37.80 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಖರೀದಿಸಿದ ಆಲಿಯಾ; ಸಹೋದರಿಗೆ 2 ಅಪಾರ್ಟ್ಮೆಂಟ್ ಗಿಫ್ಟ್

Published : Apr 25, 2023, 06:01 PM ISTUpdated : Apr 25, 2023, 06:31 PM IST
37.80 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಖರೀದಿಸಿದ ಆಲಿಯಾ; ಸಹೋದರಿಗೆ 2 ಅಪಾರ್ಟ್ಮೆಂಟ್  ಗಿಫ್ಟ್

ಸಾರಾಂಶ

37.80 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಖರೀದಿಸಿದ್ದಾರೆ ಆಲಿಯಾ ಭಟ್. ಸಹೋದರಿಗೆ 2 ಅಪಾರ್ಟ್ಮೆಂಟ್  ಗಿಫ್ಟ್ ಆಗಿ ನೀಡಿದ್ದಾರೆ.  

ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ತನ್ನ ಮುದ್ದು ಮಗಳ ಆರೈಕೆ ಜೊತೆಗೆ ಸಿನಿಮಾ ಕೆಲಸದಲ್ಲೂ ಬ್ಯುಸಿಯಾಗಿದ್ದಾರೆ. ಮಗುವಿಗೆ ಜನ್ಮ ನೀಡಿದ ಕೆಲವೇ ತಿಂಗಳಲ್ಲಿ ಆಲಿಯಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಆಲಿಯಾ ಬಗ್ಗೆ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ಆಲಿಯಾ ಭಟ್ ತನ್ನ ನಿರ್ಮಾಣ ಸಂಸ್ಥೆಯಾದ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ ಪ್ರೈವೇಟ್ ಮೂಲಕ ಬಾಂದ್ರಾದಲ್ಲಿ ದುಬಾರಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಬರೋಬ್ಬರಿ 37.80 ಕೋಟಿ ಮೌಲ್ಯದ ಅಪಾರ್ಟ್ನೆಂಟ್ ಇದಾಗಿದೆಯಂತೆ. 2,497 ಚದರ ಅಡಿ ಅಪಾರ್ಟ್‌ಮೆಂಟ್ ಮುಂಬೈನ ಬಾಂದ್ರಾ ಪಶ್ಚಿಮದಲ್ಲಿರುವ ಪಾಲಿ ಹಿಲ್ ಪ್ರದೇಶದಲ್ಲಿದೆಯಂತೆ.

 2.26 ಕೋಟಿ ಮೌಲ್ಯದ ಸ್ಟ್ಯಾಂಪ್ ಡ್ಯೂಟಿ ಪಾವತಿಸಿದ್ದು ಏಪ್ರಿಲ್ 10ರಂದು ನೋಂದಾಯಿಸಲಾಗಿದೆ ಎನ್ನಲಾಗಿದೆ. ಹೊಸ ಅಪಾರ್ಟ್ಮೆಂಟ್ ಖರೀದಿಸುವ ಜೊತಗೆ ಅಲಿಯಾ ಭಟ್ ತನ್ನ ಸಹೋದರಿ ಶಾಹೀನ್ ಭಟ್ ‌ಗೆ ಎರಡು ಅಪಾರ್ಟ್ಮೆಂಟ್ ಗಳನ್ನು ಗಿಫ್ಟ್ ಆಗಿ ನೀಡುತ್ತಿದ್ದಾರಂತೆ. 2.086.75 ಚದರ ಅಡಿಯ ಜುಹುವಿನಲ್ಲಿರುವ ಎರಡು ಐಷಾರಾಮಿ ಅಪಾರ್ಟ್ನೆಂಟ್‌ಗಳನ್ನು ಸಹೋದರಿಗೆ ಗಿಫ್ಟ್ ನೀಡಿದ್ದಾರೆ. ಇವುಗಳ ಬೆಲೆ ಸುಮಾರು 7.68 ಕೋಟಿ ರೂಪಾಯಿ ಎನ್ನಲಾಗಿದೆ. 

ಗಿಫ್ಟ್ ನೀಡಿರುವ ಎರಡು ಫ್ಲಾಟ್‌ಗಳಲ್ಲಿ ಒಂದು ಫ್ಲಾಟ್‌ನ ವಿಸ್ತೀರ್ಣ 1,197 ಚದರ ಅಡಿಯಾಗಿದ್ದರೆ ಎರಡನೇ ಫ್ಲಾಟ್‌ನ ವಿಸ್ತೀರ್ಣ 889.75 ಚದರ ಅಡಿ. 30.75 ಲಕ್ಷ ರೂಪಾಯಿ ನೋಂದಾಯಿಸಿಕೊಳ್ಳಲು ಪಾವತಿಸಲಾಗಿದೆ. ಆಲಿಯಾ ಭಟ್ ಹೊಸ ಫ್ಲಾಟ್ ಖರೀದಿಸಿದ ದಿವನೇ ಎರಡು ಫ್ಲಾಟ್‌ಗಳನ್ನು ಸಹೋದರಿಗೆ ಉಡುಗೊರೆಯಾಗಿ ನೀಡಿದ್ದಾರೆ. 

ಮನೆಬಾಗಿಲಲ್ಲಿ ಅಲಿಯಾ ಬಿಚ್ಚಿಟ್ಟ ಚಪ್ಪಲಿ ಎತ್ತಿಟ್ಟ ರಣಬೀರ್: ಅಭಿಮಾನಿಗಳ ಹೃದಯಗೆದ್ದ ವಿಡಿಯೋ ವೈರಲ್

ಮುಂಬೈನಲ್ಲಿ ದುಬಾರಿ ಆಸ್ತಿಯನ್ನು ಖರೀದಿಸಿದ ಸೆಲೆಬ್ರಿಟಿ ಆಲಿಯಾ ಭಟ್ ಮಾತ್ರವಲ್ಲ. ಇತ್ತೀಚೆಗಷ್ಟೆ ಸ್ಟಾರ್ ನಟಿ ಕಾಜೋಲ್ ಕೂಡ ಖರೀದಿ ಮಾಡಿದ್ದರು. ಮುಂಬೈನಲ್ಲಿ ಸುಮಾರು 16.50 ಕೋಟಿ ರೂಪಾಯಿಯ ಅಪಾರ್ಟ್ಮೆಂಟ್ ಅನ್ನು ಖರೀದಿಸಿದ್ದರು. ಅದು ಅಪಾರ್ಟ್ಮೆಂಟ್ 2,493 ಚದರ ಅಡಿ ಕಾರ್ಪೆಟ್ ಪ್ರದೇಶವನ್ನು ಹೊಂದಿದೆ ಮತ್ತು ನಾಲ್ಕು ಕಾರ್ ಪಾರ್ಕಿಂಗ್ ಸ್ಥಳಗಳನ್ನು ಹೊಂದಿದೆ. 

ಮೊದಲ ವಿವಾಹ ವಾರ್ಷಿಕೋತ್ಸವ: ರಣಬೀರ್‌ ಜೊತೆಯ ಅಪರೂಪದ ಫೋಟೋ ಹಂಚಿಕೊಂಡ ಆಲಿಯಾ!

ಬಾಲಿವುಡ್ ನಟಿ ಮತ್ತು ನಿರ್ಮಾಪಕಿ ಅನುಷ್ಕಾ ಶರ್ಮಾ ಮತ್ತು ಮತ್ತು ಕ್ರಿಕೆಟಿಗ ಪತಿ ವಿರಾಟ್ ಕೊಹ್ಲಿ ದಂಪತಿ ಕೂಡ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಲಿಬಾಗ್‌ನಲ್ಲಿ ಎಂಟು ಎಕರೆ ಭೂಮಿಯನ್ನು ಖರೀದಿಸಿದರು. 2.54 ಎಕರೆ ಮತ್ತು 4.91 ಎಕರೆ ವಿಸ್ತೀರ್ಣದ ಜಮೀನಿನ ಬೆಲೆ ಸುಮಾರು 19.24 ಕೋಟಿ ರೂಪಾಯಿಯಾಗಿದೆ. ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ದಂಪತಿ, ಜಾನ್ವಿ ಕಪೂರ್ ಸೇರಿದಂತೆ ಅನೇಕ  ಸ್ಟಾರ್ಸ್ ಇತ್ತೀಚೆಗಷ್ಟೆ ದುಬಾರಿ ಬಂಗಲೆ ಖರೀದಿಸಿದ್ದರು. ಇದೀಗ ಆಲಿಯಾ ಭಟ್ ಕೂಡ ಹೊಸ ಅಪಾರ್ಟ್ಮೆಂಟ್ ಖರೀದಿಸಿ ಸಹೋದರಿಗೂ ಗಿಫ್ಟ್ ಮಾಡಿದ್ದಾರೆ.  


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?