ಅಭಿಮಾನಿಯ ತಲೆಗೆ ಹೊಡೆದು ಪೇಚಿಗೆ ಸಿಲುಕಿದ ನಟ ನಾನಾ ಪಾಟೇಕರ್​: ಕ್ಷಮೆ ಕೋರಿ ವಿಡಿಯೋ

Published : Nov 16, 2023, 03:27 PM ISTUpdated : Nov 17, 2023, 09:51 AM IST
ಅಭಿಮಾನಿಯ ತಲೆಗೆ ಹೊಡೆದು ಪೇಚಿಗೆ ಸಿಲುಕಿದ ನಟ ನಾನಾ ಪಾಟೇಕರ್​: ಕ್ಷಮೆ ಕೋರಿ ವಿಡಿಯೋ

ಸಾರಾಂಶ

ಅಭಿಮಾನಿಯ ತಲೆಗೆ ಹೊಡೆದು ಪೇಚಿಗೆ ಸಿಲುಕಿದ ನಟ ನಾನಾ ಪಾಟೇಕರ್​: ಕ್ಷಮೆ ಕೋರಿ ವಿಡಿಯೋ ವೈರಲ್​  

ನಾನಾ ಪಾಟೇಕರ್ ಅವರು ತಮ್ಮ ಮುಂದಿನ ಸಿನಿಮಾ 'ಜರ್ನಿ'ಗಾಗಿ ವಾರಣಾಸಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದು, ಈ ಸಂದರ್ಭದಲ್ಲಿ  ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಫ್ಯಾನ್​ ಒಬ್ಬ ಚಿತ್ರೀಕರಣ ನಡೆಯುವ ವೇಳೆ  ಓಡಿ ಬಂದಿದ್ದ. ಇದನ್ನು  ಕಂಡ ನಾನಾ ಆತನ ತಲೆಗೆ ಬಲವಾಗಿ ಹೊಡೆದಿದ್ದರು.  ಅಲ್ಲಿಯೇ ಇದ್ದ ಮತ್ತೋರ್ವ ವ್ಯಕ್ತಿ ಆ ವ್ಯಕ್ತಿಯನ್ನು ಎಳೆದು ಸೈಡಿಗೆ ತಳ್ಳಿದ್ದರು.  ಇದಿಷ್ಟು ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದು, ವಿಡಿಯೋ ವೈರಲ್ ಆಗುತ್ತಿದೆ. ಇದರಿಂದ ನಟನ ವಿರುದ್ಧ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ ನೆಟ್ಟಿಗರು. ಸಾಮಾಜಿಕ ಜಾಲತಾಣದಲ್ಲಿ ನಾನಾ ಪಾಟೇಕರ್​ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ, ಸಿನಿಮಾ ನಟ ನಟಿಯರನ್ನು ಕಂಡಾಗ ಅಭಿಮಾನಿಗಳು ಫೋಟೋಗಾಗಿ ಮುಗಿ ಬೀಳುವುದು ಸಾಮಾನ್ಯ. ಈ ವೇಳೆ  ನಟರಿಗೆ ಕಿರಕಿರಿ ಆಗುವುದೂ ಇದೆ. ಕೆಲವರು ಕ್ಯಾಮೆರಾ ಕಣ್ಣು ತಮ್ಮ ಮೇಲೆ ಇದೆ ಎನ್ನುವುದನ್ನು ಅರಿತು, ಹೇಗೋ ಮ್ಯಾನೇಜ್​ ಮಾಡಲು ನೋಡುತ್ತಾರೆ, ಹಲ್ಲು ಕಿರಿಯುತ್ತಾರೆ. ಆದರೆ ಕೆಲವು ನಟರ ಸಹನೆಯ ಕಟ್ಟೆ ಒಡೆದು ಹೋಗಿರುತ್ತದೆ. ಪಬ್ಲಿಕ್​ ಫಿಗರ್​ ಆದ ಮೇಲೆ ಇಂಥವುಗಳನ್ನು ಸಹಿಸಿಕೊಳ್ಳುವುದನ್ನೂ ಸೆಲೆಬ್ರಿಟಿಗಳು ಕಲಿಯಬೇಕು. ಆದರೆ ಇಂಥ ಸಂದರ್ಭದಲ್ಲಿ  ಫೋಟೋ ತೆಗೆಸಿಕೊಳ್ಳಲು ಬಂದವರ ಮೇಲೆಯೇ ಹಲ್ಲೆ ಮಾಡಿದ ಘಟನೆ ಈ ಹಿಂದೆಯೂ ಹಲವು ಬಾರಿ ನಡೆದಿದೆ.  ಈಗಲೂ ಹಾಗೆಯೇ ಆಗಿದೆ. ಆದರೆ ನಟರ ವಿರುದ್ಧ ನೆಟ್ಟಿಗರು ಗರಂ ಆಗುವುದು ಸಾಮಾನ್ಯವಾದ್ದರಿಂದ ಈ ಘಟನೆಯಲ್ಲಿಯೂ ಹಾಗೆಯೇ ಆಗಿದೆ.

ಭಾರತದ ಸಮಾಚಾರ್ ಎಂಬ ಪೇಜ್ ಈ 11 ಸೆಕೆಂಡ್‌ಗಳ ವೀಡಿಯೋ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಹೆಗಲ ಮೇಲೆ ಕೆಂಪು ಬಣ್ಣದ ಟವೆಲ್ ಹಾಕಿಕೊಂಡು ಕಪ್ಪು ಟೀ ಶರ್ಟ್ ಧರಿಸಿ ಹಿಂಬದಿಯಿಂದ ಹುಡುಗನೋರ್ವ ಓಡಿ ಬಂದು ನಾನಾ ಪಾಟೇಕರ್ ಜೊತೆ ತನ್ನ ಮೊಬೈಲ್ ಫೋನ್‌ನಿಂದ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಇದರ ನಿರೀಕ್ಷೆ ಇಲ್ಲದ ಪಾಟೇಕರ್‌ಗೆ ಒಮ್ಮೆಗೆ ಪಿತ್ತ ನೆತ್ತಿಗೇರಿದ್ದು, ಆತನ ತಲೆಗೆ ತಮ್ಮ ಕೈನಿಂದಲೇ ಹಿಂಭಾಗದಿಂದ ಜೋರಾಗಿ ಹೊಡೆದು ದೂರ ತಳ್ಳಿದ್ದಾರೆ. ಅಷ್ಟರಲ್ಲಿ ಅಲ್ಲೇ ಇದ್ದ ಮತ್ತೊಬ್ಬ ವ್ಯಕ್ತಿ (ಬಹುಶಃ ಪಾಟೇಕರ್‌ ಬಾಡಿಗಾರ್ಡ್‌ ) ಈ ಬಾಲಕನನ್ನು ಅಲ್ಲಿಂದ ಎಳೆದು ದೂರ ಕಳುಹಿಸಿದ್ದಾನೆ. ಇದು ವೈರಲ್​ ಆಗುತ್ತಿದ್ದಂತೆಯೇ ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಸೆಲ್ಫಿಗಾಗಿ ಓಡಿಬಂದ ಬಾಲಕನ ತಲೆಗೆ ಹೊಡೆದು ದೂರ ತಳ್ಳಿದ ನಾನಾ ಪಾಟೇಕರ್‌: ನಟನ ಕೃತ್ಯಕ್ಕೆ ನೆಟ್ಟಿಗರ ಆಕ್ರೋಶ

ವಾರಾಣಾಸಿಯಲ್ಲಿ ಸಿನಿಮಾವೊಂದರ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ನಾನಾ ಪಾಟೇಕರ್ ವರ್ತನೆ ಬಗ್ಗೆ ಜನ ಆಕ್ರೋಶ ಹೊರಹಾಕಿದ್ದಾರೆ. ಒಬ್ಬ ಸಿನಿಮಾ ಹೀರೋ ನಿಜ ಜೀವನದಲ್ಲಿ ಹೀರೋ ಆಗಿರುವುದು ಕಡಿಮೆ ಹೀಗಿರುವಾಗ ಜನ ಏಕೆ ಇಂತವರಿಂದ ಏಟು ತಿನ್ನುವುದಕ್ಕೋಸ್ಕರ ಬರುತ್ತಾರೋ ತಿಳಿಯದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಜನರು ದಿನಾ ಸೆಲೆಬ್ರಿಟಿಗಳ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಏಟು ತಿನ್ನುತ್ತಾರೆ ಇದೆಲ್ಲವೂ ಗೊತ್ತಿದ್ದು, ಇಷ್ಟೊಂದು ಸೆಲ್ಫಿ ಹುಚ್ಚು ಏಕೆ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ಹಣದ ಅಮಲು ಇವರಿಗೆ ಸಿಟ್ಟು ತರಿಸುತ್ತದೆ ಎಂದು ಮತ್ತೊಬ್ಬರು ಆಕ್ರೋಶ ಹೊರ ಹಾಕಿದ್ದಾರೆ. ಇಂತಹವರಿಗೂ ಅಭಿಮಾನಿಗಳಿರುತ್ತಾರಾ ಎಂದು ಮತ್ತೊಬ್ಬರು ಕೇಳಿದ್ದಾರೆ. ಇವರ ಸಿನಿಮಾಗಳಿಗೂ ಥಿಯೇಟರ್‌ಗಳಲ್ಲಿ ಇದೇ ರೀತಿಯ ಪೆಟ್ಟು ಬೀಳಬೇಕು ಆಗ ಇವರಿಗೆ ಅಭಿಮಾನಿಗಳ ಬೆಲೆ ತಿಳಿಯುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಇದೀಗ ಖುದ್ದು ನಾನಾ ಪಾಟೇಕರ್ ಕ್ಷಮೆ ಕೋರಿದ್ದಾರೆ. ‘ಈವರೆಗೂ ನಾನು ಯಾರಿಗೂ ಫೋಟೋ ಕೊಡಲ್ಲ ಎಂದು ಹೇಳಿರಲಿಲ್ಲ. ಅಚಾತುರ್ಯದಿಂದ ಹೀಗೆ ಆಗಿದೆ. ನಾವು ರಿಹರ್ಸಲ್​ ಮಾಡುತ್ತಿದ್ದೆವು. 2ನೇ ಬಾರಿ ರಿಹರ್ಸಲ್​ ಮಾಡುವಾಗ ಈ ಹುಡುಗ ಬಂದ. ಅವನು ನಮ್ಮ ತಂಡದವನೇ ಅಂತ ನಾನು ಭಾವಿಸಿದ್ದೆ. ಅದಕ್ಕಾಗಿ ಹೊಡೆದುಬಿಟ್ಟೆ. ಶೂಟಿಂಗ್‌ ಸೆಟ್‌ಗೆ ಬಂದ ಹುಡುಗ ನಮ್ಮ ಸಿಬ್ಬಂದಿ ಎಂದು ತಿಳಿದು ಅಭ್ಯಾಸದ ಭಾಗವಾಗಿ ನಾನು ಅವನ ತಲೆಗೆ ಹೊಡೆದೆ. ಆದರೆ ನಂತರ ಆತ ನನ್ನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಬಂದಿದ್ದು ತಿಳಿಯಿತು. ದಯವಿಟ್ಟು ನನ್ನನ್ನು ಕ್ಷಮಿಸಿ. ಇನ್ಮುಂದೆ ಹೀಗೆ ಮಾಡುವುದಿಲ್ಲ. ಆ ಹುಡುಗನ ಬಳಿ ನಾನು ನೇರವಾಗಿ ಕ್ಷಮೆ ಕೇಳುವವನಿದ್ದೆ. ಆದರೆ ಆತ ಭಯದಿಂದ ಓಡಿಹೋದ’ ಎಂದು ಅವರು ಹೇಳಿದ್ದಾರೆ. 
ಮೋದಿಯನ್ನು ಈ ಪರಿ ಜಪಿಸ್ಬೇಡ ಪುಣ್ಯಾತ್ಮ, ಆಸ್ಪತ್ರೆ ಸೇರಬೇಕಾದೀತು... ಪ್ರಕಾಶ್​ ರಾಜ್​ಗೆ ನೆಟ್ಟಿಗರ ತರಾಟೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!