
ಬಾಲಿವುಡ್ (Bollywood) ಕಿಂಗ್ ಶಾರುಖ್ ಖಾನ್ (Shah Rukh Khan) ಪುತ್ರ ಆರ್ಯನ್ ಖಾನ್ ವಿಲಾಸಿ ಹಡಗಿನಲ್ಲಿ ಮಾದಕ ವಸ್ತುವಿನೊಂದಿಗೆ (Drugs) ಪತ್ತೆ ಪ್ರಕರಣದಲ್ಲಿ ಆರೋಪಿಯಾಗಿ, ಜೈಲು (jail) ಸೇರಿ ಮೂರು ವಾರಗಳು ಕಳೆದ ನಂತರ ಬಾಮೀನು (bail) ಪಡೆದುಕೊಂಡು ಹೊರ ಬಂದಿದ್ದಾರೆ. ಗುರುವಾರವೇ ಆರ್ಯನ್ ಖಾನ್‌ಗೆ (Aryan Khan) ಜಾಮೀನು ಸಿಕಿತ್ತು. ಆದರೆ ಇಂದು ಬಿಡುಗಡೆ ಮಾಡಲಾಗಿತ್ತು. ರಸ್ತೆಯಲ್ಲೂ ಲಕ್ಷಾಂತರ ಜನರು, ಪೊಲೀಸ್ ಭದ್ರತೆ (Police protection) ಎಲ್ಲವೂ ಸೇರಿಕೊಂಡು ಮನ್ನತ್‌ಗೆ ಆರ್ಯನ್‌ನ ಬರ ಮಾಡಿಕೊಂಡರು.
ಶುಕ್ರವಾರ (Friday) ವಕೀಲರು ಪೇಪರ್‌ಗಳನ್ನು ಕೋರ್ಟ್‌ಗೆ ನೀಡಲು ತಡ ಮಾಡಿದ ಕಾರಣ ಆರ್ಯನ್ ಖಾನ್‌ನನ್ನು ಇಂದು ಬಿಡುಗಡೆ ಮಾಡಲಾಗುತ್ತಿದೆ. ಶಾರುಖ್ ಖಾನ್ ಬಾಡಿಗಾರ್ಡ್ ಆರ್ಯನ್‌ನ ಜೈಲ್ ಗೇಟಿನಿಂದ ಕಾರಿನವರೆಗೂ ಸಂಪೂರ್ಣ ರಕ್ಷಣೆಯಿಂದ ಕರೆದುಕೊಂಡು ಹೊರ ಬಂದರು. ಮೂರು ವಾರಗಳ ನಂತರ ಮನೆಗೆ ಮಗ ಬರುತ್ತಿರುವ ಕಾರಣ ಮನ್ನತ್‌ನಲ್ಲಿ (Mannat house) ಸಹಿ ತಿಂಡಿ ಮಾಡಲಾಗಿದೆ. ಆರ್ಯನ್ ಜೈಲು ಸೇರಿದ ಬಳಿಕ ತಾಯಿ ಗೌರಿ ಖಾನ್ (Gauri Khan) ಮನೆಯಲ್ಲಿ ಯಾವುದೇ ರೀತಿ ಸಿಹಿ ತಿಂಡಿ ಮತ್ತು ಸಂಭ್ರಮ ಆಚರಣೆ ಮಾಡಬಾರದು ಎಂದು ಆರ್ಡರ್ ಮಾಡಿದ್ದರು. ಹೀಗಾಗಿ ಇಂದು ಸ್ವೀಟ್ಸ್ ಮಾಡಲಾಗಿದೆ.
ಅಪರ ಸಂಖ್ಯೆಯಲ್ಲಿ ಅಭಿಮಾನಿಗಳು ತುಂಬಿಕೊಂಡಿರುವ ಕಾರಣ ಶಾರುಖ್ ಮನೆಗೂ ಹೆಚ್ಚಿನ ಭದ್ರತೆ ನೀಡಲಾಗಿದೆ. ಆರ್ಯನ್ ಖಾನ್ ಬಂಗಲೆ ಮನ್ನತ್‌ಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಬಾಲಿವುಡ್ ನಟಿ ಜೂಹಿ ಜಾವ್ಲಾ (Juhi Chawla) ಜಾಮೀನಿಗೆ ಶೂರಿಟಿ ಹಾಕಿದ್ದಾರೆ. 'ಜಾಮೀನು ಔಪಚಾರಿಕತೆಗಳನ್ನು ಪೂರ್ಣಗೊಳಿಸಕಾಗಿದೆ. ಜೂಹಿ ಚಾವ್ಲಾ ಅವರು ನೀಡಿರುವ ಭದ್ರತೆಯನ್ನು ನ್ಯಾಯಾಲಯವು ಒಪ್ಪಿಕೊಂಡಿದೆ. ಆರ್ಯನ್ ಖಾನ್‌ರನ್ನು ಚಾವ್ಲಾ ಬಾಲ್ಯದಿಂದಲೂ ನೋಡಿದ್ದಾರೆ,' ಎಂದು ಆರ್ಯನ್ ಜಾಮೀನಿಗಾಗಿ ಕೋರ್ಟಿನಲ್ಲಿ ವಾದಿಸಿದೆ ಕನ್ನಡ ಸತೀಶ್ ಮಾನೆಶಿಂಧೆ ಹೇಳಿದ್ದಾರೆ.
1 ಲಕ್ಷ ರೂ ವೈಯಕ್ತಿಕ ಬಾಂಡ್ ಮತ್ತು ಒಂದು ಅಥವಾ ಹೆಚ್ಚು ಭದ್ರತೆ ನೀಡಬೇಕು. ತನಿಖಾಧಿಕಾರಿಗೆ ಮಾಹಿತಿ ನೀಡದೇ ಎಲ್ಲಿಯೂ ಹೋಗುವಂತಿಲ್ಲ. ತಾವು ಭೇಟಿ ನೀಡುವ ಪ್ರದೇಶದ ಮಾಹಿತಿ ನೀಡದೇ ಪ್ರವಾಸ ಕೈಗೊಳ್ಳುವಂತಿಲ್ಲ. ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವಂತಿಲ್ಲ ಅಥವಾ ತಿರುಚುವಂತಿಲ್ಲ. ವಿಶೇಷ ನ್ಯಾಯಲಯಕ್ಕೆ ಪಾಸ್‌ಪೋರ್ಟ್ ಒಪ್ಪಿಸಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವಂತಿಲ್ಲ. ಪ್ರತಿ ಶುಕ್ರವಾರ ಬೆಳಗ್ಗೆ 11 ಮತ್ತು ಮಧ್ಯಾಹ್ನ 2ಕ್ಕೆ ಮಾದಕವಸ್ತು ನಿಯಂತ್ರಣ ಸಂಸ್ಥೆಯ ಕಚೇರಿಗೆ ಭೇಟಿ ನೀಡಬೇಕು. ಎನ್‌ಸಬಿ ಅಧಿಕಾರಿಗಳು ವಿಚಾರಣೆಗೆ ಆಹ್ವಾನಿಸಿದಾಗ ಹಾಜರಾಗಬೇಕು ಎಂದು ನ್ಯಾಯಲಯ ಆರ್ಯನ್ ಖಾನ್‌ಗೆ ಜಾಮೀನು ನೀಡುವಾ ಷರತ್ತು ವಿಧಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.