ನಟಿ ತಾಪ್ಸಿ ಪನ್ನು ಅವರ ಮದುವೆ ಯಾವಾಗ ಎಂದು ಫ್ಯಾನ್ಸ್ ಕೇಳಿದ ಪ್ರಶ್ನೆಗೆ ಆಕೆ ಕೊಟ್ಟಿರುವ ಉತ್ತರ ಕೇಳಿ ಅಭಿಮಾನಿಗಳಿಗೆ ಶಾಕ್ ಆಗಿದೆ.
ಸೌತ್‌ನ ಬ್ಯುಸಿ ನಟಿ ತಾಪ್ಸಿ ಪನ್ನು ತಮ್ಮ ಚಿತ್ರಗಳಿಗಿಂತ ಹೆಚ್ಚಾಗಿ ವಿವಾದಗಳು ಮತ್ತು ಕಮೆಂಟ್‌ಗಳಿಂದಲೇ ಸದಾ ಸುದ್ದಿಯಲ್ಲಿ ಇರುತ್ತಾರೆ. ತಾಪ್ಸಿ (Taapsee Pannu) ಇದೀಗ ನಟನೆಯಿಂದ ಕೊಂಚ ಬ್ರೇಕ್ ಪಡೆದು ಹಾಲಿಡೇ ಎಂಜಾಯ್ ಮಾಡೋ ಮೂಡ್‌ನಲ್ಲಿರೋ ನಟಿ ಕೈತುಂಬಾ ಸಿನಿಮಾಗಳಿವೆ. ರಾಜ್ಕುಮಾರ್ ಹಿರಾನಿ ನಿರ್ದೇಶನ ಮಾಡುತ್ತಿರುವ ‘ಡಂಕಿ’ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ನಟಿಸುವ ಅವಕಾಶ ತಾಪ್ಸಿಗೆ ಸಿಕ್ಕಿದೆ. ಆ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಇದಲ್ಲದೇ, ‘ಏಲಿಯನ್’, ‘ಜನ ಗಣ ಮನ’, ‘ಓ ಲಡ್ಕಿ ಹೈ ಕಹಾ’, ‘ಫಿರ್ ಆಯಿ ಹಸೀನ್ ದಿಲ್ರುಬಾ’ ಮುಂತಾದ ಸಿನಿಮಾಗಳಲ್ಲಿ ತಾಪ್ಸಿ ಪನ್ನು ನಟಿಸುತ್ತಿದ್ದಾರೆ. ಇದಾಗಲೇ ನಟಿ, ಸಾಕಷ್ಟು ಹಿಟ್ ಚಿತ್ರಗಳನ್ನ ನೀಡಿದ್ದಾರೆ. . 2021-2022ರಲ್ಲಿ ಸಾಲು ಸಾಲಾಗಿ ಆರು ಸಿನಿಮಾಗಳನ್ನ ಹಿಟ್ ನೀಡಿದ್ದರು. ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿದ್ದ ನಟಿ, ತಾಪ್ಸಿ ಪನ್ನು ಈಗ ಕೆಲ ಕಾಲ ದೇಶ-ವಿದೇಶಗಳ ಟೂರ್ ಮೂಡಿನಲ್ಲಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿಯೂ ಆಕ್ಟೀವ್ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ (Social Media) ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ತಾಪ್ಸಿ ಪನ್ನು, ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಆಗಾಗ್ಗೆ ಉತ್ತರ ಕೊಡುವುದು ಉಂಟು. ಕೆಲವೊಮ್ಮೆ ಸೀರಿಯಸ್ ಆಗಿ, ಕೆಲವೊಮ್ಮೆ ಫನ್ನಿ ಆಗಿ ಉತ್ತರಿಸುತ್ತಾರೆ. ಇದೀಗ ಅಭಿಮಾನಿಯೊಬ್ಬ ಅವರ ಮದುವೆಯ ಬಗ್ಗೆ ಪ್ರಶ್ನೆ ಕೇಳಿದ್ದು, ಅದಕ್ಕೆ ನಟಿ ಫನ್ನಿಯಾಗಿ ಉತ್ತರ ಕೊಟ್ಟಿದ್ದಾರೆ. ಆದರೆ ಇದು ಸಕತ್ ವೈರಲ್ (Viral) ಆಗಿದ್ದು, ನಟಿಯನ್ನು ಟ್ರೋಲ್ ಕೂಡ ಮಾಡಲಾಗುತ್ತಿದೆ. ಜೊತೆಗೆ ಈ ಉತ್ತರದಿಂದ ತಾಪ್ಸಿ ಬಾಲಿವುಡ್‌ನ ಕೆಲವು ನಟಿಯರಿಗೆ ಟಾಂಟ್ ಕೊಟ್ಟಿದ್ದಾರೆ ಎನ್ನುವುದು ಕೂಡ ತಿಳಿಯುತ್ತಿದೆ ಎಂದು ಟ್ರೋಲಿಗರು ಹೇಳುತ್ತಿದ್ದಾರೆ.
ಆಂಧ್ರದ ರಾಜಕೀಯದಲ್ಲಿ ಕೋಲಾಹಲ: ಪವನ್ ಕಲ್ಯಾಣ್-ರೋಜಾ ಮಧ್ಯೆ ಬಂದ ಸನ್ನಿ ಲಿಯೋನ್!
ಅಷ್ಟಕ್ಕೂ ನಟಿಗೆ ಮದುವೆಯ ಬಗ್ಗೆ ಪ್ರಶ್ನೆ ಕೇಳಿರುವ ಹಿಂದೆ ಕಾರಣವೂ ಇದೆ. ಅದೇನೆಂದರೆ, 35 ವರ್ಷ ವಯಸ್ಸಿನ ತಾಪ್ಸಿ, ಬ್ಯಾಡ್ಮಿಂಟನ್ ಆಟಗಾರ, ಕೋಚ್ ಮಥಾಯಿಸ್ ಬೋ (Mathias Boe) ಅವರ ಜೊತೆ ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಸಕತ್ ಟೂರ್ ಮಾಡುತ್ತ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ತಾವಿಬ್ಬರೂ ಟ್ರಿಪ್ ಮೂಡ್‌ನಲ್ಲಿರೋ ಹಲವು ಫೋಟೋಗಳನ್ನು ತಾಪ್ಸಿ ಇದಾಗಲೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದಾಗಲೇ ನಟಿಗೆ ಆಗಾಗ ಫಾರಿನ್ ಟ್ರಿಪ್ ಮಾಡುತ್ತಾರೆ. ಆ ಫೋಟೋಗಳನ್ನು ಕೂಡ ಅವರು ಹಂಚಿಕೊಳ್ಳುತ್ತಾರೆ. ಅವರಿಗೆ ಮದುವೆಯ ಚಿಂತೆ ಇದೆಯೋ, ಇಲ್ವೋ ಗೊತ್ತಿಲ್ಲ. ಆದರೆ ಫ್ಯಾನ್ಸ್‌ಗಳಿಗೆ ತಾಪ್ಸಿಯ ಮದುವೆಯ ಚಿಂತೆ. ಅದಕ್ಕೇ ಮದುವೆಯಾವಾಗ ಎನ್ನುವ ಪ್ರಶ್ನೆಯನ್ನು ಆಕೆಯ ಮುಂದಿಟ್ಟಿದ್ದಾರೆ.
ಇದಕ್ಕೆ ತಾಪ್ಸಿ ಕೊಟ್ಟಿರುವ ಉತ್ತರ ಕೇಳಿ ಅಭಿಮಾನಿಗಳು (Fans) ದಂಗಾಗಿದ್ದಾರೆ. ಅಷ್ಟಕ್ಕೂ ನಟಿ ಹೇಳಿದ್ದು ಏನೆಂದರೆ, ನನ್ನ ಮದುವೆ ಬಗ್ಗೆ ಸದಾ ವಿಚಾರಿಸುತ್ತಿರುತ್ತೀರಿ. ಇಲ್ಲಿ ಕೇಳಿ. ನಾನಿನ್ನೂ ಗರ್ಭಿಣಿ ಆಗಿಲ್ಲ. ಸದ್ಯಕ್ಕೆ ಆಗುವುದೂ ಇಲ್ಲ ಎಂದು ಉತ್ತರಿಸಿದ್ದಾರೆ. ಮಕ್ಕಳನ್ನು ಪಡೆಯಬೇಕು ಎನಿಸಿದಾಗ ನಾನು ಮದುವೆ ಆಗುತ್ತೇನೆ ಎಂದು ಈ ಹಿಂದೆ ಕೂಡ ಅವರು ಹೇಳಿದ್ದು. ಇದೀಗ ಗರ್ಭಿಣಿಯಾಗಿಲ್ಲ, ಆಮೇಲೆ ನೋಡೋಣ ಎಂದಿದ್ದಾರೆ. ಇದಾಗಲೇ ಕಳೆದ ವರ್ಷ ಮದುವೆಯಾಗಿದ್ದ ನಟಿಯರು ಮದುವೆಯಾಗಿ ಐದಾರು ತಿಂಗಳಿನಲ್ಲಿಯೇ ಮಗುವನ್ನು ಪಡೆದದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಅದೇ ರೀತಿ ತಾಪ್ಸಿ ಪನ್ನು ಕೂಡ ಗರ್ಭ ಧರಿಸಿದ ಮೇಲೆ ಮದುವೆಯಾಗುವ ಯೋಚನೆ ಮಾಡಿದ್ದಾರೆಯೇ ಎಂದು ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ!
ಭೀಮನ ಅಮವಾಸ್ಯೆಗೆ ಗಂಡನ ಪಾದಪೂಜೆ ಮಾಡಿದ ಪ್ರಣಿತಾ ಕೊಟ್ರು ಈ ಕಾರಣ: ಫ್ಯಾನ್ಸ್ ಕಿತ್ತಾಟ!