ಅವರ ಜೊತೆ ಮಲಗಿದ್ರಷ್ಟೇ ಸಿನಿಮಾದಲ್ಲಿ ಫೇಮಸ್​ ಆಗೋದಂತೆ! ನಟಿ ನೋವಿನ ನುಡಿ

Published : Jun 06, 2023, 05:06 PM ISTUpdated : Jun 06, 2023, 05:07 PM IST
ಅವರ ಜೊತೆ ಮಲಗಿದ್ರಷ್ಟೇ ಸಿನಿಮಾದಲ್ಲಿ ಫೇಮಸ್​ ಆಗೋದಂತೆ!  ನಟಿ ನೋವಿನ ನುಡಿ

ಸಾರಾಂಶ

ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರೋ ನಟಿ ಆಶಾ ನೇಗಿ ಇಂಡಸ್ಟ್ರಿಯಲ್ಲಿರುವ ಕೆಟ್ಟ ಮನಸ್ಥಿತಿ ಕುರಿತು ಹೇಳಿದ್ದಾರೆ. ಅವರು ಹೇಳಿದ್ದೇನು?   

ನಟಿ ಆಶಾ ನೇಗಿ (Asha Negi) ಹಿಂದಿ ಧಾರಾವಾಹಿಗಳಲ್ಲಿ ಬಹಳ ಜನಪ್ರಿಯ ನಟಿ. ಹಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿರುವ ಈಕೆ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅದರಲ್ಲಿಯೂ ಅವರ ಪವಿತ್ರಾ ರಿಶ್ತಾ ಧಾರಾವಾಹಿ ಸಕತ್​ ಹಿಟ್​ ಆಗಿತ್ತು. ಇದರ ಬಳಿಕ ನಟಿ  ಸಾಕಷ್ಟು ಹೆಸರು ಗಳಿಸಿದರು. ಅದಾದ ಬಳಿಕ ಅವರು ಅನೇಕ ವೆಬ್-ಸೀರೀಸ್ ಮತ್ತು ರಿಯಾಲಿಟಿ ಶೋಗಳಲ್ಲಿ ನಟಿಸಿದ್ದಾರೆ. ಸಪ್ನೋನ್ ಸೆ ಭರೇ ನೈನಾ (2010), ಬಡೇ ಅಚ್ಚೆ ಲಗ್ತೆ ಹೈ, ಪವಿತ್ರ್​ ರಿಶ್ತಾ (Pavitra Rishtha), ಏಕ್ ಮುತ್ತಿ ಆಸ್ಮಾನ್ ಮತ್ತು ಕುಚ್ ತೋ ಹೈ ತೇರೆ ಮೇರೆ ದರ್ಮಿಯಾನ್‌ನಲ್ಲಿ  ಕಾಣಿಸಿಕೊಂಡಿದ್ದಾರೆ. ಅವರು ಹಾಟ್​ ಡ್ರೆಸ್​ಗಳಲ್ಲಿ ಫೋಟೋಶೂಟ್​ ಮಾಡಿಸಿಕೊಂಡು ಇತ್ತೀಚಿನ ದಿನಗಳಲ್ಲಿ ಚರ್ಚೆಯಲ್ಲಿ ಇದ್ದಾರೆ. ಈಚೆಗೆ ತಮ್ಮ  ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಟಾಪ್ ಲೆಸ್ ಫೋಟೋ ಶೇರ್ ಮಾಡಿಕೊಂಡಿದ್ದರು. ಇದು ಹಲವರ ನಿದ್ದೆಗೆಡಿಸಿದ್ದು ಇದೆ. ನೇಗಿ ತಮ್ಮ  ಕಾಲೇಜು ದಿನಗಳಲ್ಲಿ ಮಿಸ್ ಉತ್ತರಾಖಂಡ್ 2009 ಪ್ರಶಸ್ತಿಯನ್ನು ಗೆದ್ದ ನಂತರ 2009 ರಲ್ಲಿ ಮಾಡೆಲ್ ಆಗಿ  ವೃತ್ತಿಜೀವನವನ್ನು ಪ್ರಾರಂಭಿಸಿದವರು.  ವಿವಿಧ ಕಂಪೆನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.  ಅನೇಕ ಫೋಟೋ ಶೂಟ್‌ಗಳನ್ನು ಮಾಡಿದರು.  

ಇದೀಗ ನಟಿ ನೀಡಿರುವ ಹೇಳಿಕೆಯೊಂದು ಭಾರಿ ಹಲ್​ಚಲ್​ ಸೃಷ್ಟಿಸಿದೆ. ಅಷ್ಟಕ್ಕೂ ಬಣ್ಣದ ಪ್ರಪಂಚವೇ ಹಾಗೆ. ಹೆಣ್ಣೊಬ್ಬಳು ಯಶಸ್ಸು ಕಾಣಬೇಕು ಎಂದರೆ ಆಕೆ ಬೇರೆಯ ಮಾರ್ಗವನ್ನೇ ಅನುಸರಿಸಬೇಕು ಎಂದು ಇದಾಗಲೇ ಹಲವಾರು ನಟಿಯರು ತಮಗಾಗಿರುವ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಕಾಸ್ಟಿಂಗ್​ ಕೌಚ್​ ಕುರಿತು ಇದಾಗಲೇ ಹಲವಾರು ನಟಿಯರು ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ನಿರ್ಮಾಪಕ, ನಿರ್ದೇಶಕ (Director) ಸೇರಿದಂತೆ ಕೆಲ ನಟರು ತಮ್ಮನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಆಹ್ವಾನ ಇತ್ತ ಬಗ್ಗೆ ವಿವರಣೆ ನೀಡಿದ್ದಾರೆ. ಇದೀಗ ಅದೇ ರೀತಿಯ ಹೇಳಿಕೆಯೊಂದನ್ನು ನಟಿ ಆಶಾ ನೇಗಿ ಹೇಳಿದ್ದಾರೆ. 

ನಾಯಕ ಬಿಗಿದಪ್ಪಿ ಐದು ನಿಮಿಷ ಕಿಸ್​ ಮಾಡಿದ ಕರಾಳ ಅನುಭವ ಬಿಚ್ಚಿಟ್ಟ ನಟಿ ರೇಖಾ

ಆದರೆ ಇದು ಎಲ್ಲ ಸಲವೂ ಸರಿಯಾದುದಲ್ಲ. ಕೆಲವು ಹೆಣ್ಣುಮಕ್ಕಳು ಸಿನಿ ಕ್ಷೇತ್ರ ಅಥವಾ ಕಿರುತೆರೆಯಲ್ಲಿ ಯಶಸ್ವಿಯಾಗಲು ತಪ್ಪು ಹಾದಿ ಹಿಡಿದಿರಬಹುದು. ಕೆಲವರು ಇಂಥ ಆಫರ್​ಗಳನ್ನು ನಿರಾಕರಿಸಿರಬಹುದು. ಆದರೆ ಎಲ್ಲಾ ಯಶಸ್ವಿ ಹೆಣ್ಣುಮಕ್ಕಳೂ ಇದೇ ಹಾದಿ ಹಿಡಿಯುತ್ತಾರೆ ಎನ್ನುವುದು ಎಷ್ಟು ಸರಿಯಲ್ಲವೋ, ಬಣ್ಣದ ಲೋಕದಲ್ಲಿ ಯಶಸ್ವಿಯಾದ ನಟಿಯರನ್ನು (Actress) ನೋಡಿದಾಗ ಇವರೂ ಅಂಥವರೇ ಎಂದು ನಿರ್ಣಯಿಸಲಾಗುತ್ತದೆ ಎನ್ನುವ ನೋವಿನ ಮಾತನ್ನು ಆಶಾ ನೇಗಿ ಹೇಳಿದ್ದಾರೆ. ಟಿವಿ ಅಥವಾ ಬಾಲಿವುಡ್ ಆಗಿರಲಿ, ಜನರು ಮಹಿಳೆಯ ಯಶಸ್ಸನ್ನು ತ್ವರಿತವಾಗಿ ನಿರ್ಣಯಿಸಲು ಪ್ರಾರಂಭಿಸುತ್ತಾರೆ. ಈ ಯಶಸ್ಸನ್ನು ಸಾಧಿಸಲು ಆ ಮಹಿಳೆ ಎಷ್ಟು ಶ್ರಮಿಸಿದ್ದಾರೆಂದು ಯಾರೂ ತಿಳಿದುಕೊಳ್ಳಲು ಪ್ರಯತ್ನಿಸುವುದಿಲ್ಲ ಎನ್ನುವ ನೋವು ಆಶಾ ಅವರದ್ದು.

 ಇಂಡಸ್ಟ್ರಿಯಲ್ಲಿರುವ ಲೈಂಗಿಕತೆಯ ಬಗ್ಗೆ ಮಾತನಾಡಿರುವ ನಟಿ,  ಹುಡುಗಿ ಯಶಸ್ವಿಯಾದರೆ ಅವಳು ಯಾರೊಂದಿಗಾದರೂ ಮಲಗಿದ್ದಾಳೆ ಎಂದು ಜನರು ಭಾವಿಸುತ್ತಾರೆ ಎಂದಿದ್ದಾರೆ. ಇದು ಆಶಾ ನೇಗಿಯವರ ಹಳೆಯ ವಿಡಿಯೋ ಆಗಿದ್ದು, ಅದು ಪುನಃ ವೈರಲ್​ ಆಗಿದೆ.  ಈ ವೀಡಿಯೊದಲ್ಲಿ ಆಶಾ ನೇಗಿ ಪ್ರತಿ ಹುಡುಗಿ ಎದುರಿಸುತ್ತಿರುವ ಲಿಂಗಭೇದಭಾವದ ಬಗ್ಗೆ ಮಾತನಾಡುತ್ತಿರುವುದು ಕಂಡುಬರುತ್ತದೆ.  'ನಾನು ತುಂಬಾ ಪ್ರತಿಭಾವಂತಳಾಗಿದ್ದರೂ ತ್ವರಿತವಾಗಿ ಯಶಸ್ಸನ್ನು ಸಾಧಿಸುವ ಹುಡುಗಿ ಎಂದು ನಾನು ಭಾವಿಸುತ್ತೇನೆ, ಯಾವುದೇ ಸಂದರ್ಭದಲ್ಲಿ ನನ್ನ ಬಾಸ್ , ನಿರ್ದೇಶಕ ಅಥವಾ ನಿರ್ಮಾಪಕರೊಂದಿಗೆ ಮಲಗಿರಬೇಕು ಎನ್ನುವ ಸ್ಥಿತಿ ಬರಲಿಲ್ಲ. ಆದರೆ ಜನರು ಹಾಗೆ  ನಿರ್ಣಯಿಸಲು ಪ್ರಾರಂಭಿಸಿದರು. ಅದಕ್ಕಾಗಿಯೇ ನನಗೆ ಇಂಡಸ್ಟ್ರಿಯಲ್ಲಿ ಒಳ್ಳೆಯ ಸ್ಥಾನ ಸಿಕ್ಕಿದೆ ಎಂದು ಹೇಳುತ್ತಾರೆ. ಇದು ತುಂಬಾ ನೋವಾಗುತ್ತದೆ ಎಂದಿದ್ದಾರೆ.

Viral Vedio: ಫ್ಲರ್ಟ್​ ಮಾಡಲು ಬಂದ ಶಾರುಖ್​ಗೆ ವಯಸ್ಸಿನ ಅಂತರ ನೆನಪಿಸಿದ ​ದೀಪಿಕಾ

ರಿತೇಶ್ ದೇಶ್‌ಮುಖ್ (Retesh Deshmukh) ಮತ್ತು ಜೆನಿಲಿಯಾ ದೇಶ್‌ಮುಖ್ ನಡೆಸಿಕೊಟ್ಟ ಕಾರ್ಯಕ್ರಮವೊಂದರಲ್ಲಿ ಆಶಾ  ಮಾತನಾಡಿದ್ದಾರೆ.  ಸದ್ಯ ಆಶಾ ಅವರ ಕೆಲಸದ ಕುರಿತು ಹೇಳುವುದಾದರೆ, ಈಕೆ  ಬಾಲಿವುಡ್‌ನಲ್ಲಿ ಉತ್ತಮ ಪಾತ್ರವನ್ನು ಹುಡುಕುತ್ತಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?