ತಮಿಳು ರಿಯಾಲಿಟಿ ಶೋನಲ್ಲಿ ಇಳ್ಕಲ್ ಸೀರೆ ಧರಿಸಿ, ಕನ್ನಡ ನಾಡಿನ ಹೆಸರು ಹೆಮ್ಮೆಯಿಂದ ಹೇಳಿದ ನಟಿ ರಚಿತಾ ಮಹಾಲಕ್ಷ್ಮೀ. ಧಾರವಾಡ ಎಂದು ಊರಿನ ಹೆಸರು ತಪ್ಪಾಗಿ ಹೇಳಿದರೂ, ಕನ್ನಡದ ಬಗ್ಗೆ ಮಾತನಾಡಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ರಚಿತಾ ಮಹಾಲಕ್ಷ್ಮೀ ಅನ್ನೋ ನಟಿ ಹೆಸರು ಕನ್ನಡಿಗರಿಗೆ ಅಷ್ಟಾಗಿ ನೆನಪಾಗುತ್ತೋ ಇಲ್ವೋ. ಮೂವತ್ತ ನಾಲ್ಕು ವರ್ಷ ವಯಸ್ಸಿನ ಈ ನಟಿ ಸೀರಿಯಲ್, ಸಿನಿಮಾ ರಂಗದಲ್ಲಿ ಬಹಳ ಜನಪ್ರಿಯ ಹೆಸರು. ಕನ್ನಡದಲ್ಲಿ 'ಗಣಿ' ಅನ್ನೋ ಸಿನಿಮಾದಲ್ಲಿ ಹನ್ನೆರಡು ವರ್ಷಗಳ ಕೆಳಗೆ ನಟಿಸಿದ್ರು. ಇದೇ ಇವರ ಕೆರಿಯರ್‌ನ ಮೊದಲ ಸಿನಿಮಾ ಈ ಸಿನಿಮಾದಲ್ಲಿ ಶ್ರೇಯಾ ಅನ್ನೋ ಪಾತ್ರದಲ್ಲಿ ನಟಿಸಿದ್ರು. ಈ ಸಿನಮಾ ಹೆಸರು ಮಾಡದ ಕಾರಣ ಈ ಚೆಲುವೆಗೂ ಈ ಸಿನಿಮಾದಿಂದ ಅಂಥಾ ಜನಪ್ರಿಯತೆ ಸಿಗಲಿಲ್ಲ. ಮುಂದೆ ದಿಗಂತ್ ಹಾಗೂ ಐಂದ್ರಿತಾ ರೇ ಜೋಡಿಯಾಗಿ ನಟಿಸಿದ್ದ 'ಪಾರಿಜಾತ' ಅನ್ನೋ ಸಿನಿಮಾದಲ್ಲಿ ನಂದಿನಿ ಅನ್ನೋ ಪಾತ್ರ ಮಾಡಿದ್ರು. ಅದರೆ ಇವರಿಗೆ ತಕ್ಕ ಮಟ್ಟಿನ ರೆಕಗ್ನಿಶನ್ ಸಿಕ್ಕಿದ್ದು 2015ರಲ್ಲಿ ತೆರೆಕಂಡ ತಮಿಳು ಸಿನಿಮಾವೊಂದರ ಮೂಲಕ.
ಅದರ ಹೆಸರು 'ಉಪ್ಪು ಕರುವಾಡು' ಅಂತ. ಇದೊಂದು ಕಾಮಿಡಿ ಡ್ರಾಮಾ. ಇದರಲ್ಲಿ ಕರುಣಾಕರನ್ ಹೀರೋ. ನಮ್ಮ ಕನ್ನಡದ ಹುಡುಗಿ 'ಜಿಂಕೆ ಮರೀನಾ' ಖ್ಯಾತಿಯ ನಂದಿತಾ ನಾಯಕಿ. ಸಿನಿಮಾಗೆ ಬರೋಕೂ ಮೊದಲು ಏಷ್ಯಾನೆಟ್ ಸುವರ್ಣದ 'ಮೇಘ ಮಂಡಲ' ಅನ್ನೋ ಸೀರಿಯಲ್, ಜೀ ಕನ್ನಡದ 'ಸೂರ್ಯಕಾಂತಿ' ಅನ್ನೋ ಸೀರಿಯಲ್‌ಗಳಲ್ಲೆಲ್ಲ ನಟಿಸಿದ್ರು. ಆದರೆ ಇವು ಅಂಥಾ ಹೆಸರು ಮಾಡಲಿಲ್ಲ.
undefined
ಸೀರಿಯಲ್ನಲ್ಲಿ ಮಿನಿ ಡ್ರೆಸ್ ಹಾಕ್ದೇ ಶಾಕ್ ಕೊಟ್ರೆ, ರಿಯಲ್ನಲ್ಲಿ ಅದೇ ಉಡುಗೆ ತೊಟ್ಟ ಭಾಗ್ಯಳಿಗೆ ಫಿದಾ!
ಈಕೆಗೆ ಹೆಸರು ತಂದುಕೊಟ್ಟಿದ್ದು ವಿಜಯ್ ಟಿವಿಯ 'ಸರವಣ ಮೀನಾಟ್ಚಿ ೨' ಅನ್ನೋ ಸೀರಿಯಲ್. ನಾಲ್ಕು ವರ್ಷಗಳ ಕೆಳಗೆ ಇದು ಮೂರನೇ ಸೀಸನ್‌ನಲ್ಲೂ ಜನಪ್ರಿಯವಾಯ್ತು. ಅದರಲ್ಲೂ ನಾಯಕಿಯಾಗಿ ರಚಿತಾ ನಟಿಸಿದ್ದರು. ಇತ್ತೀಚೆಗೆ ರಚಿತಾ ತಮಿಳಿನ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ಬೇರೆಲ್ಲ ಹೆಣ್ಣುಮಕ್ಕಳು ಭರ್ಜರಿ ರೇಷ್ಮೆ ಸೀರೆಗಳಲ್ಲಿ ಬಂದಿದ್ದರು. ಆದರೆ ಈಕೆ ಸಿಂಪಲ್ ಡಿಸೈನ್‌ನ ಆದರೆ ಬಹಳ ಸೊಗಸಾಗಿ ಕಾಣುವ ಇಳ್ಕಲ್ ಸೀರೆಯುಟ್ಟು ಬಂದಿದ್ದರು. ಅದನ್ನು ನೋಡಿ ತಮಿಳು ಆಡಿಯನ್ಸ್ ಹಾಗೂ ಅಲ್ಲಿ ಸೇರಿರುವ ಇತರೆ ಮಂದಿಗೆ ಅಚ್ಚರಿಯಾಗಿದೆ. ಅದವರಲ್ಲೊಬ್ಬರು ಕೇಳಿಯೇ ಬಿಟ್ಟಿದ್ದಾರೆ. 'ನೀವು ಉಟ್ಟಿರೋ ಸೀರೆ ಯಾವುದು?' ಅಂತ. ಅವರ ಪ್ರಕಾರ ತಮಿಳುನಾಡಿನ ಯಾವುದೋ ಬ್ರಾಂಡ್ ಸೀರೆ ಅಂತ. ಆದರೆ ನಮ್ಮ ನೆಲದ ಹುಡುಗಿ ರಚಿತಾ, 'ಇದು ಇಳ್ಕಲ್ ಸೀರೆ. ಧಾರವಾಡದ ಒಂದು ಹಳ್ಳಿ ಇಳ್ಕಲ್. ಅಲ್ಲಿ ಇಡೀ ಊರಲ್ಲಿ ನೇಕಾರರು ಇದನ್ನು ಕೈಯಿಂದಲೇ ಹೆಣೆದಿರ್ತಾರೆ. ಇದನ್ನು ಕೈಮಗ್ಗದ ಸೀರೆ ಅಂತಾರೆ. ಅಚ್ಚ ಹತ್ತಿಯಿಂದ ಮಾಡಿರೋ ಈ ಸೀರೆ ಮೈಗೂ ಹಿತ. ನೋಡೋದಕ್ಕೂ ಚೆನ್ನಾಗಿರುತ್ತೆ' ಅಂದುಬಿಟ್ಟಿದ್ದಾರೆ.
ನಮ್ಮ ನೆಲದ ಸೀರೆಯ ಬಗ್ಗೆ ನಟಿಯೊಬ್ಬರು ತಮಿಳು ನಾಡಿನ ಚಾನೆಲ್‌ನಲ್ಲಿ ಮಾತಾಡಿರೋದು ಇಳ್ಕಲ್ ಪ್ರಾಂತ್ಯದವರಿಗೆ ಮಾತ್ರ ಅಲ್ಲ, ಕನ್ನಡಿಗರೆಲ್ಲರಿಗೆ ಖುಷಿ ಕೊಟ್ಟಿದೆ.
ಸಿಲ್ವರ್ ಕಲರ್ ಲಾಂಗ್ ಗೌನ್‌ನಲ್ಲಿ 'ಕಾಟೇರ' ಬೆಡಗಿ: ಮಿಂಚು ಹುಳದಂತೆ ಮಿಂಚಿದ ಆರಾಧನಾ ರಾಮ್!
ಆದರೆ ವಾಸ್ತವದಲ್ಲಿ ಇಳ್ಕಲ್ ಇರೋದು ಬಾಗಲಕೋಟೆ ಜಿಲ್ಲೆಯಲ್ಲಿ. ಈಕೆ ಧಾರವಾಡ ಅಂದಿರೋದನ್ನು ನೆಟ್ಟಿಗರು 'ಅದು ಧಾರವಾಡ ಅಲ್ಲವ್ವ ತಾಯಿ, ಬಾಗಲಕೋಟೆ' ಅಂತ ಸರಿಪಡಿಸಿದ್ದಾರೆ. ಆದರೆ ಧಾರವಾಡ ಸೀಮೆಯ ಕನ್ನಡಿಗರು, 'ಅದು ಏನೇ ಇರಲಿ ತಮಿಳು ನಾಡಿನಲ್ಲಿ ನಮ್ಮ ಅಚ್ಚ ಕನ್ನಡದ ಧಾರವಾಡದ ಹೆಸರು ಕೇಳಿ ಭಾಳ ಖುಷಿಯಾತ್ರಿ' ಅಂತ ಚಪ್ಪಾಳೆ ಹೊಡೆದಿದ್ದಾರೆ. ನಮ್ಮೂರಿನ ವಿಚಾರಗಳು, ನಮ್ಮೂರಿನ ಆಚರಣೆ, ಸಂಸ್ಕೃತಿ ಇವನ್ನೆಲ್ಲ ಬೇರೆ ಊರಿನ ಚಾನೆಲ್‌ನಲ್ಲೋ ಜನರ ಬಾಯಲ್ಲೋ ಕೇಳಿದ್ರೆ ಏನ್ ಖುಷಿ ಆಗುತ್ತಲ್ವಾ? ಆ ಖುಷಿಯೇ ಹೇಳುತ್ತೆ ನಾವು ನಮ್ಮೂರನ್ನ ಎಷ್ಟರಮಟ್ಟಿಗೆ ಪ್ರೀತಿಸ್ತೇವೆ ಅಂತ. ನಮ್ಮೂರಲ್ಲಿ ಇರುವಾಗ ಇದೆಲ್ಲ ಗೊತ್ತಾಗಲ್ಲ, ಎಲ್ಲೋ ಉತ್ತರ ಭಾರತದ ಯಾವುದೋ ಹಳ್ಳಿಗೆ ಹೋದಾಗ ಅಲ್ಲಿ ಯಾರಾದ್ರೂ ಕನ್ನಡ ಮಾತಾಡ್ತಿದ್ರೆ ಏನ್ ಖುಷಿ ಆಗುತ್ತಲ್ವಾ ಅಲ್ಲಿರೋದು ನಮ್ಮತನ. ಇರಲಿ, ದೂರದ ತಮಿಳುನಾಡಲ್ಲಿ ನಮ್ಮೂರಿನ ಸೀರೆಯ ಬಗ್ಗೆ ಮಾತನಾಡಿದ ನಟಿ ರಚಿತಾ ಮಹಾಲಕ್ಷ್ಮಿಗೆ ನಿಮ್ಮದೂ ಒಂದು ಮೆಚ್ಚುಗೆ ಇರಲಿ.