ಭಾರತ ವಿಶ್ವಕಪ್ ಗೆದ್ರೆ ತೆಲಗು ನಟಿ ರೇಖಾ ಭೋಜ್. ಮುಂದೇನು ಮಾಡ್ತಾರೆಂದು ಹೇಳಿದ್ದಾರೆ ಕೇಳಿ...
2011ರಲ್ಲಿ ಸೆಕ್ಸಿ ನಟಿ ಪೂನಂ ಪಾಂಡೆ ಹೇಳಿಕೆಯೊಂದನ್ನು ಕೊಟ್ಟು ಭಾರಿ ಪ್ರಚಾರ ಪಡೆದಿದ್ದು ನೆನಪಿರಬಹುದು. ಭಾರತ ಕ್ರಿಕೆಟ್ ತಂಡವು ವಿಶ್ವಕಪ್ ಗೆಲ್ಲಲು ತಾವು ಸಂಪೂರ್ಣವಾಗಿ ಬೆತ್ತಲಾಗದು ರೆಡಿ ಎಂದು ಹೇಳಿದ್ದರು ನಟಿ. ನನ್ನ ನಗ್ನ ದೇಹವನ್ನು ನೋಡಿ ಟೀಂ ಇಂಡಿಯಾದ ಹುಡುಗರಲ್ಲಿ ಮತ್ತಷ್ಟು ಹುರುಪು ಮೂಡಲಿದೆ. ಟೀಂ ಇಂಡಿಯಾವನ್ನು ಭೇಟಿ ಮಾಡಿ ಅವರ ಡ್ರೆಸ್ಸಿಂಗ್ ರೂಂನಲ್ಲಿ ಅವರ ಮುಂದೆ ಬಟ್ಟೆ ಬಿಚ್ಚಿಡುತ್ತೇನೆ. ಒಂದು ವೇಳೆ ಇದಕ್ಕೆ ಒಪ್ಪದಿದ್ದರೆ ಕ್ರೀಡಾಂಗಣದಲ್ಲೇ ಬಟ್ಟೆ ಬಿಚ್ಚಿ ಕುಣಿದಾಡಲು ನನಗೇನು ಮುಜುಗರವಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಈ ಕುರಿತು ಕ್ರಿಕೆಟ್ ಮಂಡಳಿಗೆ ಪತ್ರ ಬರೆದಿದ್ದ ನಟಿ, ನಾನು ನಿಮಗೆ ಕ್ರಿಕೆಟ್ನ ಅಗಾಧ ಅಭಿಮಾನಿ ಮತ್ತು ದೇಶಾಭಿಮಾನಿಯಾಗಿ ಈ ಪತ್ರವನ್ನು ಬರೆಯುತ್ತಿದ್ದೇನೆ. ವಿಶ್ವಕಪ್ 2011 ಭಾರತದ ಪಾಲಾಗಬೇಕೆಂದು ನಾನು ಬಯಸಿದ್ದೇನೆ. ರೂಪದರ್ಶಿ ಮತ್ತು ಚಿತ್ರನಟಿಯಾಗಿರುವ ನಾನು ನನ್ನ ಭಾರತಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧಳಿದ್ದೇನೆ. ಭಾರತ ಕ್ರಿಕೆಟ್ ತಂಡಕ್ಕೆ ಇನ್ನಷ್ಟು ಉತ್ತೇಜನ ನೀಡಲು, ಅತ್ಯುತ್ತಮವಾಗಿ ಆಡಿ ಟ್ರೋಫಿ ಪಡೆಯಲು ನಾನು ಏನು ಮಾಡಲಿದ್ದೇನೆ ಎಂಬುದನ್ನು ಈಗಾಗಲೇ ಪ್ರಕಟಿಸಿದ್ದೇನೆ. ಆಟಗಾರರ ಕ್ರೀಡಾ ಸ್ಫೂರ್ತಿ ಹೆಚ್ಚಿಸಿ ಅತ್ಯುತ್ತಮವಾಗಿ ಆಡುವಂತಾಗಲು ಟೀಂ ಇಂಡಿಯಾ ಯಾವ ಸ್ಥಳ/ಸಮಯವನ್ನು ಆಯ್ಕೆ ಮಾಡಿಕೊಳ್ಳುವುದೋ ಅಂದು/ಅಲ್ಲಿ ನಾನು ನಗ್ನ ಪ್ರದರ್ಶನ ನೀಡಲು ಸಿದ್ಧಳಾಗಿದ್ದೇನೆ. ನಗ್ನ ಚಿಕಿತ್ಸೆ ಒಳ್ಳೆಯದು ಎಂದು ವೈದ್ಯರೂ ಹೇಳುತ್ತಾರೆ ಎಂದಿದ್ದರು.
ಇದೀಗ ಅವರದ್ದೇ ಹಾದಿ ತುಳಿದಿದ್ದಾರೆ ಇನ್ನೋರ್ವ ನಟಿ ತೆಲುಗು ನಟಿ ರೇಖಾ ಬೋಜ್. ಭಾರತ ಕ್ರಿಕೆಟ್ ತಂಡ ಸೆಮಿ ಫೈನಲ್ ಗೆದ್ದು, ಫೈನಲ್ ತಲುಪಿದೆ ಬೆನ್ನಲ್ಲೇ ಈಕೆ ಈಗ ಸಾಮಾಜಿಕ ಜಾಲತಾಣದ ಮೂಲಕ ಬೋಲ್ಡ್ ಹೇಳೀಕೆ ನೀಡಿದ್ದಾರೆ. ಭಾರತ ಕ್ರಿಕೆಟ್ (Team India) ತಂಡವು ವಿಶ್ವಕಪ್ ಪಡೆದುಕೊಂಡರೆ ನಾನು ವಿಶಾಖಪಟ್ಟಣಂ ಬೀಚ್ನಲ್ಲಿ ಬೆತ್ತಲೆಯಾಗಿ ನಡೆಯುತ್ತೇನೆ ಎಂದು ಹೇಳಿದ್ದಾರೆ. ಇದೇ ವೇಳೆ ಇನ್ನೊಂದು ಪೋಸ್ಟ್ ಹಾಕಿರುವ ನಟಿ, ನಂತರ ಮತ್ತೊಂದು ಫೊಸ್ಟ್ನಲ್ಲಿ ಧರ್ಮದ ಕಾರಣಕ್ಕೆ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಗೆಲ್ಲಲಿ ಎಂದು ಕೋರಿಕೊಳ್ಳುತ್ತಿದ್ದವರು ಸಹ ಈಗ ನನ್ನ ಘೋಷಣೆ ನಂತರ ಭಾರತ ಗೆಲ್ಲಲಿ ಎಂದು ಪ್ರಾರ್ಥಿಸುತ್ತಾರೆನೋಡಿ. ಇದಕ್ಕಿಂತ ಒಳ್ಳೆಯದು ಇನ್ನೇನು ಬೇಕು ಎಂದು ನಟಿ ಪ್ರಶ್ನಿಸಿದ್ದಾರೆ.
ಮಕ್ಕಳು ಬೇಕಂತ ಸೈಫ್ನ ಮದ್ವೆಯಾದೆ... ಇಲ್ಲದಿದ್ರೆ... ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಕರೀನಾ ಕಪೂರ್!
ಕೆಲವು ನಟಿಯರು ತಮ್ಮ ಚಿತ್ರಗಳು ಒಂದರ ಮೇಲೊಂದರಂತೆ ಫ್ಲಾಪ್ ಆಗುತ್ತಿರುವ ಸಂದರ್ಭದಲ್ಲಿ ಈ ರೀತಿಯ ಗಿಮಿಕ್ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವುದು ಮಾಮೂಲಾಗಿದೆ ಎಂದು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಕೆಲವರು ತಮ್ಮ ದೇಹಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಅದನ್ನೇ ಬಂಡವಾಳವಾಗಿಸಿಕೊಂಡು ದೇಹ ಪ್ರದರ್ಶನ ಮಾಡುತ್ತಾ ತಿರುಗುತ್ತಾರೆ. ಇನ್ನು ಕೆಲವರು ಇಂಥ ಚೀಪ್ ಗಿಮಿಕ್ ಮಾಡುತ್ತಾರೆ. ಟ್ರೋಲ್ಗೆ ಒಳಗಾದರೆ ಸಹಜವಾಗಿ ಪ್ರಚಾರ ಬರುತ್ತದೆ ಎನ್ನುವುದು ತಿಳಿದ ಕಾರಣ ಈ ರೀತಿ ಮಾಡುತ್ತಾರೆ ಎಂದು ಕಿಡಿ ಕಾರಿದ್ದಾರೆ. ಇನ್ನು ಕೆಲವರು, ನೀವು ಹೀಗೆ ಮಾಡುವುದಾದರೆ, ಭಾರತವೇ ಗೆಲ್ಲಲಿ ಎಂದು ತಮ್ಮ ಪ್ರಾರ್ಥನೆಯನ್ನು ಹೆಚ್ಚಿಸುತ್ತೇವೆ ಎಂದು ಹೇಳಿದ್ದರೆ, ಭಾರತ ಗೆಲ್ಲೋದಂತೂ ಗ್ಯಾರೆಂಟಿ, ಬೀಚ್ನಲ್ಲಿ ಕಾಯ್ತಾ ಇರ್ತೇವೆ ಎಂದು ನಟಿಯ ಕಾಲೆಳೆದಿದ್ದಾರೆ. ಇನ್ನು ಕೆಲವರು, ದಿನಾಂಕ ಮತ್ತು ಸಮಯವನ್ನು ತಿಳಿಸಿ, ಕಾಲ್ತುಳಿತವಾದರೆ ಕಷ್ಟ. ಮೊದಲೇ ಹೋಗಿ ನಿಂತಿರುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ.
ಅಂದಹಾಗೆ, ನಟಿ ರೇಖಾ ಸೋಷಿಯಲ್ ಮೀಡಿಯಾದಲ್ಲಿ ಸದಾ ವಿವಾದಾತ್ಮಕ ಪೋಸ್ಟ್ ಮಾಡುವ ಮೂಲಕ ಸುದ್ದಿಯಾಗುತ್ತಿರುವವರು. ರೇಖಾ ಬೋಜ್, ತೆಲುಗಿನ ನಟಿ. ಮಾಂಗಲ್ಯಂ’, ‘ಸ್ವಾತಿ ಚಿನುಕು’, ‘ರಂಗೀಲಾ’, ‘ಕಾಲಾಯ ತಸ್ಮಾಯ ನಾಮಃ’ ಸೇರಿದಂತೆ ತೆಲುಗಿನ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಹೇಳಿಕೊಳ್ಳುವಂತಹ ಯಶಸ್ಸು ಅವರಿಗೆ ಸಿಕ್ಕಿಲ್ಲ. ಹೀಗಾಗಿ ಪದೇ ಪದೇ ವಿವಾದಾತ್ಮಕ ಪೋಸ್ಟ್ ಗಳನ್ನು ಇವರು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಮೋದಿಯನ್ನು ಈ ಪರಿ ಜಪಿಸ್ಬೇಡ ಪುಣ್ಯಾತ್ಮ, ಆಸ್ಪತ್ರೆ ಸೇರಬೇಕಾದೀತು... ಪ್ರಕಾಶ್ ರಾಜ್ಗೆ ನೆಟ್ಟಿಗರ ತರಾಟೆ
.