2ನೇ ಪತಿಗೂ ಡಿವೋರ್ಸ್ ಕೊಟ್ರಾ ಚಿರಂಜೀವಿ ಪುತ್ರಿ ಶ್ರೀಜಾ? ವಾರಕ್ಕೊಮ್ಮೆ ಮಗಳ ಭೇಟಿ ಬಗ್ಗೆ ಕಲ್ಯಾಣ್ ದೇವ್ ಭಾವುಕ

Published : Jun 19, 2023, 03:58 PM ISTUpdated : Jun 19, 2023, 04:07 PM IST
2ನೇ ಪತಿಗೂ ಡಿವೋರ್ಸ್ ಕೊಟ್ರಾ ಚಿರಂಜೀವಿ ಪುತ್ರಿ ಶ್ರೀಜಾ? ವಾರಕ್ಕೊಮ್ಮೆ ಮಗಳ ಭೇಟಿ ಬಗ್ಗೆ ಕಲ್ಯಾಣ್ ದೇವ್ ಭಾವುಕ

ಸಾರಾಂಶ

ಚಿರಂಜೀವಿ ಪುತ್ರಿ ಶ್ರೀಜಾ 2ನೇ ಪತಿಗೂ ಡಿವೋರ್ಸ್ ಕೊಟ್ರಾ? ಎನ್ನುವ ಅನುಮಾನ ಬಲವಾಗಿದೆ. ವಾರಕ್ಕೊಮ್ಮೆ ಮಗಳ ಭೇಟಿ ಬಗ್ಗೆ ಶ್ರೀಜಾ 2ನೇ ಪತಿ ಕಲ್ಯಾಣ್ ದೇವ್ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. 

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ 2ನ ಪತಿಯಿಂದನೂ ವಿಚ್ಛೇದನ ಪಡೆದುಕೊಂಡ್ರಾ ಎನ್ನುವ ಅನುಮಾನ ಬಲವಾಗಿದೆ. ಇದಕ್ಕೆ ಕಾರಣ ಶ್ರೀಜಾ 2ನೇ ಪತಿ, ನಟ ಕಲ್ಯಾಣ್ ದೇವ್ ಹಂಚಿಕೊಂಡ ಭಾವುಕ ಪೋಸ್ಟ್. ಶ್ರೀಜಾ ಅವರ 2 ಮದುವೆಯೂ ಉಳಿಯಲಿಲ್ಲ. ಶ್ರೀಜಾ ಚಿಕ್ಕ ವಯಸ್ಸಿನಲ್ಲೇ ಸಿರೀಶ್ ಭಾರಧ್ವಜ್ ಎನ್ನುವವರನ್ನು ಪ್ರೀತಿಸಿ ಓಡಿ ಹೋಗಿ ಮದುವೆಯಾಗಿದ್ದರು. ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದರೂ ಆ ಸಂಬಧವನ್ನು ತುಂಬಾ ಉಳಿಸಿಕೊಳ್ಳುವಲ್ಲಿ ಶ್ರೀಜಾ ಸೋತರು. ಮೊದಲ ಪತಿಗೆ ವಿಚ್ಛೇದನ ನೀಡಿ ಮನೆಗೆ ಬಂದಿದ್ದ ಶ್ರೀಜಾ ಮತ್ತೆ 2ನೇ ಮದುವೆಯಾದರು. ಕಲ್ಯಾಣ್ ದೇವ್ ಜೊತೆ ಶ್ರೀಜಾ 2ನೇ ಬಾರಿ ದಾಂಪತ್ಯಕ್ಕೆ ಕಾಲಿಟ್ಟರು. ಆದರೆ 2ನೇ ಪತಿಯಿಂದನೂ ದೂರ ಆಗಿದ್ದರು. ಇದೀಗ ಕಲ್ಯಾಣ್ ದೇವ್ ಅವರಿಗೆ ವಿಚ್ಛೇದನ ನೀಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಇದಕ್ಕೆ ಕಾರಣ ಕಲ್ಯಾಣ್ ಶೇರ್ ಮಾಡಿರುವ ಪೋಸ್ಟ್ 

ನಟ ಕಲ್ಯಾಣ್ ದೇವ್ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಮಗಳ ಜೊತೆ ಕಾಲ ಕಳೆದ ವಿಡಿಯೋ ಶೇರ್ ಮಾಡಿ ಭಾವುಕರಾಗಿದ್ದಾರೆ. ವಾರಕ್ಕೆ 4 ಗಂಟೆ ಮಾತ್ರ ಮಗಳ ಜೊತೆ ಸಮಯ ಕಳೆಯಲು ಸಿಗುತ್ತೆ ಎಂದು ಹೇಳಿದ್ದಾರೆ. ಮತ್ತೊಂದು ವಿಡಿಯೋ ಶೇರ್ ಮಾಡಿ 'ನಾವು ಮತ್ತೆ ಭೇಟಿಯಾಗುವವರೆಗೂ, ನಿನ್ನ ಈ ವಿಶೇಷ ನೆನಪುಗಳು ಯಾವಾಗಲೂ ನಗುವನ್ನು ತರುತ್ತವೆ. ಮಿಸ್ ಯು ನವ್ವು' ಎಂದು ಬರೆದುಕೊಂಡಿದ್ದಾರೆ.

ಚಿರಂಜೀವಿ ಪುತ್ರಿ ಶ್ರೀಜಾ ಮೂರನೇ ಮದುವೆ? ಆಸ್ತಿ ಹಂಚಲು ಮೆಗಾಸ್ಟಾರ್ ಪ್ಲಾನ್

ಅಂದಹಾಗೆ ಕಲ್ಯಾಣ್ ದೇವ್ ಅಪ್ಪಂದಿರ ದಿನದ ವಿಶೇಷವಾಗಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಲ್ಯಾಣ್ ಪೋಸ್ಟ್ ಗೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇಬ್ಬರೂ ಡಿವೋರ್ಸ್ ಪಡೆದುಕೊಂಡ್ರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇಬ್ಬರೂ ದೂರ ಆಗಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಎಲ್ಲಿಯೂ ಡಿವೋರ್ಸ್ ಬಗ್ಗೆ ಬಹಿರಂಗವಾಗಿರಲಿಲ್ಲ. ಆದರೀಗ ಕಲ್ಯಾಣ್ ಹಂಚಿಕೊಂಡ ಪೋಸ್ಟ್ ಇಬ್ಬರೂ ಡಿವೋರ್ಸ್ ಪಡೆದಿರುವುದು ಅಧಿಕೃತವಾಗಿದೆ ಎನ್ನುವ ಅನುಮಾನ ಮೂಡಿಸಿದೆ.

ಚಿರಂಜೀವಿ ಪುತ್ರಿ ಬಾಳಲ್ಲಿ ಮೂರನೆಯವ ಎಂಟ್ರಿ? ಕುತೂಹಲ ಮೂಡಿಸಿದ ಇನ್​ಸ್ಟಾ ಪೋಸ್ಟ್​  

ಶ್ರೀಜಾ ಮತ್ತು ಕಲ್ಯಾಣ್ ದೇವ್ ಮಾರ್ಚ್ 28, 2016 ರಂದು ಅದ್ಧೂರಿಯಾಗಿ ವಿವಾಹವಾದರು. ಬೆಂಗಳೂರಿನಲ್ಲಿ ಇವರ  ವಿವಾಹ ಮಹೋತ್ಸವ ಜರುಗಿತ್ತು. ಕೆಲವು ವರ್ಷಗಳ ನಂತರ ಅವರ ಸಂಬಂಧವು ಹದಗೆಟ್ಟಿತು. ಮಗುವೆ ಬಳಿಕ ಕಲ್ಯಾಣ್ ದೇವ್ ಸಿನಿಮಾರಂಗಕ್ಕೂ ಕಾಲಿಟ್ಟರು. ಹೀರೋ ಆಗಿ ಮಿಂಚಿದರು. ಆದರೆ ಕೆಲವು ಸಮಯದ ನಂತರ ಶ್ರೀಜಾ ತನ್ನ ಹೆಸರಿನಿಂದ ಪತಿಯ ಹೆಸರನ್ನು ಕೈಬಿಟ್ಟರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕಲ್ಯಾಣ್ ದೇವ್ ಜೊತೆಗಿನ ಎಲ್ಲಾ ಫೋಟೋವನ್ನು ಡಿಲೀಟ್ ಮಾಡಿ ಇಬ್ಬರೂ ಒಬ್ಬರಿಗೊಬ್ಬರು ಅನ್ ಫಾಲೋ ಮಾಡಿದರು. ಕಲ್ಯಾಣ್ ದೇವ್ ಮತ್ತು ಶ್ರೀಜಾ ದಾಂಪತ್ಯಕ್ಕೆ ಒಬ್ಬಳು ಮಗಳಿದ್ದಾಳೆ. ಮೊದಲ ಪತಿಯಿಂದನೂ ಶ್ರೀಜಾಗೆ ಒಬ್ಬಳು ಹೆಣ್ಣು ಮಗು. ಸದ್ಯ ಶ್ರೀಜಾ ಇಬ್ಬರೂ ಹೆಣ್ಣು ಮಕ್ಕಳ ತಾಯಿಯಾಗಿ ಅವರ ಆರೈಕೆ ಮಾಡುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Victory Venkatesh ಕಟೌಟ್ ನೋಡಿ ಬೆಚ್ಚಿಬಿದ್ದಿದ್ದ ಮೆಗಾಸ್ಟಾರ್ ಚಿರಂಜೀವಿ: ಆ ಕಥೆ ನಿಮಗೆ ಗೊತ್ತಾ?
Niharika Konidela: ಎರಡನೇ ಮದುವೆ ಬಗ್ಗೆ ಮೆಗಾ ಡಾಟರ್ ಸ್ಪಷ್ಟನೆ: ಟ್ರೋಲಿಗರಿಗೆ ಕೊಟ್ರೂ ಖಡಕ್ ಉತ್ತರ