#MeToo ಕಳ್ಳತನವಾದರೆ ಪೊಲೀಸ್‌ಗೆ ಹೇಳ್ತೀವಿ ಅಂದ್ಮೇಲೆ ಮಾನ ಮರ್ಯಾದೆ ಹೋದ್ರೂ ಕಂಪ್ಲೇಂಟ್ ಕೊಡ್ಬೇಕು: ತನುಶ್ರೀ ದತ್ತಾ

Published : Oct 14, 2022, 05:02 PM IST
#MeToo ಕಳ್ಳತನವಾದರೆ ಪೊಲೀಸ್‌ಗೆ ಹೇಳ್ತೀವಿ ಅಂದ್ಮೇಲೆ ಮಾನ ಮರ್ಯಾದೆ ಹೋದ್ರೂ ಕಂಪ್ಲೇಂಟ್ ಕೊಡ್ಬೇಕು: ತನುಶ್ರೀ ದತ್ತಾ

ಸಾರಾಂಶ

ಬಾಲಿವುಡ್‌ನಲ್ಲಿ ಮೀ ಟೂ ಅಭಿಯಾನ ಎಷ್ಟರ ಮಟ್ಟಕ್ಕೆ ಪರಿಣಾಮ ಬೀರಿದೆ? ತನುಶ್ರೀ ದತ್ತಾ ಪ್ರೇರಣೆಯಿಂದ ಧ್ವನಿ ಎತ್ತಿದವರಿಗೆ ನ್ಯಾಯ ಸಿಕ್ಕಿದ್ಯಾ?

ಬಾಲಿವುಡ್ ಚಿತ್ರರಂಗದಲ್ಲಿ ಮೊದಲು ಮೀ ಟೂ ಆರೋಪ ಕೇಳಿ ಬಂದಿದ್ದು 2018ರಲ್ಲಿ. ನಟಿ ತನುಶ್ರೀ ದತ್ತಾ ಶುರು ಮಾಡಿದ ಈ ಮಾಸ್ ಮೊಮೆಂಟ್‌ಗೆ ಅದೆಷ್ಟೊ ಬಡ್ಡಿಂಗ್ ಆರ್ಟಿಸ್ಟ್‌ಗಳು ಕೈ ಜೋಡಿಸಿದ್ದರು. ಇದರಿಂದ ಕೆಲವರಿಗೆ ನ್ಯಾಯ ಸಿಕ್ಕಿದೆ ಕೆಲವರಿಗೆ ಜೀವನ ನಡೆಸಲು ದಾರಿ ಸಿಗದೆ ನಡು ರಸ್ತೆಯಲ್ಲಿ ಕಂಗಾಲಾಗಿ ನಿಂತಿದ್ದಾರೆ. ಬಿಗ್ ಬಾಸ್‌ ಸೀಸನ್ 16ಕ್ಕೆ ಸಾಜಿದ್ ಖಾನ್‌ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ ಇದರಿಂದ ಆರೋಪಿಗಳು ಜೀವನ ನಡೆಸಲು ದಾರಿಯಾಗುತ್ತಿದೆ ಸಂತ್ರಸ್ತರಿಗೆ ಕಷ್ಟವಾಗುತ್ತಿದೆ ಎಂದು ತನುಶ್ರೀ ಮತ್ತೆ ಧ್ವನಿ ಎತ್ತಿದ್ದಾರೆ.

'#MeToo ಚಳುವಳಿಯು ಭಾರತದಲ್ಲಿ ಒಂದು ಅಪ್ರತಿಮ ವಿದ್ಯಮಾನವಾಗಿದೆ, ಭಾರತದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಮೌನ ಮತ್ತು ಗೌಪ್ಯತೆಯ ಸಂಸ್ಕೃತಿಯನ್ನು ನೀಡಲಾಗಿದೆ. ಮಾಡ್ರನ್ ಇಂಡಿಯನ್ ಅಮೆರಿಕನ್ ಹುಡುಗಿಯಾಗಿ ನನಗೆ ನಿಜಕ್ಕೂ ಈ ಮೌನ ಅರ್ಥ ಆಗುವುದಿಲ್ಲ.ಕೆಟ್ಟವರಿಗೆ ಶಿಕ್ಷೆ ಆದರೆ ಮಾತ್ರ ಸಮಾಜದಲ್ಲಿ ಸುರಕ್ಷಿತವಾಗಿ ಬದುಕಲು ಸಾಧ್ಯ. ನಿಮ್ಮ ಮನೆ ಕಳ್ಳತನವಾದರೆ ಪೊಲೀಸರಿಗೆ ದೂರು ನೀಡುತ್ತೀವಿ ಹಾಗೆ ನಮ್ಮ ಗನತೆ ಮತ್ತು ಗೌರವಕ್ಕೆ ಹಾನಿ ಆದರೆ ಪೊಲೀಸರಿಗೆ ಯಾಕೆ ತಿಳಿಸ ಬಾರದು? ನಾನು ಅಮೆರಿಕನ್‌ ಎಂದು ಮಾತ್ರ ಜನರು ನೋಡುತ್ತಿದ್ದಾರೆ ಆದರೆ ನನ್ನಲ್ಲಿ ಭಾರತೀಯ ಮಹಿಳೆ ಗುಣವಿದೆ' ಎಂದು ತನುಶ್ರೀ ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.

'2018ರಲ್ಲಿ ನನ್ನ ವಿರುದ್ಧ ತುಂಬಾ ಮಾನನಷ್ಟ ಪ್ರಕರಣಗಳು ದಾಖಲಾಗಿತ್ತು. ಈ ವರ್ಷ ಆರಂಭ ನನಗೆ ಖುಷಿ ಕೊಟ್ಟಿದೆ ಏಕೆಂದರೆ ಕೋರ್ಟ್‌ ಟ್ರಯಲ್ ನಡೆಸಿ ಕೇಸ್‌ ಮುಗಿಸಿದೆ. ಕೋರ್ಟ್‌ ರೂಮ್‌ ಪ್ರವೇಶಿಸುವ ಅಗತ್ಯವೇ ಬರಲಿಲ್ಲ. ಸತ್ಯಕ್ಕಿರುವ ಬೆಲೆ ಇದು. ಜಯ ಯಾವಾಗಲ್ಲೂ ಗೆಲ್ಲುತ್ತದೆ. ಆದಷ್ಟು ಸಮಸ್ಯೆ ನೀಡಲು ಮುಂದಾದರೂ ಆದರೆ ಎಲ್ಲವೂ ವಿಫಲವಾಗಿತ್ತು' ಎಂದು ಹೇಳಿದ್ದಾರೆ.

Bigg Boss #MeToo ಸಂತ್ರಸ್ತರಿಗೆ ಅವಕಾಶವಿಲ್ಲ, ಆರೋಪಿಗಳು ಯಶಸ್ವಿಯಾಗಿದ್ದಾರೆ: ತನುಶ್ರೀ ದತ್ತಾ

' ನನ್ನ ಜೀವನದ ಕಥೆ ಹೇಳಿಕೊಂಡರೆ ಬಿ-ಟೌನ್‌ನಲ್ಲಿ ದೊಡ್ಡ ಪ್ರೊಡಕ್ಷನ್ ಹೌಸ್‌ ಇದೆ ನನಗೆ 15 ಕೋಟಿ ನೀಡಿ ಅದರಲ್ಲೂ 15% ಲಾಭ ಕೊಡುವುದಾಗಿ ಹೇಳಿದ್ದರು. ಎರಡು ಭಾಗ ಮಾಡೋಣ ಎರಡು ಸೀರಿಸ್ ಅಗುತ್ತದೆ ಎಂದು. ಇದರಲ್ಲಿ ನನ್ನ ಬಾಲ್ಯದ ದಿನಗಳು, ಮಾಡಲಿಂಗ್, ಬ್ಯೂಟಿ ಪೇಜೆಂಟ್, ಸಿನಿಮಾ , #ಮೀಟೂ ಹೀಗೆ ಒಂದೊಂದೆ ಕಥೆ ಹೇಳುತ್ತದೆ. ಇದರಲ್ಲಿ ಮುಖ್ಯವಾಗಿ ಆಧ್ಯಾತ್ಮದ ಕಡೆ ನಡೆದ 10 ವರ್ಷದ ಜರ್ನಿಯನ್ನು ಹೇಳುತ್ತಾರಂತೆ. ಈ ಪ್ರಾಜೆಕ್ಟ್‌ ಓಕೆ ಆದರೆ ಬಾಲಿವುಡ್ ನಟಿಯರು ಇಲ್ಲವಾದರೆ ಥಿಯೇಟರ್‌ ಕಲಾವಿದರೊಬ್ಬರು ನನ್ನ ಪಾತ್ರವನ್ನು ಮಾಡಲಿದ್ದಾರೆ. ಸಣ್ಣ ಪುಟ್ಟ ಭಾಗಗಳಲ್ಲಿ ನಾನು ಎಂಟ್ರಿ ಕೊಡುವೆ' ಎಂದು ತನುಶ್ರೀ ಕೈಯಲ್ಲಿರುವ ಮುಂದಿನ ಪ್ರಾಜೆಕ್ಟ್‌ ಬಗ್ಗೆ ಮಾತನಾಡಿದ್ದಾರೆ.

ಮೊದಲ ಬಾರಿ ಮೌನ ಮುರಿದ ಪಾಟೇಕರ್ ಹೇಳಿದ್ದೇನು..?

'ಈ ಬಯೋಪಿಕ್‌ ಮಾಡಲು ನಾನು ಒಪ್ಪಿಗೆ ಕೊಟ್ಟೆ ಆದರ ಜೊತೆ 3 ಕಂಡಿಷನ್ ಕೂಡ ಹಾಕಿದೆ.  ಒಂದು, ಯೋಜನೆಯಿಂದ ಉಂಟಾಗುವ ಯಾವುದೇ ಕ್ಲೈಮ್‌ಗಳಿಂದ ಕಾನೂನು ಪರಿಹಾರ. ಎರಡು, ಸೃಜನಾತ್ಮಕ ನಿಯಂತ್ರಣ ಮತ್ತು ಅವಲೋಕನ.ಮೂರು, ನಾನು ಇನ್ನೂ ಚಿಕ್ಕವನಾಗಿರುವುದರಿಂದ ಮತ್ತು ಮುಂದೆ ಹೋಗುವಾಗ ಇನ್ನೂ ಹೆಚ್ಚಿನದನ್ನು ಮಾಡುತ್ತೇನೆ, ನಾನು ಅದನ್ನು 7 ವರ್ಷಗಳಿಗೆ ಸೀಮಿತಗೊಳಿಸಲು ಬಯಸುತ್ತೇನೆ ಮತ್ತು ಜೀವಮಾನದ ಪ್ರತ್ಯೇಕತೆಯಲ್ಲ. ಈ ಮೂರು ಕಂಡಿಷನ್‌ಗೆ ಒಪ್ಪಿಕೊಳ್ಳಲಿಲ್ಲ ಆದರೆ ನನಗೆ 25 ಕೋಟಿ ಹಣ ಮತ್ತು 25% ಲಾಭ ಕೊಡಲು ಮುಂದಾದರು. ಹಣದ ಆಸೆಗೆ ಇದನ್ನು ಒಪ್ಪಿಕೊಂಡು ಆನಂತರ ನನ್ನ ಜೀವನ ಹಾಳು ಮಾಡಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ' ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?