
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ತನಿಖೆ ಸಂಬಂಧ ಬಿಹಾರ ಮತ್ತು ಮುಂಬೈ ಪೊಲೀಸ್ ನಡುವೆ ಶೀತಲ ಸಮರ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಜು.29ರಂದು ನಟಿ ರಿಯಾ ಚಕ್ರವರ್ತಿ ಸುಶಾಂತ್ ಸಾವಿನ ಪ್ರಕರಣ ತನಿಖೆಯನ್ನು ಮುಂಬೈ ಪೊಲೀಸರಿಗೆ ಒಪ್ಪಿಸಬೇಕೆಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಆದೇಶ ನೀಡಿದೆ.
ಸುಶಾಂತ್ ಸಾವಿನ ತನಿಖೆಗೆ ಬಂದ IPS ಅಧಿಕಾರಿಗೆ ಕ್ವಾರೆಂಟೈನ್..!
ಸುಶಾಂತ್‌ಗೆ ಸಾವಿಗೆ ಸಂಬಂಧಿಸಿ ಪಟ್ನಾ ಪೊಲೀಸ್ ಠಾಣೆಯಲ್ಲಿ ನಟಿ ರಿಯಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಸುಶಾಂತ್ ತಂದೆ ಈ ಎಫ್‌ಐಆರ್ ದಾಖಲಿಸಿದ್ದರು. ಈ ಘಟನೆ ಬೆನ್ನಲ್ಲೇ ರಿಯಾ ಲಾಯರ್ ಸತೀಶ್ ಮನೃಶಿಂಧೆ ರಿಯಾ ಪರವಾಗಿ ಅರ್ಜಿ ಸಲ್ಲಿಸಿದ್ದರು.
ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂಬ ಒತ್ತಾಯಗಳು ಕೆಳಿ ಬಂದ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶ್‌ಮುಖ್, ಮುಂಬೈ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಈ ಸಂದರ್ಭ ಪ್ರಕರಣವನ್ನು ಸಿಬಿಐ ತನಿಖಗೆ ಒಪ್ಪಿಸುವುದಿಲ್ಲ ಎಂದಿದ್ದರು. ಈ ಹಿಂದೆ ರಿಯಾ ಅವರು ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಕೇಳಿಕೊಂಡಿದ್ದರು.
ಮಾಧ್ಯಮಗಳಿಂದ ಬೇಜಾರಾಗಿ ಆತ್ಮಹತ್ಯೆಗೆ ಶರಣಾದ್ರಾ ಸುಶಾಂತ್..! ಅಂಕಿತಾ ಹೇಳಿದ್ದಿಷ್ಟು..!
ಇದೀಗ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದು, ಸುಶಾಂತ್ ಸಾವಿನ ಪ್ರಕರಣ ಸಿಬಿಐಗೆ ವರ್ಗಾಯಿಸಲಾಗಿದೆ ಎಂದು ಸುಪ್ರೀಂಗೆ ತಿಳಿಸಲಾಗಿದೆ ಎಂದು ಬರೆದಿದ್ದಾರೆ. ಸಂಪುರ್ನ ಘಟನೆ ಮುಂಬೈನಲ್ಲಿ ಆಗಿದೆ. ಘಟನೆ ನಡೆದ ಕೂಡಲೇ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ 56 ಜನರನ್ನು ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ. ಹಾಗಾಗಿ ತನಿಖೆ ನಡೆಸುವ ಜವಾಬ್ದಾರಿ ಮುಂಬೈ ಪೊಲೀಸರ ಮೇಲಿದೆ ಎಂದು ರಿಯಾ ಲಾಯರ್ ಶಾಮ್ ದಿವಾನ್ ಹೇಳಿದ್ದಾರೆ.
ನೋವಿಲ್ಲದೆ ಸಾಯೋದು ಹೇಗಂತ ಗೂಗಲ್ ಮಾಡಿದ್ದ 'ದಿಲ್ ಬೆಚಾರ' ನಟ ಸುಶಾಂತ್..!
ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಆದರೆ ಬಹಳಷ್ಟು ಸಾಕ್ಷ್ಯಾಧಾರಗಳನ್ನು ಅಳಿಸಿ ಹಾಕಲಾಗಿದೆ. ಮುಂಬೈ ಪೊಲೀಸರು ತನಿಖೆಯಲ್ಲಿ ಬಿಹಾರ ಪೊಲೀಸರಿಗೆ ಸಹಕರಿಸುತ್ತಿಲ್ಲ ಎಂದು ಸುಶಾಂತ್ ತಂದೆ ಕೆಕೆ ಸಿಂಗ್ ಆರೋಪಿಸಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ಒಬ್ಬ ಪ್ರತಿಭಾನ್ವಿತ ನಟ ಅನಮಾನಾಸ್ಪದವಾದ ಸನ್ನವೇಶದಲ್ಲಿ ಮೃತೊಟ್ಟಿದ್ದಾನೆ. ಇದು ಹೈಪ್ರೊಫೈಲ್ ಕೇಸ್. ಪ್ರತಿಯೊಬ್ಬರಿಗೂ ಈ ಬಗ್ಗೆ ತಮ್ಮದೇ ಆದ ನಿಲುವುಗಳಿವೆ. ಸತ್ಯ ಹೊರಗೆ ಬರಬೇಕು. ಈ ಸಂಬಂಧ ಮಹಾರಾಷ್ಟ್ರ ಸರ್ಕಾರ ಉತ್ತರಿಸಬೇಕು ಎಂದಿದೆ.
ಸುಶಾಂತ್ ಕೇಸ್; 'ಎನೋ ಎಡವಟ್ಟಾಗಿದೆ' ಇಲ್ಲಿದ್ರೆ ಮುಂಬೈ ಹೀಗೆಲ್ಲ ಮಾಡ್ತಿರಲಿಲ್ಲ!
ಇನ್ನು ಬಿಹಾರದ ಐಪಿಎಸ್ ಆಫೀಸರನ್ನು ಸಂಶಯಾಸ್ಪದ ರೀತಿಯಲ್ಲಿ ಕ್ವಾರೆಂಟೈನ್ ಮಾಡಿದ ನಡೆಯನ್ನು ಆಕ್ಷೇಪಿಸಿದ ಕೋರ್ಟ್, ತನಿಖೆ ಔದ್ಯೋಗಿಕವಾಗಿಯೇ ನಡೆಯಬೇಕು ಎಂದು ಸೂಚಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.