ಸೈಫ್ ಅಲಿ ಖಾನ್ ಮತ್ತು ಕರೀನಾ ಮದ್ವೆಯಾಗಿ 11 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಮದ್ವೆಯಾಗಿರುವ ಕಾರಣ ಹೀಗೆ ಕೊಟ್ಟಿದ್ದಾರೆ ನಟಿ ಕರೀನಾ
ಬಾಲಿವುಡ್ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಜೋಡಿ. ಎಲ್ಲರಿಗೂ ತಿಳಿದಿರುವಂತೆ ಇದು ಸೈಫ್ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್ ಅವರ ಜೊತೆಗೆ. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್ ಅಲಿ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್ಗೂ ಒಳಗಾಗಿದ್ದಿದೆ. ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್ ಸುದ್ದಿ ಮಾಡಿದವರು. ಸೈಫ್ ಅಲಿ ಖಾನ್ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು.
ನಟ ಸೈಫ್ ಅಲಿ ಇದೀಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ನಟಿ ಕರೀನಾರನ್ನು (Kareena Kapoor) ಮದುವೆಯಾಗಿದ್ದರೆ, ಅಮೃತಾ ಸಿಂಗ್ ಅವರನ್ನು ಮದುವೆಯಾದಾಗ ಸೈಫ್ ಅವರಿಗೆ ವಯಸ್ಸು 21. ಆದರೆ ಅಮೃತಾ ಸಿಂಗ್ ಅವರಿಗೆ 32 ವರ್ಷ ವಯಸ್ಸಾಗಿತ್ತು! ಎಲ್ಲರನ್ನೂ ಎದುರು ಹಾಕಿಕೊಂಡು 12 ವರ್ಷ ಹಿರಿಯ ನಟಿಯನ್ನು ಮದುವೆಯಾಗಿದ್ದರು ಎಂದೇ ಸುದ್ದಿಯಾಗಿತ್ತು. ಇದು ದೊಡ್ಡ ಮಟ್ಟದಲ್ಲಿ ಹಲ್ಚಲ್ ಸೃಷ್ಟಿಸಿತ್ತು. ನಂತರ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ 13 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನ ಪಡೆದರು. 2004ರಲ್ಲಿ ಸೈಫ್ ಹಾಗೂ ಅಮೃತಾ ತಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದಾಗ ಸಾರಾ 10 ಮತ್ತು ಇಬ್ರಾಹಿಂ 4 ವರ್ಷ ವಯಸ್ಸಿನವರಾಗಿದ್ದರು. ಇದೀಗ 53 ವರ್ಷದ ಸೈಫ್ ಅಲಿ ಖಾನ್ ಅವರಿಗೆ ಅಮೃತಾ ಸಿಂಗ್ ಮತ್ತು ಕರೀನಾ ಕಪೂರ್ ಈ ಇಬ್ಬರು ಪತ್ನಿಯರಿಂದ ನಾಲ್ವರು ಮಕ್ಕಳಿದ್ದಾರೆ. ಅವರ ಹೆಸರು ಸಾರಾ ಅಲಿ ಖಾನ್ (Sara Ali Khan), ಇಬ್ರಾಹಿಂ ಅಲಿ ಖಾನ್, ತೈಮೂರು ಅಲಿ ಖಾನ್ ಹಾಗೂ ಜೆಹ್ ಅಲಿ ಖಾನ್.
undefined
30 ವರ್ಷಕ್ಕೆ ಮಕ್ಳು ಮಾಡ್ಕೊಳ್ಳೋ ಪ್ಲ್ಯಾನ್ ಹಾಕಿದ್ದ ನಟಿ ತಮನ್ನಾ ಮದ್ವೆ ಫಿಕ್ಸ್? ವರನಾರು ಗೊತ್ತಾ?
ಇದೀಗ ಕರೀನಾ ಕಪೂರ್ ತಾವು ಸೈಫ್ ಅಲಿ ಖಾನ್ ಅವ್ರನ್ನು ಮದ್ವೆಯಾಗಿರುವ ಕಾರಣವನ್ನು ಬಹಿರಂಗಗೊಳಿಸಿದ್ದಾರೆ. ಅದೇನೆಂದರೆ ಸೈಫ್ ಅಲಿ ಖಾನ್ ಅವರನ್ನು ಕರೀನಾ ಮದುವೆಯಾಗಿದ್ದು, ಮಕ್ಕಳನ್ನು ಹೆರುವುದಕ್ಕಾಗಿಯಂತೆ! ಹೌದು. ಹೀಗೆಂದು ಖುದ್ದು ಕರೀನಾ ಡರ್ಟಿ ಎಂಬ ಮ್ಯಾಗಜೀನ್ಗೆ ಸಂದರ್ಶನ ಕೊಟ್ಟಿದ್ದಾರೆ. ಮದುವೆಯಾಗುವ ಮೊದಲು ಸೈಫ್ ಮತ್ತು ಕರೀನಾ ಸುಮಾರು 5 ವರ್ಷ ಲಿವಿಂಗ್ ಟುಗೆದರ್ನಲ್ಲಿದ್ದರು. ಈ ಕುರಿತೂ ಈ ಹಿಂದೆ ಕರೀನಾ ಹೇಳಿಕೊಂಡಿದ್ದರು. ತಾವು ಮದುವೆಯಾಗುವ ಮೊದಲು ಐದು ವರ್ಷ ಸೈಫ್ ಜೊತೆ ಲಿವ್ ಇನ್ ರಿಲೇಷನ್ನಲ್ಲಿ ಇದ್ದೆ. ಆಗ ನನಗೆ ಮಕ್ಕಳನ್ನು ಮಾಡಿಕೊಳ್ಳುವ ಆಸೆಯಾಯಿತು. ಅದಕ್ಕಾಗಿ ಮದುವೆಯಾದೆವು. ನಮಗಿಬ್ಬರಿಗೂ ಮಕ್ಕಳು ಬೇಕು ಎನಿಸಿದ ಕಾರಣ ಮದುವೆಯಾದೆವು. ಇಲ್ಲದಿದ್ದರೆ ಮದುವೆಯಾಗದೆಯೇ ಜೊತೆಗಿರುತ್ತಿದ್ದೆವು. ಮಕ್ಕಳನ್ನು ಹೆರುವ ಉದ್ದೇಶವಿಲ್ಲದಿದ್ದರೆ ಇಬ್ಬರೂ ಲಿವ್ ಇನ್ನಲ್ಲಿ ಖುಷಿಯಾಗಿದ್ದೆವು. ಅಷ್ಟಕ್ಕೂ ನಾವು ನಮ್ಮ ರಿಲೇಷನ್ಶಿಪ್ನಲ್ಲಿ ಮುಂದಿನ ಹಂತಕ್ಕೆ ಹೋಗಿದ್ದು ಮಕ್ಕಳನ್ನು ಮಾಡಿಕೊಳ್ಳಲು ಮಾತ್ರ ಎಂದಿದ್ದಾರೆ.
ಲವ್ ಜಿಹಾದ್ ಎಂದೇ ಇವರ ಮದುವೆಯನ್ನು ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಸೈಫ್ ಅಲಿ ಖಾನ್, ನಾನು ಎಲ್ಲ ಧರ್ಮವನ್ನೂ ಪಾಲಿಸುವವ. ಕರೀನಾ ಜೊತೆ ಪ್ರೀತಿ ಮಾಡಿ ಮದುವೆ ಮಾಡಿಕೊಂಡಿದ್ದೇನೆ. ಯಾವುದೇ ಕಾರಣಕ್ಕೂ ಆಕೆಯ ಮತಾಂತರಕ್ಕೆ ನಾನು ಬಲವಂತಗೊಳಿಸಲಿಲ್ಲ. ಆಕೆ ಹಿಂದೂ ಧರ್ಮವನ್ನೇ ಪಾಲಿಸುತ್ತಿದ್ದಾಳೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ಅದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಮೆಂಟ್ ಹಾಕಿರುವ ನೆಟ್ಟಿಗರು, ಎಲ್ಲವೂ ಸರಿ, ಹಿಂದೂಗಳನ್ನು ಮದ್ವೆಯಾಗಿರುವ ಖಾನ್ ನಟರು ತಮ್ಮ ಹಿಂದೂ ಧರ್ಮದ ಬಗ್ಗೆ ಇಷ್ಟೆಲ್ಲಾ ಎದುರುಗಡೆ ಮಾತನಾಡುವವರು ಮಕ್ಕಳಿಗೆ ಮಾತ್ರ ಖಾನ್ ಎನ್ನುವುದನ್ನು ಇಡಲು ಮರೆಯುವುದಿಲ್ಲ, ಭೇಷ್ ಭೇಷ್ ಎನ್ನುತ್ತಿದ್ದಾರೆ.
ನಾಲಿಗೆ ಜಾರಿ ಐಶ್ವರ್ಯ ರೈ ಬಗ್ಗೆ ತಪ್ಪಾಗಿ ಮಾತಾಡಿದೆ... ಪಾಕ್ ಕ್ರಿಕೆಟಿಗನಿಂದ ಹೀಗೆ ಕ್ಷಮೆ ಕೋರಿಕೆ...