ರಾಮಾಯಣಕ್ಕೆ 'ಆದಿಪುರುಷ'ಗಿಂತ ದೊಡ್ಡ ಅಗೌರವ ಇನ್ನೊಂದಿಲ್ಲ: ಮುಖೇಶ್ ಖನ್ನಾ ಆಕ್ರೋಶ

By Shruthi Krishna  |  First Published Jun 19, 2023, 12:22 PM IST

ರಾಮಾಯಣಕ್ಕೆ 'ಆದಿಪುರುಷ'ಗಿಂತ ದೊಡ್ಡ ಅಗೌರವ ಇನ್ನೊಂದಿಲ್ಲ, ರಾವಣ ಚೀಪ್ ಸ್ಮಗ್ಲರ್ ಹಾಗೆ ಕಣ್ತಿದ್ದಾನೆ ಎಂದು ಮುಖೇಶ್ ಖನ್ನಾ ಆಕ್ರೋಶ ಹೊರಹಾಕಿದ್ದಾರೆ. 


ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಅದ್ದೂರಿಯಾಗಿ ತೆರೆಗೆ ಬಂದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಿದೆ. ಪ್ರಭಾಸ್ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಸೀತೆಯಾಗಿ ಕೃತಿ ಸನೊನ್ ಮಿಂಚಿದ್ದಾರೆ. ರಾವಣನಾಗಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಆದಿಪುರುಷ್ ಜೂನ್ 16ರಂದು ತೆರೆಗೆ ಬಂದಿದೆ. ಭಾರಿ ನಿರೀಕ್ಷೆಯೊಂದಿಗೆ ರಿಲೀಸ್ ಆದ ಆದಿಪುರುಷ್ ಅಭಿಮಾನಿಗಳಿಗೆ ಅಷ್ಟೇ ನಿರಾಸೆ ಮೂಡಿಸಿದೆ. ಪ್ರಭಾಸ್ ನಟನೆ ಬಿಟ್ಟರೇ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗಿಲ್ಲ. ಓಂ ರಾವುತ್ ನಿರ್ದೇಶನ, ಸಂಭಾಷಣೆ, ವಿಎಕ್ಸ್‌ಎಫ್, ಪಾತ್ರಗಳ ಡಿಸೈನ್ ಸೇರಿದಂತೆ ಎಲ್ಲಾ ವಿಚಾರದಲ್ಲೂ ಆದಿಪುರುಷ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಓಂ ರಾವುತ್ ಅವರಿಗೆ ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. 

ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಕಲಾವರಿದರು ಕೂಡ ಆದುಪುರುಷ್ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ನಟಿ ಕಂಗನಾ ರಣಾವತ್ ಕೂಡ ಪ್ರತಿಕ್ರಿಯೆ ನೀಡಿ, ರಾಮನ ಹೆಸರು ಹಾಳು ಮಾಡಬೇಡಿ' ಎಂದು ಪರೋಕ್ಷವಾಗಿ ಜರಿದಿದ್ದರು. ಇದೀಗ ಬಾಲಿವುಡ್ ಹಿರಿಯ ನಟ ಮುಖೇಶ್ ಖನ್ನಾ ಕೂಡ ಆಕ್ರೋಶ ಹೊರಹಾಕಿದ್ದಾರೆ. 

Tap to resize

Latest Videos

ಯೂಟ್ಯೂಬ್ ವಾಹಿನಿಯೊಂದರಲ್ಲಿ ಮಾತನಾಡಿರುವ ಮುಖೇಶ್ ಖನ್ನಾ, ಆದಿಪುರುಷ್ ನಿರ್ದೇಶಕರ ವಿರುದ್ಧ ಕಿಡಿಕಾರಿದ್ದಾರೆ. ರಾಮಾಯಣಕ್ಕೆ ‘ಆದಿಪುರುಷ’ಗಿಂತ ದೊಡ್ಡ ಅಗೌರವ ಇನ್ನೊಂದಿಲ್ಲ ಎಂದು ಹೇಳಿದ್ದಾರೆ. 

ಭಾರಿ ವಿರೋದದ ಬಳಿಕ ವಿವಾದಾತ್ಮಕ ಡೈಲಾಗ್‌ಗೆ ಕತ್ತರಿ: 'ಆದಿಪುರುಷ್' ತಂಡದ ಮಹತ್ವದ ನಿರ್ಧಾರ

'ಓಂ ರಾವುತ್‌ಗೆ ರಾಮಾಯಣದ ಬಗ್ಗೆ ಯಾವುದೇ ಜ್ಞಾನವಿಲ್ಲ ಎಂದು ತೋರುತ್ತದೆ. ಅದರ ಮೇಲೆ ನಮ್ಮ ರಾಮಾಯಣವನ್ನು 'ಕಲಿಯುಗ್' ಆಗಿ ಪರಿವರ್ತಿಸಿದ ಮಹಾನ್ ಬುದ್ಧಿಜೀವಿ ಬರಹಗಾರ ಮನೋಜ್ ಮುಂತಶಿರ್ ನಮ್ಮಲ್ಲಿದ್ದಾರೆ' ಎಂದಿದ್ದಾರೆ. ಮುಖೇಶ್ ಆದಿಪುರುಷ್ ಸಿನಿಮಾವನ್ನು 'ಭಯಾನಕ್ ಮಜಾಕ್' ಎಂದು ಕರೆದರು. ಚಿತ್ರದ ಕೆಲವು ಪಾತ್ರಗಳ ಚಿತ್ರಣವನ್ನು ಟೀಕಿಸಿದ್ದಾರೆ. 'ಮೇಘನಾದ್ ದೇಹದಾದ್ಯಂತ ಹಚ್ಚೆ ಹಾಕಿಸಿಕೊಂಡು WWE ಕುಸ್ತಿಪಟುನಂತೆ ಕಾಣುತ್ತಿದ್ದರೆ. ಇನ್ನೂ ರಾವಣ ಲುಕ್ ಚೀಪ್ ಕಳ್ಳಸಾಗಾಣಿಕೆದಾರನಂತೆ ಕಾಣುತ್ತಾನೆ' ಮುಖೇಶ್ ಖನ್ನಾ ಸಿನಿಮಾತಂಡದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

ಇದು ರಾಮಾಯಣ ಅಲ್ಲ, ಅದಿಪುರುಷ್: ಟ್ರೋಲ್ ಬಳಿಕ ಉಲ್ಟ ಹೊಡೆದ ಪ್ರಭಾಸ್ 'ಆದಿಪುರುಷ್' ತಂಡ

ಆದಿಪುರುಷ್ ಟೀಸರ್ ರಿಲೀಸ್ ಆದಾಗಿನಿಂದ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ರಾವಣನ ಲುಕ್, ವಿಎಕ್ಸ್‌ಎಫ್ ಸೇರಿದಂತೆ ಪ್ರತಿಯೊಂದು ವಿಚಾರಕ್ಕೂ ನೆಗೆಟಿವ್ ವಿಮರ್ಶೆ ಪಡೆಯುತ್ತಿತ್ತು. ಇದೀಗ ಸಿನಿಮಾ ಕೂಡ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದ್ದಲ್ಲದೇ ವಿವಾದಕ್ಕೆ ಸಿಲುಕಿದೆ. ಆದಿಪುರುಷ್ ಸಿನಿಮಾ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಪ್ರಭಾಸ್, ಕೃತಿ ಸನೋನ್, ದೇವದತ್ತ ನಾಗೆ, ಸೈಫ್ ಅಲಿ ಖಾನ್ ಮತ್ತು ಸನ್ನಿ ಸಿಂಗ್ ಸೇರಿದಂತೆ ಅನೇಕರು ನಟಿಸಿದ್ದಾರೆ. 

click me!