ನಟಿ ಕರಿಷ್ಮಾ ತನ್ನಾ, ದಾರಿಯಲ್ಲಿ ಇದ್ದ ಬೆಕ್ಕನ್ನು ಮುಟ್ಟಲು ಹೋದ ತಕ್ಷಣ ಅದು ಅಲ್ಲಿಂದ ಕಾಲ್ಕಿತ್ತ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ಥಹರೇವಾರಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ.
ಒಂದಿಷ್ಟು ಸಿನಿಮಾಗಳಲ್ಲಿ ಫೇಮಸ್ ಆದರೆ ಸಾಕು, ಚಿತ್ರ ತಾರೆಯರ ಅಭಿಮಾನಿಗಳ ಸಂಖ್ಯೆ ದಿಢೀರನೇ ಏರುವುದು ಸಹಜ. ಹಲವು ಸಂದರ್ಭಗಳಲ್ಲಿ ಇದು ಕೇವಲ ಅಭಿಮಾನ ಆಗಿರದೇ ಅತಿರೇಕವೂ ಆಗಿರುತ್ತದೆ. ಚಿತ್ರತಾರೆಯರನ್ನು ಒಮ್ಮೆಯಾದರೂ ತಮ್ಮ ಕಣ್ಣುಗಳಿಂದ ನೇರವಾಗಿ ನೋಡಬೇಕು ಎಂದು ಹಾತೊರೆಯುವ ದೊಡ್ಡ ವರ್ಗವೇ ಇದೆ. ಚಿತ್ರ ನಟರು ಎಂದರೆ ದೇವರಿಗಿಂತಲೂ ಮಿಗಿಲು ಎಂದುಕೊಳ್ಳುವವರಿಗೇನೂ ಕಮ್ಮಿಯಿಲ್ಲ. ವಿವಿಧ ಕ್ಷೇತ್ರಗಳಲ್ಲಿ ಬಹುದೊಡ್ಡ ಸಾಧನೆ ಮಾಡಿ ದೇಶದ ಕೀರ್ತಿಯನ್ನು ಹೆಚ್ಚಿಸಿರುವ ಸಾಧಕರ ಪರಿಚಯ ದೂರದ ಮಾತು, ಅವರು ನಮ್ಮ ಮನೆಯ ಪಕ್ಕದಲ್ಲಿಯೇ ಇದ್ದರೂ ಗುರುತಿಸುವುದು ಕಷ್ಟಸಾಧ್ಯವೇ. ಆದರೆ ಬಣ್ಣದ ಲೋಕದವರ ಮಾತು ಹಾಗಲ್ಲ. ಜನರಿಗೆ ಬಲು ಬೇಗನೆ ಪ್ರಿಯರಾಗಿ ಬಿಡುತ್ತಾರೆ.
ಇದಾಗಲೇ ಹಲವಾರು ಅಭಿಮಾನಿಗಳು ಅತಿರೇಕವನ್ನು ಮೆರೆದು ತಮ್ಮ ಜೀವವನ್ನೇ ಬಲಿ ಕೊಟ್ಟಿರುವ ಘಟನೆಗಳು ನಡೆದಿವೆ. ಇನ್ನು ಕೆಲವರು ತಮ್ಮ ನೆಚ್ಚಿನ ತಾರೆಯರನ್ನು ನೋಡುವುದಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು, ನಟ-ನಟಿಯರ ಮನೆಗೆ ನುಸುಳುವ ಧೈರ್ಯವನ್ನೂ ಮಾಡಿದ್ದಾರೆ. ಚಿತ್ರ ನಟರು ಬಂದಾಗ ಕಾಲ್ತುಳಿತವಾಗುವಷ್ಟು ಜನಸ್ತೋಮ ನೆರೆಯುವುದು ಉಂಟು. ನಟ-ನಟಿಯರಿಗೂ ಖಾಸಗಿ ಬದುಕು ಇರುತ್ತದೆ ಎನ್ನುವುದನ್ನೂ ಮರೆತು, ಅವರ ಹಿಂದೆ ಸುತ್ತಾಡುವ ಪಾಪರಾಜಿಗಳಿಗೂ ಕಮ್ಮಿಯೇನಿಲ್ಲ. ತಮ್ಮ ನೆಚ್ಚಿನ ತಾರೆಯರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಪ್ರಾಣದ ಹಂಗು ತೊರೆದವರು ಅದೆಷ್ಟು ಮಂದಿ ಇಲ್ಲ?
ಅವಳ ತುಟಿ, ಕಣ್ಣು, ಮೂಗು... ಆಹಾ! ಮೃಣಾಲ್ ಬ್ಯೂಟಿ ಹೊಗಳಿದ ವಿಜಯ್ ದೇವರಕೊಂಡ: ರಶ್ಮಿಕಾ ಕಥೆ ಏನೆಂದ ಫ್ಯಾನ್ಸ್
ಹೀಗೆಲ್ಲಾ ಇರುವಾಗ, ಯಾವುದೇ ಚಿತ್ರತಾರೆಯ ಸ್ಪರ್ಶ ಆಗಿಬಿಟ್ಟರೆ? ಸ್ವರ್ಗಕ್ಕೆ ಮೂರೇ ಗೇಣು ಅಂದುಕೊಳ್ಳುವವರು ಇದ್ದಾರೆ. ಏಳೇಳು ಜನ್ಮ ಸಾರ್ಥಕವಾಯಿತು ಎಂದು ಅಂದುಕೊಳ್ಳುವವರೂ ಸಾಕಷ್ಟು ಜನರಿದ್ದಾರೆ. ಇದು ಮನುಷ್ಯದ ವಿಷ್ಯವಾಯ್ತು. ಇನ್ನು ಪ್ರಾಣಿಗಳು? ಅವುಗಳಿಗೆ ಸೆಲೆಬ್ರಿಟಿಯಾದ್ರೇನು? ಇನ್ಯಾರು ಆದ್ರೇನು? ತಮ್ಮ ಮನೆಯಜಮಾನ ಮತ್ತು ತಮ್ಮನ್ನು ತುಂಬಾ ಪ್ರೀತಿಸುವ ವ್ಯಕ್ತಿಗಳಿಗೆ ಹತ್ತಿರವಾಗಿ, ನಿಯತ್ತಾಗಿ ಇರುತ್ತದೆಯೇ ವಿನಾ, ಹಾದಿಬೀದಿಯಲ್ಲಿ ಹೋಗುವವರು ಯಾವುದೇ ಸ್ಥಾನದಲ್ಲಿ ಇದ್ದರೂ ಅವುಗಳಿಗೆ ಲೆಕ್ಕವೇ ಇಲ್ಲ.
ಅಷ್ಟಕ್ಕೂ ಇಷ್ಟೆಲ್ಲಾ ಹೇಳಲು ಕಾರಣವೇನೆಂದರೆ, ಈಗ ವೈರಲ್ ಆಗಿರೋ ವಿಡಿಯೋ. ದಾರಿಯಲ್ಲಿ ಹೋಗುವ ಸಮಯದಲ್ಲಿ ಅಲ್ಲಿಯೇ ಇದ್ದ ಮುದ್ದು ಬೆಕ್ಕನ್ನು ನಟಿ ಕರಿಷ್ಮಾ ತನ್ನಾ ಮುಟ್ಟಲು ಹೋಗಿದ್ದಾರೆ. ಆದರೆ ಹೇಳಿ ಕೇಳಿ ಅದು ಬೆಕ್ಕು. ನಟಿ ಮುಟ್ಟುತ್ತಿದ್ದಂತೆಯೇ ಅಲ್ಲಿಯವರೆಗೆ ಅಲ್ಲಿಯೇ ಕೂತಿದ್ದ ಬೆಕ್ಕು, ಬೆನ್ನು ಮಾಡಿ ಹೊರಟುಹೋಗಿದೆ. ತಮ್ಮ ಹಿಂದೆ ಪಾಪರಾಜಿಗಳ ಕ್ಯಾಮೆರಾ ಇದ್ದುದನ್ನು ನೋಡಿದ್ದ ನಟಿ, ಬೆಕ್ಕನ್ನು ಮುದ್ದು ಮಾಡಲು ಹೋದರೆ ಹೀಗೆಲ್ಲಾ ಆಗಿ ಹೋಗಿದೆ. ಬೆಕ್ಕು ಒಳ್ಳೆಯ ಮೂಡ್ನಲ್ಲಿ ಇದ್ದಂತೆ ಕಾಣುತ್ತಿಲ್ಲ ಎನ್ನುವ ಶೀರ್ಷಿಕೆಯೊಂದಿಗೆ ಇದರ ವಿಡಿಯೋ ವೈರಲ್ ಆಗಿದ್ದು, ಬೆಕ್ಕೇನು ಮನುಷ್ಯರಾ, ನಟಿ ಮುಟ್ಟಿದ ತಕ್ಷಣ ಕುಣಿದಾಡಲು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಅಂದಹಾಗೆ ನಟಿ ಕರಿಷ್ಮಾ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಫೇಮಸ್ ಆಗಿದ್ದಾರೆ. 2001 ರಲ್ಲಿ ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಸೀರಿಯಲ್ ಮೂಲಕ ಜನಪ್ರಿಯಗೊಂಡರು. ಅದಾದ ಬಳಿಕ, ನಾಗಾರ್ಜುನ - ಏಕ್ ಯೋಧಾ ಮತ್ತು ಕಯಾಮತ್ ಕಿ ರಾತ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
15 ರೂ. ಸೀರೆಯುಟ್ಟ ಬಾಲಿವುಡ್ ಬ್ಯೂಟಿ ಅದಾ ಶರ್ಮಾ! ಏನಿದರ ಸೀಕ್ರೆಟ್, ಸ್ಯಾರಿ ಗುಟ್ಟು ಬಿಚ್ಚಿಟ್ಟ ನಟಿ...