ಬ್ಯಾಗ್​ ಒಳಗೆ ಉರ್ಫಿಯೋ, ಉರ್ಫಿ ಒಳಗೆ ಬ್ಯಾಗೊ? ಇನ್ನು ಕಾಯಲು ಸಾಧ್ಯವಿಲ್ಲವೆಂದ ನಟಿ

Published : Jun 19, 2023, 11:03 PM ISTUpdated : Jun 20, 2023, 01:13 PM IST
ಬ್ಯಾಗ್​ ಒಳಗೆ ಉರ್ಫಿಯೋ, ಉರ್ಫಿ ಒಳಗೆ ಬ್ಯಾಗೊ? ಇನ್ನು ಕಾಯಲು ಸಾಧ್ಯವಿಲ್ಲವೆಂದ ನಟಿ

ಸಾರಾಂಶ

ವಿವಿಧ ಬಟ್ಟೆಗಳಿಂದ ಸೆನ್​ಷೇನ್​ ಸೃಷ್ಟಿಸುವ ನಟಿ ಉರ್ಫಿ ಜಾವೇದ್​ ಈಗ ಬ್ಯಾಗ್​ನಿಂದ ಡ್ರೆಸ್​  ಮಾಡಿಕೊಂಡು ಅಚ್ಚರಿ ಪಡುವಂತೆ  ಮಾಡಿದ್ದಾರೆ.   

ಉರ್ಫಿ ಜಾವೇದ್​ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ  ಸೋಷಿಯಲ್ ಮೀಡಿಯಾದಲ್ಲಿ  (Social media) ಸೆನ್ಸೇಷನ್ ಕ್ರಿಯೇಟ್​ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್​ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್​ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್​ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್​ (Troll) ಆಗುವುದು ಎಂದರೆ ಈಕೆಗೆ ತುಂಬಾ ಖುಷಿ. ಇತ್ತೀಚೆಗೆ ಈಕೆಯ ಡ್ರೆಸ್​ಗಾಗಿಯೇ ಮುಂಬೈನ ರೆಸ್ಟೋರೆಂಟ್​ನಲ್ಲಿ ಎಂಟ್ರಿ ಸಿಕ್ಕಿರಲಿಲ್ಲ.  ಈ ಕುರಿತು, ಉರ್ಫಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ (Post) ಹಾಕುವ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದರು. ನಾವು ನಿಜವಾಗಿಯೂ 21 ನೇ ಶತಮಾನದಲ್ಲಿ ಬದುಕುತ್ತಿದ್ದೇವೆಯೇ ಎಂಬ ಪ್ರಶ್ನೆ ಕೇಳಿದ್ದರು. 

ಅದಾದ ಬಳಿಕ ಕಳೆದ ವಾರ ಫುಲ್​ ಡ್ರೆಸ್​ ತೊಟ್ಟು ಮತ್ತಷ್ಟು ಸುದ್ದಿಯಾಗಿದ್ದರು. ಈಕೆ ಉರ್ಫಿ ಹೌದೋ ಅಲ್ಲವೋ ಎಂದು ಹಲವರು ಹೇಳಿದ್ದರೆ, ಉರ್ಫಿಗೆ ಯಾಕೆ ಹೀಗಾಯ್ತು ಎಂದು ಇನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ. ಇದೇ ಕಾರಣಕ್ಕೆ, ಉರ್ಫಿಗೆ ಯಾವಾಗ ಏನಾಗುತ್ತದೆಯೋ ಗೊತ್ತಿಲ್ಲ. ಅವರು ಯಾವ ರೀತಿಯ ಡ್ರೆಸ್ ಯಾವಾಗ ಧರಿಸುತ್ತಾರೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಇಂತಿಪ್ಪ, ಉರ್ಫಿ ಜಾವೇದ್ ಮತ್ತೊಮ್ಮೆ ಹೊಸ ರೀತಿಯಲ್ಲಿ ಡ್ರೆಸ್ ಮಾಡಿದ್ದು, ಈ ಬಾರಿ ಹ್ಯಾಂಡ್ ಬ್ಯಾಗ್ ನಿಂದ ಡ್ರೆಸ್ ಮಾಡಿಕೊಂಡಿದ್ದಾರೆ. ಉರ್ಫಿ ಜಾವೇದ್ ಅವರ ಕ್ರಿಯೇಟಿವಿಟಿ ನೋಡಿ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಅದೇ ಸಮಯದಲ್ಲಿ, ಈ ಬಾರಿ ಉರ್ಫಿ ಜಾವೇದ್ ಹೆಚ್ಚು ಟ್ರೋಲ್ ಆಗಿಲ್ಲ. ಏಕೆಂದರೆ ಇಂದು ನಿಜಕ್ಕೂ ಯಾರ ತಲೆಗೂ ಹೊಳೆದಿರಲು ಸಾಧ್ಯವಿಲ್ಲ ಎನ್ನುವುದು ನೆಟ್ಟಿಗರ ಅಭಿಮತ. ಹಾಗಂತ ಟ್ರೋಲಿಗರೇನೂ ಸುಮ್ಮನೇ ಕುಳಿತುಕೊಳ್ಳಲಿಲ್ಲ. ಟ್ರೋಲ್​ ಮಾಡುವವರು ಮಾಡುತ್ತಲೇ ಇದ್ದಾರೆ. ಆದರೆ ಈ ಬಾರಿ ಹೊಗಳಿದವರೇ ಹೆಚ್ಚು.  

ಹಚ್ಚೆ ಹಾಕಿಸ್ಕೊಂಡು ಹಲವು ಬಾರಿ ಮೋಸ ಮಾಡ್ದ: ಗೋಳು ತೋಡಿಕೊಂಡ Urfi Javed

ಉರ್ಫಿ ಜಾವೇದ್   ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಿಂದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ಉರ್ಫಿ ಜೀನ್ಸ್ ಮತ್ತು ಟಿ-ಶರ್ಟ್ ಧರಿಸಿದ್ದಾರೆ. ಅದೇ ಸಮಯದಲ್ಲಿ, ಉರ್ಫಿ ಜಾವೇದ್ ಕೈಯಲ್ಲಿ ಒಂದು ಕೈಚೀಲ ಕಾಣಿಸಿಕೊಂಡಿದೆ.  ಸ್ವಲ್ಪ ಸಮಯದ ನಂತರ ಉರ್ಫಿ  ಈ ಕೈಚೀಲದ ಉಡುಪನ್ನು ತಯಾರಿಸಿ ಧರಿಸುತ್ತಾರೆ. ಉರ್ಫಿ ಜಾವೇದ್ ಕೈಚೀಲದಿಂದ ತಮಗಾಗಿ ಸ್ಕರ್ಟ್ ಮತ್ತು ಟಾಪ್ ತಯಾರಿಸಿ ಅದರಲ್ಲಿ ಹಣ ಇಡಲು ಪಾಕೆಟ್ ಕೂಡ ಮಾಡಿಕೊಂಡಿದ್ದಾರೆ. ಉರ್ಫಿ ಜಾವೇದ್ ಅವರು ಈ ವಿಡಿಯೋದೊಂದಿಗೆ ಶೀರ್ಷಿಕೆ ಬರೆದಿದ್ದಾರೆ, 'ನಾನು ಬ್ಯಾಗ್‌ನಿಂದ ಡ್ರೆಸ್ ಮಾಡಿದ್ದೇನೆ. ಈ ಉಡುಗೆ ಸಂಪೂರ್ಣವಾಗಿ ಬಾಂಬ್ ಆಗಿದೆ.   ಈ ಉಡುಪನ್ನು ಧರಿಸಲು ಯಾವುದೋ ಪಾರ್ಟಿಗಾಗಿ ಕಾಯಲು ನನಗೆ ಸಾಧ್ಯವಿಲ್ಲ. ಆದ್ದರಿಂದ ಈಗಲೇ ಇದನ್ನು ಧರಿಸುತ್ತಿದ್ದೇನೆ ಎಂದಿದ್ದಾರೆ.


ಬಳಕೆದಾರರು ಉರ್ಫಿ ಜಾವೇದ್ ಅವರ ವೀಡಿಯೊದಲ್ಲಿ (Video) 'ನೈಜ ಪ್ರತಿಭೆ' ಎಂದು ಬರೆದಿದ್ದಾರೆ. ಒಬ್ಬ ಬಳಕೆದಾರ, 'ಅದ್ಭುತ ಸೃಜನಶೀಲತೆ ಇದೆ' ಎಂದು ಬರೆದಿದ್ದಾರೆ.  ಬ್ಯಾಗ್​ ಒಳಗೆ ಉರ್ಫಿಯೋ ಉರ್ಫಿಯೊಳಗೆ ಬ್ಯಾಗೋ ಎಂದು ಹಲವರು ಪ್ರಶ್ನಿಸಿದ್ದಾರೆ.  ಇತ್ತೀಚೆಗಷ್ಟೇ ಉರ್ಫಿ ಗಂಡಸರ ಬಗ್ಗೆ ಬಾಯಿಗೆ ಬಂದ ಹಾಗೆ ಬೈದು ಸುದ್ದಿಯಾಗಿದ್ದರು. 'ಗಂಡಸರು ತಲೆ ಬಳಸಿ ಯೋಚನೆ ಮಾಡುವುದಿಲ್ಲ ಮೊದಲು ತಮ್ಮ D*** ನೇರ ಯೋಚನೆ ಮಾಡುತ್ತಾರೆ ಆನಂತರ ತಲೆ ಬಳಸುತ್ತಾರೆ. ಎಲ್ಲಾ ಗಂಡಸರು ಒಂದೇ ರೀತಿ ಎಂದು ನಾನು ಹೇಳುವುದಿಲ್ಲ ಆದರೆ ಕೆಲವು ಹಾಗೆ ಇರುವುದು ಅಂತವರನ್ನು ನಾನು ಭೇಟಿ ಮಾಡಿರುವೆ. ಪ್ರತಿಯೊಬ್ಬರು ಸೇಮ್ ಆಲ್ಲ. ಒಂದು ವಯಸ್ಸಿನವರೆಗೂ **** ನೇರ ಯೋಚನೆ ಮಾಡುತ್ತಾರೆ ಆನಂತರ ಜವಾಬ್ದಾರಿಗಳು ಅವರನ್ನು ಬದಲಾಯಿಸುತ್ತದೆ ಎಂದಿದ್ದರು. 

ಹುಡುಗರು ತಮ್ಮ D***ನೇರಕ್ಕೆ ಯೋಚಿಸುತ್ತಾರೆ: ಅಶ್ಲೀಲ ಪದ ಬಳಸಿದ ಉರ್ಫಿ, ಹೇಳಿಕೆ ವೈರಲ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!