ಜನಾಂಗೀಯ ನಿಂದನೆ ಪದ ಬಳಕೆ ಮಾಡಿದ ಬಾಲಿವುಡ್ ನಟಿ ಕಾಜೋಲ್ಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾಜೋಲ್ ವಿಡಿಯೋ ವೈರಲ್ ಆಗಿದೆ.
ಬಾಲಿವುಡ್ ನಟಿ ಕಾಜೋಲ್ ದೇವಗನ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸದ್ಯ ಸಿನಿಮಾಗಳಲ್ಲಿ ಮತ್ತೆ ಬ್ಯುಸಿಯಾಗಿರುವ ನಟಿ ಕಾಜೋಲ್ ಸಿಕ್ಕಾಪಟ್ಟೆ ಪ್ರಮೋಷನ್ ಮಾಡುತ್ತಿದ್ದಾರೆ. ಸದಾ ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿರುವ ಒಂದಲ್ಲೊಂದು ಕಾರಣಕ್ಕೆ ಟ್ರೋಲ್ ಆಗುತ್ತಿದ್ದಾರೆ. ಇತ್ತೀಚಿಗಷ್ಟೆ ರಾಜಕಾರಣಿಗಳ ಬಗ್ಗೆ ಮಾತನಾಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ದೇಶವನ್ನು 'ಅಶಿಕ್ಷಿತ' ನಾಯಕರು ಆಳುತ್ತಿದ್ದಾರೆ ಎಂದು ಹೇಳಿ ಕಾಜೋಲ್ ಸಂಕಷ್ಟಕ್ಕೆ ಸಿಲುಕಿದ್ದರು. ಬಳಿಕ ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾದ ಕಲೆಕ್ಷನ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಕ್ಕಾಗಿ ಕಾಜೋಲ್ ಅವರನ್ನು ಜನರು ಟ್ರೋಲ್ ಮಾಡಿದ್ದರು. ಈಗ ಇನ್ನೊಂದು ವಿಷಯಕ್ಕೆ ಸದ್ದು ಮಾಡುತ್ತಿದ್ದಾರೆ. ಕಾಜೋಲ್ ಅವರ ಹಳೇ ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ಜನಾಂಗೀಯ ನಿಂದನೆ ಮಾಡುವಂತಹ ಪದ ಬಳಸಿದ್ದಾರೆ.
ಕಾಜೋಲ್ ಅವರ ವರ್ತನೆಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ವ್ಯಕ್ತಿಯನ್ನು ಜಾತಿ, ಜನಾಂಗದ ಆಧಾರದಲ್ಲಿ ನಿಂದಿಸುವುದು ಸರಿಯಲ್ಲ. ಎಲ್ಲರೂ ಈ ವಿಚಾರದಲ್ಲಿ ಎಚ್ಚರಿಕೆ ವಹಿಸುತ್ತಾರೆ. ಕಾಜೋಲ್ ಒಂದು ಪ್ರಮೋಷನಲ್ ವಿಡಿಯೋದಲ್ಲಿ ಜನಾಂಗೀಯ ನಿಂದನೆಯ ಪದ ಬಳಸಿದ್ದಾರೆ. ಅದು ಕಪ್ಪು ಜನರ ವಿರುದ್ಧ, ವಿಶೇಷವಾಗಿ ಆಫ್ರಿಕನ್ ಅಮೆರಿಕನ್ನರ ವಿರುದ್ಧ ಬಳಸಲಾಗುವ ಜನಾಂಗೀಯ ನಿಂದನೆಯಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸರಿಯಾಗಿ ತರಾಟೆ ತೆಗೆದುಕೊಂಡಿದ್ದಾರೆ. ಅದು ಸರಿಯಲ್ಲ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನೂ ಕೆಲವರು ಕಾಜೋಲ್ಗೆ ಬೆಂಬಲ ಸೂಚಿಸಿದ್ದಾರೆ.
undefined
29 ವರ್ಷದ ನೋ ಕಿಸ್ಸಿಂಗ್ ಸೀನ್ ರೂಲ್ಸ್ ಬ್ರೇಕ್ ಮಾಡಿದ ಕಾಜೋಲ್; ಲಿಪ್‌ಲಾಕ್ ದೃಶ್ಯ ವೈರಲ್
ಕಾಜೋಲ್ ಅವರು ‘ದಿ ಟ್ರಯಲ್’ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಅದರಲ್ಲಿ ಅವರು ಲಿಪ್ ಲಾಕ್ ಮಾಡುವ ಮೂಲಕ ಸಖತ್ ಸುದ್ದಿ ಆಗಿದ್ದಾರೆ. ಸುಮಾರು 29 ವರ್ಷಗಳ ಕಾಲ ನೋ ಕಿಸ್ ಪಾಲಿಸಿ ಅನುಸರಿಸಿಕೊಂಡು ಬಂದಿದ್ದ ಕಾಜೋಲ್ ಈಗ ಏಕಾಏಕಿ ಕಿಸ್ ಮಾಡಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತು. ಕಾಜೋಲ್ ಸಿನಿಮಾಗಳ ಸಂಖ್ಯೆ ಕಡಿಮೆಯಾದರೂ ಸಿಕ್ಕಾಪಟ್ಟೆ ಬೇಡಿಕೆ ಇರುವ ನಟಿಯಾಗಿದ್ದಾರೆ. ಆದರೆ ಸದಾ ಅನಗತ್ಯ ಕಾರಣಗಳಿಗಾಗಿ ಅವರು ಸುದ್ದಿ ಆಗುತ್ತಿದ್ದಾರೆ.
ಪಠಾಣ್ ಗಳಿಕೆಗೆ ಕಾಜೋಲ್ ವ್ಯಂಗ್ಯ: ಶಾರುಖ್ ಫ್ಯಾನ್ಸ್ ಗರಂ- ನಟಿ ಹೇಳಿದ್ದಾದ್ರೂ ಏನು?
ಕಾಜೋಲ್ ಸದ್ಯ ದಿ ಟ್ರಯಲ್ ವೆಬ್ ಸೀರಿಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸರಣಿಯಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡು ಸಖತ್ ಟ್ರೋಲ್ ಆಗಿದ್ದಾರೆ. ಈ ಮೊದಲು ಕಾಜೋಲ್ ಲಸ್ಟ್ ಸ್ಟೋರಿ 2 ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಕಾಜೋಲ್ ಲಸ್ಟ್ ಸ್ಟೋರಿಯಲ್ಲಿ ನಟಿಸಿದ್ದು ಕೂಡ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು.