ಐಶ್ವರ್ಯಾ ರೈ ಮೊನ್ನೆ ನ.1ಕ್ಕೆ ತನ್ನ ಬರ್ತ್ ಡೇ ಆಚರಿಸಿಕೊಂಡರು. ಆದರೆ ಬಚ್ಚನ್ ಕುಟುಂಬದಿಂದ ಯಾರೊಬ್ಬರೂ ವಿಶ್ ಮಾಡಿಲ್ಲ. ಇದಕ್ಕೆ ಫ್ಯಾನ್ಸ್ ಏನ್ ಮಾಡಿದ್ರು ನೋಡಿ..
ಐಶ್ವರ್ಯಾ ರೈ ಬಚ್ಚನ್. ಈ ಹೆಸರಿಗೆ ಜನಪ್ರಿಯತೆ ಇದೆ. ಮಂಗಳೂರು ಮೂಲದ ಈ ಚೆಲುವೆ ತನ್ನ ಪಾಡಿಗೆ ತಾನು ಏನೋ ಓದ್ಕೊಂಡಿದ್ದವಳು ಯಾರ್ಯಾರದೋ ಕಣ್ಣಿಗೆ ಬಿದ್ದು ಮಾಡೆಲ್ ಆಗಿ, ನಟಿಯಾಗಿ, ವಿಶ್ವ ಸುಂದರಿಯಾಗಿ, ಬಾಲಿವುಡ್, ಹಾಲಿವುಡ್‌ಗಳ ಹೆಸರಾಂತ ನಟಿಯಾಗಿ ಹೊರಹೊಮ್ಮಿದ್ದೇ ದೊಡ್ಡ ಕಥೆ. ಅವರ ಕೆರಿಯರ್‌ನದು ಒಂದು ಕಥೆಯಾದರೆ ಪರ್ಸನಲ್ ಲೈಫ್ ಕಳೆದ ಕೆಲವು ದಿನಗಳಿಂದ ಸದಾ ಸುದ್ದಿಯಲ್ಲಿದೆ. ಈಕೆಯ ಪತಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ನಡುವಿನ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಅನ್ನೋ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿದೆ. ಇನ್ನು ಸೊಸೆ ಐಶ್ವರ್ಯಾಗೆ ತಮ್ಮ ಕುಟುಂಬದಲ್ಲಿ ಸ್ಥಾನವಿಲ್ಲ ಎಂದು ಬಚ್ಚನ್ ಕುಟುಂಬ ಹಿಂದೆಯೇ ಸುಳಿವು ನೀಡಿತ್ತು. ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಅಮಿತಾಭ್ ಹುಟ್ಟುಹಬ್ಬದ ವಿಶೇಷ ವಿಡಿಯೋ ಪ್ರಸಾರ ಮಾಡಲಾಗಿತ್ತು. ಅದರಲ್ಲಿ ಐಶ್ವರ್ಯಾ ರೈ ಇರಲಿಲ್ಲ.
ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಅವರ ಬಗ್ಗೆ ಬಚ್ಚನ್ ಏನೂ ಬರೆದಿರಲಿಲ್ಲ. ಆದರೆ ಐಶ್ವರ್ಯಾ ಮಾತ್ರ ಮಾವ ಅಮಿತಾಭ್ ಬಚ್ಚನ್ ಜನ್ಮದಿನದಂದು ಅವರು ಶುಭ ಹಾರೈಸಿದ್ದರು. ಐಶ್ವರ್ಯಾ ಅವರ ಈ ಸಂಸ್ಕಾರವನ್ನು ಜನ ಮೆಚ್ಚಿಕೊಂಡಿದ್ದರು.
undefined
ಇಳ್ಕಲ್ ಸೀರೆಲಿ ರಚಿತಾ ಮಹಾಲಕ್ಷ್ಮೀ ಅಂದ ನೋಡಿ ಮಾರು ಹೋದ ತಮಿಳಿಗರು! ರಿಯಾಲಿಟಿ ಶೋ ರೀಲ್ಸ್ ವೈರಲ್
ಆದರೆ ಮೊನ್ನೆ ತಾನೇ ಐಶ್ವರ್ಯಾ ರೈ ಬರ್ತ್ ಡೇ ಆಗಿತ್ತು. ಬಚ್ಚನ್ ಕುಟುಂಬದ ಯಾರೊಬ್ಬರೂ ಈಕೆಗೆ ವಿಶ್ ಮಾಡಲಿಲ್ಲ. ಹಾಗೆ ನೋಡಿದರೆ ಇವರ ನಡುವಿನ ಬಿರುಕು ಕಳೆದ ವರ್ಷವೇ ಇತ್ತು. ಆಗ ಅಭಿಷೇಕ್ ನಾಮ್ ಕೆ ವಾಸ್ತೆ ವಿಶ್ ಮಾಡಿದ್ದರು. ಕೇವಲ ‘ಹ್ಯಾಪಿ ಬರ್ತ್ಡೇ’ ಎಂದು ಪೋಸ್ಟ್ ಮಾಡಿದ್ದರು. ಆ ಪದಗಳಲ್ಲಿ ಯಾವುದೇ ಎಮೋಷನ್ ಇರಲಿಲ್ಲ. ಕೇವಲ ಕಾಟಾಚಾರಕ್ಕೆ ಅವರು ಆ ರೀತಿ ಪೋಸ್ಟ್ ಮಾಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದರು. ಆಗಲೇ ಇವರಿಬ್ಬರ ನಡುವೆ ಯಾವ ಕ್ಷಣದಲ್ಲೂ ಡಿವೋರ್ಸ್ ಆಗಬಹುದು ಅನ್ನೋ ಗಾಸಿಪ್ ಹಬ್ಬಿತ್ತು. ಆದರೆ ಡಿವೋರ್ಸ್ ಅನ್ನೋದು ಆದ ಬಗ್ಗೆ ಗೊತ್ತಿಲ್ಲ. ಆದರೆ ಇಬ್ಬರೂ ಸಪರೇಟ್ ಆಗಿ ಬದುಕುತ್ತಿರೋದಂತೂ ನಿಜ. ಇತ್ತೀಚಿನ ದಿನಗಳಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರು ಹೆಚ್ಚಾಗಿ ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಅನಂತ್ ಅಂಬಾನಿ ಮದುವೆಗೆ ಐಶ್ವರ್ಯಾ ರೈ ಅವರು ಒಂಟಿಯಾಗಿ ಬಂದಿದ್ದರು. ಸಾಮಾನ್ಯವಾಗಿ ಇಂಥ ಕಾರ್ಯಕ್ರಮಗಳಿಗೆ ದಂಪತಿ ಜೊತೆಯಾಗಿ ಬರುತ್ತಾರೆ. ಆದರೆ ಐಶ್ವರ್ಯಾ ಸಿಂಗಲ್ ಆಗಿ ಬಂದಿದ್ದರಿಂದ ಅವರ ಸಂಸಾರದಲ್ಲಿ ಏನೋ ಕಿರಿಕ್ ಆಗಿದೆ ಎಂಬುದನ್ನು ಸೂಚಿಸಿತ್ತು.
ಸದ್ಯ ಬಚ್ಚನ್ ಫ್ಯಾಮಿಲಿ ಐಶ್ವರ್ಯಾ ಅವರನ್ನು ದೂರ ಇಡುತ್ತಿರುವುದು ಐಶ್ವರ್ಯಾ ಫ್ಯಾನ್ಸ್ ಸಿಟ್ಟಿಗೆ ಕಾರಣವಾಗಿದೆ. ಅಲ್ಲದೆ ಐಶ್ವರ್ಯ ಪತಿ ಅಭಿಷೇಕ್ ಬಗ್ಗೆ ಹೆಚ್ಚಿನವರಿಗೆ ಅಂಥಾ ಒಳ್ಳೆ ಅಭಿಪ್ರಾಯ ಇಲ್ಲ. ಇಂಥಾ ವಿಶ್ವ ಸುಂದರಿಯೆ ಪಕ್ಕದಲ್ಲಿದ್ದರೂ ಈ ಪುಣ್ಯಾತ್ಮ ಬೇರೆ ನಟಿಯ ಸಂಗಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ.
ಐಶ್ವರ್ಯ ಪ್ರೀತಿಯಿಂದ ಅಪ್ಪಿಕೊಂಡ್ರೆ ಹೀಗೆ ಹೇಳೋದಾ ಅಮಿತಾಭ್? ಕುಡಿದದ್ದು ಜಾಸ್ತಿಯಾಯ್ತು ಎಂದ ಟ್ರೋಲಿಗರು!
ಇಷ್ಟೆಲ್ಲ ಆದಮೇಲೆ ಐಶ್ ಫ್ಯಾನ್ಸ್ ಅಮಿತಾಬ್ ಮೇಲೆ ಸಿಟ್ಟಿಗೆದ್ದಿದ್ದಾರೆ. ಅವರ ಹಳೆಯ ಟ್ವೀಟ್ ಅನ್ನೇ ಕಾಪಿ ಮಾಡಿ ವೈರಲ್ ಮಾಡಿಬಿಟ್ಟಿದ್ದಾರೆ. ಅಭಿತಾಬ್ ಬಚ್ಚನ್ 2010ರಲ್ಲಿ ಐಶ್ವರ್ಯಾಗೆ ವಿಶ್ ಮಾಡಿ ಹಾಕಿದ್ದ ಪೋಸ್ಟ್ ಅದಾಗಿತ್ತು. ಇದರಲ್ಲಿ ಐಶ್ವರ್ಯಾ ಬಗ್ಗೆ ನಾಲ್ಕು ಒಳ್ಳೆಯ ಮಾತಿನ ಜೊತೆಗೆ ಆಕೆಯ ಬರ್ತ್ ಡೇ ಸೆಲೆಬ್ರೇಶನ್ ಬಗೆಗೂ ವಿವರ ಇತ್ತು. ಸದ್ಯ ಸೋಷಲ್ ಮೀಡಿಯಾದಲ್ಲಿ ಈ ಟ್ವೀಟ್ ಅನ್ನು ಐಶ್ ಫ್ಯಾನ್ಸ್ ಎಲ್ಲರೂ ಹಂಚಿಕೊಂಡಿದ್ದಾರೆ. ಐಶ್ವರ್ಯಾಗೆ ವಿಶ್ ಮಾಡ್ತ ಬಚ್ಚನ್ ಫ್ಯಾಮಿಲಿಗೆ ಬೈಯ್ಯೋ ಪೋಸ್ಟ್ ಗಳು ಸಾಕಷ್ಟಿವೆ.