ಅವಳ​ ತುಟಿ, ಕಣ್ಣು, ಮೂಗು... ಆಹಾ! ಮೃಣಾಲ್​ ಬ್ಯೂಟಿ ಹೊಗಳಿದ ವಿಜಯ್​ ದೇವರಕೊಂಡ: ರಶ್ಮಿಕಾ ಕಥೆ ಏನೆಂದ ಫ್ಯಾನ್ಸ್​

By Suvarna News  |  First Published Apr 2, 2024, 6:08 PM IST

ನಟಿ ಮೃಣಾಲ್​ ಠಾಕೂರ್​ ಅವರ ಸೌಂದರ್ಯ, ನಟನೆಯ ಅದ್ಭುತ ವರ್ಣನೆ ಮಾಡಿದ್ದಾರೆ ವಿಜಯ್​ ದೇವರಕೊಂಡ. ರಶ್ಮಿಕಾ ಮಂದಣ್ಣ ಕಥೆ ಏನೆಂದು ಕೇಳಿದ ಫ್ಯಾನ್ಸ್​
 


ವಿಜಯ್ ದೇವರಕೊಂಡ ಅವರು ತಮ್ಮ ಹೊಸ ಚಿತ್ರ 'ಫ್ಯಾಮಿಲಿ ಸ್ಟಾರ್'ಗೆ ಸಜ್ಜಾಗುತ್ತಿದ್ದಾರೆ. ಫ್ಯಾಮಿಲಿ ಸ್ಟಾರ್ ತಂಡ ಸದ್ಯ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ತಮ್ಮ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಇದು ಕುಟುಂಬ ಸ್ನೇಹಿ ಚಿತ್ರ ಎನ್ನಲಾಗಿದ್ದು,   ತನ್ನ ಕುಟುಂಬವನ್ನು ರಕ್ಷಿಸಲು ಶ್ರಮಿಸುವ ನಾಯಕನ ಪಾತ್ರವನ್ನು ವಿಜಯ್​ ದೇವರಕೊಂಡ ನಿರ್ವಹಿಸಲಿದ್ದಾರೆ. ನಾಯಕಿಯಾಗಿ ಮೃಣಾಲ್​  ಠಾಕೂರ್​ ನಟಿಸುತ್ತಿದ್ದಾರೆ. ಈ ಕುರಿತು ಇದಾಗಲೇ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ತೊಡಗಿದೆ.  ನಿರ್ಮಾಪಕ ದಿಲ್ ರಾಜು, ತಮ್ಮ ಚಿತ್ರದ ಬಿಡುಗಡೆಯ ಯೋಜನೆ ಮತ್ತು ಇತರ ವಿವರಗಳನ್ನು ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.  ತಮಿಳುನಾಡಿನಲ್ಲಿ 250 ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದೊಂದು ಕ್ಲೀನ್ ಫ್ಯಾಮಿಲಿ ಎಂಟರ್‌ಟೈನರ್. ಯುವಕರು, ಮಾಸ್, ಕುಟುಂಬ, ಮಕ್ಕಳು, ಎಲ್ಲರೂ ಈ ಚಿತ್ರವನ್ನು ಆನಂದಿಸುತ್ತಾರೆ. ಚಿತ್ರದ ಅಂತಿಮ ರನ್‌ಟೈಮ್ 2 ಗಂಟೆ 40 ನಿಮಿಷಗಳು ಮತ್ತು ಚಿತ್ರದಲ್ಲಿ ಅಳವಡಿಸಲಾದ ಒಂದೆರಡು ಸಾಹಸ ದೃಶ್ಯಗಳಿಂದಾಗಿ ಫ್ಯಾಮಿಲಿ ಸ್ಟಾರ್ ಯು/ಎ ಪ್ರಮಾಣಪತ್ರವನ್ನು ಪಡೆದಿದೆ ಎಂದು ಹೇಳಿದ್ದರು.

ಇದೀಗ ನಟಿ ಮೃಣಾಲ್​ ಠಾಕೂರ್​ ಬಗ್ಗೆ, ನಟ ವಿಜಯ ದೇವರಕೊಂಡ ಆಡಿರುವ ಮಾತುಗಳ ಸೋಷಿಯಲ್​ ಮೀಡಿಯಾದಲ್ಲಿ ಹಂಗಾಮ ಸೃಷ್ಟಿಸುತ್ತಿದೆ. ಹಲವರು ನಟಿ ರಶ್ಮಿಕಾ ಮಂದಣ್ಣ ಅವರನ್ನು ಈ ವಿಷಯದಲ್ಲಿ ಎಳೆದು ತಂದು ಇಬ್ಬರ ಕಾಲೆಳೆಯುತ್ತಿದ್ದಾರೆ.  ಗಲಟ್ಟಾ ಪ್ಲಸ್‌ನೊಂದಿಗಿನ ನಡೆದ ಸಂದರ್ಶನದಲ್ಲಿ ವಿಜಯ್​ ದೇವರಕೊಂಡ ಅವರು,  ಮೃಣಾಲ್ ಠಾಕೂರ್ ಅವರನ್ನು ಸಾಕಷ್ಟು ಹೊಗಳಿದ್ದಾರೆ.   

Tap to resize

Latest Videos

ಪ್ರಶಸ್ತಿಯನ್ನೇ ಹರಾಜು ಮಾಡಿದ ವಿಜಯ್​ ದೇವರುಕೊಂಡ: ಅಷ್ಟಕ್ಕೂ ನಟ ಹೇಳಿದ್ದೇನು ಕೇಳಿ...

'ಫ್ಯಾಮಿಲಿ ಸ್ಟಾರ್' ಚಿತ್ರದಲ್ಲಿ ತಮ್ಮ ನಾಯಕಿ ಮೃಣಾಲ್ ಅವರೊಂದಿಗಿನ ತಮ್ಮ ಕೆಮಿಸ್ಟ್ರಿ ಬಗ್ಗೆ ಮಾತನಾಡಿದ ವಿಜಯ್, ಅವರಂತಹ ನಟಿಯ ಜೊತೆ ನಟಿಸುವುದು ಸುಲಭ ಎಂದು ಹೇಳಿದರು.  ನಾಯಕನ ಜೊತೆ  ಬುದ್ಧಿವಂತ ನಟಿ ಇದ್ದರೆ, ಕೆಲಸ ತುಂಬಾ ಸುಲಭವಾಗುತ್ತದೆ. ಇನ್ನು ಮೃಣಾಲ್​  ಕುರಿತು ಹೇಳುವುದೇ ಬೇಡ. ಈಕೆಯೊಬ್ಬ ಅದ್ಭುತ ನಟಿ. ನಾನು ಚಿತ್ರಗಳ ಕನಸು ಕಾಣುವ ಮೊದಲೇ ಮೃಣಾಲ್ ಅದನ್ನು ಈಕೆ ನಟಿಸಿ ಮುಗಿಸಿರುತ್ತಾಳೆ. ಚಿಕ್ಕ ವಯಸ್ಸಿನಿಂದಲೂ ಬಣ್ಣದ ಲೋಕದಲ್ಲಿ ಈಕೆ ಕೆಲಸ ಮಾಡುತ್ತಿರುವ ಕಾರಣ ಕಲೆ ಕರಗತವಾಗಿ ಬಂದಿದೆ ಎಂದು ಹೊಗಳಿದ್ದಾರೆ. ಇದೇ ವೇಳೆ, ನಟಿಯ ರೂಪದ ಬಗ್ಗೆಯೂ ಹೊಗಳಿಕೆ ಮಾತುಗಳನ್ನಾಡಿರುವ ವಿಜಯ್​ ಅವರು, ಈಕೆಗೆಸುಂದರ ರೂಪವಿದೆ. ಬಹುಮುಖ ಪ್ರತಿಭೆಯ  ಆಶೀರ್ವಾದ ಪಡೆದಿದ್ದಾಳೆ, ಜೊತೆಗೆ ರೂಪ ಕೂಡ.  ಅವಳು ಹೆಚ್ಚು ಏನು ಹೇಳದಿದ್ದರೂ, ನೀವು ಆಕೆಯ ಭಾವನೆಗಳನ್ನು ಅನುಭವಿಸಬಹುದು. ಅವಳ ಮೂಗು, ತುಟಿಗಳು ಮತ್ತು ಕಣ್ಣುಗಳು ಎಲ್ಲವೂ ಅದ್ಭುತ.  ಅವಳಿಗೆ ಭಾಷೆ ತಿಳಿದಿಲ್ಲದಿದ್ದರೂ ಸಹ ಭಾವನೆಗಳು ಚೆನ್ನಾಗಿ ಬರುತ್ತವೆ. ಅವಳೊಂದಿಗೆ ಕೆಲಸ ಮಾಡುವುದು ತುಂಬಾ ಸುಲಭ ಎಂದು ಹೊಗಳಿದ್ದಾರೆ. 

ಇದೇ ವೇಳೆ, ಚಿತ್ರನಿರ್ಮಾಪಕ ಪರಶುರಾಮ್‌ ಅವರನ್ನೂ ನಟ ಹೊಗಳಿದ್ದಾರೆ.  ಚಿತ್ರದ ನಿರ್ದೇಶಕ ಪರಶುರಾಮ್ ಅವರು ಸಂಭಾಷಣೆಯನ್ನು ಹೇಳುವ ಮತ್ತು ಸ್ವತಃ ವ್ಯಕ್ತಪಡಿಸುವ ರೀತಿ ಬಹಳ ವಿಶಿಷ್ಟವಾದ ಅಭಿರುಚಿಯನ್ನು ಹೊಂದಿದ್ದಾರೆ.  ಅಂದಹಾಗೆ, ಮೃಣಾಲ್ ಕೊನೆಯದಾಗಿ 'ಹಾಯ್ ನನ್ನ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು ಮತ್ತು 'ಪೂಜಾ ಮೇರಿ ಜಾನ್' ಕೂಡ ಬಿಡುಗಡೆಯಾಗಲಿದೆ.  ‘ಫ್ಯಾಮಿಲಿ ಸ್ಟಾರ್’ಗೆ ಸಂಬಂಧಿಸಿದಂತೆ ಹೇಳುವುದಾದರೆ, ಇದು ಏಪ್ರಿಲ್ 5 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಏತನ್ಮಧ್ಯೆ, ಕೊನೆಯದಾಗಿ ‘ಖುಶಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ವಿಜಯ್ ಅವರ ಬಳಿ ‘ವಿಡಿ 12’ ಇದೆ ಎಂದು ವರದಿಯಾಗಿದೆ ಆದರೆ ಅದು ಇನ್ನೂ ಪ್ರಕಟವಾಗಿಲ್ಲ. ಆದರೆ ನಟನ ಹೇಳಿಕೆ ಮಾತ್ರ ಸಕತ್​ ಸದ್ದು ಮಾಡುತ್ತಿದೆ. 

ರಶ್ಮಿಕಾ ಮಂದಣ್ಣ ಹುಟ್ಟುಹಬ್ಬಕ್ಕೆ ಬರುತ್ತಿದ್ದಾಳೆ 'ಗರ್ಲ್​ಫ್ರೆಂಡ್'​! ಯಾರಿವಳು... ಯಾರಿವಳು...?

click me!