ಆ ನಟಿ ತಮ್ಮ 25 ವರ್ಷಗಳ ವೃತ್ತಿಜೀವನದಲ್ಲಿ ಲೈಂಗಿಕ ದೃಶ್ಯಗಳಲ್ಲಿ ನಟಿಸಿಲ್ಲವಂತೆ. ವಿಶೇಷ ಅಂದರೆ ಆಕೆ ಒಬ್ಬಳು ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲೂ ನಟಿಸಿದ್ದಾಳೆ. ಲೈಂಗಿಕತೆಯನ್ನು ಮಾನವ ಅನುಭವವಾಗಿ ನೋಡಬೇಕು ಎಂಬುದು ಆಕೆಯ ಅಭಿಪ್ರಾಯ.
ಸುಮಾರು 25 ವರ್ಷಗಳ ಕಾಲ ಆಕೆ ಬಾಲಿವುಡ್‌ನ ಬಹು ಬೇಡಿಕೆಯ ಹೀರೋಯಿನ್‌ಗಳಲ್ಲಿ ಒಬ್ಬಳಾಗಿದ್ದಳು. ಸೆಕ್ಸ್ ವರ್ಕರ್ ಒಬ್ಬಳ ಪಾತ್ರವನ್ನೂ ಕೂಡ ಆಕೆ ಮಾಡಿದ್ದಳು. ಆದರೆ ಸಿನಿಮಾದಲ್ಲಿ ಲೈಂಗಿಕ ದೃಶ್ಯದಲ್ಲಿ ಆಕೆ ಎಂದೂ ಪಾಲ್ಗೊಳ್ಳಲಿಲ್ಲವಂತೆ. ಇದು ಸ್ವತಃ ಕರೀನಾ ಕಪೂರ್ ಆಕೆಯ ಕರಿಯರ್ ಬಗ್ಗೆ ಆಡಿದ ಮಾತು. ನನ್ನ 25 ವರ್ಷಗಳ ಚಲನಚಿತ್ರ ವೃತ್ತಿಜೀವನದಲ್ಲಿ ಸ್ಕ್ರೀನ್ ಮೇಲೆ ಎಂದಿಗೂ ಲೈಂಗಿಕ ದೃಶ್ಯದಲ್ಲಿ ಪಾಲ್ಗೊಳ್ಳಲಿಲ್ಲ ಅಂತ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕರೀನಾ ಹೇಳಿದಳು.
ನಟಿಯಾಗಿ ಇದು ತಾನು ಉದ್ದೇಶಪೂರ್ವಕವಾಗಿ ಮಾಡಿದ ಆಯ್ಕೆ. ಅಂತಹ ದೃಶ್ಯಗಳಲ್ಲಿ ಕಾಣಿಸಿಕೊಳೂವುದು ನನಗೆ ಎಂದಿಗೂ ಆರಾಮದಾಯಕ ಆಗಿರಲಿಲ್ಲ ಅಂತ ʼದಿ ಡರ್ಟಿ ಮ್ಯಾಗಜೀನ್ʼಗಾಗಿ ನಟಿ, ಲೇಖಕಿ ಗಿಲಿಯನ್ ಆಂಡರ್ಸನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಕರೀನಾ ಕಪೂರ್ ಹೇಳಿದಳು.
ಆಕೆಯ ಪ್ರಕಾರ ಎರಡು ಜೀವಗಳ ನಡುವಿನ ಇಂಟಿಮಸಿ 'ಮನುಷ್ಯಾನುಭವ'. ಅದನ್ನು ಹಾಗೇ ಪರಿಗಣಿಸಬೇಕು. ಅದನ್ನು ಹಾಗೇ ನೋಟದ ಪ್ರೇಕ್ಷಕರು ಅದರ ಬಗ್ಗೆ ವಿಕೃತ ಅಭಿರುಚಿಯನ್ನು ಬೆಳೆಸಿಕೊಳ್ಳುತ್ತಾರೆ. "ಇದು ನಾವು ಇಡೀ ಕಲ್ಪನೆಯನ್ನು ನೋಡುವ ರೀತಿ. ನಾವು ಲೈಂಗಿಕತೆಯನ್ನು ಮಾನವ ಅನುಭವವಾಗಿ ನೋಡುವುದಿಲ್ಲ. ನಾವು ಅದನ್ನು ಪರದೆಯ ಮೇಲೆ ತರುವ ಮೊದಲು ಅದನ್ನು ಸರಿಯಾಗಿ ನೋಡಲು ಮತ್ತು ಗೌರವಿಸಲು ಪ್ರಾರಂಭಿಸಬೇಕು. ಇದು ನನ್ನ ನಂಬಿಕೆ" ಅಂತ ಕರೀನಾ ಹೇಳಿದರು.
ನೀವು ಲೈಂಗಿಕ ದೃಶ್ಯದಲ್ಲಿ ನಟಿಸಲು ಏಕೆ ಆಸಕ್ತಿ ಹೊಂದಿಲ್ಲ ಎಂಬ ಪ್ರಶ್ನೆಗೆ ಕರೀನಾ, "ಅದು ಕತೆಯನ್ನು ಮುಂದಕ್ಕೆ ಕೊಂಡೊಯ್ಯಲು ಅಷ್ಟು ಮುಖ್ಯವಲ್ಲ ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ. ಕಥೆಯ ರೂಪದಲ್ಲಿ ಅದು ಅಗತ್ಯ ಎಂದು ನಾನು ನಂಬುವುದಿಲ್ಲ. ಹಾಗೆ ಮಾಡುವುದರಿಂದ ನನಗೆ ನೆಮ್ಮದಿ ಇರುವುದಿಲ್ಲ. ನಾನು ಅದನ್ನು ಎಂದಿಗೂ ಮಾಡಿಲ್ಲ" ಎಂದು ಹೇಳಿದರು.
'ಕಭಿ ಖುಷಿ ಕಭಿ ಗಮ್', 'ಐತ್ರಾಜ್', 'ಚುಪ್ಚುಪ್ ಕೆ', 'ಗೋಲ್ಮಾನ್ ರಿಟರ್ನ್ಸ್', 'ಜಬ್ ವಿ ಮೆಟ್', 'ಉಡ್ತಾ ಪಂಜಾಬ್' ಮತ್ತು 'ಸಿಂಘಮ್ ಅಗೇನ್' ಮುಂತಾದ ಚಿತ್ರಗಳಿಂದ ಕರೀನಾ ಜನಪ್ರಿಯರಾಗಿರುವಾಕೆ. "ನಾನು ಎಲ್ಲಿಂದ ಬಂದಿದ್ದೇನೋ ಆ ಭಾರತೀಯ ಸಮಾಜ ಇಂಥ ದೃಶ್ಯಗಳನ್ನು ಮುಕ್ತವಾಗಿ ಸ್ವೀಕರಿಸುವಷ್ಟು ಇನ್ನೂ ಮುಕ್ತವಾಗಿಲ್ಲ. ಭಾರತದಂತಹ ಸಮಾಜದಲ್ಲಿ ವೀಕ್ಷಕರಿಗೆ ಲೈಂಗಿಕತೆಯನ್ನು ಇನ್ನೂ ಸಾಮಾನ್ಯೀಕರಿಸುವ ಅಗತ್ಯವಿದೆ. ಪಶ್ಚಿಮದಲ್ಲಿ ನೀವು ಅದನ್ನು ಬಹಿರಂಗವಾಗಿ ಅನುಭವಿಸುತ್ತೀರಿ. ಅಲ್ಲಿ ಸ್ತ್ರೀ ಬಯಕೆಯನ್ನು ಬಹಿರಂಗವಾಗಿ ನಿಭಾಯಿಸಲಾಗುತ್ತದೆ. ಅದು ಯಾವಾಗಲೂ ಅದರ ಬಗ್ಗೆ ತುಂಬಾ ಮುಕ್ತವಾಗಿರುತ್ತದೆ" ಎಂದು ಅವರು ವಿವರಿಸಿದರು.
ಕರೀನಾ 2003ರ 'ಚಮೇಲಿ' ಚಲನಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಪರದೆಯ ಮೇಲೆ ಆ ಪಾತ್ರವನ್ನು ನಿರ್ವಹಿಸುವಾಗ ಅವರು ಮುಕ್ತ ಮತ್ತು ನಿರ್ಭೀತಳಾಗಿದ್ದರಂತೆ. "ಅದು ನನ್ನ ಜೀವನದ ಒಂದು ರೀತಿಯ ತಿರುವು. ಏಕೆಂದರೆ ಅದು ಚಿಕ್ಕ ವಯಸ್ಸಿನಲ್ಲಿಯೇ ನನ್ನ ಆತ್ಮವಿಶ್ವಾಸವನ್ನು, ನನ್ನ ಸೆನ್ಸಿಬಿಲಿಟಿಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡಿತು" ಎಂದು ಹೇಳಿದರು.
"ನಾನು ಬಹಳಷ್ಟು ವಿಷಯಗಳನ್ನು ಆಗ ಅರಿತುಕೊಂಡೆ. ಸ್ತ್ರೀತ್ವ ಎಂದರೆ ನಿರ್ದಿಷ್ಟ ರೀತಿಯಲ್ಲಿ ಕಾಣಬೇಕು, ಸುಂದರವಾಗಿರಬೇಕು, ಮುಂತಾದ ಸಾಂಪ್ರದಾಯಿಕ ಕಲ್ಪನೆಗಳಿಗೆ ನಾನು ಹೊಂದಿಕೊಳ್ಳಬೇಕಾಗಿಲ್ಲ. ಆಕೆ ತುಂಬಾ ಧೈರ್ಯಶಾಲಿ ಮತ್ತು ಕ್ಷಮೆಯಾಚಿಸದ ಗುಣದವಳು. ಅದು ನಾನು ನಿಜವಾಗಿಯೂ ಮೆಚ್ಚುವ ಸೌಂದರ್ಯದ ಒಂದು ರೂಪ. ಆ ಪಾತ್ರವನ್ನು ನಿರ್ವಹಿಸಲು ನನಗೆ ಸಂತೋಷವಾಗಿತ್ತು. ಅದು ನನ್ನನ್ನು ಹೆಚ್ಚು ನಿರ್ಭೀತಳಾಗಿರುವಂತೆ ಪ್ರೇರೇಪಿಸಿತು."
ಸೊಸೆ ಐಶ್ ಜೊತೆಗಿನ ರೊಮ್ಯಾಂಟಿಕ್ ಹಾಡಿನ ಬಗ್ಗೆ 20 ವರ್ಷಗಳ ನಂತ್ರ ಮೌನ ಮುರಿದ ಅಮಿತಾಭ್ ಬಚ್ಚನ್!
ಕಪೂರ್ ಹಿಂದಿ ಚಲನಚಿತ್ರಗಳಲ್ಲಿ ಗ್ಲಾಮರಸ್ ಪಾತ್ರಗಳನ್ನು ನಿರ್ವಹಿಸಿದ್ದಾಳೆ. ಜೊತೆಗೆ ತಮ್ಮ ಚೊಚ್ಚಲ ಚಿತ್ರ 'ರೆಫ್ಯೂಜಿ' ಸೇರಿದಂತೆ ಕೆಲವು ವಿಶಿಷ್ಟ ಪಾತ್ರಗಳ ಆಯ್ಕೆಯನ್ನೂ ಮಾಡಿದ್ದಾರೆ. ಅದರಲ್ಲಿ ಆಕೆ ಸಂಪೂರ್ಣವಾಗಿ ಡಿ-ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಹನ್ಸಲ್ ಮೆಹ್ತಾ ಅವರ 'ದಿ ಬಕಿಂಗ್ಹ್ಯಾಮ್ ಮರ್ಡರ್ಸ್'ನಲ್ಲಿ ಪೊಲೀಸ್ ಪಾತ್ರದಲ್ಲಿ ಕರೀನಾ ಕಾಣಿಸಿಕೊಂಡಿದ್ದಾರೆ.
ಅಮೀರ್ ಖಾನ್ ಹೊಸ ಲವರ್ ಬೆಂಗಳೂರಿನ ಗೌರಿಯ ಅಸಲಿ ಫೋಟೋ ರಿವೀಲ್! ವಯಸ್ಸಿನ ಅಂತರ ಎಷ್ಟಿದೆ ಗೊತ್ತಾ?