ಬಾಲಿವುಡ್ ಸಿನಿಮಾ ರಾಮಾಯಣದಲ್ಲಿ ರಾಮನಾಗಿ ರಣಬೀರ್ ಕಪೂರ್ ಆಯ್ಕೆಯಾಗಿದ್ದರೆ ಸೀತೆಯಾಗಿ ನಟಿ ಸಾಯಿ ಪಲ್ಲವಿ ರಾಮನಿಗೆ ಜೋಡಿಯಾಗಲಿದ್ದಾರೆ. ರಾವಣನಾಗಿ ನಟ ಯಶ್ ಅಬ್ಬರಿಸಲಿದ್ದು..
ಬಾಲಿವುಡ್ ಬಾದಶಹ ನಟ ಶಾರುಖ್ ಖಾನ್ (Shah Rukh Khan) ಅವರು ಕನ್ನಡದ ನಟರೊಬ್ಬರ ಬಗ್ಗೆ ಕಾಮೆಂಟ್ ಮಾಡಿ ಸಖತ್ ಸುದ್ದಿಯಾಗಿದ್ದಾರೆ. ಕಾಮೆಂಟ್ ಅಂದ್ರೆ ಅದು ಟೀಕೆ ಅಂದುಕೊಳ್ಳಬೇಡಿ, ಒಳ್ಳೆಯ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ ನಟ ಶಾರುಖ್ ಖಾನ್. ಹಾಗಿದ್ದರೆ ಅವರು ನಮ್ಮ ಕನ್ನಡದ ಯಾವ ನಟನ ಬಗ್ಗೆ ಮಾತನ್ನಾಡಿದ್ದಾರೆ? ಏನಂತ ಹೇಳಿದ್ದಾರೆ ನೋಡಿ ಇಲ್ಲಿ..
ಬಾಲಿವುಡ್ ಶಾರುಖ್ ಖಾನ್ ಯಶ್‌ಗೆ ಪಾಠ ಮಾಡಿದ್ದಾರೆ. 'ಯಶ್ (Rocking Star Yash) ಅವರೇ, ಬೇಗ ಬೇಗ ಸಿನಿಮಾ ಮಾಡಿ.. ನಾವು ನಿಮ್ಮ ಸಿನಿಮಾಗಾಗಿ ಕಾಯುತ್ತಿದ್ದೇವೆ..' ಎಂದಿದ್ದಾರೆ 'ಓಂ ಶಾಂತಿ ಓಂ' ನಟ ಶಾರುಖ್ ಖಾನ್. ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಅವರ ಹವಾ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಬಾಲಿವುಡ್ ಸೇರಿದಂತೆ ಇಡೀ ಇಂಡಿಯಾದಲ್ಲಿ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಇದೆ.
undefined
ಅವಳಿಗೋಸ್ಕರ ಚೆನ್ನೈ ಬಿಟ್ಟು ಮುಂಬೈಗೆ ಶಿಫ್ಟ್ ಆಗಿದ್ದೇನೆ; ನಟ ಸೂರ್ಯ ಶಾಕಿಂಗ್ ಹೇಳಿಕೆ!
ನಟ ಶಾರುಖ್ ಖಾನ್ ಸಹ ರಾಕಿ ಭಾಯ್ ಸಿನಿಮಾಗೆ ಕಾಯುತ್ತಿದ್ದಾರೆ ಎಂದರೆ ಅದು ಸಣ್ಣ ಮಾತೇ? ಖಂಡಿತ ಇಲ್ಲ, ಅದಕ್ಕೊಂದು ಭಾರೀ ತೂಕವಿದೆ! ಕನ್ನಡದಲ್ಲಿ ಎಲ್ಲರಂತೆ ಸಿನಿಮಾ ನಟರಾಗಿ ಬೆಳೆಯುತ್ತಿದ್ದ ನಟ ಯಶ್, ಕೆಜಿಎಫ್ ಎಂಬ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಬೆಳೆದುಬಿಟ್ಟರು. ಯಶ್ ಏರಿರುವ ಎತ್ತರ ಅಂತಿಂಥದ್ದಲ್ಲ.
ಅದರಲ್ಲೂ ಕೆಜಿಎಫ್ ಪಾರ್ಟ್-2 ತೆರೆಗೆ ಬಂದು ಸೂಪರ್ ಹಿಟ್ ಆದ ಬಳಿಕವಂತೂ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ, ಪ್ರಪಂಚದಲ್ಲೇ ಜನಪ್ರಿಯತೆ ಪಡೆದರು. ಕರ್ನಾಟಕದ ಹೆಸರನ್ನು ಜಗತ್ತೇ ಗುರುತಿಸುವಂತೆ ಮಾಡಿದರು ಎನ್ನಬಹುದು. ಸದ್ಯ ನಟ ಯಶ್ ಅವರು 'ಟಾಕ್ಸಿಕ್' ಹೆಸರಿನ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಜೊತೆಗೆ, ಬಾಲಿವುಡ್ ಜಗತ್ತಿನ 'ರಾಮಾಯಣ' ಸಿನಿಮಾಗೆ ನಿರ್ಮಾಪಕರು ಹಾಗೂ ನಟರಾಗಿಯೂ ಕಾಲಿಟ್ಟಿದ್ದಾರೆ. ಅಲ್ಲಿಗೆ ನಟ ಯಶ್ ಅವರು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಮಿಂಚುವ ಬಗ್ಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ನನ್ನ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿದೆ, ಅಮೆರಿಕಾದಲ್ಲಿ ಸರ್ಜರಿ ಆಗಲಿದೆ: ಶಿವರಾಜ್‌ಕುಮಾರ್
ಬಾಲಿವುಡ್ ಸಿನಿಮಾ ರಾಮಾಯಣದಲ್ಲಿ ರಾಮನಾಗಿ ರಣಬೀರ್ ಕಪೂರ್ ಆಯ್ಕೆಯಾಗಿದ್ದರೆ ಸೀತೆಯಾಗಿ ನಟಿ ಸಾಯಿ ಪಲ್ಲವಿ ರಾಮನಿಗೆ ಜೋಡಿಯಾಗಲಿದ್ದಾರೆ. ರಾವಣನಾಗಿ ನಟ ಯಶ್ ಅಬ್ಬರಿಸಲಿದ್ದು, ನಿರ್ಮಾಣದಲ್ಲೂ ಕೈ ಜೋಡಿಸುವ ಮೂಲಕ ರಾಶಿರಾಶಿ ಕಾಸು ಎಣಿಸುವ ಕೆಲಸಕ್ಕೂ ಕನ್ನಡದ ನಟ ಯಶ್ ಕೈ ಹಾಕಿದ್ದಾರೆ.
ಒಟ್ಟಿನಲ್ಲಿ, ನಟ ಯಶ್ ಅವರು ಕೆಜಿಎಫ್ ಮೂಲಕ ಕನ್ನಡ ಚಿತ್ರರಂಗವನ್ನು ಮೀರಿ ಬೆಳೆದಿದ್ದಾರೆ. ಈಗವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಶಾರುಖ್ ಖಾನ್ ಸೇರಿದಂತೆ ಭಾರತದ ಘಟಾನುಘಟಿ ಸ್ಟಾರ್ ನಟರನ್ನು ರೇಸ್‌ನಲ್ಲಿ ಹಿಂದಿಕ್ಕಿದ್ದಾರೆ ಎನ್ನಬಹುದು. ಆದರೆ, ಕನ್ನಡ ಬಿಟ್ಟು ಬೇರೆ ಭಾಷೆಗೆ ವಲಸೆ ಹೋಗುವ ಯಾವುದೇ ಇರಾದೆ ತಮಗಿಲ್ಲ, ಕನ್ನಡದ ಜೊತೆಗೆ ಬೇರೆ ಭಾಷೆಗಳಲ್ಲೂ ಸಿನಿಮಾ ಮಾಡುವುದಷ್ಟೇ ನನ್ನ ಉದ್ಧೇಶ..' ಎಂದಿದ್ದಾರೆ ನಟ ಯಶ್.
ಬ್ಯಾಡ್ ನ್ಯೂಸ್, ರಾಮ್‌ಚರಣ್ ಜೊತೆಗಿನ ಸಿನಿಮಾ ಮುಂದಕ್ಕೆ ಹಾಕಿದ ಶಿವರಾಜ್‌ಕುಮಾರ್!