ಅತ್ತ ಸ್ವರಾ- ಇತ್ತ ಸೋನಾಕ್ಷಿ... ಬಣ್ಣರಹಿತ ಗಂಡಂದಿರು! ಟ್ರೋಲಿಗರ ಬಾಯಿ ಮುಚ್ಚಿಸಲು ಹೋಗಿ ಇದೇನಾಗೋಯ್ತು?

ಫಹಾದ್ ಅಹ್ಮದ್ ಅವರನ್ನು ಮದುವೆಯಾಗಿರುವ ನಟಿ ಸ್ವರಾ ಭಾಸ್ಕರ್​ ಮತ್ತು ಜಹೀರ್​ ಇಕ್ಬಾಲ್​ ಅವರನ್ನು ಮದುವೆಯಾಗಿರುವ ಸೋನಾಕ್ಷಿ ಸಿನ್ಹಾ ಹೋಳಿ ಹಬ್ಬದ ಸಂದರ್ಭದಲ್ಲಿ ಟ್ರೋಲ್​ಗೆ ಒಳಗಾಗಿದ್ದಾರೆ. ಆಗಿದ್ದೇನು?
 


ಯಾಕೋ ಸ್ವರಾ ಭಾಸ್ಕರ್​ ಮತ್ತು ಸೋನಾಕ್ಷಿ ಸಿನ್ಹಾ ಅವರನ್ನು ಟ್ರೋಲಿಗರು ಬಿಡುವಂತೆ ಕಾಣಿಸುತ್ತಿಲ್ಲ. ಅತ್ತ ಸ್ವರಾ ಭಾಸ್ಕರ್​ ಮತ್ತು ಪತಿ ಫಹಾದ್ ಅಹ್ಮದ್ ಮದುವೆಯಾಗಿ ಎರಡು ವರ್ಷಕ್ಕೆ ಎರಡನೆಯ ಮಗುವಿನ ನೀರಿಕ್ಷೆಯಲ್ಲಿದ್ದರೆ, ಇತ್ತ ಸೋನಾಕ್ಷಿ ಸಿನ್ಹಾ ತಮ್ಮ ಗಂಡ ಜಹೀರ್​ ಇಕ್ಬಾಲ್​ ಜೊತೆ ಎಂಜಾಯ್​ ಮಾಡುತ್ತಿದ್ದಾರೆ. ಇದರ ಹೊರತಾಗಿಯೂ ಯಾಕೋ ಟ್ರೋಲಿಗರಿಗೆ ಇವರಿಬ್ಬರ ಮೇಲೆ ಇನ್ನಿಲ್ಲದ ಕಣ್ಣು. ತಮ್ಮ ಪಾಡಿಗೆ ತಮ್ಮನ್ನು ಬಿಟ್ಟುಬಿಡಿ ಎಂದು ಇವರಿಬ್ಬರೂ ಗೋಗರೆದೂ ಆಗಿದೆ, ಒಂದು ಹೆಜ್ಜೆ ಮುಂದಕ್ಕೆ ಹೋಗಿ ಟ್ರೋಲಿಗರ ಮೇಲೆ ಹರಿಹಾಯ್ದಿದ್ದೂ ಆಗಿದೆ. ಆದರೂ ಟ್ರೋಲಿಗರು ಮಾತ್ರ ಏನಾದರೊಂದು ವಿಷಯವನ್ನು ಕೆದಕಿ ಇವರಿಬ್ಬರ ಕಾಲು ಎಳೆಯುತ್ತಲೇ ಇದ್ದಾರೆ. ಇದೀಗ ಹೋಳಿಯ ಆಚರಣೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಸ್ವರಾ ಭಾಸ್ಕರ್​ ಅವರು, ಅಲ್ಪ ಸ್ವಲ್ಪ ಹೋಳಿ ಬಣ್ಣ ಬಳಿದುಕೊಂಡು, ತಮ್ಮ ಮಗುವಿಗೂ ಸ್ವಲ್ಪ ಹಚ್ಚಿ, ನಾನು ಮದ್ವೆಯಾದ ಮೇಲೂ ಹಿಂದೂ ಧರ್ಮ ಪಾಲನೆ ಮಾಡುತ್ತಿದ್ದೇನೆ ಎಂದು ಟ್ರೋಲಿಗರಿಗೆ ಉತ್ತರ ಕೊಡಲು ಹೋಗಿ ಮತ್ತೆ ಟ್ರೋಲ್​ಗೆ ಒಳಗಾಗಿದ್ದಾರೆ. ಇದಕ್ಕೆ ಕಾರಣ, ಇವರು ಶೇರ್​ ಮಾಡಿಕೊಂಡಿರುವ ಫೋಟೋದಲ್ಲಿ ಅವರ ಪತಿ ಕಪ್ಪು ಬಟ್ಟೆ ಧರಿಸಿದ್ದು, ಮುಖಕ್ಕೆ ಬಣ್ಣ ಬಳಿದುಕೊಂಡಿಲ್ಲ. ನಾಮ್​ ಕೇ ವಾಸ್ತೆ ಎನ್ನುವಂತೆ ಅಷ್ಟಿಷ್ಟು ಬಣ್ಣವನ್ನು ಫೋಟೋಶೂಟ್​ಗಾಗಿ ಬಳಿದುಕೊಂಡು ಹೀಗೆ ಆ್ಯಕ್ಟಿಂಗ್​ ಮಾಡೋದು ಬೇಕಿತ್ತಾ ಎಂದು ನೆಟ್ಟಿಗರು ನಟಿಯ ಕಾಲೆಳೆಯುತ್ತಿದ್ದಾರೆ. ಅದೇ ಇನ್ನೊಂದೆಡೆ ನಟ ಶತ್ರುಘ್ನ ಸಿಹ್ನಾ ಅವರ ಪುತ್ರಿ ಸೋನಾಕ್ಷಿ ಸಿನ್ಹಾ. ಇವರು ಕೂಡ ನಾನು ಇನ್ನೂ ಹಿಂದೂ ಆಚರಣೆ ಮಾಡುತ್ತಿದ್ದೇನೆ ಎಂದು ಹೇಳಿ ಹೋಳಿಯ ಬಣ್ಣ ಬಳಿದುಕೊಂಡು ಫೋಟೋ ಶೇರ್​  ಮಾಡಿದ್ದಾರೆ. ಆದರೆ ಪ್ರತಿ ಬಾರಿಯೂ ಪಕ್ಕದಲ್ಲಿ ಗಂಡನ ಜೊತೆಗಿದ್ದುಕೊಂಡೇ ಫೋಟೋಶೂಟ್​ ಮಾಡಿಸಿಕೊಳ್ಳುವ ನಟಿ ಈ ಬಾರಿ ಮಾತ್ರ ಏಕಾಂಗಿಯಾಗಿ ಬಣ್ಣ ಬಳಿದುಕೊಂಡಿರೋದಕ್ಕೆ ಇನ್ನಿಲ್ಲದ ಟ್ರೋಲ್​ಗೆ ಒಳಗಾಗಿದ್ದಾರೆ. ಆದರೆ ಇದಕ್ಕೆ ಉತ್ತರ ಕೊಟ್ಟಿರೋ ನಟಿ, ನಾನು ಮುಂಬೈನಲ್ಲಿ ಶೂಟಿಂಗ್​ನಲ್ಲಿ ಇದ್ದು, ಗಂಡ  ಮುಂಬೈನಲ್ಲಿ ಇದ್ದಾರೆ. ಅದಕ್ಕಾಗಿ ಒಂಟಿಯಾಗಿ ಹೋಳಿ ಆಚರಿಸುವ ಫೋಟೋ ಹಾಕಿದ್ದೇನೆ. ನಿಮ್ಮ ತಲೆಯ ಮೇಲೆ ತಣ್ಣೀರು ಸುರಿದುಕೊಳ್ಳಿ ಎಂದಿದ್ದಾರೆ. ಹಾಗಿದ್ದರೆ ಗಂಡ ಹೋಳಿ ಆಚರಿಸುವ ಫೋಟೋನ್ನೂ ಹಾಕಿ ಎನ್ನುತ್ತಿದ್ದಾರೆ ಕಮೆಂಟಿಗರು! 

Latest Videos

ಹೋಳಿ ಆಡದ ಪತಿ ಬಗ್ಗೆ ಸಾಲು ಸಾಲು ಪ್ರಶ್ನೆ; ಸಹೋದರ ಅಂತ ಕರೆದು ಮದುವೆಯಾದ ನಟಿ ಈಗ ಏನಂತಾರೆ?

ಒಟ್ಟಿನಲ್ಲಿ ಈ ಇಬ್ಬರು ನಟಿಯರು ತಮ್ಮ ತಮ್ಮ ಪತಿಯ ಜೊತೆ ಸುಖ ಜೀವನ ನಡೆಸುತ್ತಿದ್ದರೂ ಎಲ್ಲರ ಕಣ್ಣು ಅವರ ಮೇಲೆ ನೆಟ್ಟಿದೆ.  ಇನ್ನು ನಟಿಯಾಗಿದ್ದ ಸ್ವರಾ ಭಾಸ್ಕರ್​ ಈಗ ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ ಪತ್ನಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಹೆಣ್ಣುಮಕ್ಕಳ ರಕ್ಷಣೆ, ಅವರ ಸ್ವಾತಂತ್ರ, ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಹೋರಾಟ ಎಂದೆಲ್ಲಾ ಭಾಷಣ ಬೀಗುತ್ತಾ ಹೆಸರು ಗಿಟ್ಟಿಸಿಕೊಂಡಾಕೆ, ಮದುವೆಯಾದ ಬಳಿಕ ಸ್ತ್ರೀ ಶಿಕ್ಷಣದ ವಿರೋಧಿ ಎಂದೇ ಫೇಮಸ್​ ಆಗಿರುವ ಮೌಲಾನಾ ಸಜ್ಜದ್ ನೊಮಾನಿ ಅವರನ್ನು ಭೇಟಿಯಾಗಿ ಅವರ ಬಗ್ಗೆ ಹಾಡಿ ಕೊಂಡಾಡಿದ್ದರು. ಇದರಿಂದ ಸಾಕಷ್ಟು ಟ್ರೋಲ್​ಗೆ ಒಳಗಾಗುತ್ತಲೇ ಇದ್ದಾರೆ. ನಾನು ಜಾತ್ಯಾತೀತದಲ್ಲಿ ನಂಬಿಕೆ ಇಟ್ಟವಳು. ಭಾರತದ ಸಂವಿಧಾನದಲ್ಲಿ ನಂಬಿಕೆ ಇಟ್ಟವಳು ಎಂದು ಭಾಷಣ ಮಾಡಿದ್ದ ಸ್ವರಾ, ನಟಿಯಾಗಿದ್ದ ಸಂದರ್ಭದಲ್ಲಿ  ಬಹುತೇಕ ನಗ್ನ ಆಗಿದ್ದರ ವಿಡಿಯೋಗಳು ಶೇರ್​ ಆಗಿದ್ದವು.  ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿದ್ದ ಸಿಎಎ ವಿರೋಧ ಪ್ರತಿಭಟನೆಯಲ್ಲಿ ಮುಂಚೂಣಿ ವಹಿಸಿದ್ದ ಸ್ವರಾ ಅವರು, ನನ್ನ ಬಳಿ ಆಧಾರ್ ಕಾರ್ಡ್  ಇಲ್ಲ, ಪಾಸ್‌ಪೋರ್ಟ್ ಇಲ್ಲ, ರೇಷನ್‌ ಕಾರ್ಡ್ ಇಲ್ಲ, ಅಡ್ರೆಸ್‌ ಪ್ರೂಫ್‌ ಇಲ್ಲ, ಹುಟ್ಟಿದ ಪ್ರಮಾಣ ಪತ್ರ ಇಲ್ಲ... ಎನ್ನುವ ಮೂಲಕ ಮತ್ತಷ್ಟು ಟೀಕೆ ಎದುರಿಸಿದ್ದರು.

ಅದೇ, ಬಾಲಿವುಡ್​ ನಟ ಶತ್ರುಘ್ನ ಸಿನ್ಹಾ ಅವರ ಪುತ್ರಿ ಸೋನಾಕ್ಷಿ ಸಿನ್ಹಾ,   ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಿ ಸೋನಾಕ್ಷಿ  ಜಹೀರ್ ಇಕ್ಬಾಲ್ ಆದಾಗಿನಿಂದಲೂ ಸಕತ್​ ಸುದ್ದಿಯಲ್ಲಿ ಇದ್ದಾರೆ. ಹಿಂದೂ-ಮುಸ್ಲಿಂ ಮದುವೆಯಾದ್ದರಿಂದ ಜೊತೆಗೆ ಅಪ್ಪನಿಗೆ ತಿಳಿಸದೇ ನಟಿ ಮದುವೆಯಾಗಿದ್ದರಿಂದಲೂ ಇವರ ಬಗ್ಗೆ ಇನ್ನೂ ಸುದ್ದಿಯಾಗುತ್ತಲೇ ಇದೆ.   ಆರೇಳು ವರ್ಷ ಒಟ್ಟಿಗೇ ಇದ್ದು, ಡೇಟಿಂಗ್‌ ಮಾಡಿದ ಬಳಿಕ ಮದುವೆಯಾಗಿದ್ದಾರೆ. ಇವರು ಡೇಟಿಂಗ್‌ ಮಾಡುತ್ತಿದ್ದ ವಿಷಯ ಅಷ್ಟೊಂದು ಬೆಳಕಿಗೆ ಬಂದಿರದ ಹಿನ್ನೆಲೆಯಲ್ಲಿ ಮದುವೆಯಾದ ಮೇಲೆ ದಿಢೀರನೆ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದೆ. ಈ ಮದುವೆ ಲವ್‌ ಜಿಹಾದ್‌ ಎನ್ನುವ ಮಟ್ಟಕ್ಕೂ ಚರ್ಚೆಯಾಗಿ ಬಿಟ್ಟಿತು. ಸಾಲದು ಎನ್ನುವುದಕ್ಕೆ ಸೋನಾಕ್ಷಿ ತಮ್ಮ ತಂದೆಗೇ ತಿಳಿಸದೇ ಈ ಮದುವೆಯಾಗಿರುವುದು ಮತ್ತಷ್ಟು ವಿವಾದಕ್ಕೆ ಈಡಾಗಿತ್ತು. ಈಗ ಎಲ್ಲವೂ ಒಂದು ಹಂತಕ್ಕೆ ಬಂದಿದ್ದರೂ, ಆಗಾಗ್ಗೆ ಸುದ್ದಿಯಲ್ಲಿ ಇರುವುದಕ್ಕಾಗಿಯೋ ಏನೋ, ನಟಿ ವಿವಾದದ ಮಾತುಗಳನ್ನಾಡುತ್ತಲೇ ಇರುತ್ತಾರೆ. 
 

ಭಾರತೀಯರ 'ಬಿಕಿನಿ' ಮನಸ್ಥಿತಿಗೆ ಸೋನಾಕ್ಷಿ ಟೀಕೆ: ಬುರ್ಖಾ ತೊಟ್ಟು ಪಾಕ್​ಗೆ ಹೋಗು ಎಂದ ನೆಟ್ಟಿಗರು!

click me!