ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರಕ್ಕೆ ಎ ಸರ್ಟಿಫಿಕೇಟ್ ದೊರೆತಿದ್ದರೂ ಕೆಲವೊಂದು ದೃಶ್ಯಗಳಿಗೆ ಕತ್ತರಿ ಹಾಕಲು ಆದೇಶಿಸಲಾಗಿದೆ.
ಬಾಲಿವುಡ್ನ ಬಹು ನಿರೀಕ್ಷಿತ ಅನಿಮಲ್ ಚಿತ್ರ ಬಿಡುಗಡೆಗೆ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಬರುವ ಡಿಸೆಂಬರ್ 1ರಂದು ಚಿತ್ರ ಬಿಡುಗಡೆಯಾಗಲಿದೆ. ಇದರ ಟ್ರೇಲರ್ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದು ಸಕತ್ ಸದ್ದು ಮಾಡುತ್ತಿದೆ. ಬಾಲಿವುಡ್ನಲ್ಲಿ ಇತ್ತೀಚಿನ ದಿನಗಳಲ್ಲಿ ಸಕತ್ ಸದ್ದು ಮಾಡುತ್ತಿರುವ ಚಿತ್ರಗಳೆಂದರೆ ಶಾರುಖ್ ಖಾನ್ ಅವರ ಜವಾನ್. ಈ ಚಿತ್ರವು 1100 ಕೋಟಿಗೂ ಅಧಿಕ ಗಳಿಕೆ ಮಾಡಿ ಮಕಾಡೆ ಮಲಗಿದ್ದ ಬಾಲಿವುಡ್ಗೆ ಜೀವ ತುಂಬಿಸಿದೆ. ಇದಕ್ಕೂ ಮೊದಲು ಪಠಾಣ್ ಕೂಡ ಇದೇ ರೀತಿ ಭರ್ಜರಿ ಯಶಸ್ಸು ಗಳಿಸಿದ್ದರೆ, ಕಳೆದ ವರ್ಷ ಬಿಡುಗಡೆಯಾಗಿದ್ದ ಬ್ರಹ್ಮಾಸ್ತ್ರ ಚಿತ್ರವೂ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿತ್ತು. ಜಗತ್ತಿನಾದ್ಯಂತ ಬ್ರಹ್ಮಾಸ್ತ್ರ ಚಿತ್ರವು 418 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದೀಗ ಈ ಚಿತ್ರಗಳ ದಾಖಲೆಗಳನ್ನು ಉಡೀಸ್ ಮಾಡಿದೆ ಅನಿಮಲ್ ಚಿತ್ರ. ರಣಬೀರ್ ಕಪೂರ್ (Ranbir Kapoor) ಜೊತೆ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್ (Animal) ಚಿತ್ರ ಬಿಡುಗಡೆಗೂ ಮುನ್ನವೇ ಜವಾನ್ ಮತ್ತು ಬ್ರಹ್ಮಾಸ್ತ್ರದ ದಾಖಲೆಗಳನ್ನು ಮುರಿದು ಹಾಕಿದೆ. ಉತ್ತರ ಅಮೆರಿಕದಲ್ಲಿ 888 ಪರದೆಗಳಲ್ಲಿ ರಿಲೀಸ್ ಆಗುತ್ತಿದ್ದು, ಇಲ್ಲಿಯ ಸ್ಕ್ರೀನಿಂಗ್ಗೆ ಸಂಬಂಧಿಸಿದಂತೆ ಅನಿಮಲ್ ದಾಖಲೆ ಬರೆದಿದೆ.
ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹಾಗೂ ರಶ್ಮಿಕಾ ತೆಲುಗಿನಲ್ಲಿ ಫೆಮಿಲಿಯರ್ ಆಗಿರುವುದರಿಂದ ತೆಲುಗಿನಲ್ಲಿ ತಮಿಳಿಗಿಂತ ಅಧಿಕ ಟಿಕೆಟ್ ಸೇಲ್ ಆಗಿದೆ. ಹಿಂದಿಯಲ್ಲಿಯೂ ಒಳ್ಳೆಯ ರೀತಿಯಲ್ಲಿ ಟಿಕೆಟ್ ಮಾರಾಟವಾಗಿದೆ. ಪ್ಯಾನ್ ಇಂಡಿಯಾ ಸಿನಿಮಾವನ್ನು ಕಬೀರ್ ಸಿಂಗ್ ಹಾಗೂ ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್, ತೃಪ್ತಿ ದಿಮ್ರಿಯೂ ನಟಿಸಿದ್ದಾರೆ. ಭೂಷಣ್ ಕುಮಾರ್ ಹಾಗೂ ಕೃಷ್ಣ ಕುಮಾರ್ ಅವರ ಟಿ ಸಿರೀಸ್ ಈ ಸಿನಿಮಾವನ್ನು ನಿರ್ಮಿಸಿದೆ. ಸಿನಿಮಾ ಹಿಂದಿ, ತಮಿಳು, ಕನ್ನಡ, ಮಲಯಾಳದಲ್ಲಿ ರಿಲೀಸ್ ಆಗಲಿದೆ.
ಆದರೆ ಇವೆಲ್ಲವುಗಳ ನಡುವೆಯೇ ಅನಿಮಲ್ ಚಿತ್ರವನ್ನು ನೋಡಲು ಕಾತರರಾದವರಿಗೆ ಬಿಗ್ ಶಾಕ್ ಎದುರಾಗಿದೆ. ಇತ್ತೀಚೆಗೆ ಚಿತ್ರದ ಹಾಡೊಂದು ಬಿಡುಗಡೆಯಾದ ದಿನ ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ಅವರ ಲಿಪ್ಲಾಕ್ ಸೀನ್ ಸಾಕಷ್ಟು ಹಲ್ಚಲ್ ಸೃಷ್ಟಿಸಿರುವುದು ಗೊತ್ತೇ ಇದೆ. ವಿಮಾನವೊಂದರಲ್ಲಿ ರಶ್ಮಿಕಾ ಮಂದಣ್ಣ, ಆಲಿಯಾ ಕಪೂರ್ ಪತಿ ರಣಬೀರ್ ಜೊತೆ ದೀರ್ಘ ಲಿಪ್ಲಾಕ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು, ಈಗಲೂ ಅದು ಸಾಕಷ್ಟು ವೈರಲ್ ಆಗುತ್ತಲೇ ಇದೆ. ಇವರಿಬ್ಬರ ಈ ಸುದೀರ್ಘ ಚುಂಬನ ನೋಡಿ ಫ್ಯಾನ್ಸ್ ಉಫ್ ಎಂದಿದ್ದರು. ಆದರೆ ಇಂಥ ದೃಶ್ಯಗಳು ಚಿತ್ರಗಳಲ್ಲಿ ಹೇರಳವಾಗಿರುವ ಕಾರಣ ಎಲ್ಲಾ ದೃಶ್ಯಗಳನ್ನೂ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಕಟ್ ಮಾಡುವಂತೆ ಆದೇಶಿಸಿದೆ. ಈ ಚಿತ್ರದಲ್ಲಿ ಇಂಟಿಮೇಟ್ ಸೀನ್ ಹೇರಳವಾಗಿರುವ ಕಾರಣ, ಅಡಲ್ಟ್ ಸರ್ಟಿಫಿಕೇಟ್ (A Certificate) ನೀಡಲಾಗಿದ್ದರೂ, ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಮಂಡಳಿ ನಿರ್ದೇಶಿಸಿದೆ. ಇಂಥ ಸೀನ್ಗಳನ್ನು ನೋಡಲು ಕಾತರರಾಗಿದ್ದ ರಣಬೀರ್-ರಶ್ಮಿಕಾ ಫ್ಯಾನ್ಸ್ಗೆ ಬಹಳ ನಿರಾಸೆಯಾಗಿದೆ.
ಅನಿಮಲ್ ಟ್ರೇಲರ್ ಬಿಡುಗಡೆ: ಲಿಪ್ಲಾಕ್ ರಶ್ಮಿಕಾಳ ಸೆಕ್ಸಿಸಂ ಕುರಿತು ಪ್ರಶ್ನೆ ಮಾಡ್ತಿದ್ದಾರೆ ನೆಟ್ಟಿಗರು!
ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅವರ ಕ್ಲೋಸ್-ಅಪ್ ಶಾಟ್ಗಳನ್ನು ಕಟ್ ಮಾಡುವಂತೆ ಆದೇಶಿಸಲಾಗಿದೆ. ಹುವಾ ಮೈನ್ ಹಾಡನ್ನು ನೋಡಿದ ಪ್ರೇಕ್ಷಕರು ಕೂಡ ಚಿತ್ರದಲ್ಲಿ ರೊಮ್ಯಾಂಟಿಕ್ ಸೀನ್ ಕೊಂಚ ಹೆಚ್ಚಾಗಿಯೇ ಇರಲಿದೆ ಎಂದು ಭಾವಿಸಿದ್ದರು. ಸೆನ್ಸಾರ್ ಮಂಡಳಿಯು ಹಿಂದಿ ಪದವಾದ ವಸ್ತ್ರ ಪದವನ್ನು ಬದಲಿಸುವಂತೆ ಕೂಡ ಸೂಚನೆ ನೀಡಿದೆ. ಬಾಲಿವುಡ್ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹವಣಿಸುತ್ತಿರುವ ನಟಿ ರಶ್ಮಿಕಾ, ಬೋಲ್ಡ್ ಪಾತ್ರಗಳಲ್ಲಿಯೂ ಹಿಂದೆ ಬಿದ್ದಿಲ್ಲ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಉದಾಹರಣೆಯೇ ಈ ಪರಿಯ ರೊಮ್ಯಾನ್ಸ್ ದೃಶ್ಯ. ಹುವಾ ಮೈನ ಹಾಡಿನಲ್ಲಿ ಪ್ರೈವೇಟ್ ಜೆಟ್ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ಅವರ ರೊಮ್ಯಾನ್ಸ್ ಹೇರಳವಾಗಿ ನೋಡಬಹುದಾಗಿತ್ತು. ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ನಡುವೆ ಕುಚ್ ಕುಚ್ ನಡೆಯುತ್ತಿದೆ, ಇಬ್ಬರೂ ಸೇರಿ ಟರ್ಕಿಯಲ್ಲಿ ಎಂಜಾಯ್ ಮಾಡಿದ್ದಾರೆ ಎಂಬೆಲ್ಲಾ ಫೋಟೋಗಳು, ಗಾಸಿಪ್ಗಳು ಹರಿದಾಡುತ್ತಿರುವ ನಡುವೆಯೇ ರಣಬೀರ್ ಕಪೂರ್ ಜೊತೆಗಿನ ಈ ದೃಶ್ಯ ಕಂಡು ಫ್ಯಾನ್ಸ್ ಸುಸ್ತಾಗಿದ್ದರು.
ಬಿಡುಗಡೆಗೂ ಮುನ್ನವೇ ಜವಾನ್, ಬ್ರಹ್ಮಾಸ್ತ್ರದ ದಾಖಲೆ ಮುರಿದ ಅನಿಮಲ್ ಚಿತ್ರ!