15 ರೂ. ಸೀರೆಯುಟ್ಟ ಬಾಲಿವುಡ್ ಬ್ಯೂಟಿ ಅದಾ ಶರ್ಮಾ! ಏನಿದರ ಸೀಕ್ರೆಟ್​, ಸ್ಯಾರಿ ಗುಟ್ಟು ಬಿಚ್ಚಿಟ್ಟ ನಟಿ...

Published : Apr 03, 2024, 12:53 PM IST
15 ರೂ. ಸೀರೆಯುಟ್ಟ ಬಾಲಿವುಡ್ ಬ್ಯೂಟಿ ಅದಾ ಶರ್ಮಾ! ಏನಿದರ ಸೀಕ್ರೆಟ್​, ಸ್ಯಾರಿ ಗುಟ್ಟು ಬಿಚ್ಚಿಟ್ಟ ನಟಿ...

ಸಾರಾಂಶ

ದಿ ಕೇರಳ ಸ್ಟೋರಿ ಖ್ಯಾತಿಯ ನಟಿ ಅದಾ ಶರ್ಮಾ ಉಟ್ಟುಕೊಂಡಿರುವ ಸೀರೆಯ ಬೆಲೆ ಕೇವಲ 15 ರೂಪಾಯಿ. ಇದು ಸಾಧ್ಯವಾಗಿದ್ದು ಹೇಗೆ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್​ ವಿಷ್ಯ...  

ಪುನೀತ್​ ರಾಜ್​ಕುಮಾರ್​ ಜೊತೆ ರಣವಿಕ್ರಮದಲ್ಲಿ ಜೊತೆಯಾಗಿ ಎಲ್ಲರ ಮೆಚ್ಚುಗೆ ಗಳಿಸಿರುವ ಬೆಡಗಿ ಅದಾ ಶರ್ಮಾ. ಆದರೆ ದಿ ಕೇರಳ ಸ್ಟೋರಿ ಮೂಲಕ ರಾತ್ರೋರಾತ್ರಿ ಫೇಮಸ್​ ಆದರು.  ಬಹುಭಾಷಾ ನಟಿಯಾಗಿರುವ ಅದಾ ಶರ್ಮಾ ಅವರಿಗೆ ಈ ಚಿತ್ರದಿಂದ   ದೊಡ್ಡ ಗೆಲುವು ಸಿಕ್ಕಿದೆ. ಇದಾಗಲೇ ಹಲವಾರು ಚಿತ್ರಗಳಲ್ಲಿ ನಟಿಸಿರುವ ಅದಾ ಅವರಿಗೆ ಸಕತ್​ ಹೆಸರು ತಂದುಕೊಟ್ಟಿರುವ ಚಿತ್ರವಿದು. ಸತ್ಯ ಘಟನೆ ಆಧರಿತ ದಿ ಕೇರಳ ಸ್ಟೋರಿಯಲ್ಲಿನ ಅದಾ ಅವರ ಅಭಿನಯಕ್ಕೆ ಫಿದಾ ಆದವರೇ ಇಲ್ಲ. ಅದು ಎಷ್ಟರಮಟ್ಟಿಗೆ ನೈಜತೆಯಿಂದ ಕೂಡಿತ್ತು ಎಂದರೆ, ಈಕೆಗೆ ಈ ಪಾತ್ರ ಮಾಡಿದ್ದಕ್ಕೆ ಕೊಲೆ ಬೆದರಿಕೆ ಕೂಡ ಬಂದಿತ್ತು ಎಂದರೆ ಚಿತ್ರದ ಸತ್ಯದ ಅರಿವಾಗುತ್ತದೆ.  2008ರಿಂದಲೂ ಅದಾ ಶರ್ಮಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.  

ಇದೀಗ ಸೀರೆಯ ಮೂಲಕ ನಟಿ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸದ್ದು ಮಾಡುತ್ತಿದ್ದಾರೆ. ಅದಕ್ಕೆ ಕಾರಣವೇನೆಂದರೆ, ಈಕೆ ಧರಿಸಿದ್ದ ಕೇವಲ 15 ರೂಪಾಯಿ ಬೆಲೆ ಬಾಳುವ ಸೀರೆ. ಈ ಬಗ್ಗೆ ಜನರಿಗೆ ಅವರು ಹದಿನೈದು ರೂಪಾಯಿ ಎಂದು ಹೇಳುತ್ತಿರುವುದನ್ನು ಕೇಳಬಹುದು. ಆದರೆ ಇದು ಸಾಧ್ಯವೇ ಇಲ್ಲ, ನಟಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಮೆಂಟ್​ ಮಾಡುತ್ತಿದ್ದಾರೆ. ಆದರೆ ನಟಿ ಸುಳ್ಳು ಹೇಳುತ್ತಿಲ್ಲ. ಈ ಸೀರೆಗೆ ನಿಜವಾಗಿಯೂ 15 ರೂಪಾಯಿಗಳೇ. ಇಷ್ಟು ಸುಂದರ ಹಾಗೂ ಬೆಲೆಬಾಳುವ ಸೀರೆಯಂತಿರುವ ಇದಕ್ಕೆ ಹದಿನೈದು ರೂಪಾಯಿ ಎಂದರೆ ಯಾರೂ ನಂಬಲು ಸಾಧ್ಯವಿಲ್ಲ ಅಲ್ಲವೆ?

'ಟಾಕ್ಸಿಕ್​' ಬಿಗ್​ ಟ್ವಿಸ್ಟ್​: ತಂಗಿಯಾಗಿ ಕರೀನಾ, ಯಶ್​ಗೆ ಜೋಡಿಯಾಗಲಿರೋ ಬಾಲಿವುಡ್​ ಬೆಡಗಿ ಇವರೇ ನೋಡಿ?

ಅಷ್ಟಕ್ಕೂ ನಟಿ ಸುಳ್ಳು ಹೇಳುತ್ತಿಲ್ಲ. ಇದಕ್ಕೆ ಕಾರಣ,  ಅದಾ ಶರ್ಮಾ ಧರಿಸಿದ್ದು ಅವರ  ಅಜ್ಜಿಯ ಸೀರೆ. ಇನ್‌ಸ್ಟಾಗ್ರಾಮ್ ಪುಟವೊಂದು ಹಂಚಿಕೊಂಡ ವೀಡಿಯೊದಲ್ಲಿ, ಅದಾ ಅವರು ತಮ್ಮ ಅಜ್ಜಿಯ ಸೀರೆ ಇದು ಎಂದು ಹೇಳುವುದನ್ನೂ ಕೇಳಬಹುದು.  ಕಪ್ಪು ಕುಪ್ಪಸದೊಂದಿಗೆ ಕಿತ್ತಳೆ ಬಣ್ಣದ ಚಿಫೋನ್ ಸೀರೆಯಲ್ಲಿ ನೀಲಿಬಣ್ಣದ ಟೋನ್ ಹೊಂದಿರುವ ಪಫ್ಡ್ ಸ್ಲೀವ್‌ಗಳನ್ನು ಹೊಂದಿರುವ ನಟಿ ಸುಂದರವಾಗಿ ಕಾಣುತ್ತಿದ್ದರು.  ಸೀರೆಯ ಬೆಲೆಯನ್ನು ಬಹಿರಂಗ ಪಡಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಅಷ್ಟಕ್ಕೂ ಅವರ ಅಜ್ಜಿಯ ಸಮಯದಲ್ಲಿ 15 ರೂಪಾಯಿ ಎಂದರೆ ಈಗಿನ ಸಾವಿರಾರು ರೂಪಾಯಿಗಳಿಗೆ ಸಮ ಅಲ್ವಾ? ಆದರೆ ಇದರ ಬಗ್ಗೆ ಅರಿಯದವರು ನಟಿಯ ವಿರುದ್ಧ ಸುಳ್ಳುಬುರುಕಿ ಎಂದು ಕಮೆಂಟ್​ ಹಾಕುತ್ತಿದ್ದಾರೆ. ವಿಡಿಯೋ ಅಪ್‌ಲೋಡ್ ಆದ ಕೂಡಲೇ ಅದು ವೈರಲ್ ಆಗಿದ್ದು, ನೆಟಿಜನ್‌ಗಳು ಕಮೆಂಟ್‌ಗಳ ವಿಭಾಗವನ್ನು ತುಂಬಿಸಿದ್ದಾರೆ. 15 ರೂಪಾಯಿ ಸೀರೆಗೆ ನಟಿ ಮೂರು ಸಾವಿರ ರೂಪಾಯಿ ಬ್ಲೌಸ್​ ಹೊಲಿಸಿದಂತಿದೆ ಎಂದು ತಮಾಷೆಯನ್ನೂ ಮಾಡಿದ್ದಾರೆ.

ಇನ್ನು ನಟಿಯ ಸಿನಿ ಜರ್ನಿ ಕುರಿತು ಹೇಳುವುದಾದರೆ, 10ನೇ ತರಗತಿಯಲ್ಲಿ ಇರುವಾಗಲೇ ಅದಾ ಶರ್ಮಾ ಅವರಿಗೆ ನಟಿಯಾಗುವ ಬಯಕೆ ಮೂಡಿತ್ತು. ಆದರೆ ಹೈಸ್ಕೂಲ್​ ಶಿಕ್ಷಣ ಮುಗಿಯುವ ತನಕ ಸಿನಿಮಾದಲ್ಲಿ ನಟಿಸಲು ಅವರ ಪೋಷಕರು ಅವಕಾಶ ನೀಡಲಿಲ್ಲ. ನಂತರ ಅವರು ಅನೇಕ ಸಿನಿಮಾಗಳಿಗೆ ಆಡಿಷನ್​ ನೀಡಲು ಶುರುಮಾಡಿದರು. ಅದಾ ಶರ್ಮಾ ಮೊದಲು ನಟಿಸಿದ್ದು ಹಿಂದಿಯ ‘1920’ ಸಿನಿಮಾದಲ್ಲಿ. 2014ರ ಬಳಿಕ ಅವರಿಗೆ ಬೇರೆ ಭಾಷೆಗಳಿಂದ ಅವಕಾಶಗಳು ಸಿಗಲು ಆರಂಭಿಸಿದವು. ನಟನೆ ಮಾತ್ರವಲ್ಲದೇ ಡ್ಯಾನ್ಸ್​ನಲ್ಲೂ ಅದಾ ಶರ್ಮಾ ಅವರಿಗೆ ಸಖತ್​ ಆಸಕ್ತಿ ಇದೆ. ಹಲವು ಡ್ಯಾನ್ಸ್ ಪ್ರಕಾರಗಳಲ್ಲಿ ಅವರು ತರಬೇತಿ ಪಡೆದಿದ್ದಾರೆ. ಕಥಕ್​, ಸಾಲ್ಸಾ, ಬೆಲ್ಲಿ ಡ್ಯಾನ್ಸ್​ ಮತ್ತು ಜಿಮ್ನಾಸ್ಟಿಕ್​ನಲ್ಲಿ ಅದಾ ಶರ್ಮಾ ಅವರು ಪಳಗಿದ್ದಾರೆ. ಅವರ ಡ್ಯಾನ್ಸ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅವಳ​ ತುಟಿ, ಕಣ್ಣು, ಮೂಗು... ಆಹಾ! ಮೃಣಾಲ್​ ಬ್ಯೂಟಿ ಹೊಗಳಿದ ವಿಜಯ್​ ದೇವರಕೊಂಡ: ರಶ್ಮಿಕಾ ಕಥೆ ಏನೆಂದ ಫ್ಯಾನ್ಸ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?