ಪುನೀತ್‌ ನೋಡಿಕೊಳ್ಳುತ್ತಿದ್ದ 1800  ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತ ವಿಶಾಲ್

Published : Nov 01, 2021, 12:00 AM ISTUpdated : Nov 01, 2021, 12:14 AM IST
ಪುನೀತ್‌ ನೋಡಿಕೊಳ್ಳುತ್ತಿದ್ದ 1800  ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತ ವಿಶಾಲ್

ಸಾರಾಂಶ

* ಅಗಲಿದ ನಾಯಕ ಪುನೀತ್ ರಾಜ್ ಕುಮಾರ್ ಗೆ ಎಲ್ಲ ಕಡೆಯಿಂದ ನಮನ * ಪುನೀತ್ ನಡೆಸುತ್ತಿದ್ದ ಎಲ್ಲ ಸಾಮಾಜಿಕ ಕೆಲಸದ ಹೊಣೆ ನನ್ನದು * ಪುನೀತ್ ರಾಜ್ ಕುಮಾರ್ ಗೆ ನಮನ ಸಲ್ಲಿಸಿದ ವಿಶಾಲ್ * ತಮಿಳು ನಟ ವಿಶಾಲ್ ರಿಂದ ಮಾದರಿ ಕಾರ್ಯ

ಚೆನ್ನೈ(ಅ. 31)  ಸುಮಾರು 25  ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಸಿನಿಮಾ ಲೋಕದ ಸ್ನೇಹಿತರು ಗೆಳೆಯನ ಸ್ಮರಿಸಿದ್ದಾರೆ.

ಪುನೀತ್ ಅಕಾಲಿಕ ಮರಣದ ನೋವನ್ನು ಅನಿವಾರ್ಯವಾಗಿ ಅರಗಿಸಿಕೊಳ್ಳಬೇಕಾಗಿದೆ. ಪುನೀತ್  ರಾಜ್ ಕುಮಾರ್ ಸುಮಾರು 1800  ಮಕ್ಕಳ (Children)ವಿದ್ಯಾಭ್ಯಾಸದ (Education)ಹೊಣೆ ಹೊತ್ತಿದ್ದರು.

ಪುನೀತ್ ಅವರಿಗೆ ನಮನ ಸಲ್ಲಿಸುತ್ತ ಮಾತನಾಡಿದ ವಿಶಾಲ್ (Actor Vishal) ಈ ಮಕ್ಕಳ ವಿದ್ಯಾಭ್ಯಾಸದ ಹೊಣೆ ನನ್ನದು ಎಂದು ತಿಳಿಸಿದ್ದಾರೆ.   ಇಂಥದ್ದೊಂದು ಕಾರ್ಯಕ್ರಮದಲ್ಲಿ ಮಾತನಾಡಬೇಕಾಗುತ್ತದೆ ಎನ್ನುವ ಯಾವ ಅಂದಾಜು ಇರಲಿಲ್ಲ. ಪುನೀತ್ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ ಎಂದು ವಿಶಾಲ್ ಹೇಳಿದರು. ಸೋಶಿಯಲ್ ಮೀಡಿಯಾದಲ್ಲಿಯೂ ಸಹ ವಿಶಾಲ್ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. 

ಪುನೀತ್ ಬಾಂಧವ್ಯ ನೆನೆದು ರಮ್ಯಾ ಭಾವುಕ ಪತ್ರ

ಸಿನಿಮಾದಲ್ಲಿ ನಾಯಕರಾಗಿರುವ ಜತೆ ಪುನೀತ್ ನಿಜಜೀವನದಲ್ಲಿಯೂ ನಾಯಕರಾಗಿ ಕೆಲಸ ಮಾಡಿಕೊಂಡು ಬಂದವರು. ಅನಾಥರು, ಮಾರಕ ರೋಗಗಳಿಂದ ಬಳಲುತ್ತಿರುವವರ ಸಹಾಯಕ್ಕೆ ಧಾವಿಸುತ್ತಿದ್ದರು. ಕೊರೋನಾ ಸಂಕಷ್ಟ ಸಂದರ್ಭದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ  50  ಲಕ್ಷ ರೂ. ನೀಡಿದ್ದರು. 

ಪವರ್ ಸ್ಟಾರ್ ಎಂದು ಜನರಿಂದ ಕರೆಸಿಕೊಳ್ಳುವ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನ ಹೊಂದಿದ್ದರು. ಇಡೀ ಕರ್ನಾಟಕ ಸೇರಿ ಎಲ್ಲ ಚಿತ್ರರಂಗಗಳು ಕಂಬನಿ ಮಿಡಿದಿದ್ದವು. ಭಾನುವಾರ ಬೆಳಗ್ಗೆ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ನೆರವೇರಿತ್ತು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?