ಗರ್ಭಪಾತಕ್ಕೆ ನಿರ್ದೇಶಕನಿಂದ 75 ಲಕ್ಷಕ್ಕೆ ಬೇಡಿಕೆ ಇಟ್ರಾ ರಮ್ಯಾ ಕೃಷ್ಣನ್​? ಡಿವೋರ್ಸ್​ ಸುದ್ದಿ ಬೆನ್ನಲ್ಲೇ ಇದೆಂಥ ಗುಸುಗುಸು?

Published : Mar 03, 2025, 01:02 PM ISTUpdated : Mar 03, 2025, 01:37 PM IST
ಗರ್ಭಪಾತಕ್ಕೆ ನಿರ್ದೇಶಕನಿಂದ 75 ಲಕ್ಷಕ್ಕೆ ಬೇಡಿಕೆ ಇಟ್ರಾ ರಮ್ಯಾ ಕೃಷ್ಣನ್​? ಡಿವೋರ್ಸ್​ ಸುದ್ದಿ ಬೆನ್ನಲ್ಲೇ ಇದೆಂಥ ಗುಸುಗುಸು?

ಸಾರಾಂಶ

ನಟಿ ರಮ್ಯಾ ಕೃಷ್ಣನ್ ವೃತ್ತಿ ಜೀವನದಲ್ಲಿ ಯಶಸ್ಸು ಕಂಡಿದ್ದಾರೆ. ಇತ್ತೀಚೆಗೆ ಪತಿ ಕೃಷ್ಣವಂಶಿಯಿಂದ ದೂರವಿದ್ದರೂ, ಸಂಬಂಧ ಚೆನ್ನಾಗಿದೆ ಎಂದು ಹೇಳಿದ್ದಾರೆ. ಈ ನಡುವೆ, ರಮ್ಯಾ ಅವರು ನಿರ್ದೇಶಕ ಕೆ.ಎಸ್. ರವಿಕುಮಾರ್ ಅವರನ್ನು ಪ್ರೀತಿಸುತ್ತಿದ್ದರು, ಆ ಸಮಯದಲ್ಲಿ ಗರ್ಭಿಣಿಯಾಗಿದ್ದರು ಎಂಬ ಹಳೆಯ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ರಮ್ಯಾ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 'ಬಾಹುಬಲಿ' ಚಿತ್ರದಲ್ಲಿನ ಶಿವಗಾಮಿ ಪಾತ್ರದಿಂದ ಅವರು ಹೆಚ್ಚು ಪ್ರಸಿದ್ಧಿ ಪಡೆದರು.

ನಟಿ ರಮ್ಯಾ ಕೃಷ್ಣನ್ ಎಂದಾಕ್ಷಣ ಸಿನಿ ವೀಕ್ಷಕರ ಕಣ್ಣಮುಂದೆ ಬರುವುದು ರಕ್ತ ಕಣ್ಣೀರು ಚಿತ್ರದ ಬಾ ಬಾರೋ ರಸಿಕ... ಹಾಡು. ಉಪೇಂದ್ರ ಜೊತೆ ಮೈಚಳಿ ಬಿಟ್ಟು ರಮ್ಯಾ ನಟಿಸಿ ಎಲ್ಲರನ್ನೂ ರೋಮಾಂಚನಗೊಳಿಸಿದ್ದರು ನಟಿ ರಮ್ಯಾ. ನಾಯಕರಿಗೆ 50-60 ವರ್ಷವಾದರೂ ಹೀರೋ ಆಗಿಯೇ ಮುಂದುವರೆಯುತ್ತಾರೆ,  ನಟಿಯರಿಗೆ 40 ದಾಟುತ್ತಿದ್ದಂತೆಯೇ ಸೈಡ್​ ರೋಲ್​ಗಳು ಹುಡುಕಿ ಬರುತ್ತವೆ ಎನ್ನುವ ಮಾತು ಇಂಡಸ್ಟ್ರಿಯಲ್ಲಿ ಮಾಮೂಲು. ಆದರೆ ಅದಕ್ಕೆ ಅಪವಾದ ಎಂಬಂತೆ, ರಮ್ಯಾಕೃಷ್ಣ ಅವರು, 1990ರಿಂದ ಹಿಡಿದು 2-3 ದಶಕ ಸಿನಿರಂಗವನ್ನು ಆಳುತ್ತಲೇ ಬಂದಿದ್ದಾರೆ.  ಈಗ ವಯಸ್ಸು 53 ಆದರೂ ಅವರ ವರ್ಚಸ್ಸು ಹಾಗೆಯೇ ಉಳಿದುಕೊಂಡಿದೆ.  ಈಚೆಗೆ ಇವರು ಸದ್ದು ಮಾಡುತ್ತಿರುವುದು ಪತಿ ಕೃಷ್ಣವಂಶಿ ಅವರಿಂದ ಡಿವೋರ್ಸ್​ ಪಡೆದುಕೊಂಡಿದ್ದಾರೆ ಎನ್ನುವ ಕಾರಣಕ್ಕೆ. ಇದಕ್ಕೆ ಖುದ್ದು ಕೃಷ್ಣ ವಂಶಿ ಅವರು ಸ್ಪಷ್ಟನೆ ನೀಡಿದ್ದಾರೆ. ನಾವು ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಆದರೆ ಸಾಧ್ಯವಾದಾಗಲೆಲ್ಲ ನಾವು ಪರಸ್ಪರ ಭೇಟಿಯಾಗುತ್ತಲೇ ಇರುತ್ತೇವೆ. ರಮ್ಯಾ  ವೃತ್ತಿ ಹಾಗೂ ವೈಯಕ್ತಿಕ ಜೀವನ  ನಿಭಾಯಿಸುತ್ತಿದ್ದಾರೆ.  ಬುದ್ಧಿವಂತ ಮಹಿಳೆ ಎಂದು ಹೊಗಳಿರುವ ಕೃಷ್ಣ ಅವರು, ತಮ್ಮ ದಾಂಪತ್ಯ ಜೀವನ ಚೆನ್ನಾಗಿದೆ ಎಂದಿದ್ದಾರೆ.
 
ಈ ಸುದ್ದಿ ಸಕತ್​ ಸದ್ದು ಮಾಡುತ್ತಿರುವ ಮಧ್ಯೆಯೇ, ಇದೀಗ ರಮ್ಯಾಕೃಷ್ಣ ಅವರ ಹಳೆಯ ವಿಷಯವೊಂದನ್ನು ಕೆದಕಲಾಗುತ್ತಿದೆ. ಅದೇನೆಂದರೆ,  ತೆಲುಗು ಚಲನಚಿತ್ರದ ನಿರ್ದೇಶಕ ಕೃಷ್ಣ ವ೦ಶಿಯವರನ್ನು  2003ರ ಜೂನ್​ ತಿಂಗಳಿನಲ್ಲಿ  ಮದುವೆಯಾಗುವ ಮುನ್ನ  ಇವರು ಈ ಮದುವೆಗೂ ಮುನ್ನ  ಖ್ಯಾತ ನಿರ್ದೇಶಕ  ಕೆ.ಎಸ್ ರವಿಕುಮಾರ್  ಅವರನ್ನು ಪ್ರೀತಿಸುತ್ತಿದ್ದರು ಎಂಬ ಸುದ್ದಿ. ಈ ಸುದ್ದಿ ಮತ್ತೆ ಸದ್ದು ಮಾಡುತ್ತಿದೆ. ರಮ್ಯಾ ಹಲವಾರು ಚಿತ್ರಗಳಲ್ಲಿ ಚಲನಚಿತ್ರ ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರೊಂದಿಗೆ ಬ್ಯಾಕ್ ಟು ಬ್ಯಾಕ್ ಕೆಲಸ ಮಾಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ರವಿಕುಮಾರ್ ಅವರೊಂದಿಗೆ ಈ ಚಿತ್ರಗಳಲ್ಲಿ ಕೆಲಸ ಮಾಡುವಾಗ ಇಬ್ಬರೂ ಪರಸ್ಪರ ಹತ್ತಿರವಾಗಿದ್ದರು. ಪರಸ್ಪರ ಡೇಟಿಂಗ್ ಕೂಡ ಆರಂಭಿಸಿದರು. ವಿಶೇಷವೆಂದರೆ ರವಿಕುಮಾರ್ ಅವರಿಗೆ ಆಗಲೇ ಮದುವೆಯಾಗಿತ್ತು. ರಮ್ಯಾ ಜೊತೆ ರವಿಕುಮಾರ್​ ಅವರ  ಡೇಟಿಂಗ್ ರವಿಕುಮಾರ್​ ಪತ್ನಿಗೂ ತಿಳಿದಿತ್ತು ಎನ್ನಲಾಗಿದೆ. ಅವರು ನಟಿ ರಮ್ಯಕೃಷ್ಣ ಅವರಿಗೆ ಬೆದರಿಕೆ ಕೂಡ ಹಾಕಿದ್ದರು ಎಂಬುದಾಗಿ ತಿಳಿದು ಬಂದಿದೆ. 

ಭಾರತೀಯರ 'ಬಿಕಿನಿ' ಮನಸ್ಥಿತಿಗೆ ಸೋನಾಕ್ಷಿ ಟೀಕೆ: ಬುರ್ಖಾ ತೊಟ್ಟು ಪಾಕ್​ಗೆ ಹೋಗು ಎಂದ ನೆಟ್ಟಿಗರು!

 ಈ ನಡುವೆಯೇ ರಮ್ಯಾ  ಗರ್ಭಿಣಿಯಾಗಿದ್ದರು. ಈ ವಿಷಯ ಬಹಿರಂಗಗೊಳ್ಳುತ್ತಲೇ ರವಿಕುಮಾರ್ ಅವರ ಮನೆಯ ಒಳಗೆ ಕೂಡ ಪರಿಸ್ಥಿತಿ ಹದಗೆಡಲು ಪ್ರಾರಂಭವಾಗಿತ್ತು. ಇದು ಬಹಳ ಸುದ್ದಿಯಾಗುತ್ತಲೇ ರಮ್ಯಾ ಅವರಿಗೆ ಗರ್ಭಪಾತ ಮಾಡಿಸಿಕೊಳ್ಳಲು ರವಿಕುಮಾರ್​ ತಾಕೀತು ಮಾಡಿದ್ದರು. ಇದಕ್ಕಾಗಿ ರಮ್ಯಾ  75 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎನ್ನುವ ಸುದ್ದಿ ಇದೆ. ಆದರೆ ಈ ಸುದ್ದಿಯನ್ನು ರಮ್ಯಾ  ನಿರಾಕರಿಸಿದ್ದರು ಕೂಡ. ಇದೀಗ ಮತ್ತದೇ ಸುದ್ದಿ ಮುನ್ನೆಲೆಗೆ ಬರುತ್ತಿದೆ. ಆದರೆ ಇದುವರೆಗೂ ನಟಿ ಆ ಬಗ್ಗೆ ವಿಷಯ ಪ್ರಸ್ತಾಪಿಸಿಲ್ಲ. ನಂತರ ಅವರ ಮದುವೆ ತೆಲುಗು ಚಲನಚಿತ್ರದ ನಿರ್ದೇಶಕ ಕೃಷ್ಣ ವ೦ಶಿಯವರ ಜೊತೆ ನಡೆದಿದ್ದು, ಒಬ್ಬ ಪುತ್ರನಿದ್ದಾನೆ. 
 

ಚೆನ್ನೈ ಮೂಲದ ರಮ್ಯಾ, ತೆಲುಗು , ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ನಾಲ್ಕು ಫಿಲ್ಮ್​ಫೇರ್​  ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಮೂರು ನ೦ದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ  ರಮ್ಯಾ ಕೃಷ್ಣ ಎಂಬ ಹೆಸರಿನಿಂದ ಇವರು ಫೇಮಸ್​. ಮೋಡಿ ಮಾಡುವ ಅಭಿನಯ, ನೃತ್ಯದ ಮೂಲಕ ಎಲ್ಲರ ಹೃದಯ ಗೆದ್ದಿರುವ ನಟಿ   ಭರತನಾಟ್ಯ,ಕೂಚಿಪೂಡಿಯಂಥ ಶಾಸ್ತ್ರೀಯ ನೃತ್ಯಗಳಲ್ಲಿಯೂ ಎತ್ತಿದ ಕೈ.  ‘ಬಾಹುಬಲಿ’ ಚಿತ್ರದಲ್ಲಿ ಶಿವಗಾಮಿ (ದೇವಸೇನಾ) ಪಾತ್ರದಲ್ಲಿ ನಟಿಸಿದ್ದ ‘ಬಾಹುಬಲಿ’ ತಾಯಿ ರಮ್ಯಾ ಕೃಷ್ಣನ್ ಈ ಚಿತ್ರದಲ್ಲಿ ರಮ್ಯಾ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಲ್ಲದೆ, ಚಿತ್ರದಲ್ಲಿನ ಅವರ ಸಂಭಾಷಣೆಗಳಿಗೆ ಅಭಿಮಾನಿಗಳು ಶಿಳ್ಳೆಯ ಮೇಲೆ ಶಿಳ್ಳೆ ಹೊಡೆದಿದ್ದರು.

ಇದನ್ನು ಹಚ್ಚಿ, ನನ್ನಂತೇ ಹೊಳೆಯಿರಿ... ಎನ್ನುವ ನಟಿಗೆ ಚರ್ಮದ ಕಾಯಿಲೆ! ಖುದ್ದು ಯಾಮಿ ಹೇಳಿದ್ದೇನು ಕೇಳಿ...
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?