ನಟ ಅಲ್ಲು ಅರ್ಜುನ್ ಒಂದು ದೊಡ್ಡ ಫಂಕ್ಷನ್‌ನಲ್ಲಿ ಮಾತನಾಡುತ್ತಿದ್ದರು. ಅಲ್ಲಿ ಸಾವಿರಾರು ವಿದ್ಯಾರ್ಥಿಗಳು ಇದ್ದಾರೆ. ಹಲವರು ಸಾಧಕರು, ಹಲವರು ಸಾಮಾನ್ಯ ಜನತೆ ಕೂಡ ಸೇರಿದ್ದರು. ನಟ ಅಲ್ಲು ಅರ್ಜುನ್ ಮಾತನಾಡುತ್ತಿದ್ದರೆ ಅಲ್ಲಿ ಶಿಳ್ಳೆ, ಚಪ್ಪಾಳೆಗಳ ಸಾಗರ ಸಂಗಮವೇ ನಡೆದಿತ್ತು. ಅಲ್ಲಿ ಸೇರಿದ್ದವರು ನಟ ಅಲ್ಲು ಅರ್ಜುನ್‌ರ ಒಂದೊಂದು ಮಾತಿಗೂ ತಲೆದೂಗಿ ಕಿರುಚುತ್ತಿದ್ದರು.
ತೆಲುಗು ಚಿತ್ರರಂಗದ ಸ್ಟಾರ್ ನಟ ಅಲ್ಲು ಅರ್ಜುನ್ ಅವರು ತಮ್ಮ ಜೀವನದ ಒಂದು ಮಹಾದೊಡ್ಡ ಸೀಕ್ರೆಟ್ ಅನ್ನು ಬಹಿರಂಗ ಮಾಡಿದ್ದಾರೆ. 'ನಾನು ಸ್ಕೂಲ್ ಟೈಮ್‌ನಲ್ಲಿ ತುಂಬಾ ಕೆಟ್ಟ ಸ್ಟೂಡೆಂಟ್ ಆಗಿದ್ದೆ. ನನಗೆ ವಿದ್ಯಾಭ್ಯಾಸದಲ್ಲಿ ಯಾವುದೇ ಆಸಕ್ತಿ ಇರಲಿಲ್ಲ. ನಾನು ಕೊನೆಯ ಬೇಂಚ್ ಸ್ಟೂಡೆಂಟ್ ಆಗಿದ್ದೆ, ಜತೆಗೆ ಲಾಸ್ಟ್ ಕಡೆಯಿಂದ ನಾನು ಮೊದಲನೇ ಅಥವಾ ಎರಡನೆಯ ಸ್ಥಾನ ಪಡೆಯುತ್ತಿದ್ದೆ. ನಾನು ಯಾವತ್ತೂ ಒಳ್ಳೆಯ ಸ್ಟೂಡೆಂಟ್ ಆಗಿರಲೇ ಇಲ್ಲ. ನನಗೆ ವಿದ್ಯಾಭ್ಯಾಸ ತಲೆಗೇ ಹತ್ತುತ್ತಿರಲಿಲ್ಲ. ಆದರೆ, ನಾನು ಕಲ್ಚರಲ್ ಆ್ಯಕ್ಟಿವಿಟೀಸ್‌ನಲ್ಲಿ ಯಾವತ್ತೂ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಇರುತ್ತಿದ್ದೆ' ಎಂದಿದ್ದಾರೆ.
ನಟ ಅಲ್ಲು ಅರ್ಜುನ್ ಒಂದು ದೊಡ್ಡ ಫಂಕ್ಷನ್‌ನಲ್ಲಿ ಮಾತನಾಡುತ್ತಿದ್ದರು. ಅಲ್ಲಿ ಸಾವಿರಾರು ವಿದ್ಯಾರ್ಥಿಗಳು ಇದ್ದಾರೆ. ಹಲವರು ಸಾಧಕರು, ಹಲವರು ಸಾಮಾನ್ಯ ಜನತೆ ಕೂಡ ಸೇರಿದ್ದರು. ನಟ ಅಲ್ಲು ಅರ್ಜುನ್ ಮಾತನಾಡುತ್ತಿದ್ದರೆ ಅಲ್ಲಿ ಶಿಳ್ಳೆ, ಚಪ್ಪಾಳೆಗಳ ಸಾಗರ ಸಂಗಮವೇ ನಡೆದಿತ್ತು. ಅಲ್ಲಿ ಸೇರಿದ್ದವರು ನಟ ಅಲ್ಲು ಅರ್ಜುನ್‌ರ ಒಂದೊಂದು ಮಾತಿಗೂ ತಲೆದೂಗಿ ಕಿರುಚುತ್ತಿದ್ದರು. ಆದರೆ, ಟನ ಅಲ್ಲು ಅರ್ಜುನ್ ಮಾತ್ರ ಎಂದಿನ ತಮ್ಮ ಸ್ಮೈಲ್ ಮೂಡ್‌ನಲ್ಲೇ ಮಾತನಾಡುತ್ತಿದ್ದರು. ನಟ ಅಲ್ಲು ಅರ್ಜುನ್ ಮಾತು ಅಲ್ಲಿ ಎಲ್ಲರಿಗೂ ಸ್ಪೂರ್ತಿ ನೀಡುವಂತಿತ್ತು.
ಹುಡುಗನೊಬ್ಬ ನನ್ನ ಜೀನ್ಸ್ ಪ್ಯಾಂಟ್ ಕದ್ಬಿಟ್ಟ; ಇನ್ಮುಂದೆ ಅದೆಲ್ಲ ಹಾಕ್ಬೇಡ ಅಂದ್ಬಿಟ್ಟ ನನ್ನಪ್ಪ: ಪ್ರಿಯಾಂಕಾ ಚೋಪ್ರಾ
ನಟ ಅಲ್ಲು ಅರ್ಜುನ್ ತಮಗೆ ತಿಳಿದಂತೆ ಒಂದು ಸೀಕ್ರೆಟ್ ಹೇಳಿದ್ದಾರೆ. 'ಯಾರು ಸ್ಟಡೀಸ್‌ನಲ್ಲಿ ತುಂಬಾ ಹಿಂದೆ ಇರುತ್ತಾರೋ, ಯಾರು ಲಾಸ್ಟ್ ಬೇಂಚ್ ಸ್ಟೂಡೆಂಟ್ ಅಗಿರುತ್ತಾರೋ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಪ್ರತಿಭಾ ಪ್ರದರ್ಶನಗಳಲ್ಲಿ ತುಂಬಾ ಮುಂದೆ ಇರುತ್ತಾರೆ. ನಾನು ಯಾವತ್ತೂ ಕಲ್ಚರಲ್ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ, ನನಗೆ ಭಾಗಿಯಾದರೆ ಸಾಕು, ಬಹುಮಾನ ಗ್ಯಾರಂಟಿ ಬರುತ್ತಿತ್ತು. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ, ಆದರೆ ಅದು ಪ್ರದರ್ಶನಗೊಳ್ಳಬೇಕು, ಅದಕ್ಕೆ ಪೂರಕವಾದ ಅವಕಾಶ, ಪ್ರೋತ್ಸಾಹ ಸಿಗಬೇಕು' ಎಂದಿದ್ದಾರೆ.
ಬೇರೆಯವರು ಏನು ಮಾಡುತ್ತಾರೆ ಎಂಬ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಳ್ಳಬೇಡಿ; ಯುವಜನತೆಗೆ ನಟ ಶಾರುಖ್ ಟಿಪ್ಸ್
ಅಂದಹಾಗೆ, ಟಾಲಿವುಡ್ ಸೂಪರ್ ಸ್ಟಾರ್ ನಟ ಅಲ್ಲು ಅರ್ಜುನ್ ಅವರು ಈಗ ಮುಂಬರುವ 'ಪುಷ್ಪಾ 2' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಕನ್ನಡ ಮೂಲದ ನಟಿ, ನ್ಯಾಷನಲ್ ಕೃಷ್ ಖ್ಯಾತಿಯ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಭಾರೀ ನಿರೀಕ್ಷೆ ಮೂಡಿಸಿದೆ. ಈ ಮೊದಲು ತೆರೆಗೆ ಬಂದಿದ್ದ 'ಪುಷ್ಪಾ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೂಪರ್ ಹಿಟ್ ದಾಖಲಿಸಿ ಸಖತ್ ಸದ್ದು-ಸುದ್ದಿ ಮಾಡಿತ್ತು. ಈ ಮೂಲಕ ಮುಂಬರುವ 'ಪುಷ್ಪಾ 2' ಚಿತ್ರದ ಬಗ್ಗೆಯೂ ಭಾರೀ ನಿರೀಕ್ಷೆ ಮೂಡಲು ಕಾರಣವಾಗಿದೆ.
ಬಿಗ್‌ಬಾಸ್ ಮನೆಯಲ್ಲಿ ರಸಪ್ರಶ್ನೆ ಕಾರ್ಯಕ್ರಮ; ನವೆಂಬರ್ 14 ಎಂದು ಕಿರುಚಿದ ಅವಿನಾಶ್ ಶೆಟ್ಟಿಗೆ ಮುಖಭಂಗ!