ (Judge) ಆರ್.ಡಿ.ದೇಶಪಾಂಡೆ ಅವರು, ತುನಿಷಾ ಮತ್ತು ಶೀಜಾನ್​ ಘಟನೆಯ ದಿನ ಒಟ್ಟಿಗೇ ಇರುವುದನ್ನು ಸಿಸಿಟಿವಿ ಫುಟೇಜ್​ನಲ್ಲಿ ನೋಡಿದ್ದೇನೆ. ಇವರಿಬ್ಬರ ನಡುವೆ ಏನೋ ಆಗಿದೆ ಎನ್ನುವುದು ಇದರಿಂದ ತಿಳಿದುಬರುತ್ತದೆ. ಆದ್ದರಿಂದ ಈ ಹಂತದಲ್ಲಿ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಎನಿಸುತ್ತಿದೆ ಎಂದಿದ್ದಾರೆ. 

Latest Videos

Tunisha Sharma: 'ಲವ್​ ಜಿಹಾದ್'​ ಕೇಸ್​ಗೆ ಭಾರಿ ಟ್ವಿಸ್ಟ್: ನಟನ ವಿರುದ್ಧ ​524 ಪುಟಗಳ ಚಾರ್ಜ್ ಶೀಟ್

ಇದೀಗ ಜೈಲಿನಿಂದ ಹೊರಬರುತ್ತಿದ್ದಂತೆಯೇ ಖಾನ್‌ ದುಃಖ ತೋಡಿಕೊಂಡಿದ್ದಾರೆ. ’ನಾನು ತುನಿಷಾಳನ್ನು  ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಅವಳು  ಬದುಕಿದ್ದರೆ ನನಗಾಗಿ ಹೋರಾಡುತ್ತಿದ್ದಳು’ ಎಂದು ಹೇಳಿಕೊಂಡಿದ್ದಾರೆ.  ETimes ಜೊತೆಗಿನ ಸಂವಾದದಲ್ಲಿ ಖಾನ್‌, ’ನಾನು ಅವಳನ್ನು ಕಳೆದುಕೊಂಡಿದ್ದೇನೆ. ಈಗ ನನ್ನ ಪರವಾಗಿ ಹೋರಾಟ ಮಾಡಲು ಆಕೆ ಇಲ್ಲ’ ಎಂದಿದ್ದಾರೆ.  ತುನಿಷಾ ಇಲ್ಲದೇ ತಾವು ಈಗ  ಹೇಗೆ ಸಮಯ ಕಳೆದಯಬೇಕು ಎಂದೇ ತಿಳಿಯುತ್ತಿಲ್ಲ ಎಂದೂ ಹೇಳಿಕೊಂಡಿದ್ದಾರೆ!

 ’ಜೈಲಿನಲ್ಲಿ ನೊಂದಿದ್ದೇನೆ. ಈಗ ನನ್ನ ತಾಯಿಯ ಮಡಿಲಲ್ಲಿ ಮಲಗಿ, ಅವಳಿಂದ ಬೇಯಿಸಿದ ಆಹಾರವನ್ನು ಸೇವಿಸುತ್ತೇನೆ.  ನನ್ನ ಸಹೋದರಿಯರು ಮತ್ತು ಸಹೋದರರೊಂದಿಗೆ ಸಮಯ ಕಳೆಯುತ್ತೇನೆ’ ಎಂದಿದ್ದಾರೆ.  ಜೈಲಿನಲ್ಲಿ ಕಳೆದಿರುವ ದಿನಗಳನ್ನು ನೆನಪಿಸಿಕೊಂಡ ಖಾನ್‌, ’ನನಗೆ ಈಗ ಸ್ವಾತಂತ್ರ್ಯದ ನಿಜವಾದ ಅರ್ಥ ತಿಳಿದಿದೆ.  ನಾನು ಅದನ್ನು ಅನುಭವಿಸುತ್ತೇನೆ. ನನ್ನ ತಾಯಿ ಮತ್ತು ಸಹೋದರಿಯರನ್ನು ನೋಡಿದ ಕ್ಷಣ ನಾನು ಕಣ್ಣೀರು ಹಾಕಿದೆ ಮತ್ತು ನಾನು ತುಂಬಾ ಅವರೊಂದಿಗೆ ಹಿಂತಿರುಗಲು ಸಂತೋಷವಾಗಿದೆ. ಆದರೆ ತುನಿಷಾ ಇಲ್ಲ ಎನ್ನುವ ನೋವು ಕಾಡುತ್ತಿದೆ’ ಎಂದಿದ್ದಾರೆ.

ತಮ್ಮ ಮಗಳು ತುನಿಷಾ ಸಾವಿಗೆ ಶೀಜಾನ್ ಖಾನ್‌ ಕಾರಣ, ಈತನೇ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆ ಎಂದು ತುನಿಷಾ  ತಾಯಿ ಆರೋಪಿಸಿದ್ದರು.  ಲವ್​ ಜಿಹಾದ್​ ಕೇಸ್​ ಎಂದೇ ಭಾರಿ ಸುದ್ದಿಯಾದ ಘಟನೆಯಾಗಿದೆ. 'ಅಲಿ ಬಾಬಾ' ಎಂಬ ಹಿಟ್ ಷೋನಲ್ಲಿ ರಾಜಕುಮಾರಿ ಮೇರಿಯಮ್ ಪಾತ್ರದಲ್ಲಿ ಸಕತ್​ ಫೇಮಸ್​  (famous) ಆಗಿದ್ದ 20 ವರ್ಷದ ತುನಿಷಾ ಶೂಟಿಂಗ್​ ಸ್ಪಾಟ್​ನಲ್ಲಿಯೇ ಆಕೆಯ ವ್ಯಾನಿಟಿ ವಾಹನದಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಕಂಡುಬಂದಿದ್ದರು. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಶೀಜಾನ್ ಖಾನ್‌ ಹಾಗೂ ತುನಿಷಾ ಶರ್ಮಾ (Tunisha Sharma) ಪರಸ್ಪರ ಪ್ರೇಮಿಸುತ್ತಿದ್ದು, ತುನಿಷಾ ಆತ್ಮಹತ್ಯೆ (suicide)ಮಾಡಿಕೊಳ್ಳುವ 15 ದಿನಗಳ ಹಿಂದಷ್ಟೇ ಇವರಿಬ್ಬರ ಮಧ್ಯೆ ಬ್ರೇಕಪ್ ಆಗಿತ್ತು. ಇದೇ ಕಾರಣದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

ಮದುಮಗಳ ಲುಕ್​ನಲ್ಲಿ ಮಿಂಚಿಂಗ್​! ಮೂರನೆ ಮದ್ವೆಯಾಗ್ತಿದ್ದಾರಾ Rakhi Sawant?

ಘಟನೆ ನಡೆದ ಡಿಸೆಂಬರ್ 24​ರಂದು ಸಿಸಿಟಿವಿ (CCTV) ದೃಶ್ಯ ನೋಡಿದಾಗ ಅದರಲ್ಲಿ  ತುನಿಷಾ ಶರ್ಮಾ ಅವರನ್ನು  ಶೀಜಾನ್ ಖಾನ್ ಮತ್ತು ಮತ್ತೊಬ್ಬ ಮಹಿಳೆ  ಆಸ್ಪತ್ರೆಗೆ ಹೋಗುತ್ತಿರುವುದು ಕಂಡುಬಂದಿದೆ. ಆದರೆ ಅದಾಗಲೇ ಅವರು ಮೃತಪಟ್ಟಿದ್ದರು. ಘಟನೆಗೂ ಮುನ್ನ  ಕೂಡ ತುನಿಷಾ ಮತ್ತು ಶೀಜಾನ್​ ಒಟ್ಟಿಗೆ ಇರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.  ಇದನ್ನೇ ಆಧಾರವಾಗಿಟ್ಟುಕೊಂಡಿರುವ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ (Judge) ಆರ್.ಡಿ.ದೇಶಪಾಂಡೆ ಅವರು, ತುನಿಷಾ ಮತ್ತು ಶೀಜಾನ್​ ಘಟನೆಯ ದಿನ ಒಟ್ಟಿಗೇ ಇರುವುದನ್ನು ಸಿಸಿಟಿವಿ ಫುಟೇಜ್​ನಲ್ಲಿ ನೋಡಿದ್ದೇನೆ. ಇವರಿಬ್ಬರ ನಡುವೆ ಏನೋ ಆಗಿದೆ ಎನ್ನುವುದು ಇದರಿಂದ ತಿಳಿದುಬರುತ್ತದೆ. ಆದ್ದರಿಂದ ಈ ಹಂತದಲ್ಲಿ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಎನಿಸುತ್ತಿದೆ ಎಂದಿದ್ದಾರೆ.

click me!