ಕ್ರೈಂ, ಥ್ರಿಲ್ಲರ್ ಜೊತೆ ಹಾರರ್; ಈ ಮಲಯಾಳಂ ಸಿನಿಮಾ ನೋಡಿ ಫಿದಾ ಆಗದವರೇ ಇಲ್ಲ!

Published : Mar 03, 2025, 12:36 PM ISTUpdated : Mar 03, 2025, 12:41 PM IST
ಕ್ರೈಂ, ಥ್ರಿಲ್ಲರ್ ಜೊತೆ ಹಾರರ್; ಈ ಮಲಯಾಳಂ ಸಿನಿಮಾ ನೋಡಿ ಫಿದಾ ಆಗದವರೇ ಇಲ್ಲ!

ಸಾರಾಂಶ

ಮಲಯಾಳಂನ ಕ್ರೈಂ, ಥ್ರಿಲ್ಲರ್ ಹಾಗೂ ಹಾರರ್ ಕಥಾಹಂದರ ಹೊಂದಿರುವ ಸಿನಿಮಾ ನಿಮ್ಮನ್ನು ರಂಜಿಸಲಿದೆ. ಕೆಂಪು ಫ್ರಿಜ್‌ನ ರಹಸ್ಯವನ್ನು ಭೇದಿಸುವ ಪೊಲೀಸ್ ಅಧಿಕಾರಿಯ ಕಥೆ ನಿಮ್ಮನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತದೆ.

ಬೆಂಗಳೂರು: ಕಾಮಿಡಿ, ರೊಮ್ಯಾಂಟಿಕ್ ಸಿನಿಮಾಗಳನ್ನು ನೋಡಿ ಬೇಸರವಾಗಿದೆಯಾ? ಹಾಗಿದ್ರೆ ನಿಮಗಾಗಿ ಭರಪೂರ ಮನರಂಜನೆಯುಳ್ಳ ಸಿನಿಮಾವನ್ನು ತಂದಿದ್ದೇವೆ. ಈ ಸಿನಿಮಾ ಕ್ರೈಂ, ಥ್ರಿಲ್ಲರ್ ಜೊತೆಯಲ್ಲಿ ಹಾರರ್ ಟಚ್ ಹೊಂದಿದೆ. ಹಾಗಾಗಿ ನಿಮ್ಮ ಹಾರ್ಟ್ ವೀಕ್ ಆಗಿದ್ರೆ ಈ ಸಿನಿಮಾವನ್ನು ಒಬ್ಬರೇ ನೋಡಬೇಡಿ. ಅದರಲ್ಲಿಯೂ ರಾತ್ರಿ ಈ ಸಿನಿಮಾ ನೋಡುತ್ತಿದ್ದರೆ ಸಾವಧಾನವಾಗಿರಬೇಕು. 2 ಗಂಟೆಯ ಈ ಸಿನಿಮಾ ನಿಮ್ಮನ್ನು ಕೊನೆ ಕ್ಷಣದವರೆಗೂ ಹಿಡಿದಿಟ್ಟುಕೊಳ್ಳುವ ಸಾಮಾರ್ಥ್ಯವನ್ನು ಹೊಂದಿದೆ. ಸಿನಿಮಾದ ಆರಂಭವೇ ಭಯಾನಕ ಸಸ್ಪೆನ್ಸ್‌ನಿಂದ ಶುರುವಾಗುತ್ತದೆ. ಹಾಗೆ ಚಿತ್ರದ ಸನ್ನಿವೇಶಗಳು ಒಂದಕ್ಕೊಂದು ಲಿಂಕ್ ಆಗಿರೋದರಿಂದ ನಿಮಗೆ ಎಲ್ಲಿಯೂ ಬೋರ್ ಆಗಲ್ಲ. ಇದು ಓಟಿಟಿಯ ಬೆಸ್ಟ್ ಸಿನಿಮಾಗಳಲ್ಲಿ ಒಂದಾಗಿದೆ. 2 ಗಂಟೆ 8 ನಿಮಿಷಗಳ ಚಲನಚಿತ್ರದ ಕಥೆಯ ಕೊಳದಲ್ಲಿ ಪ್ರಾರಂಭವಾಗಿ ಕೆಂಪು ಫ್ರಿಜ್‌ನ ರಹಸ್ಯವನ್ನು ಪರಿಹರಿಸುವ ಸುತ್ತ ಸುತ್ತುತ್ತದೆ.

2024ರಲ್ಲಿ ಬಿಡುಗಡೆಯಾದ ಈ ಮಲಯಾಳಂ ಸಿನಿಮಾ ಎಲ್ಲಾ ವರ್ಗದವರಿಗೂ ಇಷ್ಟವಾಗುತ್ತದೆ. ಆರಂಭದಲ್ಲಿ ಹಾರರ್ ಅನ್ನಿಸಿದರೂ ಅಂತಿಮವಾಗಿ ಚಿತ್ರ ನೋಡಿದ ಆನಂದ ನಿಮಗಾಗುತ್ತದೆ. ಪೊಲೀಸ್ ಸ್ಟೋರಿ 2 ಸಿನಿಮಾ ಶುರುವಾಗುತ್ತಿದ್ದಂತೆ ಭಯಾನಕ ಸನ್ನಿವೇಶಗಳು ಶುರುವಾಗುತ್ತವೆ. ಪಕ್ಕದಲ್ಲಿ ಕುಳಿತವರ ಕೈ ಹಿಡಿದುಕೊಳ್ಳುವಷ್ಟು ಭಯವನ್ನು ಉಂಟು ಮಾಡುತ್ತದೆ. ಚಿತ್ರದ ಕ್ಲೈಮ್ಯಾಕ್ಸ್ ನಿಮ್ಮಲ್ಲಿನ ಕುತೂಹಲತೆಯನ್ನು ಹೆಚ್ಚಿಸುತ್ತದೆ. ಇಷ್ಟು ಮಾತ್ರವಲ್ಲ ಈ ಸಿನಿಮಾ ನೋಡಿದ ನಂತರ ನೀವು ಬಹುದಿನಗಳವರೆಗೆ ಬೇರೆ ಯಾವುದೇ ಸಿನಿಮಾವನ್ನು ನೋಡಲು ಸಾಧ್ಯವಾಗುವುದಿಲ್ಲ. ಹೋದಲ್ಲಿ, ಬಂದಲ್ಲಿ ನಿಮಗೆ ಚಿತ್ರದ ದೃಶ್ಯಗಳು ಕಣ್ಮುಂದೆ ಬಂದಂತೆ ಆಗುತ್ತದೆ.

ಇದನ್ನೂ ಓದಿ:  ಸೌಥ್‌ನ ರಿಮೇಕ್‌ ಆದ್ರೂ 60ಕ್ಕೆ 379 ಕೋಟಿ ಗಳಿಕೆ; ಮುಳುಗುತ್ತಿದ್ದ ನಟನಿಗೆ ಆಸರೆಯಾದ ಸೂಪರ್‌ ಹಿಟ್ ರೊಮ್ಯಾಂಟಿಕ್ ಸಿನಿಮಾ!

ಪೊಲೀಸ್ ಸ್ಟೋರಿ 2 ಕಥೆ ಏನು?
ಮಂತ್ರಿಯೊಬ್ಬರ ಮನೆಯ ಸಮೀಪದಲ್ಲಿರುವ ಕೊಳದಲ್ಲಿ ಹುಡುಗಿಯ ತಲೆಬುರುಡೆ ಪತ್ತೆಯಾಗುತ್ತದೆ. ಇಲ್ಲಿಂದ ಚಿತ್ರದ ಕಥೆ ಶುರುವಾಗುತ್ತದೆ. ಈ ತಲೆಬುರುಡೆ ಯಾರದು ಎಂಬ ಪ್ರಶ್ನೆ ಉದ್ಭವವಾಗುತ್ತದೆ.  ಪೊಲೀಸರು ಸಹ ತಲೆಬುರುಡೆ ಯಾರದು ಅಂತ ತನಿಖೆ ಆರಂಭವಾಗುತ್ತದೆ. ಈ ತಲೆಬುರುಡೆ ಯುವತಿಯೋರ್ವಳ ಮನೆಯಲ್ಲಿರೋ ಕೆಂಪು ಬಣ್ಣದ ಫ್ರಿಡ್ಜ್‌ನೊಂದಿಗೆ ಲಿಂಕ್ ಆಗುತ್ತದೆ. ಈ ತಲೆಬುರುಡೆ ಮತ್ತು ಫ್ರಿಡ್ಜ್‌ಗೆ ಸಂಪರ್ಕ ಏನು ಎಂಬ ಸಸ್ಪೆನ್ಸ್ ಚಿತ್ರದ ಕಥೆಯಾಗಿದೆ. ಪೊಲೀಸ್ ಅಧಿಕಾರಿಯಾಗಿ   ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದಾರೆ. 

2024ರಲ್ಲಿ ಬಿಡುಗಡೆಯಾದ ಪೊಲೀಸ್ ಸ್ಟೋರಿ 2 ಸಿನಿಮಾವನ್ನು ತನು ನಿರ್ದೇಶಿಸಿದ್ದಾರೆ. ಇದರಲ್ಲಿ ಪೃಥ್ವಿರಾಜ್ ಸುಕುಮಾರನ್ ಜೊತೆಗೆ ಅದಿತಿ ಬಾಲನ್, ಲಕ್ಷ್ಮಿ ಪ್ರಿಯಾ ಚಂದ್ರಮೌಳಿ, ಸುಚಿತ್ರ ಪಿಳ್ಳೈ ಮತ್ತು ಶೈಲಜಾ ಅಂಬು ನಟಿಸಿದ್ದಾರೆ. ಈ ಸಸ್ಪೆನ್ಸ್ ಸಿನಿಮಾವನ್ನು YouTube ನಲ್ಲಿ ಹಿಂದಿ ಅವತರಣಿಕೆಯಲ್ಲಿ ಉಚಿತವಾಗಿ ವೀಕ್ಷಿಸಬಹುದು. ನೀವು ಕ್ರೈಟೀರಿಯನ್ ಚಾನೆಲ್ ಮತ್ತು ಮ್ಯಾಕ್ಸ್‌ನಲ್ಲಿ 'ಪೊಲೀಸ್ ಸ್ಟೋರಿ 2' ಅನ್ನು ನೋಡಿ ಆನಂದಿಸಬಹುದು. 

ಇದನ್ನೂ ಓದಿ: ಕಣ್ಮುಚ್ಚಿದ್ರೂ ಭಯ, ಕಣ್ ಬಿಟ್ರೂ ಭಯ; 2 ಗಂಟೆ 32 ನಿಮಿಷದ ಈ ಸೈಕೋ ಥ್ರಿಲ್ಲರ್ ಸಿನಿಮಾ ಇನ್ನು ನೋಡಿಲ್ವಾ ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಐಶ್ವರ್ಯಾ ರೈ ಮಗಳು ಆರಾಧ್ಯ ಬಾಲಿವುಡ್‌ಗೆ ಎಂಟ್ರಿ ಕೊಡೋದು ಯಾವಾಗ?
ಎದ್ದೇಳಿ ಹಿಂದೂಗಳೇ ಮೌನ ನಿಮ್ಮನ್ನು ರಕ್ಷಿಸುವುದಿಲ್ಲ, ಬಾಂಗ್ಲಾದೇಶ ಘಟನೆ ಖಂಡಿಸಿ ನಟಿ ಕಾಜಲ್ ಎಚ್ಚರಿಕೆ