ಯುವಕನ ಕೈ ನೋಡಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಭಾವುಕ: ಆತನ ಅಭಿಮಾನಕ್ಕೆ ನಟಿಯ ಕಣ್ಣೀರು

By Suvarna News  |  First Published Apr 3, 2024, 5:19 PM IST

 ಯುವಕನ ಕೈ ನೋಡಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಭಾವುಕರಾಗಿದ್ದಾರೆ.  ಯುವಕನ  ಅಭಿಮಾನಕ್ಕೆ ನಟಿ ಕಣ್ಣೀರು ಕೂಡ ಆಗಿದ್ದಾರೆ. ಅಂಥದ್ದೇನು ವಿಶೇಷತೆ ಇದೆ?
 


ಮಿಲ್ಕಿ ಬ್ಯೂಟಿ (Milky beauty) ಎಂದೇ ಫೇಮಸ್​ ಆಗಿರುವ ಬಾಲಿವುಡ್​ ನಟಿ ತಮನ್ನಾ ಭಾಟಿಯಾ,  ತೆಲುಗು , ತಮಿಳು ಚಿತ್ರರಂಗದಲ್ಲಿಯೂ ಸಕತ್​ ಫೇಮಸ್​.  70 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಅವರು ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದವರು. ಎಂಟು ಫಿಲ್ಮ್‌ಫೇರ್ ಪ್ರಶಸ್ತಿಗಳ ದಕ್ಷಿಣ ನಾಮನಿರ್ದೇಶನಗಳನ್ನು ಪಡೆದ ಅಪರೂಪದ ನಟಿ ತಮನ್ನಾ. ವಿಶೇಷ ಏನೆಂದರೆ, ಇವರು ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ 2010 ರಲ್ಲಿ ಕಲೈಮಾಮಣಿ ಮತ್ತು 2022 ರಲ್ಲಿ ಗೌರವ ಡಾಕ್ಟರೇಟ್ ಕೂಡ ಪಡೆದಿದ್ದಾರೆ. 34 ವರ್ಷಗಳ ಈ ಚೆಲುವೆ ಸಹಜವಾಗಿಯೇ ಚಿತ್ರರಂಗದಲ್ಲಿ ಸಕತ್​ ಬೇಡಿಕೆ ನಟಿಯಾಗಿದ್ದು, ಇವರ ಸಂಭಾವನೆ ಕೂಡ ಕೋಟಿಯನ್ನು ಮೀರುತ್ತದೆ. ಸದ್ಯ ವೆಬ್ ಸೀರಿಸ್‌ಗಳಲ್ಲಿ ತಮನ್ನಾ (Tamanna Batia) ಬ್ಯುಸಿಯಾಗಿದ್ದು, ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಅದರಲ್ಲಿಯೂ ಲಸ್ಟ್ ಸ್ಟೋರಿ 2 ಮತ್ತು ಜೀ ಕರ್ದ ಸೀರಿಸ್‌ನಲ್ಲಿ ನಟಿಸಿದ್ದು ರಿಲೀಸ್‌ಗೆ ರೆಡಿಯಾಗಿವೆ. ಈ ಎರಡೂ ಚಿತ್ರಗಳಲ್ಲಿ ತಮನ್ನಾ ಹಿಂದೆಂದಿಗಿಂತಲೂ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

 ಹೇಳಿಕೇಳಿ ಸಿನಿಮಾ ತಾರೆಯರಿಗೆ ಅಭಿಮಾನಿಗಳು ಹೆಚ್ಚು. ಕೆಲವರ ಅಭಿಮಾನವಂತೂ ಅತಿರೇಕಕ್ಕೆ ಹೋಗಿರುತ್ತದೆ. ಅದೇ ರೀತಿ  ತಮನ್ನಾ ಭಾಟಿಯಾ  ಅವರಿಗೆ ಅಭಿಮಾನಿ ಬಳಗ ಹೆಚ್ಚೇ ಇದೆ.   ಕೆಲವರು ನಟಿಯ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಆದರೆ ಯುವಕನೊಬ್ಬ ತಮನ್ನಾ ಭಾಟಿಯಾ ಅವರ ಭಾವಚಿತ್ರವನ್ನು ಕೈ ಮೇಲೆ ಟ್ಯಾಟೂ  ಹಾಕಿಸಿಕೊಂಡು ಅಭಿಮಾನ ಮರೆದದಿದ್ದಾನೆ. ಅದನ್ನು ಆತ ನಟಿಗೆ ತೋರಿಸಿದಾಗ ಅವರು  ಭಾವುಕರಾಗಿದ್ದಾರೆ. ಮುಂಬೈ ಏರ್​ಪೋರ್ಟ್​ನಲ್ಲಿ ಈ ಘಟನೆ ನಡೆದಿದೆ. ತಮನ್ನಾರನ್ನು ನೋಡಿದ ಯುವಕ ಕಣ್ಣೀರು ಹಾಕಿದ್ದಾನೆ. ಇದನ್ನು ನೋಡಿ ನಟಿ ಕೂಡ ಭಾವುಕರಾಗಿದ್ದಾರೆ.  ಈ ವಿಶೇಷ ಅಭಿಮಾನಿಗೆ ತಮನ್ನಾ ಭಾಟಿಯಾ ಧನ್ಯವಾದ ತಿಳಿಸಿದ್ದಾರೆ. ‘ಇಂಥ ಅಭಿಮಾನಿಗಳನ್ನು ಪಡೆದ ನೀವು ಧನ್ಯ’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.

Tap to resize

Latest Videos

ನಟಿ ಮುಟ್ಟಿದಾಕ್ಷಣ ರೋಮಾಂಚನದಿಂದ ಕುಣಿದು ಕುಪ್ಪಳಿಸಲು ಬೆಕ್ಕೇನು ಮನುಷ್ಯರಾ? ಕರಿಷ್ಮಾ ವಿಡಿಯೋಗೆ ಸಕತ್​ ಕಮೆಂಟ್​!

ನಟಿ ಇತ್ತೀಚೆಗೆ ಸಕತ್​ ಸುದ್ದಿ ಮಾಡಿದ್ದು,  ತಮನ್ನಾ ಮತ್ತು ನಟಿ ಅನುಷ್ಕಾ ಶರ್ಮಾ ಪತಿ, ಕ್ರಿಕೆಟಿಗ ವಿರಾಟ್​ ಕೊಹ್ಲಿ ಅವರ ಡೇಟಿಂಗ್​ ವದಂತಿ ಕುರಿತು.  ವಿರಾಟ್ ಕೊಹ್ಲಿ ಜೊತೆಗೆ ತಮನ್ನಾ ಭಾಟಿಯಾ ಹೆಸರು ಕೂಡ ಕೇಳಿಬರುತ್ತಿದೆ. ಜಾಹೀರಾತೊಂದರ ಚಿತ್ರೀಕರಣದ ವೇಳೆ ವಿರಾಟ್ (virat Kohli) ಮತ್ತು ತಮನ್ನಾ ಭೇಟಿಯಾಗಿದ್ದರು. ಇದಾದ ನಂತರ ಇವರಿಬ್ಬರ ಅಫೇರ್ ಸುದ್ದಿಗೆ ವೇಗ ಸಿಕ್ಕಿತ್ತು. ಈ ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.  ಅನುಷ್ಕಾ ಶರ್ಮಾ (Anushka Sharma) ಜೊತೆ ಮದುವೆಗೂ ಮುನ್ನ ವಿರಾಟ್ ಕೊಹ್ಲಿ ಹೆಸರು ಹಲವು ನಟರು ಮತ್ತು ಮಾಡೆಲ್‌ಗಳ ಜೊತೆ ಸೇರಿಕೊಂಡಿತ್ತು. ತಮನ್ನಾ ಭಾಟಿಯಾ ಹೊರತುಪಡಿಸಿ, ವಿರಾಟ್ ಕೊಹ್ಲಿಯ ಹೆಸರು ಬ್ರೆಜಿಲಿಯನ್ ಮಾಡೆಲ್ ಇಸಾಬೆಲ್ಲೆ ಲೈಟ್‌ನೊಂದಿಗೆ ಮುಖ್ಯಾಂಶಗಳಲ್ಲಿತ್ತು. ಕೊಹ್ಲಿ ಜೊತೆಗೆ ಕಾಲಿವುಡ್ ನಟಿ ಸಾಕ್ಷಿ ಅಗರ್ವಾಲ್ ಹೆಸರು ಕೂಡ ತಳುಕು ಹಾಕಿಕೊಂಡಿದೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು 11 ಡಿಸೆಂಬರ್ 2017 ರಂದು ಇಟಲಿಯಲ್ಲಿ  ವಿವಾಹವಾದರು.
 
ಸದ್ಯ ನಟಿ ತಮನ್ನಾ  ಅವರಿಗೆ ವೆಬ್​ ಸಿರೀಸ್​ಗಳಿಂದಲೂ  ಆಫರ್​ಗಳು ಹೆಚ್ಚಾಗಿವೆ. ಇತ್ತೀಚೆಗೆ ‘ಅಮೇಜಾನ್​ ಪ್ರೈಂ ವಿಡಿಯೋ’ದಲ್ಲಿ ರಿಲೀಸ್​ ಆದ ‘ಜೀ ಕರ್ದಾ’ ವೆಬ್​ ಸಿರೀಸ್​ನಲ್ಲಿ ತಮನ್ನಾ ನಟಿಸಿದ್ದಾರೆ. ‘ಲಸ್ಟ್​ ಸ್ಟೋರೀಸ್​ 2’ ಚಿತ್ರದಲ್ಲೂ ಅವರೊಂದು ಪ್ರಮುಖ ಪಾತ್ರ ಮಾಡಿದ್ದು ನೆಟ್​ಫ್ಲಿಕ್ಸ್​ ಮೂಲಕ ಇದೇ 29ರಂದು ಅದು ಬಿಡುಗಡೆ ಆಗಲಿದೆ.

ರಿಯಲ್​ ಪತಿ ಜೊತೆ ಪುಟ್ಟಕ್ಕನ ಮಕ್ಕಳ ರಾಜಿ ಭರ್ಜರಿ ಡ್ಯಾನ್ಸ್​: ರೀಲ್​ ಪತಿ ಎಲ್ಲಮ್ಮಾ ಕೇಳಿದ ಫ್ಯಾನ್ಸ್​

 

click me!