ಪಾರ್ವತಮ್ಮ ಎಷ್ಟೇ ಪ್ರಯತ್ನಿಸಿದ್ರೂ ಮಗ ಶಿವರಾಜ್‌ಕುಮಾರ್ ಸಿನಿಮಾಗೆ ಈ ನಟಿಯ ಡೇಟ್ ಸಿಗಲಿಲ್ಲ

Published : Mar 03, 2025, 01:35 PM ISTUpdated : Mar 03, 2025, 01:38 PM IST
ಪಾರ್ವತಮ್ಮ ಎಷ್ಟೇ ಪ್ರಯತ್ನಿಸಿದ್ರೂ ಮಗ ಶಿವರಾಜ್‌ಕುಮಾರ್ ಸಿನಿಮಾಗೆ ಈ ನಟಿಯ ಡೇಟ್ ಸಿಗಲಿಲ್ಲ

ಸಾರಾಂಶ

ಪಾರ್ವತಮ್ಮ ರಾಜ್‌ಕುಮಾರ್, ಶಿವರಾಜ್‌ಕುಮಾರ್ ಸಿನಿಮಾಗೆ ಈ ನಟಿ ನಟಿಸಬೇಕೆಂದು ಬಯಸಿದ್ದರು, ಆದರೆ ಸಾಧ್ಯವಾಗಲಿಲ್ಲ. ಆ ಸಿನಿಮಾ ಯಾವುದು ಅಂತ ಗೊತ್ತಾ?

ಬೆಂಗಳೂರು: ಪಾರ್ವತಮ್ಮ ರಾಜ್‌ಕುಮಾರ್ ಚಂದನವನದ ಆಲದ ಮರ. ಪಾರ್ವತಮ್ಮ ರಾಜ್‌ಕುಮಾರ್ ಪರಿಚಯಿಸಿದ ಕಲಾವಿದರು ಇಂದು ಚಿತ್ರರಂಗವನ್ನೇ ಆಳುತ್ತಿದ್ದಾರೆ. ಸುಧಾರಾಣಿ, ಪ್ರೇಮಾ, ರಕ್ಷಿತಾ , ಅನು ಪ್ರಭಾಕರ್, ರಮ್ಯಾ ಸೇರಿದಂತೆ ಹಲವು ನಟಿಯರು ರಾಜ್‌ಕುಮಾರ್ ಕುಟುಂಬದ ಆಶೀರ್ವಾದದಿಂದ ಚಿತ್ರರಂಗಕ್ಕೆ ಬಂದವರು. ಈ ಬಗ್ಗೆ ಈ ನಟಿಯರೇ ಹಲವು ಬಾರಿ ಹೇಳಿಕೊಂಡಿದ್ದಾರೆ. ಆದ್ರೆ ಒಮ್ಮೆ ಮಗ ಶಿವರಾಜ್‌ಕುಮಾರ್ ನಟನೆಯ ಸಿನಿಮಾವೊಂದಕ್ಕೆ ಆ ನಟಿಯೇ ಬೇಕೆಂದು ಆಸೆಪಟ್ಟಿದ್ದರು. ಆದ್ರೆ ಡೇಟ್ ಸಿಗದ ಹಿನ್ನೆಲೆ ಆ ಚಿತ್ರಕ್ಕೆ ಮತ್ತೋರ್ವ ನಾಯಕಿ ಬಂದಿದ್ದರು. ಶಿವರಾಜ್‌ಕುಮಾರ್ ಸಿನಿ ಕೆರಿಯರ್‌ನಲ್ಲಿ ಇದನ್ನು ಅತ್ಯದ್ಭುತವಾದ ಸಿನಿಮಾ ಆಗಿದೆ. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಜೊತೆಗೆ ನಟಿಯಾಗಿ ಪ್ರೇಮಾ ನಟಿಸಿದ್ದರು. 

1995ರಲ್ಲಿ ಬಿಡುಗಡೆಯಾದ ಓಂ ಸಿನಿಮಾಗೆ ಮೊದಲ ಆಯ್ಕೆ ಸುಧಾರಾಣಿಯಾಗಿದ್ದರು. ಆದ್ರೆ ಅಂದು ತಮಿಳು ಸೇರಿದಂತೆ ಸುಧಾರಾಣಿ ಹಲವು  ಸಿನಿಮಾಗಳನ್ನು ಸುಧಾರಾಣಿ ಒಪ್ಪಿಕೊಂಡಿದ್ದರು. ಹಾಗಾಗಿ ಏನೇ ಮಾಡಿದರೂ ಸುಧಾರಾಣಿ ಅವರ ಡೇಟ್ ಸಿಗಲಿಲ್ಲ. ಓಂ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಜೊತೆ ಸುಧಾರಾಣಿ ನಟಿಸಲಿ ಎಂದು ಪಾರ್ವತಮ್ಮ ರಾಜ್‌ಕುಮಾರ್ ಆಸೆಪಟ್ಟಿದ್ದರು. ಅಂತಿಮವಾಗಿ ಓಂಗೆ ಪ್ರೇಮಾ ಆಯ್ಕೆಯಾಗಿದ್ದರು. ಉಪೇಂದ್ರ ಬರೆದು ನಿರ್ದೇಶಿಸಿದ ಓಂ ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು.

ಬೆಂಗಳೂರಿನ ಅಪರಾಧ ಭೂಗತ ಲೋಕದ ಕಥೆಯನ್ನು ಒಳಗೊಂಡಿದ್ದ ಸಿನಿಮಾದಲ್ಲಿ ರೌಡಿಶೀಟರ್‌ ನಟಿಸಿದ್ದರು. ಬೆಕ್ಕಿನ ಕಣ್ಣು ರಾಜೇಂದ್ರ, ತನ್ವೀರ್, ಕೊರಂಗು ಕೃಷ್ಣ,  ಶ್ರೀಶಾಂತಿ, ಜಿವಿ ಶಿವಾನಂದ್, ಸಾಧು ಕೋಕಿಲಾ ಮತ್ತು ಜೇಡರಳ್ಳಿ ಕೃಷ್ಣಪ್ಪ ಓಂ ಸಿನಿಮಾದಲ್ಲಿ ಸಹ ನಟರಾಗಿ ನಟಿಸಿದ್ದರು. ಪೂರ್ಣಿಮಾ ಎಂಟರ್‌ಪ್ರೈಸೆಸ್ ನಿರ್ಮಾಣದಲ್ಲಿ ಬಂದಿದ್ದ ಸಿನಿಮಾವನ್ನು ಶ್ರೀ ವಜ್ರೇಶ್ವರಿ ಕಂಬೈನ್ಸ್ ವಿತರಣೆ ಮಾಡಿತ್ತು. ಚಿತ್ರದ ಹಾಡುಗಳು ಮತ್ತು ಡೈಲಾಗ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುತ್ತವೆ. 

ಇದನ್ನೂ ಓದಿ: ಸೌಂದರ್ಯ ಜಯಮಾಲಾ ಮದ್ವೆಯಲ್ಲಿ ಸುಧಾರಾಣಿ ಮೇಲೆ ಮಾಳವಿಕಾ, ಶ್ರುತಿ ಕೋಪ: ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗೋಯ್ತು ಘಟನೆ!

ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಸುಧಾರಾಣಿ, ತಮಗೆ ಓಂ ಸಿನಿಮಾ ಆಫರ್ ಬಂದಿರೋದನ್ನು ಹೇಳಿದ್ದರು. ಜನುಮದ ಜೋಡಿ ಸೇರಿದಂತೆ ಹಲವು ಸಿನಿಮಾಗಳು ಆಫರ್ ಬಂದಿದ್ದವು. ಎಲ್ಲವೂ ನಾನೇ ಮಾಡುತ್ತೇನೆ ಅನ್ನೋದು ತಪ್ಪು. ಹಾಗಾದಾಗ ಮಾತ್ರ ಎಲ್ಲಾ ಕಲಾವಿದರು ಬೆಳೆಯಲು ಸಾಧ್ಯವಾಗುತ್ತದೆ. ನನ್ನ ಸಿನಿ ಕೆರಿಯರ್‌ನಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿರೋದಕ್ಕೆ ತುಂಬಾ ಖುಷಿ ಇದೆ. ಒಂದೇ ರೀತಿಯ ಪಾತ್ರಗಳಿಗೆ ನಾನು ಅಂಟಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ. 

ಶಿವರಾಜ್‌ಕುಮಾರ್ ಅವರ ಮೊದಲ ಚಿತ್ರಕ್ಕೆ ನಾಯಕಿಯಾಗಿ ಸುಧಾರಾಣಿ ಆಯ್ಕೆಯಾಗಿದ್ದರು. 19ನೇ ಜೂನ್ 1986ರಂದು ಬಿಡುಗಡೆಯಾದ ಆನಂದ್ ಸಿನಿಮಾದಲ್ಲಿ ತಾರಾ, ತೂಗುದೀಪ ಶ್ರೀನಿವಾಸ್, ಜಯಂತಿ, ಗುರುದತ್, ಉದಯ್ ಶಂಕರ್, ಬಾಲರಾಜ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು.

ಇದನ್ನೂ ಓದಿ: ಸಿನಿಮಾದಿಂದ ಸೀರಿಯಲ್​ಗೆ ಬಂದ್ರೂ 45 ವರ್ಷದಿಂದ ಸುಧಾರಾಣಿ ಬೆನ್ನು ಬಿಡದ 'ಮಾವ': ವಿಡಿಯೋ ವೈರಲ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?