ಗರ್ಭಿಣಿ ಇಲಿಯಾನಾ ಬಯಕೆ ತೀರಿಸಿದ ಸಹೋದರಿ; ಫೋಟೋ ಮೂಲಕ ಸಂತಸ ವ್ಯಕ್ತಪಡಿಸಿದ ನಟಿ

Published : Apr 25, 2023, 04:46 PM IST
ಗರ್ಭಿಣಿ ಇಲಿಯಾನಾ ಬಯಕೆ ತೀರಿಸಿದ ಸಹೋದರಿ; ಫೋಟೋ ಮೂಲಕ ಸಂತಸ ವ್ಯಕ್ತಪಡಿಸಿದ ನಟಿ

ಸಾರಾಂಶ

ಗರ್ಭಿಣಿ ಇಲಿಯಾನಾ ಬಯಕೆಯನ್ನು ಸಹೋದರಿ ತೀರಿಸಿದ್ದಾರೆ. ಫೋಟೋ ಮೂಲಕ ನಟಿ ಸಂತಸ ವ್ಯಕ್ತಪಡಿಸಿದ್ದಾರೆ.  

ಖ್ಯಾತ ನಟಿ ಇಲಿಯಾನಾ ಡಿಕ್ರೂಜ್ ಇಚ್ಚೀಚೆಗಷ್ಟೆ ಗುಡ್‌ನ್ಯೂಸ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದರು. ಮದುವೆಯಾಗದೆ, ಮಗುವಿನ ತಂದೆ ಯಾರೆಂದು ರಿವೀಲ್ ಮಾಡದೆ ತಾಯಿ ಆಗುತ್ತಿರುವ ವಿಚಾರ ಹಂಚಿಕೊಳ್ಳುವ ಮೂಲಕ ಇಲಿಯಾನಾ ಅಚ್ಚರಿ ಮೂಡಿಸಿದ್ದಾರೆ.  ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಿದ್ದ ಇಲಿಯಾನಾ ಹೆಚ್ಚಾಗಿ ಹಾಟ್ ಫೋಟೋ ಶೂಟ್ ಮೂಲಕ ಮಿಂಚುತ್ತಿದ್ದರು. ಇದೀಗ ತಾನು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ತಾಯಿ ಆಗುತ್ತಿರುವ ಸಂತಸದ ವಿಚಾರವನ್ನು ಇಲಿಯಾನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇಲಿಯಾನಾ ಎರಡು ಪೋಟೋ ಶೇರ್ ಮಾಡಿ, ಒಂದು ಫೋಟೋದಲ್ಲಿ ಅಡ್ವೆಂಚರ್ ಆರಂಭವಾಗುತ್ತಿದೆ ಎಂದು ಮಗುವಿನ ಬಟ್ಟೆ ಹಂಚಿಕೊಂಡಿದ್ದರು ಮತ್ತೊಂದು ಫೋಟೋದಲ್ಲಿ ಅಮ್ಮ ಎನ್ನುವ ಪೆಂಡೆಂಟ್ ಧರಿಸಿರುವ ಫೋಟೋ ಹಂಚಿಕೊಂಡಿದ್ದರು. ಜೊತೆಗೆ 'ನನ್ನ ಪುಟ್ಟ ಡಾರ್ಲಿಂಗ್ ಭೇಟಿಯಾಗಲು ಕಾಯಲು ಸಾಧ್ಯವಿಲ್ಲ, ಶೀಘ್ರದಲ್ಲೇ' ಎಂದು ಫೋಟೆಗೆ ಕ್ಯಾಪ್ಷನ್ ನೀಡಿದ್ದರು.

ಇಲಿಯಾ ಸದ್ಯ ತಾಯ್ತಿನ ಆನಂದಿಸುತ್ತಿದ್ದಾರೆ. ಕಲವೇ ದಿನಗಳಲ್ಲೇ ತಾಯಿಯಾಗುತ್ತಿರುವ ಇಲಿಯಾನಾ ಗರ್ಭಿಣಿ ಬಯಕೆ ಬಗ್ಗೆ ಬಹಿರಂಗ ಪಡಿಸಿದ್ದರಾರೆ. ಗರ್ಭಿಣಿ ಎಂದರೆ ಏನಾದರೂ ಬಯಕೆ ಇರುವುದು ಸಾಮಾನ್ಯ, ಅದರಂತೆ ಇಳಿಯಾನಾಗೂ ಬಯಕೆಗಳಿದ್ದು ಅವರ ಕುಟುಂಬದವರು ತೀರಿಸುತ್ತಿದ್ದಾರೆ. ಇಲಿಯಾನಗೆ ಬ್ಲಾಕ್ ಫಾರೆಸ್ಟ್ ಕೇಕ್ ಎಂದರೆ ತುಂಬಾ ಇಷ್ಟ. ಅದರಂತೆ ಅವರ ಸಹೋದರಿ ಬ್ಲಾಕ್ ಫಾರೆಸ್ಟ್ ಕೇಕ್ ಮಾಡಿ ಕೊಟ್ಟಿದ್ದಾರೆ. ಅದರ ಫೋಟೋವನ್ನು ಇಲಿಯಾನಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

Ileana D'Cruz: ಮದುವೆ ಆಗದೆ ತಾಯಿ ಆಗ್ತಿರುವ ನಟಿ ಇಲಿಯಾನಾ; ಮಗುವಿನ ತಂದೆ ಯಾರೆಂದು ಕೇಳ್ತಿದ್ದಾರೆ ನೆಟ್ಟಿಗರು

ಸಹೋದರಿ ಅದ್ಭುತವಾದ ಕೇಕ್ ತಯಾರಿಸುತ್ತಾಳೆ ಎಂದು ಬರೆದುಕೊಂಡಿದ್ದಾರೆ.  ಮತ್ತೊಂದು ಫೋಟೋದಲ್ಲಿ ಕೇಕ್ ಸ್ಲೈಸ್ ಶೇರ್ ಮಾಡಿ ಅಮ್ಮ ಬೇಗ ಬಾ ಎಂದು ಬರೆದುಕೊಂಡಿದ್ದಾರೆ. ಇಲಿಯಾನಾ ಸದ್ಯ ತನ್ನ ಬಯಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಕುಟುಂಬದವರು ಅವರಿಗೆ ಇಷ್ಟವಾದ ತಿನಿಸುಗಳನ್ನು ಮಾಡಿ ಕೊಡುತ್ತಿದ್ದಾರೆ. ಇಲಿಯಾನ ತಾಯಿ ತುಂಬಾ ಸಂತೋಷವಾಗಿದ್ದು ಮೊಮ್ಮಗಳನ್ನು ನೋಡಲು ಕಾಯುತ್ತಿದ್ದಾರೆ. 

ಇಲಿಯಾನಾ ತಾಯಿ ಪ್ರತಿಕ್ರಿಯೆ 

ತಾಯಿ ಆಗುತ್ತಿರುವ ಸಂತಸದ ವಿಚಾರವನ್ನು ಇಲಿಯಾನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಅವರ ತಾಯಿ ಕೂಡ ಸಂತಸ ವ್ಯಕ್ತವಪಡಿಸಿದ್ದರು. ಅನೇಕರು ಅಭಿನಂದನೆ ಸಲ್ಲಿಸುತ್ತಿದ್ದರು. ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಗಣ್ಯರು ಸಹ ಪ್ರತಿಕ್ರಿಯೆ ನೀಡಿ ಅಭಿನಂದಿಸುತ್ತಿದ್ದಾರೆ. ಜೊತೆಗೆ ಇಲಿಯಾನಾ ತಾಯಿ ಕೂಡ ಪ್ರತಿಕ್ರಿಯೆ ನೀಡಿದ್ದರು. ಮದುವೆಗೂ ಮುನ್ನ ಪ್ರೆಗ್ನೆಂಟ್ ಆಗಿರುವ ಮಗಳ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದ ತಾಯಿ ಸಮೀರಾ ಸಖತ್ ಥ್ರಿಲ್ ಆಗಿದ್ದಾರೆ. 'ಮೊದಲ ಮೊಮ್ಮಗುವನ್ನು ಭೇಟಿಯಾಗಲು ಉತ್ಸುಕಳಾಗಿದ್ದೀನಿ' ಎಂದು ಹೇಳಿದ್ದರು.

Ileana D'Cruz: ಮದ್ವೆ ಆಗದೆ ಪ್ರೆಗ್ನೆಂಟ್ ಆದ ಇಲಿಯಾನಾ; ಮಗಳ ನಿರ್ಧಾರಕ್ಕೆ ತಾಯಿಯ ರಿಯಾಕ್ಷನ್ ಹೀಗಿದೆ

ಅಂದಹಾಗೆ ಇಲಿಯಾನಾ ಯಾರನ್ನು ಮದುವೆಯಾಗಿದ್ದಾರೆ ಅಥವಾ ಯಾರ ಜೊತೆ ಸಂಬಂಧದಲ್ಲಿದ್ದಾರೆ, ಮಗುವಿನ ತಂದೆಯಾರು ಎನ್ನುವ ಬಗ್ಗೆ ಬಹಿರಂಗ ಪಡಿಸಿಲಿಲ್ಲ. ಇಲಿಯಾನಾ, ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಆಗಾಗ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಅನೇಕ ಬಾರಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಪ್ರವಾಸಕ್ಕೆ ಹೋದ ಸಮಯದಲ್ಲೂ ಕತ್ರಿನಾ ಗ್ಯಾಂಗ್ ಜೊತೆ ಇಲಿಯಾನಾ ಕಾಣಿಸಿಕೊಂಡಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!