ವೈರಲ್ ಆಯ್ತು RGV - ಇನಾಯಾ ಖಾಸಗಿ ವಿಡಿಯೋ; ಕುಟುಂಬವೇ ದೂರ ಮಾಡುವಂತದ್ದು ಏನಿತ್ತು?

Published : Oct 14, 2022, 03:33 PM IST
ವೈರಲ್ ಆಯ್ತು RGV - ಇನಾಯಾ ಖಾಸಗಿ ವಿಡಿಯೋ; ಕುಟುಂಬವೇ ದೂರ ಮಾಡುವಂತದ್ದು ಏನಿತ್ತು?

ಸಾರಾಂಶ

 ನಟಿ ಇನಾಯಾ ಖಾಸಗಿ ವಿಡಿಯೋ ವೈರಲ್. ಚಿತ್ರರಂಗದಲ್ಲಿ ಕಷ್ಟ ಪಡುತ್ತಿರುವವರ ಕಷ್ಟ ಕೇಳೋರು ಯಾರು ಎಂದ ನಟಿ...  

ತಮಿಳು ಚಿತ್ರರಂಗ ಅಂದ್ರೆ ಮೊದಲು ನೆನಪಾಗುವುದು ಸ್ಟಾರ್ ನಟರು, ಬಿಗ್ ಬಜೆಟ್ ಸಿನಿಮಾಗಳು, ಅತಿ ಹೆಚ್ಚು ಅವಾರ್ಡ್‌ ಪಡೆದಿರುವ ತಂಡಗಳು ಒಂದಾದರೆ ಬರೀ ಕಾಂಟ್ರವರ್ಸಿನೇ ಮಾಡ್ಕೊಂಡು ಹೆಸರು ಮಾಡುವವರು ಕೂಡ ಇದ್ದಾರೆ. ಈ ಲಿಸ್ಟ್‌ಗೆ ಮೊದಲು ಸೇರುವುದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಡಿಫರೆಂಟ್ ಕಾನ್ಸೆಪ್ಟ್‌ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ಸಮಾಜದಲ್ಲಿ ದೊಡ್ಡ ಚರ್ಚೆ ಶುರು ಮಾಡುವ ಸಾಮರ್ಥ್ಯ ಹೊಂದಿರುವ ಡೈರೆಕ್ಟರ್.

ರಾಮ್‌ ಗೋಪಾಲ್ ವರ್ಮಾ ಕೆಲವು ದಿನಗಳ ಹಿಂದೆ ನಟಿ ಇನಾಯಾ ಸುಲ್ತಾನ್‌ ಜೊತೆ ಪಾರ್ಟಿವೊಂದರಲ್ಲಿ ಡ್ಯಾನ್ಸ್‌ ಮಾಡಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ನೆಗೆಟಿವ್ ಕಾಮೆಂಟ್‌ಗಳು ಹರಿದು ಬರುತ್ತಿದ್ದಂತೆ ಡಿಲೀಟ್ ಮಾಡಿರುವುದಾಗಿ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಹೇಳಿದ್ದಾರೆ. ಅಲ್ಲದೆ ಈ ವಿಡಿಯೋದಿಂದ ಕುಟುಂಬಸ್ಥರು ಮಾತು ಬಿಟ್ಟಿದ್ದಾರಂತೆ.

'ನನಗೆ ಸಿನಿಮಾ ಅಂದ್ರೆ ತುಂಬಾನೇ ಇಷ್ಟ. ಮನೆಯಲ್ಲಿ ಯಾರಿಗೂ ಇಷ್ಟವಿಲ್ಲರಲ್ಲ ನನಗೆ ಇಷ್ಟವಿದ್ದ ಕಾರಣ ಮನೆಯಿಂದ ಹೊರಗೆ ಬಂದೆ. ಹೀಗಾಗಿ ಯಾರ ಬೆಂಬಲ ಇಲ್ಲದಿದ್ದರೂ ಹೈದರಾಬಾದ್‌ನಲ್ಲಿ ಸಿನಿಮಾ ಅವಕಾಶಗಳಿಗಾಗಿ ಪ್ರಯತ್ನ ಆರಂಭಿಸಿದೆ. ಈ ಪ್ರಯತ್ನದಲ್ಲಿ ನಾನು ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ಅವರು ಸಂಪರ್ಕಕ್ಕೆ ಬಂದ್ದರು. ಈ ಸ್ನೇಹದ ಮೇಲೆ ವರ್ಮಾ ಅವರ ಬರ್ತ ಡೇ ಪಾರ್ಟಿಗೆ ನನ್ನನ್ನು ಆಹ್ವಾನಿಸಿದ್ದರು. ಪಾರ್ಟಿಯಲ್ಲಿ ನಾನು ವರ್ಮಾ ಜೊತೆ ಡ್ಯಾನ್ಸ್‌ ಮಾಡಿದೆ. ಯಾರೋ ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ನಾಲ್ಕು ದಿನಗಳ ನಂತರ ಅಪ್ಲೋಡ್ ಮಾಡಿದ್ದಾರೆ. ವಿಡಿಯೋ ತುಂಬಾನೇ ವೈರಲ್ ಆಯ್ತು. ನನ್ನ ತಾಯಿ ಪೋನ್ ಮಾಡಿ ತುಂಬಾ ಬೇಸರ ವ್ಯಕ್ತ ಪಡಿಸಿದ್ದರು. ಹೀಗಾಗಿ ಇದೀಗ ನನ್ನ ಕುಟುಂಬ ಅದೊಂದು ವಿಡಿಯೋದಿಂದ ಸಾಕಷ್ಟು ಬೇಸರಕ್ಕೆ ಒಳಗಾಗಿ ನನ್ನನ್ನು ಮಾತನಾಡಿಸುತ್ತಿಲ್ಲ' ಎಂದು ಇನಾಯಾ ಮಾತನಾಡಿದ್ದಾರೆ.

ದ್ರೌಪದಿ ರಾಷ್ಟ್ರಪತಿಯಾದರೆ ಪಾಂಡವರು ಯಾರು? ಮುಖ್ಯವಾಗಿ ಕೌರವರು ಯಾರು: RGV ವಿರುದ್ಧ ದೂರು

ವೈರಲ್ ಆಗುತ್ತಿರುವ ವಿಡಿಯೋವನ್ನು ಆರ್‌ಜಿವಿ ಮತ್ತೆ ಶೇರ್ ಮಾಡಿಕೊಂಡು 'ನಾನು ಪದೇ ಪದೇ ಸ್ಪಷ್ಟನೆ ಕೊಡುತ್ತಿರುವೆ. ಈ ವಿಡಿಯೋದಲ್ಲಿ ಇರುವುದು ನಾನಲ್ಲ ಹಾಗೆ ಕೆಂಪು ಡ್ರೆಸ್ ಧರಿಸಿರುವುದು ನಟಿ ಇನಾಯಾ ಸುಲ್ತಾನ್ ಕೂಡ ಅಲ್ಲ. ಅಮೇರಿಕನ್ ಅಧ್ಯಕ್ಷ ಜೋ ಬಿಡೆನ್ ಮೇಲೆ ಪ್ರಮಾಣ ಮಾಡಿ ಹೇಳುತ್ತಿರುವೆ'ಎಂದು ಟ್ವೀಟ್ ಮಾಡಿದ್ದರು.

ಇನಾಯ ಸುಲ್ತಾನ್ ಸದ್ಯಕ್ಕೆ ನಟರತ್ನಾಲು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆರ್‌ಜಿವಿ ತಮ್ಮ ಮುಂದಿನ ಪ್ರಾಜಿಕ್ಟ್‌ಗಳ ಬಗ್ಗೆ ಸುಳಿವು ಕೊಟ್ಟಿಲ್ಲ.

 

56 ಲಕ್ಷ ರೂ. ವಂಚನೆ ಆರೋಪ:

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ವಂಚನೆ ಪ್ರಕರಣ(Cheating case) ದಾಖಲಾಗಿದೆ. 56 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಿದ್ದಾರೆ ಎಂದು ನಿರ್ಮಾಣ ಸಂಸ್ಥೆಯ ಮಾಲಿಕರೊಬ್ಬರು ದೂರು ನೀಡಿದ್ದಾರೆ. ಹೈದರಾಬಾದ್‌ನ ಮಿಯಾಪುರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

2019ರಲ್ಲಿ ರಾಮ್ ಗೋಪಾಲ್ ವರ್ಮಾ ಸ್ನೇಹಿತರ ಮೂಲಕ ದೂರುದಾರರನ್ನು ಭೇಟಿಯಾಗಿದ್ದರು. ಭೇಟಿಯಾದ ಮರು ವರ್ಷವೇ ತೆಲುಗು ಸಿನಿಮಾ ದಿಶಾ ಚಿತ್ರಕ್ಕಾಗಿ 8 ಲಕ್ಷ ರೂಪಾಯಿ ಸಾಲವನ್ನು ಪಡೆದಿದ್ದರು. ಮತ್ತೊಮ್ಮೆ 20 ಲಕ್ಷ ರೂಪಾಯಿ ಚೆಕ್ ಮೂಲಕ ಸಾಲ ಮೂಡುವಂತೆ ಕೇಳಿದ್ದಾರೆ ಎಂದು ದೂರುದಾರು ಆರೋಪಿಸಿದ್ದಾರೆ. ಇದನ್ನ ಆರು ತಿಂಗಳೊಳಗೆ ಮರುಪಾವತಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅದರೆ ಮುಂದಿನ ತಿಂಗಳು ತುರ್ತು ಅವಶ್ಯಕತೆ ಇದೆ ಎಂದು ಹೇಳಿ 28 ಲಕ್ಷ ರೂಪಾಯಿ ಕೇಳಿದರು ಎಂದು ಹೇಳಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

50ರಲ್ಲೂ ಯಂಗ್ ಲುಕ್! ಆಂಕರ್ ಸುಮಾರನ್ನು 'ಕತ್ತಿಯಂತಹ ಫಿಗರ್' ಎಂದ ಸ್ಟಾರ್ ಹೀರೋ ಯಾರು?
Jennifer Winget: ಮತ್ತೆ ಮದುವೆ ಆಗ್ತಾರಾ ಜನಪ್ರಿಯ ಟಿವಿ ನಟಿ? ಯಾರು ಈ ಸಿಂಗಾಪುರದ ಉದ್ಯಮಿ?