ನಿಮ್ಮನ್ನು ನೋಡಿದ ಎಲ್ಲರಿಗೂ ನಿಮ್ಮ ಬಗ್ಗೆ ಒಂದು ಒಪಿನಿಯನ್ ಮೂಡಿರುತ್ತದೆ. ನಿಮ್ಮ ಶಕ್ತಿ ಸಾಮರ್ಥ್ಯ ಹಾಗೂ ವೀಕ್‌ನೆಸ್‌ಗಳನ್ನು ಅರಿತುಕೊಂಡೇ ಅವರು ನಿಮ್ಮ ಜತೆ ಸ್ನೇಹ, ಪ್ರೀತಿ ಅಥವಾ ಕೆಲಸದ ಚಾನ್ಸ್ ಆಫರ್ ಮಾಡಿರುತ್ತಾರೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಸಂದರ್ಶನವೊಂದರಲ್ಲಿ ಮಾತನಾಡುತ್ತ 'ನೀವು ಯಾರೇ ಆಗಿರಲಿ, ಮೊದಲು ನಿಮ್ಮ ಶಕ್ತಿ ಮತ್ತು ದೌರ್ಬಲ್ಯ ಎರಡನ್ನೂ ಒಪ್ಪಿಕೊಳ್ಳಿ. ನೀವು ತುಂಬಾ ದೊಡ್ಡ ಸೆಲೆಬ್ರಿಟಯೇ ಇರಬಹುದು ಅಥವಾ ಕ್ರಿಕೆಟ್ ಪ್ಲೇಯರ್ ಅಥವಾ ಯಾವುದೇ ಬೇರೆ ಕ್ಷೇತ್ರದಲ್ಲಿ ಸಾಧನೆಯ ತುಟ್ಟತುದಿಯಲ್ಲಿ ಇರಬಹುದು. ಆದರೆ, ನಿಮ್ಮ ಸ್ಟ್ರೆಂಗ್ತ್ ಹಾಗೂ ವೀಕ್‌ನೆಸ್ ನಿಮಗೆ ಗೊತ್ತಿಲ್ಲ ಎಂದರೆ ನೀವು ನೆಮ್ಮದಿಯಿಂದ ಖಂಡಿತವಾಗಿಯೂ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.
ಏಕೆಂದರೆ, ನಿಮ್ಮನ್ನು ನೋಡಿದ ಎಲ್ಲರಿಗೂ ನಿಮ್ಮ ಬಗ್ಗೆ ಒಂದು ಒಪಿನಿಯನ್ ಮೂಡಿರುತ್ತದೆ. ನಿಮ್ಮ ಶಕ್ತಿ ಸಾಮರ್ಥ್ಯ ಹಾಗೂ ವೀಕ್‌ನೆಸ್‌ಗಳನ್ನು ಅರಿತುಕೊಂಡೇ ಅವರು ನಿಮ್ಮ ಜತೆ ಸ್ನೇಹ, ಪ್ರೀತಿ ಅಥವಾ ಕೆಲಸದ ಚಾನ್ಸ್ ಆಫರ್ ಮಾಡಿರುತ್ತಾರೆ. ಆದರೆ ನಿಮಗೆ ಮಾತ್ರ ಅದರ ಬಗ್ಗೆ ಅರಿವು ಇರುವುದೇ ಇಲ್ಲ. ಇದು ನಿಮ್ಮ ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನ ಎರಡಕ್ಕೂ ಅನ್ವಯಿಸಿ ಪರಿಣಾಮ ಬೀರುತ್ತದೆ. ಆದರೆ, ನೀವು ಆ ಬಗ್ಗೆ ಯೋಚಿಸುವುದೂ ಇಲ್ಲ, ಅದರ ಬಗ್ಗೆ ಸ್ವಲ್ಪ ಜಾಗರೂಕರಾಗಿ ಕೆಲಸವನ್ನೂ ಮಾಡುವುದಿಲ್ಲ.
ಲವ್ ಸ್ಟೋರಿ ನನಗಿಷ್ಟ ಎಂದಿರುವ ಸಾಯಿ ಪಲ್ಲವಿ ರಿಯಲ್ ಲೈಫ್‌ನಲ್ಲಿ 'ಲವರ್' ರಿಜೆಕ್ಟ್ ಮಾಡಿದ್ದು ಯಾಕೆ?
ಸಾಮಾನ್ಯವಾಗಿ ಬಹುತೇಕರು ಮಾಡುವ ತಪ್ಪು ಅದು. ನಮ್ಮ ನಮ್ಮ ಸ್ಟ್ರೆಂಗ್ತ್ ಹಾಗೂ ವೀಕ್‌ನೆಸ್ ನಮಗೆ ಗೊತ್ತಿದ್ದರೆ ನಾವು ನಮ್ಮ ಆಯ್ಕೆಗಳಲ್ಲಿ ಎಲ್ಲೂ ಎಡವಿ ಬೀಳುವುದಿಲ್ಲ. ಜೀವನ ಯಾಯತ್ತೂ ಹಳಿ ತಪ್ಪುವುದಿಲ್ಲ. ಆದ್ದರಿಂದ, ಬೇರೆ ಎಲ್ಲದಕ್ಕಿಂತ ಮೊದಲು ನೀವು ನಿಮ್ಮ ಸಾಮರ್ಥ್ಯ ಹಾಗು ದೌರ್ಬಲ್ಯ ಎರಡನ್ನೂ ತಿಳಿದುಕೊಳ್ಳಲು ಪ್ರಯತ್ನಿಸಿ. ಅದನ್ನು ನೀವು ಸರಿಯಾಗಿ ಜಡ್ಜ್ ಮಾಡುವುದು ತುಂಬಾ ಮುಖ್ಯ. ನಿಮ್ಮ ಬಗೆಗಿನ ಸುಳ್ಳು ರಿಪೋರ್ಟ್ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ, ಅದರಿಂದ ಅಪಾಯವೇ ಹೆಚ್ಚು' ಎಂದಿದ್ದಾರೆ.
ನಟಿ 'ಕಲ್ಪನಾ ತೋಟ' ನಿಜವಾಗಿಯೂ ಅವರದ್ದಾಗಿತ್ತಾ; ಆ ಫಾರ್ಮ್ ಹೌಸ್ ಸತ್ಯ ಕಥೆಯೇನು?
ಅಂದಹಾಗೆ, ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಜತೆ 'ಐಶ್ವರ್ಯ' ಚಿತ್ರದಲ್ಲಿ ನಟಿಸುವ ಮೂಲಕ ತಮ್ಮ ಸಿನಿಮಾ ಜರ್ನಿ ಪ್ರಾರಂಬಿಸಿದ ನಟಿ ದೀಪಿಕಾ ಪಡುಕೋಣೆ, ಬಳಿಕ ಶಾರುಖ್ ಖಾನ್ ನಟನೆಯ 'ಓಂ ಶಾಂತಿ' ಚಿತ್ರದ ಮೂಲಕ ಬಾಲಿವುಡ್ (Bollywood) ಪ್ರವೇಶ ಪಡೆದವರು. ಬಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದಿರುವ ದೀಪಿಕಾ ಪಡುಕೋಣೆ, ನಟ ರಣವೀರ್ ಸಿಂಗ್ (Ranveer Singh) ಅವರನ್ನು ಮದುವೆಯಾಗಿ ಸುಖ ದಾಂಪತ್ಯಜೀವನ ನಡೆಸುತ್ತಿದ್ದಾರೆ. ಸದ್ಯ ನಟಿ ದೀಪಿಕಾ ಪಡುಕೋಣೆ ಗರ್ಭಿಣಿ ಎಂಬ ಸುದ್ದಿ ಹಬ್ಬಿದ್ದು, ಅಮ್ಮನಾಗಲಿರುವ ದೀಪಿಕಾ ಅವರಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಶುಭಾಶಯಗಲ ಮಹಾಪೂರವೇ ಹರಿದುಬಂದಿದೆ.
ಆರತಿಗೇಕೆ ಪ್ರಚಾರವೆಂದರೆ ಅಲರ್ಜಿ; ಅಮೆರಿಕಾದಿಂದ ಗುಟ್ಟಾಗಿ ಪದೇಪದೇ ಬರುವುದೇಕೆ, ಮತ್ತೆ ಹೋಗುವುದೇಕೆ?