ನಟಿ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕಾದ ಪಾಪ್ ಸಿಂಗರ್ ನಿಕ್ ಜೊನಾಸ್ ಅವರನ್ನು ಮದುವೆಯಾಗಿ ಈಗ ಅಮೆರಿಕಾದಲ್ಲಿಯೇ ವಾಸವಾಗಿದ್ದಾರೆ. ಅವರೀಗ ಹಾಲಿವುಡ್ ಸಿನಿಮಾ, ವೆಬ್ ಸಿರೀಸ್‌ಗಳಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವಾರು ಸಂದರ್ಶನಗಳಲ್ಲಿ ಮಾತನಾಡುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ, ಭಾರತ ಹಾಗೂ ಇಲ್ಲಿನ ಸಿನಿಮಾಗಳ ಬಗ್ಗೆ ಮಾತನಾಡುತ್ತಿರುತ್ತಾರೆ.
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಬಾಲ್ಯದಲ್ಲಿ ನಡೆದ ಹಲವು ಘಟನೆಗಳ ಬಗ್ಗೆ ಹಾಲಿವುಡ್ ಸಂದರ್ಶಕರ ಬಳಿ ಹೇಳಿಕೊಂಡಿದ್ದಾರೆ. 'ನಾನು ಹದಿಹರೆಯದಲ್ಲಿ ಇದ್ದಾಗ ಕೆಲವು ಹುಡುಗರ ನನ್ನನ್ನು ಫಾಲೋ ಮಾಡಿಕೊಂಡು ಬರುತ್ತಿದ್ದರು. ಅವರಲ್ಲಿ ಒಬ್ಬ ನಮ್ಮ ಮನೆಯ ಬಾಲ್ಕನಿಗೆ ಹಾರಿ ಬಂದು ನನ್ನ ಡ್ರೆಸ್‌ಗಳನ್ನು ಕದ್ದುಕೊಂಡು ಹೋಗಿಬಿಟ್ಟಿದ್ದ. ಅದನ್ನು ನೋಡಿ ನಮ್ಮಪ್ಪ ತುಂಬಾ ಕೂಗಾಡಿಬಿಟ್ಟಿದ್ದರು. 'ಇನ್ನು ಮುಂದೆ ನೀನು ಭಾರತೀಯ ಡ್ರೆಸ್‌ಗಳನ್ನು ಮಾತ್ರ ಹಾಕಿಕೋ. ಮಾಡರ್ನ್ ಡ್ರೆಸ್ ಹಾಕುವುದರಿಂದಲೇ ಹುಡುಗರು ಹಾಗೆ ಆಡುತ್ತಿದ್ದಾರೆ, ನಿನ್ನ ಬಟ್ಟೆಗಳನ್ನು ಕೂಡ ಬಿಡುತ್ತಿಲ್ಲ' ಎಂದು ಹೇಳಿದ್ದರು.
ನನಗೆ ಚಿಕ್ಕಂದಿನಿಂದಲೂ ನನ್ನ ಬಗ್ಗೆ, ನನ್ನ ಲುಕ್ ಬಗ್ಗೆ ತುಂಬಾ ಕೀಳರಿಮೆ ಇತ್ತು. ನಾನು ಸಾಧ್ಯವಾದಷ್ಟೂ ಗುಂಪಿನಿಂದ ದೂರ ಇರುತ್ತಿದ್ದೆ. ಜನರ ಜತೆ ಬೆರೆಯುವುದನ್ನು ಆದಷ್ಟೂ ತಪ್ಪಿಸಿಕೊಳ್ಳುತ್ತಿದ್ದೆ. ಆದರೆ ನನ್ನ ಅಮ್ಮನಿಗೆ ನನ್ನ ಕೀಳರಿಮೆ ಸ್ವಭಾವದ ಬಗ್ಗೆ ತುಂಬಾ ಅಸಮಾಧಾನವಿತ್ತು. ನಾನು ಅದರಿಂದ ಹೊರಗೆ ಬರಲೇಬೇಕೆಂದು ಪಣತೊಟ್ಟ ನನ್ನ ಅಮ್ಮ ನನ್ನನ್ನು ಬ್ಯೂಟಿ ಪಾರ್ಲರಿಗೆ ಸೇರಿಸಿದ್ದರು. ಅಲ್ಲಿ ನನಗೆ ಹಲವು ಬ್ಯೂಟಿ ಟಿಪ್ಸ್ ಹೇಳಿಕೊಡಲಾಯಿತು. ನನಗೆ ಕಾಲಕ್ರಮೇಣ ನಾನು ನನ್ನ ಬಗ್ಗೆ ಕೆಟ್ಟದಾಗಿ ಯೋಚಿಸುವುದನ್ನು, ಚಿಂತಿಸುವುದನ್ನು ಬಿಟ್ಟುಬಿಟ್ಟೆ.
ಬೆಳಗಾದರೆ ಭಯವಾಗುತ್ತಿತ್ತು, ದಿನವನ್ನು ಎದುರಿಸಬೇಕಲ್ಲ ಎಂದು ಚಿಂತಿಸುತ್ತಿದ್ದೆ; ದೀಪಿಕಾ ಪಡುಕೋಣೆ
ಬಳಿಕ ನಾನು ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಬಹುಮಾನ ಪಡೆದುಕೊಂಡೆ. ನನಗೆ ನನ್ನ ಮುಖ ಹಾಗೂ ದೇಹದ ಬಗ್ಗೆ ಅಸಮಾಧಾನ ಹೊರಟೇಹೋಯ್ತು. ಅಷ್ಟೇ ಅಲ್ಲ, ನನಗೆ ನನ್ನ ವ್ಯಕ್ತಿತ್ವದ ಬಗ್ಗೆಯೂ ಹೆಮ್ಮೆ ಮೂಡಿತು. ಆ ಬಳಿಕ ನಾನು ಯಾವತ್ತೂ ನನ್ನ ಸೌಂದರ್ಯದ ಬಗ್ಗೆ, ವ್ಯಕ್ತಿತ್ವದ ಬಗ್ಗೆ ಕೀಳಾಗಿ ಯೋಚಿಸಲೇ ಇಲ್ಲ. ನಾನು ನಾನಾಗಿರಲು, ನನ್ನ ಸೌಂದರ್ಯ ಹೇಗೇ ಇರಲಿ ಅದು ನನ್ನದು ಎಂಬ ಭಾವದಲ್ಲಿ ಬೆಳೆಯುತ್ತಾ ಹೋದೆ. ಅಂದಿನಿಂದ ಇಂದಿನವರೆಗೂ ನನಗೆ ನನ್ನ ಬಗ್ಗೆ ಯಾವುದೇ ಕೊರಗಿಲ್ಲ. ನಾನು ಏನಾಗಿದ್ದೆನೋ ಅದರ ಬಗ್ಗೆ ಹೆಮ್ಮೆಯಿದೆ, ಸಮತೋಷವಿದೆ, ಏನಾಗಿಲ್ಲವೋ ಆ ಬಗ್ಗೆ ಯಾವುದೇ ಬೇಸರವೂ ಇಲ್ಲ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.
ಬೇರೆಯವರು ಏನು ಮಾಡುತ್ತಾರೆ ಎಂಬ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಳ್ಳಬೇಡಿ; ಯುವಜನತೆಗೆ ನಟ ಶಾರುಖ್ ಟಿಪ್ಟ್
ಅಂದಹಾಗೆ, ನಟಿ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕಾದ ಪಾಪ್ ಸಿಂಗರ್ ನಿಕ್ ಜೊನಾಸ್ ಅವರನ್ನು ಮದುವೆಯಾಗಿ ಈಗ ಅಮೆರಿಕಾದಲ್ಲಿಯೇ ವಾಸವಾಗಿದ್ದಾರೆ. ಅವರೀಗ ಹಾಲಿವುಡ್ ಸಿನಿಮಾ, ವೆಬ್ ಸಿರೀಸ್‌ಗಳಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವಾರು ಸಂದರ್ಶನಗಳಲ್ಲಿ ಮಾತನಾಡುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ, ಭಾರತ ಹಾಗೂ ಇಲ್ಲಿನ ಸಿನಿಮಾಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ತಮ್ಮ ಬಾಲ್ಯ, ಯೌವನ ಹಾಗೂ ಕೆರಿಯರ್ ಅನುಭವಗಳು ಮತ್ತು ಸಂಗತಿಗಳ ಬಗ್ಗೆ ಹೇಳಿಕೊಂಡು ಹಗುರಾಗುತ್ತಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಭಾಗಿಯಾಗುತ್ತಾರೆ. ಒಟ್ಟಿನಲ್ಲಿ, ನಟಿ ಪ್ರಿಯಾಂಕಾ ಮದುವೆ ಬಳಿಕವೂ ಆಕ್ಟಿವ್ ಆಗಿದ್ದಾರೆ.