ಹೊಸ ಸೊಸೆ ಪರಿಚಯಿಸಿದ ನಾಗಾರ್ಜುನ; ಚಿರಂಜೀವಿ ಹಾಗೆ ಹೇಳ್ಬೇಕಿತ್ತಾ ಅಂತಿರೋ ನೆಟ್ಟಿಗರು!

By Shriram Bhat  |  First Published Nov 2, 2024, 6:21 PM IST

ಇಷ್ಟಾಗಿದೆ ನೋಡಿ, ನಾಗಾರ್ಜುನ ತಮ್ಮ ಹೊಸ ಸೊಸೆಯನ್ನು ತಮ್ಮ ಹತ್ತಿರದ ನೆಂಟರಾಗಿರುವ ಚಿರಂಜೀವಿಗೆ ಪರಿಚಯಿಸಿದ ಕಥೆ! ಮೆಗಾಸ್ಟಾರ್ ಸುಮ್ಮನಿರಲಾಗದೇ ಫಾರ್ಮಾಲಿಟಿಸ್‌ಗೆ ಏನೋ ಒಂದು ಹೇಳಿದ್ದಾರೆ. ಆದರೆ..


ತೆಲುಗು ನಟ ನಾಗಾರ್ಜುನ (nagarjuna akkineni) ಅವರಿಗೆ ಹೊಸ ಸೊಸೆ ಬಂದಿರೋದು ಗೊತ್ತೇ ಇದೆ. ನಾಗ ಚೈತನ್ಯ (Naga Chaitanya) ಅವರು ನಟಿ ಸಮಂತಾ (Samantha Ruth Prabhu) ಜೊತೆ ಡಿವೋರ್ಸ್ ತೆಗೆದುಕೊಂಡು ಇತ್ತೀಚೆಗೆ ಶೋಭಿತಾ ಜೊತೆ ಹಸೆಮಣೆ ಏರಿದ್ದಾರೆ. ಈ ಸಂಗತಿ ಜಗತ್ತಿನಾದ್ಯಂತ ಸುದ್ದಿಯಾಗಿದೆ. ಆದರೆ, ಆಗದೇ ಇರುವ ಸುದ್ದಿ ಒಂದಿದೆ. ಅದೇನೆಂದರೆ, ಸೊಸೆ ಶೋಭಿತಾ ಅವರನ್ನು ತೆಲುಗು ನಟ ಮೆಗಾ ಸ್ಟಾರ್‌ ಚಿರಂಜೀವಿಗೆ (Mega Star Chiranjeevi) ನಾಗಾರ್ಜುನ ಅವರು ಪರಿಚಯ ಮಾಡಿಸಿದ್ದಾರೆ. ಅದಕ್ಕೆ ಚಿರಂಜೀವಿ ಹೇಳಿದ್ದೇನು ಗೊತ್ತೇ?

ನಟ ಚಿರಂಜೀವಿ 'ಸೊಸೆ ಮುದ್ದಾಗಿದ್ದಾಳೆ. ಇಂತಹ ಸೊಸೆಯನ್ನು ಪಡೆಯೋಕೆ ನೀನು ಪುಣ್ಣ ಮಾಡಿದ್ದೀಯ..' ಎಂದಿದ್ದಾರಂತೆ. ಅದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹಲವರು ಈ ಬಗ್ಗೆ, ಹಾಗಿದ್ದರೆ ನಟಿ ಸಮಂತಾ ಮುದ್ದಾಗಿರಲಿಲ್ಲವೇ? ಶೋಭಿತಾ ಸಮಂತಾಗಿಂತ ಯಾವುದರಲ್ಲಿ ಹೆಚ್ಚು ಎನ್ನಬೇಕು ಎನ್ನುತ್ತಿದ್ದಾರೆ. ಕೆಲವರಂತೂ ಇನ್ನೂ ಮುಂದೆ ಹೋಗಿ, 'ನಾಗಾರ್ಜುನ ಸಮಂತಾರನ್ನು ಇಂಟ್ರೊಡ್ಯೂಸ್ ಮಾಡಿದಾಗಲೂ ಬಹುಶಃ ಹೀಗೇ ಹೇಳಿದ್ದಿರಬಹುದು' ಎಂದು ಕುಹಕವಾಡಿದ್ದಾರೆ. 

Tap to resize

Latest Videos

undefined

ಹಾಲಿವುಡ್ ಆಕ್ಷನ್ ಸೀನ್ ಟ್ರೇನಿಂಗ್ ಪಡೆದರೂ ಪ್ರಿಯಾಂಕಾಗೆ ಆಕ್ಸಿಡೆಂಟ್ ಆಗಿದ್ದೇಕೆ?

ಆದರೆ, ಕೆಲವರು ಮಾತ್ರ ಮೆಗಾಸ್ಟಾರ್ ಚಿರಂಜೀವಿ ಪರ ನಿಂತು 'ಅಲ್ಲ, ಸೊಸೆಯನ್ನು ಪರಿಚಯ ಮಾಡಿಸಿದಾಗ ಚಿರಂಜೀವಿ ಇನ್ನೇನು ಹೇಳಬೇಕಿತ್ತು? ಪಾಪ ಅವರು ಸಹಜವಾಗಿ ಹೀಗೆ ಹೇಳಿದ್ದಾರೆ' ಎನ್ನುತ್ತಿದ್ದಾರೆ. ಅದಕ್ಕೂ ಉತ್ತರಿಸಿರುವ ಹಲವರು 'ಸಮ್ಮನೇ ಕೈ ಮುಗಿದರೆ ಅಥವಾ ಕೈ ಕುಲುಕಿದರೆ ಸಾಕು, ಮುದ್ದಾಗಿದ್ದಾರೆ ಅಥವಾ ಕೋತಿಯಂತೆ ಇದ್ದಾರೆ ಅಂತೆಲ್ಲಾ ಹೇಳಲೇಬೇಕಾ?' ಎಂದಿದ್ದಾರೆ. ನಿಮಗೇ ಗೊತ್ತಲ್ಲ, ಸೋಷಿಯಲ್ ಮೀಡಿಯಾ ಚರ್ಚೆ ಹೇಗೆಲ್ಲಾ ಸಾಗುತ್ತದೆ ಅಂತ!

ಇಷ್ಟಾಗಿದೆ ನೋಡಿ, ನಾಗಾರ್ಜುನ ತಮ್ಮ ಹೊಸ ಸೊಸೆಯನ್ನು ತಮ್ಮ ಹತ್ತಿರದ ನೆಂಟರಾಗಿರುವ ಚಿರಂಜೀವಿಗೆ ಪರಿಚಯಿಸಿದ ಕಥೆ! ಮೆಗಾಸ್ಟಾರ್ ಸುಮ್ಮನಿರಲಾಗದೇ ಫಾರ್ಮಾಲಿಟಿಸ್‌ಗೆ ಏನೋ ಒಂದು ಹೇಳಿದ್ದಾರೆ. ಆದರೆ, ಮೆಗಾಸ್ಟಾರ್ ಆ ಮಾತು ಸಮಂತಾ ಅಪ್ಪಟ ಅಭಿಮಾನಿಗಳನ್ನು ಕೆರಳಿಸದೇ ಇರಲು ಸಾಧ್ಯವೇ? ಆಗಿರೋದು ಅಷ್ಟೇ..! ಸ್ಯಾಮ್ ಫ್ಯಾನ್ಸ್ ಕೆಂಡ ಕಾರುತ್ತಿದ್ದಾರೆ, ಚಿರಂಜೀವಿ ಹಾಗೂ ನಾಗಾರ್ಜುನ ಕಣ್ಣಲ್ಲೇ ನಗುತ್ತಿದ್ದಾರಾ? ಗೊತ್ತಿಲ್ಲ ಅವ್ರ ಕಥೆ!

ನಂಗೆ ಧಾರಾವಾಹಿಗಳಲ್ಲಿ ನಟಿಸುವ ಉತ್ಸಾಹವೇ ಇಲ್ಲ; ಹೀಗಂದಿದ್ಯಾಕೆ ಅರುಂಧತಿ ನಾಗ್?

click me!