ಆ 45 ನಿಮಿಷಗಳು ನನ್ನ ಬದುಕಿನ ಅತ್ಯುತ್ತಮ ಕ್ಷಣ: ಪ್ರಧಾನಿ ಭೇಟಿ ಬಳಿಕ ಮಲೆಯಾಳಂ ನಟನ ಮಾತು

By Anusha KbFirst Published Apr 25, 2023, 6:21 PM IST
Highlights

ಮಲೆಯಾಳಂ ನಟ ಉನ್ನಿ ಮುಕುಂದನ್ ಅವರಿಗೂ ಪ್ರಧಾನಿ ಜೊತೆ ಕೆಲ ಕಾಲ ಕಳೆಯುವ ಅವಕಾಶ ಸಿಕ್ಕಿದೆ.  ಪ್ರಧಾನಿ ಮೋದಿ ಜೊತೆ ಕಳೆದ ಸಮಯದ ಅನುಭವವನ್ನು ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ತಿರುವನಂತಪುರ: ವಂದೇ ಭಾರತ್ ರೈಲು ಹಾಗೂ ಕೆಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗಾಗಿ  ದೇವರನಾಡು ಕೇರಳ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಚಿತ್ರರಂಗ ಸೇರಿದ ವಿವಿಧ ರಂಗದ ಗಣ್ಯರನ್ನು ಉದ್ಯಮಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮಲೆಯಾಳಂ ನಟ ಉನ್ನಿ ಮುಕುಂದನ್ ಅವರಿಗೂ ಪ್ರಧಾನಿ ಜೊತೆ ಕೆಲ ಕಾಲ ಕಳೆಯುವ ಅವಕಾಶ ಸಿಕ್ಕಿದೆ.  ಪ್ರಧಾನಿ ಮೋದಿ ಜೊತೆ ಕಳೆದ ಸಮಯದ ಅನುಭವವನ್ನು ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಮೋದಿ ಜೊತೆ ಕಳೆದ ಆ 45 ನಿಮಿಷಗಳು ತನ್ನ ಬದುಕಿನ ಅತ್ಯಮೂಲ್ಯ ಕ್ಷಣ ಎಂದು ಅವರು ಹೇಳಿಕೊಂಡಿದ್ದಾರೆ. 

ಮಲೆಯಾಳಂ ನಟ ಉನ್ನಿ ಮುಕುಂದನ್ (Unni Mukundan) ಅವರು 20 ವರ್ಷಗಳನ್ನು ಗುಜರಾತ್‌ನಲ್ಲಿ (Gujarat) ಕಳೆದಿದ್ದು, ತಮ್ಮ ಹರೆಯದ ದಿನಗಳಿಂದಲೂ ಮೋದಿಯವರನ್ನು ಭೇಟಿಯಾಗುವ ಉತ್ಕಟ ಆಸೆಯನ್ನು ಅವರು ಹೊಂದಿದ್ದರಂತೆ,  ಹೀಗಿರುವಾಗ ಅವರಿಗೆ ಓರ್ವ ವ್ಯಕ್ತಿಯಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಅವಕಾಶ ಸಿಕ್ಕಿದೆ. ಅದೂ ಅಲ್ಲದೇ 45 ನಿಮಿಷಗಳ ಕಾಲ ಪ್ರಧಾನಿ ಜೊತೆ ಕಳೆಯುವ ಅವಕಾಶ ಸಿಕ್ಕಿದೆ. 

Latest Videos

ಕ್ರೈಸ್ತರು ಹೆಚ್ಚಿರುವ ಈಶಾನ್ಯ, ಗೋವಾದಂತೆ ಕೇರಳದಲ್ಲೂ ಬಿಜೆಪಿ ಅಧಿಕಾರಕ್ಕೆ: ಪ್ರಧಾನಿ ಮೋದಿ

ಕೊಚ್ಚಿಯಲ್ಲಿ ಸೋಮವಾರ ಸಂಜೆ ಮಲ್ಲಿಕಾಪ್ಪುರಂ ಖ್ಯಾತಿಯ ನಟ ಉನ್ನಿ ಮುಕುಂದನ್ (Malayalam Actor) ಅವರು ಪ್ರಧಾನಿಯವರನ್ನು ಭೇಟಿಯಾದ ಬಳಿಕ ಅವರ ಸಂತೋಷಕ್ಕೆ ಮಿತಿ ಎಂಬುದಿರಲಿಲ್ಲ. ಅಲ್ಲದೇ ಆ ಕ್ಷಣದಿಂದ ನಾನಿನ್ನೂ ಹೊರಬಂದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ನಿನ್ನೆ ಈ ಬಗ್ಗೆ ಫೇಸ್‌ಬುಕ್‌ನಲ್ಲಿ (Facebook)ಪೋಸ್ಟ್ ಮಾಡಿದ ಅವರು, ನನ್ನ ಸಾಮಾಜಿಕ ಜಾಲತಾಣದಲ್ಲಿ ನಾನು ಹಾಕಿದ ಪೋಸ್ಟ್‌ಗಳಲ್ಲಿ ಇದೊಂದು ಅತ್ಯಂತ ಹೆಚ್ಚು ಸಂಚಲನಗೊಳಿಸುವ ಪೋಸ್ಟ್‌ ಆಗಿದೆ ಎಂದು ಅವರು ಬರೆದುಕೊಂಡಿದ್ದಾರೆ. 

ತಮ್ಮನ್ನು ಭೇಟಿ ಮಾಡಿದ ಪ್ರಧಾನಿಗೆ ಧನ್ಯವಾದ ತಿಳಿಸಿದ 35 ವರ್ಷದ ನಟ ಮುಕುಂದನ್‌ (Mukundan) ತಾವು 20 ವರ್ಷಗಳ ಕಾಲ ಗುಜರಾತ್‌ನಲ್ಲಿ ನೆಲೆಸಿದ್ದಿದ್ದು, ಹಾಗೂ 14 ವರ್ಷದವನಾದಗನಿಂದಲೂ ಮೋದಿಯವರ ಅರಿತುಕೊಳ್ಳುತ್ತಾ ಬೆಳೆದಿದ್ದನ್ನು ನೆನಪು ಮಾಡಿಕೊಂಡಿದ್ದಾರೆ. ಧನ್ಯವಾದಗಳು ಸರ್, ನಿಮ್ಮನ್ನು 14 ವರ್ಷದವನಾಗಿದ್ದಾಗಿನಿಂದಲೂ ದೂರದಿಂದ ನೋಡುತ್ತಿದ್ದೆ ಹಾಗೂ ಕೊನೆಯದಾಗಿ ನಿಮ್ಮನ್ನು ಭೇಟಿಯಾದೆ, ನಾನು ಈ ವಿಚಾರದಿಂದ ಇನ್ನಷ್ಟೇ ಚೇತರಿಸಿಕೊಳ್ಳಬೇಕಿದೆ ಎಂದು ಬರೆದುಕೊಂಡಿದ್ದಾರೆ.

ಕೇರಳ ಸ್ಟೈಲ್‌ನಲ್ಲಿ ಕೊಚ್ಚಿಗೆ ಬಂದಿಳಿದ ಮೋದಿ, ಬಿಗಿ ಭದ್ರತೆ ನಡುವೆ ಅದ್ದೂರಿ ರೋಡ್ ಶೋ!

ಕೊಚ್ಚಿಯಲ್ಲಿ ನಡೆದ ಯುವಂ ಕಾರ್ಯಕ್ರಮದಲ್ಲಿ ಉನ್ನಿ ಮುಕುಂದನ್ ಅವರನ್ನು ಪ್ರಧಾನಿ ಗುಜರಾತಿ ಭಾಷೆಯಲ್ಲೇ ಕೇಮ್ ಚೋ ಭೈಲಾ ಎಂದು ಮಾತನಾಡಿಸಿದಾಗ ಅಚ್ಚರಿ ಹಾಗೂ ಉತ್ಸಾಹವನ್ನು ತಡೆದುಕೊಳ್ಳಲಾಗಲಿಲ್ಲ. ನೀವು ಸ್ಟೇಜ್‌ನಿಂದಲೇ ಕೇಮ್ ಛೋ ಬೈಲಾ (Kem cho Bhaila) ಎಂದು ಮಾತನಾಡಿಸಿದ್ದು, ನನಗೆ ನಿಜವಾಗಿಯೂ ಶಾಕ್ ನೀಡಿತ್ತು. ನಾನು ನಿಮ್ಮನ್ನು ಭೇಟಿಯಾಗಬೇಕು ಹಾಗೂ ಗುಜರಾತಿ ಭಾಷೆಯಲ್ಲೇ ಮಾತನಾಡಬೇಕು  ಎಂಬುದು ನನ್ನ ದೊಡ್ಡ ಕನಸ್ಸಾಗಿತ್ತು.  ಆ ಕನಸು ಈಡೇರಿತು.  ಅದೆಂತಾ ಕ್ಷಣವಾಗಿತ್ತು ಎಂದರೆ ನೀವು ನೀಡಿದ 45 ನಿಮಿಷ ನನ್ನ ಬದುಕಿನ ಅತ್ಯಂತ ಅಮೋಘ ಕ್ಷಣವಾಗಿತ್ತು ಎಂದು ಮುಕುಂದನ್ ಬರೆದುಕೊಂಡಿದ್ದಾರೆ. 

ಅಲ್ಲದೇ ಪ್ರಧಾನಿ ನೀಡಿದ ಯಾವ ಸಲಹೆಯನ್ನು ಕೂಡ ನಾನು ಮರೆಯುವುದಿಲ್ಲ. ಅಲ್ಲದೇ ಅವರು ನೀಡಿದ ಪ್ರತಿಯೊಂದು ಸಲಹೆಯನ್ನು ಜಾರಿಗೆ ತರಲು ಬಯಸುತ್ತೇನೆ ಎಂದು ನಟ ಹೇಳಿಕೊಂಡಿದ್ದಾರೆ. ಅವಥಾ ರೆಹೆಜೋ ಸರ್ ಜೈ ಶ್ರೀಕೃಷ್ಣ ಎಂದು ಅವರು ಬರೆದುಕೊಂಡಿದ್ದಾರೆ. 

 

click me!