ಕೊನೆಗೂ ಮದುವೆ ಪ್ಲಾನ್‌ ಬಗ್ಗೆ ರಿವೀಲ್ ಮಾಡಿದ ರಾಜ್‌ಕುಮಾರ್ ರಾವ್!

By Suvarna News  |  First Published Oct 31, 2021, 4:54 PM IST

ಕಪಿಲ್‌ ಜೊತೆ ಕಾಮಿಡಿ ಮಾಡುತ್ತಾ ತಮ್ಮ ಮದುವೆ ಪ್ಲಾನ್‌ ಬಗ್ಗೆ ಸಣ್ಣ ಸುಳಿವು ಕೊಟ್ಟ ರಾಜ್‌ಕುಮಾರ್ ರಾವ್.
 


ಹಿಂದಿ ಜನಪ್ರಿಯ ಹಾಸ್ಯ ಕಾರ್ಯಕ್ರಮ ದಿ ಕಪಿಲ್ ಶೋನಲ್ಲಿ (The Kapil Sharma Show) ಕೃತಿ ಸೋನನ್ ಮತ್ತು ರಾಜ್‌ಕುಮಾರ್ ರಾವ್ (Rajkumar Rao) ಭಾಗಿಯಾಗಲಿದ್ದಾರೆ. ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಇಬ್ಬರು ತಾರೆಯರು ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿರುವುದನ್ನು ನೋಡಬಹುದು. ಅಲ್ಲದೆ ಕಪಿಲ್‌ ಪ್ಯಾಮಿಲಿ ಪ್ಲಾನಿಂಗ್ (Family Planning) ಬಗ್ಗೆ ಹಾಸ್ಯ ಮಾಡಿದ್ದಾರೆ. 

ರಾಜ್‌ಕುಮಾರ್‌ ರಾವ್‌ ಸಿನಿಮಾಕ್ಕೆ ಸೇರಿದ್ದು ಶಾರುಖ್ ಕಾರಣದಿಂದನಾ?

ಹೌದು! ರಾಜ್‌ಕುಮಾರ್ ರಾವ್ ಮತ್ತು ಅವರ ಗರ್ಲ್‌ಫ್ರೆಂಡ್ ಪತ್ರಲೇಖ ಪೌಲ್ (Patralekha Paul) ಒಂದು ಸಿಂಪಲ್ ಮನೆ ಹುಡುಕುತ್ತಿದ್ದಾರಂತೆ. ಈ ವಿಚಾರವನ್ನು ಹೇಳುತ್ತಿದ್ದಂತೆ ಕಪಿಲ್ ಇವರಿಬ್ಬರು ಶೀಘ್ರದಲ್ಲಿ ಮದುವೆ (Marriage) ಆಗಲಿದ್ದಾರೆ ನಿಮಗೆ ದಿನಾಂಕ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ಕೃತಿ (Kriti Sonan)  ರಿಲೇಷನ್‌ಶಿಪ್‌ ಬಗ್ಗೆ ಕೇಳಿದಾಗ ನಾನು ಸಿಂಗಲ್ ಎಂದು ಹೇಳಿದ್ದಾರೆ. ಇಲ್ಲ ಇದು ಸುಳ್ಳು ಎಂದು ಕೆಲವು ನಿಮಿಷಗಳ ಕಾಲ ವಾದಿಸಿದ ಕಪಿಲ್. ಕೃತಿ ಬಾಯ್‌ಫ್ರೆಂಡ್ ಅಥವಾ ಮದುವೆ ಆಗುವ ಹುಡುಗ ಹುಷಾರಾಗಿರಿ ಅವರ ಕೈ ಕಾಲುಗಳು ತುಂಬಾನೇ ಉದ್ದ ಇದೆ ಎಂದು ಕಾಲೆಳೆದಿದ್ದಾರೆ.

Tap to resize

Latest Videos

ಈ ವೇಳೆ ಕೃತಿ ಕೂಡ ಕಪಿಲ್ ಕಾಲೆಳೆದಿದ್ದಾರೆ. ಕಪಿಲ್ ಫ್ಯಾಮಿಲಿ ಪ್ಲಾನಿಂಗ್‌ ಕೊರೋನಾ ಲಾಕ್‌ಡೌನ್‌ (Covid19 lockdown) ನೋಡಿಕೊಂಡು ಮಾಡಿಕೊಂಡಿದ್ದಾರೆ. ಮೊದಲ ಅಲೆಯಲ್ಲಿ ಒಂದು ಮಗು, ಎರಡನೇ ಅಲೆಯಲ್ಲಿ ಮತ್ತೊಂದು ಮಗು (Baby), ಮೂರು ನಾಲ್ಕು ಆದರೆ ಏನು ಕಥೆ ಎಂಬ ಯೋಚನೆ ಶುರುವಾಗಿದೆ ಎಂದು ಗೇli ಮಾಡುತ್ತಾರೆ. ಅದಕ್ಕೆ ಕಪಿಲ್ ಬೇಕಂತಲೇ ಮಾತನ್ನು ಅಲ್ಲಿಗೆ ನಿಲ್ಲಿಸಿ ಮುಂದಿನ ವಿಚಾರ ಮಾತನಾಡೋಣ ಅಂದಿದ್ದಾರೆ. 

ಬಾಲಿವುಡ್‌ನ ಬ್ಯುಸಿ ನಟ ಅಕ್ಷಯ್ ಕುಮಾರ್‌ನನ್ನೇ ಹಿಂದಿಕ್ಕಿದ ರಾಜ್‌ಕುಮಾರ್

ಬಾಲ್ಯದಿಂದ ಯಾವ ವಿಚಾರಕ್ಕೂ ಹೆದರಿಕೊಳ್ಳದ ರಾಜ್‌ಕುಮಾರ್ ರಾವ್‌ ಒಮ್ಮೆ ಅರ್ಚನಾ ಪುರಾನ್ ಸಿಂಗ್ (Archana Puran Singh) ಅವರ ದೆವ್ವದ (Ghost) ಸಿನಿಮಾ ನೋಡಿ ಭಯ ಪಟ್ಟರಂತೆ. ಅಂದಿನಿಂದ ಈವರೆಗೂ ಒಬ್ಬರೇ ಕತ್ತಲೆ ಕೋಣೆ ತೆರಳುವುದಕ್ಕೆ ಅಥವಾ ದೆವ್ವದ ಸಿನಿಮಾ ನೋಡಲು ಭಯ ಪಡುತ್ತಾರಂತೆ. ಈ ಸಿನಿಮಾ ನೋಡಿದವರಿಗೆ ಅರ್ಚನಾ ಅಥವಾ ಚಿತ್ರತಂಡದವರು ತಲಾ 10 ಲಕ್ಷ ರೂ. ನೀಡಬೇಕು ಎಂದಿದ್ದಾರೆ.

click me!