ಕರ್ವಾ ಚೌತ್‌ನಲ್ಲೂ ಮುಖ ಮುಚ್ಚಿಕೊಂಡಿದ್ದ ಶಿಲ್ಪಾ ಶೆಟ್ಟಿ ಪತಿ; ರಾಜ್ ಕುಂದ್ರ ಕಾಲೆಳೆದ ನೆಟ್ಟಿಗರು

Published : Oct 14, 2022, 02:30 PM IST
ಕರ್ವಾ ಚೌತ್‌ನಲ್ಲೂ ಮುಖ ಮುಚ್ಚಿಕೊಂಡಿದ್ದ ಶಿಲ್ಪಾ ಶೆಟ್ಟಿ ಪತಿ;  ರಾಜ್ ಕುಂದ್ರ ಕಾಲೆಳೆದ ನೆಟ್ಟಿಗರು

ಸಾರಾಂಶ

ಕರ್ವಾ ಚೌತ್ ಮಾಡಿ ರಾಜ್ ಕುಂದ್ರಾ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದಾರೆ. ಕರ್ವಾ ಚೌತ್ ಮಾಡುವಾಗಲೂ ರಾಜ್ ಕುಂದ್ರ ಮುಚ್ಚಿಕೊಂಡಿದ್ದರು. 

ಬಾಲಿವುಡ್ ಮಂದಿ ಕರ್ವಾ ಚೌತ್ ಅನ್ನು ಸಂಭ್ರಮಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕರ್ವಾ ಚೌತ್ ಮಾಡಿರುವ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಶಿಲ್ಪಾ ಶೆಟ್ಟಿ ಕೂಡ ಅದ್ದೂರಿಯಾಗಿ ಕರ್ವ ಚೌತ್ ಮಾಡಿದ್ದಾರೆ. ಅಂದಹಾಗೆ ಕರ್ವಾ ಚೌತ್ ಮಾಡಿ ರಾಜ್ ಕುಂದ್ರಾ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದಾರೆ. ಅಂದಹಾಗೆ ಬಾಲಿವುಡ್‌ನ ಅನೇಕ ಮಂದಿ ಅನಿಲ್ ಕುಪೂರ್ ನಿವಾಸದಲ್ಲಿ ಕರ್ವಾ ಚೌತ್ ಆಚರಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ಅನಿಲ್ ಕುಪೂರ್ ಮನೆಯಲ್ಲಿ ಹಾಜರಾಗಿದ್ದರು. ಶಿಲ್ಪಾ ಶೆಟ್ಟಿ ದಂಪತಿ ಕೂಡ ಅನಿಲ್ ಕುಪೂರ್ ಮನೆಯಲ್ಲಿ ಹಬ್ಬ ಆಚರಿಸಿದ್ದಾರೆ. 

ಕರ್ವಾ ಚೌತ್‌ನಲ್ಲೂ ರಾಜ್ ಕುಂದ್ರ ಮುಖ ಮುಚ್ಚಿಕೊಂಡಿದ್ದಾರೆ. ರಾಜ್ ಕುಂದ್ರ ವರ್ತನೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್‌ಗೆ ಕಾರಣವಾಗಿದೆ. ಅನಿಲ್ ಕಪೂರ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ರಾಜ್ ಕುಂದ್ರ ಮುಖ ಮುಚ್ಚಿಕೊಂಡಿದ್ದರು. ಪಾಪರಾಜಿಗಳು ರಾಜ್ ಕುಂದ್ರ ಅವರನ್ನು ಸೆರೆ ಹಿಡಿಯಲು ಪ್ರಯತ್ನಿಸಿದರು. ಆದರೆ ಕುಂದ್ರ ಮುಚ್ಚಿದ ಮುಖ ತೆರೆಯದೆ ಹಾಗೆ ಹೋದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಸರಿಗೆಯಲ್ಲಿ ಮರೆಯಾದ ಚಂದ್ರನ ಮುಖ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಬ್ಲ್ಯೂ ಫಿಲ್ಮ್‌ಗೆ ನಾಯಕನನ್ನಾಗಿ ಮಾಡುತ್ತಾರೆ ಅಂತ ಕುಂದ್ರ ಮುಖ ಮುಚ್ಚಿಕೊಂಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಈ ರೀತಿಯ ಮಾಸ್ಕ್ ಕೂಡ ತುಂಬಾ ಚೆನ್ನಾಗಿದೆ ಎಂದು ಕಾಲೆಳೆಯುತ್ತಿದ್ದಾರೆ. 

ಮುಖ ಮುಚ್ಕೊಂಡೇ ಮನೆಗೆ ಗಣೇಶನ ತಂದ ರಾಜ್ ಕುಂದ್ರ; ಗಣಪನ ಬರಮಾಡಿಕೊಂಡ ಶಿಲ್ಪಾ ಶೆಟ್ಟಿ

ಅಂದಹಾಗೆ ರಾಜ್ ಕುಂದ್ರ ಮುಖ ಮುಚ್ಚಿಕೊಂಡು ಓಡಾಡುತ್ತಿರುವುದು ಹೊಸದೇನಲ್ಲ. ಅಶ್ಲೀಲ ವಿಡಿಯೋ ಚಿತ್ರೀಕರಣ ಮತ್ತು ಅಪ್‌ಲೋಡ್ ಪ್ರಕರಣದಲ್ಲಿ ಜೈಲು ಸೇರಿದ್ದ ರಾಜ್ ಕುಂದ್ರ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು. ಅಲ್ಲಿಂದ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಇತ್ತೀಚಿಗೆ ಗಣೇಶ ಹಬ್ಬದ ಸಮಯದಲ್ಲೂ ಮುಖ ಮುಚ್ಚಿಕೊಂಡೇ ಗಣೇಶನನ್ನು ತಂದಿದ್ದರು. ಆಗಲೂ ಟ್ರೋಲ್ ಆಗಿದ್ದರು. ಎಷ್ಟೇ ಟ್ರೋಲ್ ಮಾಡಿದರೂ ಸಹ ರಾಜ್ ಕುಂದ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ.  

ಪತಿಗೆ ವಿಶ್ ಮಾಡಿದ್ದೇ ತಪ್ಪಾಯ್ತಾ? ಶಿಲ್ಪಾ ಶೆಟ್ಟಿ ಹಿಗ್ಗಾಮುಗ್ಗಾ ಟ್ರೋಲ್

ಶಿಲ್ಪಾ ಶೆಟ್ಟಿ ಎಲ್ಲಾ ಹಬ್ಬವನ್ನೂ ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಕರ್ವಾ ಚೌತ್ ಕೂಡ ಅದ್ದೂರಿಯಾಗಿ ಮಾಡಿದ್ದಾರೆ. ಫೋಟೋ ಶೇರ್ ಮಾಡಿ ನನ್ನದು ಇದು ಈ ಜೀವಮಾನದಲ್ಲಿ ಕರ್ವಾ ಚೌತ್. ಅವರೂ ನಿಮಗಾಗಿ ಉಪವಾನ ಮಾಡಿದಾಗಲು ಸಹ ಎಂದು ಬರೆದುಕೊಂಡಿದ್ದಾರೆ. ಅನೇಕರು ಶಿಲ್ಪಾ ಶೆಟ್ಟಿ ದಂಪತಿಗೆ ವಿಶ್ ಮಾಡಿ ಕಾಮೆಂಟ್ ಮಾಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Salman Khan-Aishwarya Rai Secret: ಸಲ್ಮಾನ್ ಖಾನ್-ಐಶ್ವರ್ಯಾ ರೈ ಲವ್ ಸೀಕ್ರೆಟ್ ಬಿಚ್ಚಿಟ್ಟ ಸಾದಿಯಾ ಸಿದ್ದಿಕಿ; ಇಲ್ಲಿರೋದು ಹೊಸ ವಿಷಯ!
Chiranjeevi: ಲೇಡಿ ಗೆಟಪ್‌ನಲ್ಲಿ ಮೆಗಾಸ್ಟಾರ್: ಮೀಸೆ ಇಲ್ಲದ ಗಂಡನನ್ನು ನೋಡಿ ಪತ್ನಿ ಸುರೇಖಾ ಕೊಟ್ಟ ವಾರ್ನಿಂಗ್ ಏನು?