ಜಾಹ್ನವಿ ಕಪೂರ್ ಐದಾರು ವರ್ಷದ ಬಾಲಕಿ ಇದ್ದಾಗ ನಟ ಶಾರುಖ್ ಖಾನ್‌ಗೆ ಪ್ರಶಸ್ತಿ ಕೊಟ್ಟಿದ್ದರು. ಏನಿದು ಸಂದರ್ಭ?
ಇಂದು ನಟಿ ಜಾಹ್ನವಿ ಕಪೂರ್ (Jahnavi Kapoor) 26 ನೇ ಹುಟ್ಟುಹಬ್ಬ. ಇದಾಗಲೇ ಬಾಲಿವುಡ್ನಲ್ಲಿ (Bollywood) ತಮ್ಮ ಸ್ಥಾನವನ್ನು ಭದ್ರವಾಗಿರಿಸಿಕೊಂಡಿರುವ ಶ್ರೀದೇವಿ ಪುತ್ರಿ, ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿದ್ದಾರೆ. ಈ ಹುಟ್ಟುಹಬ್ಬದಂದು ತಮ್ಮ ತಾಯಿ ಶ್ರೀದೇವಿಯನ್ನು ನೆನೆದು ಜಾಹ್ನವಿ ಕಣ್ಣೀರಿಟ್ಟಿದ್ದಾರೆ. 'ಧಡಕ್' ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿರೋ ಜಾಹ್ನವಿಯ ಮೊದಲ ಚಿತ್ರವನ್ನು ನೋಡಲೂ ಶ್ರೀದೇವಿ ಬದುಕಿರಲಿಲ್ಲ. ತಮ್ಮ ಮೊದಲ ಸಿನಿಮಾ ರಿಲೀಸ್‌ಗೂ ಮೂರ್ನಾಲ್ಕು ತಿಂಗಳು ಮುನ್ನ ತಾಯಿಯನ್ನು ಕಳೆದುಕೊಂಡ ಜಾಹ್ನವಿ ಅಮ್ಮನಿಲ್ಲದ ಸಿನಿಮಾ ಜರ್ನಿ ಹೇಗಿದೆ, ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್‌ಗಳನ್ನು ಹೇಗೆ ಎದರಿಸುತ್ತಾರೆಂದು ಹೇಳಿಕೊಂಡಿದ್ದಾರೆ.
ಆದರೆ ಇದರ ನಡುವೆ ಕುತೂಹಲದ ಪೋಸ್ಟ್ (Post) ಒಂದನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಅದೇನೆಂದರೆ ತಂದೆ ಬೋನಿಕಪೂರ್ ಚಿತ್ರ ನಿರ್ಮಾಪಕ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಈ ಕಾರಣದಿಂದ ಜಾಹ್ನವಿ ಬಾಲ್ಯದಿಂದಲೂ ಚಲನಚಿತ್ರ ಕಾರ್ಯಕ್ರಮಗಳಿಗೆ ತಾಯಿ-ತಂದೆಯ ಜೊತೆ ಹೋಗುತ್ತಿದ್ದರು. ಅಂತಹ ಒಂದು ಸಂದರ್ಭದಲ್ಲಿ, ಅವರು ಶಾರುಖ್ ಖಾನ್‌ಗೆ (ShahRukh Khan) ಪ್ರಶಸ್ತಿಯನ್ನು ನೀಡಿದ್ದರು! ಆಗ ಶಾರುಖ್ ಖಾನ್, ಈ ಮುದ್ದು ಬಾಲಕಿಯ ಕೆನ್ನೆಯ ಮೇಲೆ ಮೆಲ್ಲಗೆ ಹೊಡೆದು ಸ್ವಾಗತಿಸಿದ್ದರು.
ಅನಿವಾರ್ಯವಾಗಿ ಒಂಟಿಯಾಗಿರುವೆ; ಶ್ರೀದೇವಿ ಇಲ್ಲದೆ ಜೀವನ ಕ್ರೂರ: ಜಾನ್ವಿ ಕಪೂರ್ ಕಣ್ಣೀರು
ಈ ಕಾರ್ಯಕ್ರಮ ನಡೆದದ್ದು 2002ರಲ್ಲಿ. ಆಗ ಜಾಹ್ನವಿ ಇನ್ನೂ ಐದಾರು ವರ್ಷಗಳ ಬಾಲೆ. ಅಂದಿನ ಪ್ರಶಸ್ತಿ ಪ್ರದಾನ ಸಮಾರಂಭದ ವೀಡಿಯೊ ಈಗ ವೈರಲ್ ಆಗಿದೆ. ಇದರಲ್ಲಿ ಶಾರುಖ್ ಖಾನ್‌ಗೆ ಪ್ರಶಸ್ತಿಯನ್ನು ನೀಡುವ ಸಂದರ್ಭದಲ್ಲಿ ಪುಟ್ಟ ಜಾಹ್ನವಿ ಎಲ್ಲರ ಗಮನ ಸೆಳೆದಿದ್ದರು. ಕಪ್ಪು ಉಡುಪಿನಲ್ಲಿದ್ದ ಜಾಹ್ನವಿ ಬೋನಿ ಕಪೂರ್ (Bony Kapoor) ಜೊತೆ ವೇದಿಕೆಗೆ ಬಂದಿದ್ದಳು. ವೇದಿಕೆಯಲ್ಲಿ ಪ್ರೀತಿ ಜಿಂಟಾ (Preeti Zinta) ಇದ್ದರು. ಪ್ರೀತಿ ವಿಜೇತರನ್ನು ಘೋಷಿಸುವ ಮೊದಲು ಕೌಂಟ್‌ಡೌನ್ ಪ್ರಾರಂಭಿಸುತ್ತಿದ್ದಂತೆ, ಬೋನಿ ಕಪೂರ್ ಅವರು ಜಾಹ್ನವಿಯನ್ನು ಎತ್ತಿಕೊಂಡರು. ನಂತರ ಆಕೆ ವಿಜೇತರ ಹೆಸರನ್ನು ಘೋಷಿಸಿದ್ದಳು.
ಈ ಕಾರ್ಯಕ್ರಮದಲ್ಲಿ ದೇವದಾಸ್‌ಗಾಗಿ (Devdas) ಶಾರುಖ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು. ಕಪ್ಪು ಸೂಟ್‌ನಲ್ಲಿ ವೇದಿಕೆಗೆ ಆಗಮಿಸಿದ್ದ ಅವರು, ಪ್ರಶಸ್ತಿ ಸ್ವೀಕರಿಸುವ ಮೊದಲು ಪುಟಾಣಿ ಜಾಹ್ನವಿ ಕೆನ್ನೆಯನ್ನು ಮುಟ್ಟಿದ್ದರು. ನಂತರ ಅವರೆಲ್ಲರೂ ವೇದಿಕೆಯ ಮೇಲಿನ ಚಿತ್ರಗಳಿಗೆ ಪೋಸ್ ನೀಡಲು ನಿಂತಿದ್ದರು. ಆದರೆ ಬಾಲಕಿ ಜಾಹ್ನವಿ ಮಾತ್ರ ಅಲ್ಲಿ ಅಲ್ಲಿ ನೋಡುತ್ತಲೇ ಇದ್ದಳು. ಇದರ ವಿಡಿಯೋ ಶೇರ್ ಮಾಡಿದ್ದು, ನೆಟ್ಟಿಗರು ಸೋ ಕ್ಯೂಟ್ ಎನ್ನುತ್ತಿದ್ದಾರೆ.
Actress Sridevi ಸಾವಿಗೆ 5 ವರ್ಷ: ಭಾವುಕ ನುಡಿನಮನ ಸಲ್ಲಿಸಿದ ಮಗಳು ಜಾಹ್ನವಿ ಕಪೂರ್
ಜಾನ್ವಿ 2018 ರಲ್ಲಿ ಧಡಕ್ (Dhadak) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು ಘೋಸ್ಟ್ ಸ್ಟೋರೀಸ್, ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್, ರೂಹಿ, ಗುಡ್ ಲಕ್ ಜೆರ್ರಿ ಮತ್ತು ಮಿಲಿಯಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಈಗ ಈ ವರ್ಷ ಬವಾಲ್‌ನಲ್ಲಿ ವರುಣ್ ಧವನ್ ಎದುರು ಕಾಣಿಸಿಕೊಳ್ಳಲಿದ್ದಾರೆ, ಅದರ ಶೂಟಿಂಗ್ ಬಹಳ ಹಿಂದೆಯೇ ಮುಗಿದಿದೆ. ಅವರು ಪ್ರಸ್ತುತ ಮಿಸ್ಟರ್ ಅಂಡ್ ಮಿಸೆಸ್ ಮಾಹಿ ಚಿತ್ರದಲ್ಲಿ ತಮ್ಮ ರೂಹಿ ಸಹನಟ ರಾಜ್‌ಕುಮಾರ್ ರಾವ್ ಅವರ ಎದುರು ಕೆಲಸ ಮಾಡುತ್ತಿದ್ದಾರೆ.
ಮಿಲಿ ಜಾಹ್ನವಿ ಮತ್ತು ಬೋನಿ ಕಪೂರ್ ಅವರ ಮೊದಲ ಸಹಯೋಗವಾಗಿತ್ತು. ಈಗ ಅವರ ತಂಗಿ ಖುಷಿ ಕಪೂರ್ ಕೂಡ ನಟನೆಗೆ ಪಾದಾರ್ಪಣೆ ಮಾಡಲಿದ್ದಾರೆ. ಅವರು ಈ ವರ್ಷ ಜೋಯಾ ಅಖ್ತರ್ ಅವರ ನೆಟ್‌ಫ್ಲಿಕ್ಸ್ (Netflix) ಚಲನಚಿತ್ರ ದಿ ಆರ್ಚೀಸ್‌ನಲ್ಲಿ ಸುಹಾನಾ ಖಾನ್ ಮತ್ತು ಅಗಸ್ತ್ಯ ನಂದಾ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.